logo
ಕನ್ನಡ ಸುದ್ದಿ  /  ಕ್ರೀಡೆ  /  Video: ಸ್ಪೈಡರ್‌ಮ್ಯಾನ್‌ ರೀತಿ ಹಾರಿ ಸ್ಟನ್ನಿಂಗ್‌ ಕ್ಯಾಚ್‌ ಪಡೆದ ಸ್ಮಿತ್​​.. ವಿಡಿಯೋ!

VIDEO: ಸ್ಪೈಡರ್‌ಮ್ಯಾನ್‌ ರೀತಿ ಹಾರಿ ಸ್ಟನ್ನಿಂಗ್‌ ಕ್ಯಾಚ್‌ ಪಡೆದ ಸ್ಮಿತ್​​.. ವಿಡಿಯೋ!

HT Kannada Desk HT Kannada

Mar 19, 2023 08:15 PM IST

ಸ್ಟೀವ್​ ಸ್ಮಿತ್​ ಕ್ಯಾಚ್​​

    • ಅದ್ಭುತ ಕ್ಯಾಚ್​​​​​ ಹಿಡಿಯುವ ಮೂಲಕ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್, ಕೇವಲ 9 ರನ್​ಗಳಿಗೆ ಸುಸ್ತಾದ ಹಾರ್ದಿಕ್​ರನ್ನು ಪೆವಿಲಿಯನ್ ಸೇರಿಸಿದರು. ಸೀನ್ ಅಬಾಟ್ ಎಸೆತವನ್ನು ಥರ್ಡ್ ಮ್ಯಾನ್ ಬೌಂಡರಿಗೆ ಕಳುಹಿಸಲು ಪಾಂಡ್ಯ ಕಟ್ ಮಾಡಿದರು. ಆದರೆ ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್ ಚಕ್ಕನೆ ಜಿಗಿಯುವ ಮೂಲಕ ಅಮೋಘ ಕ್ಯಾಚ್ ಪಡೆದರು.
ಸ್ಟೀವ್​ ಸ್ಮಿತ್​ ಕ್ಯಾಚ್​​
ಸ್ಟೀವ್​ ಸ್ಮಿತ್​ ಕ್ಯಾಚ್​​

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಮೊದಲ ಒಡಿಐನಲ್ಲಿ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಮಕಾಡೆ ಮಲಗಿತು. ಬ್ಯಾಟರ್​​​ಗಳ ವೈಫಲ್ಯದಿಂದ ಗೆಲುವಿಗಾಗಿ ಹೋರಾಟ ನಡೆಸಲೂ ಸಾಧ್ಯವಾಗದ ರೀತಿ ಪರಾಭವಗೊಂಡಿತು. ಯಾಕಂದರೆ ಅಷ್ಟರ ಮಟ್ಟಿಗೆ ಇತ್ತು ರೋಹಿತ್​​ ಪಡೆಯ ಕಳಪೆ ಪ್ರದರ್ಶನ.!

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

3 ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಕೊನೆ ಏಕದಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಫೈನಲ್​ ಟಚ್​​ ಪಡೆದುಕೊಂಡಿದೆ. ಬಾರ್ಡರ್​​ ಗವಾಸ್ಕರ್ ಟೆಸ್ಟ್​ ಸೋಲಿನ ಸೇಡನ್ನು ಏಕದಿನ ಸರಣಿ ಗೆಲ್ಲುವ ಮೂಲಕ ತೀರಿಸಿಕೊಳ್ಳಲು ಆಸ್ಟ್ರೇಲಿಯಾ ಮುಂದಾಗಿದೆ. ಇತ್ತ ಭಾರತ ಟೆಸ್ಟ್​ ಸಿರೀಸ್​​ ಜೊತೆಗೆ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಪ್ಲಾನ್​ ಹಾಕಿಕೊಂಡಿದೆ.

ಮೊದಲ ಪಂದ್ಯದಲ್ಲಿ ಸೋತಿದ್ದ ಆಸ್ಟ್ರೇಲಿಯಾ, 2ನೇ ಪಂದ್ಯದಲ್ಲಿ ಗೆಲ್ಲಲು ಕಾರಣವಾಗಿದ್ದೇ ಅದ್ಭುತ ಫೀಲ್ಡಿಂಗ್​​​ನಿಂದ.! ಮುಂಬೈ ಪಂದ್ಯದಲ್ಲಿ ಕ್ಯಾಚ್​​ಗಳನ್ನು ಆಸಿಸ್​​ ಪಂದ್ಯ ಕೈಚೆಲ್ಲಿತು. ಅದರಲ್ಲೂ ಮೊದಲ ಏಕದಿನ ಪಂದ್ಯದಲ್ಲಿ 2 ಕ್ಯಾಚ್ ಬಿಟ್ಟಿದ್ದ ನಾಯಕ ಸ್ಮಿತ್ ಈ ಪಂದ್ಯದಲ್ಲಿ ಬೆಂಕಿ ಫೀಲ್ಡಿಂಗ್​ ಮಾಡಿದರು. ಚಿರತೆಯಂತೆ ಹಾರಿ ಹಿಡಿದಿರುವ ಕ್ಯಾಚ್​​​ ಇದೀಗ ಸಖತ್​ ವೈರಲ್​ ಆಗಿದೆ.

ಕೇವಲ 49 ರನ್​ಗಳಿಗೆ ಭಾರತದ ಅರ್ಧ ತಂಡ ಪೆವಿಲಿಯನ್ ತಲುಪಿತ್ತು. ರೋಹಿತ್​ ಶರ್ಮಾ, ಶುಭ್​ಮನ್ ಗಿಲ್​, ಸೂರ್ಯಕುಮಾರ್​, ರಾಹುಲ್ ವೈಫಲ್ಯ ಅನುಭವಿಸಿದರು. ಅದರಂತೆ ಹಾರ್ದಿಕ್​ ಪಾಂಡ್ಯ ಕೂಡ ಫ್ಲಾಪ್​ ಶೋ ನೀಡಿದರು.​ ಹಾರ್ದಿಕ್ ಪಾಂಡ್ಯ ರೂಪದಲ್ಲಿ ಭಾರತ ತಂಡ 5ನೇ ವಿಕೆಟ್ ಕಳೆದುಕೊಂಡಿತು. ಅದು ಕೂಡ ಸೆನ್​ಸೇಷನಲ್​ ಕ್ಯಾಚ್​ಗೆ ಬಲಿಯಾದರು.

ಸೆನ್​ಸೇಷನಲ್​​ ಕ್ಯಾಚ್​​​

ಅದ್ಭುತ ಕ್ಯಾಚ್​​​​​ ಹಿಡಿಯುವ ಮೂಲಕ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್, ಕೇವಲ 9 ರನ್​ಗಳಿಗೆ ಸುಸ್ತಾದ ಹಾರ್ದಿಕ್​ರನ್ನು ಪೆವಿಲಿಯನ್ ಸೇರಿಸಿದರು. ಸೀನ್ ಅಬಾಟ್ ಎಸೆತವನ್ನು ಥರ್ಡ್ ಮ್ಯಾನ್ ಬೌಂಡರಿಗೆ ಕಳುಹಿಸಲು ಪಾಂಡ್ಯ ಕಟ್ ಮಾಡಿದರು. ಆದರೆ ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್ ಚಕ್ಕನೆ ಜಿಗಿಯುವ ಮೂಲಕ ಅಮೋಘ ಕ್ಯಾಚ್ ಪಡೆದರು. ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಸ್ಮಿತ್ ಹಿಡಿದ ಕ್ಯಾಚ್‌ ನೋಡಿ ಬೆಕ್ಕಸ ಬೆರಗಾದರು.

ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ, ವೇಗಿ ಮಿಚೆಲ್​ ಸ್ಟಾರ್ಕ್​ ದಾಳಿಗೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಾಯಕ ರೋಹಿತ್​ ಶರ್ಮಾ ಕಂಬ್ಯಾಕ್​ ಮಾಡಿದರೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. 26 ಓವರ್​​​​​ಗಳಲ್ಲಿ 117 ರನ್​ಗಳಿಗೆ ಸರ್ವಪತನ ಕಂಡಿತು. 118 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿತು. ವಿಕೆಟ್‌ ನಷ್ಟವಿಲ್ಲದೇ 11 ಓವರ್‌ಗಳಲ್ಲಿ 121 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯನ್ನು 1 - 1ರಲ್ಲಿ ಸಮಗೊಳಿಸಿದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ ತಂಡ

ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಸ್ಚಾಗ್ನೆ, ಅಲೆಕ್ಸ್ ಕ್ಯಾರಿ (ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ.

    ಹಂಚಿಕೊಳ್ಳಲು ಲೇಖನಗಳು