logo
ಕನ್ನಡ ಸುದ್ದಿ  /  ಕ್ರೀಡೆ  /  Wpl 2023: ’ಈ ಆಟ ಆಡಿ ನಮ್ಮನ್ನು ಹಿಂಸಿಸುವ ಬದಲು, ಹೋಳಿ ಆಡ್ಕೊಳ್ಳಿ’; ಆರ್‌ಸಿಬಿ ವಿರುದ್ಧ ಫ್ಯಾನ್ಸ್​ ಗರಂ

WPL 2023: ’ಈ ಆಟ ಆಡಿ ನಮ್ಮನ್ನು ಹಿಂಸಿಸುವ ಬದಲು, ಹೋಳಿ ಆಡ್ಕೊಳ್ಳಿ’; ಆರ್‌ಸಿಬಿ ವಿರುದ್ಧ ಫ್ಯಾನ್ಸ್​ ಗರಂ

HT Kannada Desk HT Kannada

Mar 11, 2023 09:44 AM IST

ಆರ್​​ಸಿಬಿ

    • WPL 2023: ಒಂದಲ್ಲ, ಎರಡಲ್ಲ, ಸತತ ನಾಲ್ಕು ಪಂದ್ಯಗಳಲ್ಲೂ ಸೋಲು, ಸೋಲು ಸೋಲು.. ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಎದುರಾಳಿಗಳು ಬದಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಆರ್​​ಸಿಬಿ ಕೆಟ್ಟ ಪ್ರದರ್ಶನದ ಮೇಲೆ ಕೆಂಡ ಕಾರಿದ್ದಾರೆ ಅಭಿಮಾನಿಗಳು.!
ಆರ್​​ಸಿಬಿ
ಆರ್​​ಸಿಬಿ (Twitter)

ಮಹಿಳಾ ಪ್ರೀಮಿಯರ್​ ಲೀಗ್​​​ (Women's Premier League) ಮೆಗಾ ಹರಾಜಿನ ಸಮಯದಲ್ಲಿ ಬಲಿಷ್ಠ ಆಟಗಾರ್ತಿಯರು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore Women) ಸೇರಿದ್ದು ನೋಡಿ, ಎಲ್ಲರೂ ದಿಗ್ಭ್ರಮೆಗೊಳಗಾದರು. ಅಭಿಮಾನಿಗಳ ನಿರೀಕ್ಷೆಯೂ ಆಕಾಶಕ್ಕೇರಿತ್ತು. ಐಪಿಎಲ್​​ನಲ್ಲಿ ಪುರುಷರ ತಂಡವಂತೂ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಮಹಿಳಾ ತಂಡದ ಮೂಲಕವಾದರೂ ಟ್ರೋಫಿ ಬರ ನೀಗುತ್ತದೆ ಎಂಬ ಭರವಸೆ ಹುಟ್ಟಿತ್ತು. ಯಾಕಂದರೆ ಆ ತಂಡ ಅಷ್ಟು ಬಲಿಷ್ಠವಾಗಿತ್ತು. ಆದರೆ ವಾಸ್ತವದಲ್ಲಿ ಆಗುತ್ತಿರುವುದೇನು..? ಹೀನಾಯ ಸೋಲುಗಳು.!

ಟ್ರೆಂಡಿಂಗ್​ ಸುದ್ದಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಒಂದಲ್ಲ, ಎರಡಲ್ಲ, ಸತತ ನಾಲ್ಕು ಪಂದ್ಯಗಳಲ್ಲೂ ಸೋಲು, ಸೋಲು ಸೋಲು.. ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಎದುರಾಳಿಗಳು ಬದಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಯುಪಿ ವಾರಿಯರ್ಸ್​ ವಿರುದ್ಧ 4ನೇ ಹೀನಾಯ ಸೋಲು ಕಂಡಿತು. ಹ್ಯಾಟ್ರಿಕ್​ ಸೋಲಿನ ಬಳಿಕವಾದರೂ ಗೆದ್ದೇ ಗೆಲ್ಲುತ್ತಾರೆ ಎಂದು ಕಾದು ಕುಳಿತಿದ್ದ ಆರ್​​ಸಿಬಿ ಫ್ಯಾನ್ಸ್​​​​​ಗೆ ಆಗಿದ್ದು ಮಾತ್ರ ಭಾರೀ ನಿರಾಸೆ. ಒಂದೇ ಒಂದು ವಿಕೆಟ್​ ಪಡೆಯಲು ಸಾಧ್ಯವಾಗದಿರುವುದು ಫ್ಯಾನ್ಸ್​​ಗೆ ಶಾಕ್​ ನೀಡಿದೆ. ಇದರಿಂದ ಆಕ್ರೋಶಗೊಂಡ ಫ್ಯಾನ್ಸ್​, ಆರ್​​ಸಿಬಿ ತಂಡವನ್ನು ಭಾರೀ ಟ್ರೋಲ್​ ಮಾಡುತ್ತಿದ್ದಾರೆ. ನಮ್ಮನ್ಯಾಕೆ ಹೀಗೆ ಹಿಂಸಿಸುತ್ತೀರಾ ಅಂತ ಕಿಡಿಕಾರಿದ್ದಾರೆ.

ಸ್ಮೃತಿ ಮಂಧಾನ, WPL ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರ್ತಿ.. ಮಹಿಳಾ ಕ್ರಿಕೆಟ್‌ನಲ್ಲಿ ದಿಗ್ಗಜರು ಎಲ್ಲಿಸ್ ಪೆರ್ರಿ, ಹೀದರ್ ನೈಟ್. ವಿಶ್ವ ದರ್ಜೆಯ ಬೌಲರ್​​ಗಳು ಮೇಗನ್ ಶುಟ್, ರೇಣುಕಾ ಸಿಂಗ್. ಘಟಾನುಘಟಿ ಆಲ್​​ರೌಂಡರ್‌ಗಳಿಗೆ ಕೊರತೆಯೇ ಇಲ್ಲ. ಮ್ಯಾಚ್​ ಫಿನಿಷರ್​ ರಿಚಾ ಘೋಷ್. ಯುವ ಆಟಗಾರ್ತಿಯರಿಗೂ ಇದ್ದಾರೆ. ಇದು ಅತ್ಯಂತ ಬಲಿಷ್ಠ ತಂಡ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.? ಇನ್ನು ಅಭಿಮಾನಿಗಳ ಬೆಂಬಲ ಅಪಾರ. ಫ್ರಾಂಚೈಸಿಗೂ ಸಾಕಷ್ಟು ಕ್ರೇಜ್​ ಇದೆ. ಇಷ್ಟೆಲ್ಲಾ ಹೊಂದಿರುವ ತಂಡ ಹೇಗೆ ಆಡಬೇಕು..? ಕಣಕ್ಕಿಳಿದರೆ ದಾಖಲೆಗಳು ಚೆಲ್ಲಾಪಿಲ್ಲಿಯಾಗಬೇಕು. ಆದರೆ ವಾಸ್ತವ ಹಾಗಿದೆಯೇ.?

ಪುರುಷರ ಐಪಿಎಲ್‌ನಲ್ಲಿ 15 ಸೀಸನ್‌ಗಳ ಪೈಕಿ ಒಂದೂ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ RCB ಕೂಡ ಒಂದು. ತಂಡವು ಸೂಪರ್‌ಸ್ಟಾರ್‌ಗಳು ಮತ್ತು ಅಂತಾರಾಷ್ಟ್ರೀಯ ಆಟಗಾರರಿಂದ ತುಂಬಿದೆ. ಆದರೆ ತಂಡವು ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಪ್ರತಿ ಸೀಸನ್‌ಗೂ 'ಈ ಸಲ ಕಪ್ ನಮ್ದೆ' ಎಂದು ಘೋಷಣೆ ಬೇರೆ. ಪ್ಲೇಆಫ್‌ನಲ್ಲಿ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲೇ ತಂಡ ಹೊರ ಬೀಳುತ್ತದೆ. ಪುರುಷರ ತಂಡದಿಂದ ಸಾಧ್ಯವಾಗದ್ದು, ಮಹಿಳೆಯರು ಸಾಧಿಸುತ್ತಾರೆ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಫಲಿತಾಂಶ ಮಾತ್ರ ಬದಲಾಗುತ್ತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

RCB ತನ್ನ ಟ್ವಿಟ್ಟರ್ ಖಾತೆಯಲ್ಲಿ 'ಪ್ಲೇ ಬೋಲ್ಡ್' ಎಂಬ ಟ್ಯಾಗ್ ಲೈನ್‌ ಹಾಕುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಆಟ ಬಂದೇ ಇಲ್ಲ. ಮಂಧಾನ ಸತತ 4 ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪೆರ್ರಿ, ಡಿವೈನ್​​​ ಮತ್ತು ನೈಟ್‌ನಂತಹ ವಿಶ್ವದರ್ಜೆ ಆಲ್‌ರೌಂಡರ್ಸ್​​ ವಿಕೆಟ್​ ಪಡೆಯಲು ಪರದಾಟ ನಡೆಸುತ್ತಿದ್ದಾರೆ. ರಿಚಾ ಘೋಷ್, ಮೇಗನ್ ಶುಟ್, ರೇಣುಕಾ ಸಿಂಗ್ ಯಾರೂ ಅಬ್ಬರಿಸುತ್ತಿಲ್ಲ. ಯುವ ಆಟಗಾರರು ಮಿಂಚುತ್ತಿದ್ದಾರೆಯೇ ಹೊರತು ಗೆಲುವಿನ ಪ್ರದರ್ಶನ ನೀಡುತ್ತಿಲ್ಲ.

ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಅಭಿಮಾನಿಗಳು ಇವರ ಆಟ ನೋಡಿ ಭಾರೀ ಬೇಸರ ಹೊರ ಹಾಕಿದ್ದಾರೆ. ಏನು ಮಾಡಬೇಕೆಂದು ತೋಚದೆ, ಬೇರೆ ತಂಡಗಳ ಅಭಿಮಾನಿಗಳಿಗೆ ಹೇಗೆ ಉತ್ತರಿಸಬೇಕು ಎಂದು ಅರ್ಥವಾಗದೆ, RCB ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಕೆಟ್ಟ ಆಟವನ್ನು ಆಡಿ ನಮಗೆ ಹಿಂಸೆ ನೀಡುವ ಬದಲು, ಬಕೆಟ್​​​ನಲ್ಲಿ ಬಣ್ಣ ಹಾಕಿ ಹೋಳಿ ಆಡಿ ಸಂಭ್ರಮಿಸಿ. ಅವುಗಳನ್ನಾದರೂ ನೋಡಿ ಖುಷಿಪಡುತ್ತೇವೆ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ. ಇತ್ತೀಚೆಗೆ ಹೋಳಿ ಆಡಿದ ಫೋಟೋಗಳನ್ನು ಆರ್​​ಸಿಬಿ ಹಂಚಿಕೊಂಡಿತ್ತು. ಆ ಫೋಟೋಗಳನ್ನಿಟ್ಟುಕೊಂಡು ಫ್ಯಾನ್ಸ್​ ಟ್ರೋಲ್​ ಮಾಡುತ್ತಿದ್ದಾರೆ. ಅದರಲ್ಲೂ ಸಾನಿಯಾ ಮಿರ್ಜಾ ಅವರನ್ನೂ ವಿಶೇಷವಾಗಿ ಟ್ರೋಲ್ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು