ಕನ್ನಡ ಸುದ್ದಿ  /  Astrology  /  How To Get Blessings Of Shani Dev: Saturday Is Special For Capricorn, Aquarius, Sagittarius, Gemini, Libra Zodiac Signs How To Get Shani Dev's Grace

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ; ಶನಿದೇವರ ಅನುಗ್ರಹ ಪಡೆಯವುದು ಹೇಗೆ?

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು. ಶನಿದೇವರಿಗೆ ಸಂಬಂಧಿಸಿದ ಯಾವ ಸ್ತೋತ್ರ ಇಂದು ಪಠಿಸಬೇಕು? ಇಲ್ಲಿದೆ ಮಾಹಿತಿ.

ಶನಿದೇವರು
ಶನಿದೇವರು

ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು.

ಈ ಸಮಯದಲ್ಲಿ ಸಾಡೇಸಾತಿ ಶನಿಯು ಮಕರ, ಕುಂಭ, ಧನು ರಾಶಿಗಳ ಮೇಲಿದ್ದರೆ ಮತ್ತು ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಶನಿಯ ಪ್ರಭಾವ ಎರಡು ಪಟ್ಟು ಹೆಚ್ಚಿದೆ. ಸಾಡೇಸಾತಿ ಶನಿ ಮತ್ತು ಶನಿಯ ಧೈಯ್ಯಾ ( ಅರ್ಥಾತ್‌ ಶನಿಯು ಸಂಚಾರದ ಸಮಯದಲ್ಲಿ ರಾಶಿಚಕ್ರದಿಂದ ನಾಲ್ಕನೇ ಅಥವಾ ಎಂಟನೇ ಮನೆಯಲ್ಲಿ ಕುಳಿತಿದ್ದರೆ, ಆ ಪರಿಸ್ಥಿತಿಯಲ್ಲಿ ಅದನ್ನು ಶನಿಯ ಧೈಯ್ಯಾ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಶನಿಯ ಧೈಯಾವು ಮಿಥುನ ಮತ್ತು ತುಲಾಗಳ ಮೇಲೆ ಪ್ರಭಾವ ಬೀರುತ್ತದೆ. ನಂತರ ಸಾಡೇಸಾತಿ ಶನಿಯ ಪ್ರಭಾವವು ಧನು ರಾಶಿ, ಮಕರ ಮತ್ತು ಕುಂಭ ರಾಶಿಯ ಮೇಲೆ ಉಳಿಯುತ್ತದೆ) ಉಂಟಾದಾಗ ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸಾಡೇಸಾತಿ ಶನಿಯ ಪ್ರಭಾವವನ್ನು ತೊಡೆದುಹಾಕಲು, ಪ್ರತಿದಿನ ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರವನ್ನು ಪಠಿಸುವುದು ಪರಿಹಾರ. ದಶರಥನು ವಿರಚಿತ ಶನಿ ಸ್ತೋತ್ರ ಎಂದರೆ ಭಗವಾನ್‌ ಶ್ರೀ ರಾಮನ ತಂದೆಯಾದ ರಾಜ ದಶರಥನು ರಚಿಸಿದ ಶನಿಸ್ತೋತ್ರ ಎಂದು ಅರ್ಥ. ದಶರಥ ರಚಿಸಿದ ಶನಿ ಸ್ತೋತ್ರವನ್ನು ಪಠಿಸುವುದರಿಂದ ಶಿವನ ಕೃಪೆಗೂ ಪಾತ್ರರಾಗಬಹುದು.

ಮುಂದೆ ಓದಿ ದಶರಥನ ಶನಿ ಸ್ತೋತ್ರ....

ನಮಃ ಕೃಷ್ಣಾಯ ನೀಲಯ ಶಿತಿಕಂಠನಿಭಾಯ ​​ಚ ।

ನಮಃ ಕಾಲಾಗ್ನಿರೂಪಾಯ ಕೃತಾನ್ತಾಯ ಚ ವೈ ನಮಃ ||

ನಮೋ ನಿರ್ಮಾಂಸ್‌ ದೇಹಾಯ ದೀರ್ಘಶ್ಮಶ್ರುಜಟಾಯ ಚ ।

ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾಕೃತೇ ||

ನಮಃ ಪುಷ್ಕಲಗಾತ್ರಾಯ ಸ್ಥೂಲರೋಮ್ಣೇSತ್ ವೈ ನಮಃ |

ನಮೋ ದೀರ್ಘಾಯಶುಷ್ಕಾಯ ಕಾಲದಷ್ಟ್ರ ನಮೋSಸ್ತುತೆ ||

ನಮಸ್ತೇ ಕೋಟರಾಕ್ಷಾಯ ದುರ್ನಿರೀಕ್ಷಾಯ ವೈ ನಮಃ ।

ನಮೋ ಘೋರಾಯ ರೌದ್ರಾಯ ಬಿಷ್ಣಾಯ ಕಪಾಲಿನೇ ||

ನಮಸ್ತೇ ಸರ್ವಭಕ್ಷಾಯ ವಲೀಮುಖಾಯನಮೋSಸ್ತುತೇ ।

ಸೂರ್ಯಪುತ್ರ ನಮಸ್ತೇSಸ್ತು ಭಾಸ್ಕರೇ ಭಯದಾಯ ಚ||

ಅಧೋದೃಷ್ಟೇಃ ನಮಸ್ತೇSಸ್ತು ಸಂವರ್ತಕ ನಮೋSಸ್ತುತೇ |

ನಮೋ ಮಂದಗತೇ ತುಭ್ಯಂ ನಿರಿಸ್ತ್ರಾಣಾಯ ನಮೋSಸ್ತುತೇ ||

ತಪಸಾ ದಗ್ಧದೇಹೇ ನಿತ್ಯಂ ಯೋಗರತಾಯ ಚ ।

ನಮೋ ನಿತ್ಯಂ ಕ್ಷುಧಾರ್ತಾಯ ಅತೃಪ್ತಾಯ ಚ ವೈ ನಮಃ ||

ಜ್ಞಾನಚಕ್ಷುರ್ನ್ಮಸ್ತೇಸ್ತು ಕಶ್ಯಪಾತ್ಮಜ ಸೂನವೆ।

ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್‌ಕ್ಷಣಾತ್‌ ||

ದೇವಾಸುರಮನುಷ್ಯಶ್ಚ ಸಿದ್ಧವಿದ್ಯಾಧರೋರಗಾಃ |

ತ್ವಯಾ ವಿಲೋಕಿತಃ ಸರ್ವ ನಾಶಯಂತಿ ಸಮೂಲತಃ ||

ಪ್ರಸಾದ ಕುರು ಮೇ ದೇವ ವರಾಹೋS'ಹಮುಪಾಗತ |

ಏವಂ ಸ್ತುತಸ್ತದ ಸೌರಿಗ್ರಹರಾಜೋ ಮಹಾಬಲಃ ||

*******************

Dasharatha Maharaja narrated Shani Stotra: ದಶರಥ ವಿರಚಿತ ಶನಿಸ್ತೋತ್ರ (ಭಾವಾರ್ಥ ಸಹಿತ)ಇಲ್ಲಿದೆ

ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ ಇನ್ನೂ ಒಂದಿದೆ. ಪಿಪ್ಪಲಾದ ಮುನಿಯು ಶನಿದೇವನನ್ನು ಹತ್ತು ಹೆಸರುಗಳಿಂದ ಸ್ತುತಿಸಿದ್ದು, ಆ ಹತ್ತು ಹೆಸರುಗಳ ನಿತ್ಯಪಠಣ ಮಾಡಿದರೆ ಅದುವೇ ನಮ್ಮನ್ನು ಶನಿಪೀಡೆಯಿಂದ ಪಾರುಮಾಡುತ್ತದೆ ಎಂದು ದಶರಥ ಮಹಾರಾಜ ಹೇಳಿದ್ದ ಎಂಬ ಉಲ್ಲೇಖ ಪುರಾಣದಲ್ಲಿದೆ. ಹಾಗಾದರೆ, ದೃಶರಥ ಕೃತ ಶನಿಸ್ತೋತ್ರ ಯಾವುದು? ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ.