logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Teacher-student Video: ಶಿಕ್ಷಕಿಯನ್ನು ಅಪ್ಪಿಕೊಂಡು ಕ್ಷಮಾಪಣೆ ಕೇಳಿದ ಪುಟಾಣಿ.. ವಿಡಿಯೋ ವೈರಲ್​

Teacher-Student Video: ಶಿಕ್ಷಕಿಯನ್ನು ಅಪ್ಪಿಕೊಂಡು ಕ್ಷಮಾಪಣೆ ಕೇಳಿದ ಪುಟಾಣಿ.. ವಿಡಿಯೋ ವೈರಲ್​

Sep 13, 2022 05:52 PM IST

  • ಈ ಪುಟ್ಟ ಬಾಲಕ ಏನೋ ತಪ್ಪು ಮಾಡಿದ್ದಾನೆ ಅನ್ಸತ್ತೆ. ಅದಕ್ಕೆ ಶಿಕ್ಷಕಿ ಮುಖ ಊದಿಸಿಕೊಂಡು ಕೂತಿದ್ದಾರೆ. ನಾನು ಮಾತಾಡುವುದಿಲ್ಲ, ನೀನು ಮಾಡೊಲ್ಲ ಮಾಡೊಲ್ಲ ಎಂದು ಪದೇ ಪದೇ ಅದೇ ತಪ್ಪು ಮಾಡುತ್ತೀಯ ಅಂತಾ ಹೇಳುತ್ತಿದ್ದಾರೆ. ಆದರೆ ವಿದ್ಯಾರ್ಥಿ ಮಾತ್ರ ಇನ್ನೊಮ್ಮೆ ಹೀಗೆ ಮಾಡೋದಿಲ್ಲ ಟೀಚರ್​ ಅಂತ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಶಿಕ್ಷಕಿಯನ್ನು ಅಪ್ಪಿಕೊಂಡು, ಶಿಕ್ಷಕಿಯನ್ನು ಚುಂಬಿಸುತ್ತಾ ಕ್ಷಮಾಪಣೆ ಕೇಳುತ್ತಿದ್ದಾನೆ. ಕೊನೆಗೂ ಬಾಲಕನ್ನು ಟೀಚರ್​ ಕ್ಷಮಿಸಿ ಆತನಿಂದ ಎರಡೂ ಕೆನ್ನೆಗಳಿಗೆ ಮುತ್ತು ಕೊಡಿಸಿಕೊಂಡು, ಆತನಿಗೂ ಮುತ್ತು ನೀಡಿ ಕಳುಹಿಸುತ್ತಾರೆ. ಶಿಕ್ಷಕಿ ಹಾಗೂ ಪುಟಾಣಿ ವಿದ್ಯಾರ್ಥಿಯ ನಡುವಿನ ಮುದ್ದಾದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.