logo
ಕನ್ನಡ ಸುದ್ದಿ  /  ಕ್ರೀಡೆ  /  Ind Vs Sa 3rd T20: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20ಗೆ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ; ಶ್ರೇಯಸ್-‌ ಶಹಬಾಜ್‌ಗೆ ಸಿಗುತ್ತಾ ಚಾನ್ಸ್?

IND vs SA 3rd T20: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20ಗೆ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ; ಶ್ರೇಯಸ್-‌ ಶಹಬಾಜ್‌ಗೆ ಸಿಗುತ್ತಾ ಚಾನ್ಸ್?

HT Kannada Desk HT Kannada

Oct 04, 2022 10:20 AM IST

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20ಗೆ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ; ಶ್ರೇಯಸ್-‌ ಶಹಬಾಜ್‌ಗೆ ಸಿಗುತ್ತಾ ಚಾನ್ಸ್?

    • ಸೌತ್‌ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಟೀಮ್‌ ಇಂಡಿಯಾ, ಇದೀಗ ಸರಣಿ ಕ್ಲೀನ್‌ ಸ್ವೀಪ್‌ ಮಾಡುವತ್ತ ಚಿತ್ತ ನೆಟ್ಟಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20ಗೆ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ; ಶ್ರೇಯಸ್-‌ ಶಹಬಾಜ್‌ಗೆ ಸಿಗುತ್ತಾ ಚಾನ್ಸ್?
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20ಗೆ ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ; ಶ್ರೇಯಸ್-‌ ಶಹಬಾಜ್‌ಗೆ ಸಿಗುತ್ತಾ ಚಾನ್ಸ್? (Twitter/ BCCI)

ಸೌತ್‌ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಕ್ಕೆ ಪಡೆದಿರುವ ಟೀಮ್‌ ಇಂಡಿಯಾ, ಇದೀಗ ಸರಣಿ ಕ್ಲೀನ್‌ ಸ್ವೀಪ್‌ ಮಾಡುವತ್ತ ಚಿತ್ತ ನೆಟ್ಟಿದೆ. ಔಪಚಾರಿಕ ಪಂದ್ಯ ಆಗಿರುವುದರಿಂದ ಟೀಮ್‌ ಇಂಡಿಯಾದಲ್ಲಿ ಹಲವು ಬದಲಾವಣೆಗಳನ್ನೂ ನಿರೀಕ್ಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಇಂದು ಮೂರನೇ ಟಿ20 ಪಂದ್ಯ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತವು 2017 ಮತ್ತು 2020 ರಲ್ಲಿ ಶ್ರೀಲಂಕಾ ವಿರುದ್ಧ ಈ ಮೈದಾನದಲ್ಲಿ ಎರಡು T20 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿಯೂ ಗೆದ್ದಿದೆ. ಇದೀಗ ಸೌತ್‌ ಆಫ್ರಿಕಾ ಜತೆಗೆ ಮನೆಯಂಗಳದಲ್ಲಿ ಚೊಚ್ಚಲ ಟಿ20 ಸರಣಿ ವಶಕ್ಕೆ ಪಡೆದು ಇತಿಹಾಸ ನಿರ್ಮಿಸಿದೆ.

ಕೊಹ್ಲಿ, ರಾಹುಲ್‌ಗೆ ವಿಶ್ರಾಂತಿ..

ಇದೇ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾಕ್ಕಿದು ಅಂತಿಮ ಟಿ20 ಪಂದ್ಯವಾಗಲಿದೆ. ಇದಾದ ಬಳಿಕ ಇಡೀ ತಂಡ ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಇತ್ತ ಇಂದಿನ ಪಂದ್ಯದಲ್ಲಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರಾಹುಲ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಶಹಬಾಜ್‌ ಅಹ್ಮದ್‌ಗೂ ಚಾನ್ಸ್..

ಕೊಹ್ಲಿ ಮತ್ತು ರಾಹುಲ್‌ ವಿಶ್ರಾಂತಿಯಲ್ಲಿದ್ದರೆ, ರೋಹಿತ್‌ ಅವರೊಂದಿಗೆ ರಿಷಬ್‌ ಪಂತ್‌ ಅಥವಾ ಸೂರ್ಯಕುಮಾರ್‌ ಯಾದವ್‌ ಇನ್ನಿಂಗ್ಸ್‌ ಆರಂಭಿಸಬಹುದು. ಕೊಹ್ಲಿ ಬದಲಿಗೆ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ಸಿಗಬಹುದು. ಅದೇ ರೀತಿ ತಂಡದಲ್ಲಿ ಯಾವುದೇ ಮೀಸಲು ಬ್ಯಾಟ್ಸ್‌ಮನ್ ಇಲ್ಲದ ಕಾರಣ ಶಹಬಾಜ್ ಅಹ್ಮದ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಬಹುದು. ಮೊಹಮ್ಮದ್ ಸಿರಾಜ್ ಅಥವಾ ಉಮೇಶ್ ಯಾದವ್ ಇಬ್ಬರ ಪೈಕಿ ಒಬ್ಬರು ಕಣಕ್ಕಿಳಿಯಬಹುದು. ಇನ್ನು ವಿಕೆಟ್‌ ಕೀಪರ್‌ ಆಗಿ ರಿಷಬ್‌ ಪಂತ್‌ ಗ್ಲೌಸ್‌ ತೊಟ್ಟರೆ, ದಿನೇಶ್‌ ಕಾರ್ತಿಕ್‌ ಸಹ ಆಡುವ 11ರಲ್ಲಿ ಇರಲಿದ್ದಾರೆ.

ರೋಚಕತೆಯಲ್ಲಿತ್ತು ಎರಡನೇ ಪಂದ್ಯ

ಟಾಸ್‌ ಸೋತು ಮೊದಲ ಇನ್ನಿಂಗ್ಸ್‌ ಆಡಿದ ಭಾರತ, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆ ಎಲ್‌ ರಾಹುಲ್‌ ವೈಭವದ ಬ್ಯಾಟಿಂಗ್‌ ನೆರವಿನಿಂದ 3 ವಿಕೆಟ್‌ ಕಳೆದುಕೊಂಡು 237 ರನ್‌ ಸಿಡಿಸಿತು. ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಂಡವೊಂದು ಗಳಿಸಿದ ಅತಿ ಹೆಚ್ಚು ಮೊತ್ತ ಇದಾಗಿತ್ತು. ಆರಂಭಿಕ ಆಘಾತದ ನಡುವೆ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಹರಿಣಗಳು, ಅಂತಿಮ ಹಂತದಲ್ಲಿ ಪ್ರಬಲ ಹೋರಾಟ ನೀಡಿ ಸೋತರು. ಮುರಿಯದ ನಾಲ್ಕನೇ ವಿಕೆಟ್‌ಗೆ 174 ರನ್‌ಗಳ ಜೊತೆಯಾಟ ನೀಡಿದ ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿ ಕಾಕ್‌, ಭಾರತದಿಂದ ಜಯವನ್ನು ಕಿತ್ತುಕೊಳ್ಳುವಲ್ಲಿ ವಿಫಲರಾದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು