logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mercedes On Fire: ಪ್ರತೀಕಾರ ಹೀಗೂ ಇರುತ್ತೆ! ಸಾಫ್‌ ಸೀದಾ ಹೋಗಿ ಬೆಂಕಿ ಹಚ್ಚಿ ಹೋದ! Viral Video ನೋಡಿ

Mercedes on fire: ಪ್ರತೀಕಾರ ಹೀಗೂ ಇರುತ್ತೆ! ಸಾಫ್‌ ಸೀದಾ ಹೋಗಿ ಬೆಂಕಿ ಹಚ್ಚಿ ಹೋದ! Viral Video ನೋಡಿ

Sep 14, 2022 09:32 PM IST

ಒಬ್ಬ ವ್ಯಕ್ತಿ ಜನನಿಬಿಡ ರಸ್ತೆಗೆ ಬಂದು ಮರ್ಸಿಡಿಸ್ ಬೆಂಜ್ ಕಾರಿಗೆ ಬೆಂಕಿ ಹಚ್ಚಿ ಸುಮ್ಮನೆ ಹೊರಟುಹೋದ. ನೋಯ್ಡಾದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಎರಡು ದಿನಗಳ ಹಿಂದೆ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆ ವ್ಯಕ್ತಿ ಆ ದುಬಾರಿ ಕಾರನ್ನು ಸುಡಲು ಬಯಸಿದ್ದೇಕೆ ಗೊತ್ತಾ?

ಬಂಧಿತ ವ್ಯಕ್ತಿ ಬಿಹಾರ ಮೂಲದವನು. ಹೆಸರು ರಣವೀರ್. ಆತ ಮನೆಗಳಲ್ಲಿ ಪೈಪ್ ಮತ್ತು ಟೈಲ್ಸ್ ಕೆಲಸ ಮಾಡುವವನು.. ಆ ಮರ್ಸಿಡಿಸ್ ಕಾರಿನ ಮಾಲೀಕ ಆಯುಷ್ ಕೂಡ ರಣವೀರ್ ಅನ್ನು ಕರೆಯಿಸಿಕೊಂಡು ಟೈಲ್ಸ್ ಮತ್ತು ಪೈಪ್ ಕೆಲಸ ಮಾಡಿಸಿಕೊಂಡಿದ್ದಾರೆ. ಒಟ್ಟು ಬಿಲ್ 5 ಲಕ್ಷ ರೂಪಾಯಿ. ಸ್ವಲ್ಪ ಹಣ ಕೊಟ್ಟು ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿದ್ದ ಆಯುಷ್‌. ಎಷ್ಟು ಸಲ ಕೇಳಿದರೂ ಸಬೂಬು ಹೇಳುತ್ತ ಬಾಕಿ ಹಣ ಪಾವತಿಸಿರಲಿಲ್ಲ. ಕೊನೆಗೆ ಹತಾಶೆಗೊಳಗಾದ ರಣವೀರ್‌, ಆಯುಷ್‌ಗೆ ಒಂದು ಪಾಠ ಕಲಿಸಬೇಕು ಎಂದು ಮರ್ಸಿಡೆಸ್‌ ಕಾರಿಗೆ ದಹಿಸುವ ದ್ರವ ಸುರಿದು ಬೆಂಕಿ ಹಚ್ಚಿ ಹೊರಟು ಹೋಗಿದ್ದ! ಅದೇ ವಿದ್ಯಮಾನ ಸ್ಥಳೀಯ ಸಿಸಿಕ್ಯಾಮೆರಾದಲ್ಲಿ ದಾಖಲಾಗಿದೆ. ಇದೇ ವಿಡಿಯೋ ಈಗ ವೈರಲ್‌ ಆಗಿರುವಂಥದ್ದು! ವಿಡಿಯೋ ನೋಡಿ..