logo
ಕನ್ನಡ ಸುದ್ದಿ  /  ಕ್ರೀಡೆ  /  Rcb Vs Dc: ಶಫಾಲಿ-ಲ್ಯಾನಿಂಗ್​​ ಸ್ಫೋಟಕ ಅರ್ಧಶತಕ, ಡೆಲ್ಲಿ ಬೃಹತ್​ ಮೊತ್ತ, ಆರ್​ಸಿಬಿ ಗೆಲ್ಲಲು ಬೇಕು 224 ರನ್​​​​

RCB vs DC: ಶಫಾಲಿ-ಲ್ಯಾನಿಂಗ್​​ ಸ್ಫೋಟಕ ಅರ್ಧಶತಕ, ಡೆಲ್ಲಿ ಬೃಹತ್​ ಮೊತ್ತ, ಆರ್​ಸಿಬಿ ಗೆಲ್ಲಲು ಬೇಕು 224 ರನ್​​​​

HT Kannada Desk HT Kannada

Mar 05, 2023 05:05 PM IST

ಮೆಗ್​ ಲ್ಯಾನಿಂಗ್​ ಮತ್ತು ಶಫಾಲಿ ವರ್ಮಾ

    • ಶಫಾಲಿ ವರ್ಮಾ - ಮೆಗ್​​ ಲ್ಯಾನಿಂಗ್​ ಅವರ ಭರ್ಜರಿ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಆರ್​ಸಿಬಿ ತಂಡಕ್ಕೆ ಬೃಹತ್​​​​​​​​​​ ಗುರಿ​ ನೀಡಿದೆ. ಶಫಾಲಿ 84 ರನ್​ ಸಿಡಿಸಿದರೆ, ಲ್ಯಾನಿಂಗ್​​ 72 ರನ್​​ ಗಳಿಸಿ ಮಿಂಚಿದರು.
ಮೆಗ್​ ಲ್ಯಾನಿಂಗ್​ ಮತ್ತು ಶಫಾಲಿ ವರ್ಮಾ
ಮೆಗ್​ ಲ್ಯಾನಿಂಗ್​ ಮತ್ತು ಶಫಾಲಿ ವರ್ಮಾ

ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಳಪೆ ಬೌಲಿಂಗ್​ ಪ್ರದರ್ಶನ ನೀಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಬೆಂಗಳೂರಿಗೆ​ 224 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ - ಮೆಗ್​ ಲ್ಯಾನಿಂಗ್​​​, ಆರ್​ಸಿಬಿ ಬಲಿಷ್ಠ ಬೌಲಿಂಗ್​​ ಪಡೆಯನ್ನು ಧೂಳೀಪಟ ಮಾಡಿದರು. ಆರಂಭದಿಂದಲೇ ಬೌಂಡರಿ - ಸಿಕ್ಸರ್​ಗಳಿಂದಲೇ ಡೀಲ್​ ಮಾಡಿದ ಜೋಡಿ, ಸ್ಮೃತಿ ಮಂದಾನ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು. ಪವರ್​​ ಪ್ಲೇನಲ್ಲೇ 57 ರನ್​​​ಗಳಿಸಿ ಪರ್ಫೆಕ್ಟ್​ ಆರಂಭ ಒದಗಿಸಿದರು.

ಲ್ಯಾನಿಂಗ್​​​​ 72, ಶಫಾಲಿ 84

ಸ್ಫೋಟಕ ಆಟದ ಮೂಲಕ ಆರ್​ಸಿಬಿಗೆ ಕಾಡಿದ ನಾಯಕಿ ಮೆಗ್​ ಲ್ಯಾನಿಂಗ್, 43 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 72 ರನ್​ ಸಿಡಿಸಿದರು. ಇನ್ನು ಶಫಾಲಿ ಅಗ್ರೆಸ್ಸಿವ್​ ಗೇಮ್​ ಮೂಲಕ ಸಿಡಿದೆದ್ದರು. 45 ಎಸೆತಗಳಲ್ಲಿ 10 ಬೌಂಡರಿ, 4 ಭರ್ಜರಿ ಸಿಕ್ಸರ್​​ಗಳ ನೆರವಿನಿಂದ 84 ರನ್​ ಚಚ್ಚಿದರು. ಇಬ್ಬರೂ ಕೂಡ ಹೀದರ್​ ನೈಟ್​​​ ಬೌಲಿಂಗ್​​​ನಲ್ಲಿ ವಿಕೆಟ್​ ಒಪ್ಪಿಸಿದರು. 

ಬಳಿಕ ಜೊತೆಯಾದ ಜೆಮಿಮಾ ರೋಡ್ರಿಗಸ್​ - ಮರಿಜಾನ್​ ಕಪ್​​​​​​, ಬೆಂಕಿ-ಬಿರುಗಾಳಿ ಆಟವನ್ನು ಮುಂದುವರೆಸಿದರು. ಮರಿಜನ್​ ಕಪ್​​​ (39), ರೋಡ್ರಿಗಸ್​​​ (22) ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದ ಮೊತ್ತವನ್ನು 20ರ ಗಡಿ ದಾಟಿದರು. ಜೊತೆಗೆ ಅಜೇಯರಾಗಿ ಉಳಿದರು.

ಒಂದೂ ವಿಕೆಟ್​ ಪಡೆಯಲಿಲ್ಲ ಸ್ಟಾರ್​​ ಬೌಲರ್ಸ್​

ರೇಣುಕಾ ಸಿಂಗ್​, ಮೇಘನ್​ ಶುಟ್​, ಎಲಿಸ್​ ಪೆರ್ರಿ ಮತ್ತು ಸೋಫಿ ಡಿವೈನ್​​​​ ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಮಿಂಚಿನ ಬೌಲಿಂಗ್​ ದಾಳಿ ನಡೆಸಿದ್ದಾರೆ. ಆದರೆ ಇಂದು ಒಂದೇ ಒಂದು ವಿಕೆಟ್​ ಪಡೆಯಲು ಇವರ ಕೈಯಲ್ಲಿ ಸಾಧ್ಯವಾಗಲಿಲ್ಲ. ವಿಕೆಟ್​ ಪಡೆಯದೇ ಇರಲಿ, ದುಬಾರಿ ಬೌಲಿಂಗ್​ ಮಾಡಿಯೂ ತಂಡದ ಹಿನ್ನಡೆಗೆ ಕಾರಣರಾದರು.

ಅತ್ಯಧಿಕ ರನ್​ ದಾಖಲಿಸಿದ ಡೆಲ್ಲಿ.!​

ಟೂರ್ನಿಯ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್​​ ಭರ್ಜರಿ ಆಟದ ಮೂಲಕ 207 ರನ್ ​ಗಳಿಸಿ ಸಾಧನೆ ಮಾಡಿತ್ತು.  ಇದೀಗ 2ನೇ ಪಂದ್ಯದಲ್ಲೇ ಈ ದಾಖಲೆಯನ್ನು ಡೆಲ್ಲಿ ಬ್ರೇಕ್​ ಮಾಡಿದೆ. ನಿಗದಿತ 20 ಓವರ್​​​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 223 ರನ್​ ಗಳಿಸಿದೆ. ಆ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಸಾಧನೆ ಮಾಡಿದೆ.

ಮೊದಲ ವಿಕೆಟ್​ಗೆ ದಾಖಲೆಯ ಜೊತೆಯಾಟ.!

ಮೆಗ್​ ಲ್ಯಾನಿಂಗ್​ ಮತ್ತು ಶಫಾಲಿ ವರ್ಮಾರ ಸ್ಫೋಟಕ ಆಟದಿಂದ RCB ತತ್ತರಿಸಿತು. ಈ ಜೋಡಿ ಟೂರ್ನಿಯ 2ನೇ ಪಂದ್ಯದಲ್ಲೇ ಶತಕ ಮತ್ತು 150 ರನ್​ಗಳ ಜೊತೆಯಾಟವಾಡಿ ಗಮನ ಸೆಳೆಯಿತು. ಲೀಗ್​​​ನಲ್ಲಿ ಈ ಸಾಧನೆ ಮಾಡಿದ ಮೊದಲ ಆರಂಭಿಕ ಜೋಡಿ ಎಂಬ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದೆ. ಮೊದಲ ವಿಕೆಟ್​ಗೆ 162 ರನ್​ಗಳ ಕಲೆ ಹಾಕಿದ್ದು ವಿಶೇಷ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI)

ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್​ ಕೀಪರ್​​​), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI)

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಹೀದರ್ ನೈಟ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್​ ಕೀಪರ್​​​), ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶುಟ್, ರೇಣುಕಾ ಠಾಕೂರ್ ಸಿಂಗ್

    ಹಂಚಿಕೊಳ್ಳಲು ಲೇಖನಗಳು