ಸಂಖ್ಯಾಶಾಸ್ತ್ರ: ಈ ದಿನಾಂಕಗಳಂದು ಜನಿಸಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ -Numerology
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಖ್ಯಾಶಾಸ್ತ್ರ: ಈ ದಿನಾಂಕಗಳಂದು ಜನಿಸಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ -Numerology

ಸಂಖ್ಯಾಶಾಸ್ತ್ರ: ಈ ದಿನಾಂಕಗಳಂದು ಜನಿಸಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ -Numerology

ಯಾವ ದಿನಾಂಕದಂದು ಜನಿಸಿದವರಿಗೆ ಎಂತಹ ಹುದ್ದೆ ಸಿಗಬಹುದು ಎಂಬುದನ್ನು ಸಂಖ್ಯಾಶಾಸ್ತ್ರ ಮೂಲಕ ತಿಳಿಯಬಹುದು. ಹುಟ್ಟಿದ ದಿನಾಂಕ, ಹೆಸರಿನ ವಿಶ್ಲೇಷಣೆಯೊಂದಿಗೆ ಯಾವ ದಿನಾಂಕದಂದು ಹುಟ್ಟಿದವರಿಗೆ ಯಾವೆಲ್ಲಾ ಹುದ್ದೆಗಳು ಸಿಗಬಹುದು ಎಂಬುದನ್ನು ಸಂಖ್ಯೆಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ.

ಈ ದಿನಾಂಕಗಳಂದು ಜನಿಸಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ
ಈ ದಿನಾಂಕಗಳಂದು ಜನಿಸಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಓದಿ ದೊಡ್ಡ ಹುದ್ದೆಗಳಿಗೆ ಸೇರಬೇಕು ಅನ್ನೋ ಕನಸು ಕಾಣುತ್ತಾರೆ. ಅದರಲ್ಲೂ ನನ್ನ ಮಗ ಅಥವಾ ಮಗಳು ಐಎಎಸ್ (IAS), ಐಪಿಎಸ್‌ನಂತಹ (IPS) ಅತ್ಯುನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಓದುವ ಮಕ್ಕಳೂ ಕೂಡ ಇಂತಹ ಉನ್ನತ ಹುದ್ದೆಗಳನ್ನು ಹೋಗಬೇಕೆಂಬ ಗುರಿಯೊಂದಿಗೆ ತಯಾರಿ ನಡೆಸುತ್ತಾರೆ. ಹೀಗೆ ತಯಾರಿ ನಡೆಸುವವರ ಪೈಕಿ ಕೇವಲ ಶೇಕಡಾ 1 ಕ್ಕಿಂತ ಕಡಿಮೆ ಮಂದಿ ಪರೀಕ್ಷೆಗಳಿಗೆ ಅರ್ಹತೆಯನ್ನು ಪಡೆಯುತ್ತಾರೆ.

ಸಂಖ್ಯಾಶಾಸ್ತ್ರದ (Numerology) ಮೂಲಕವು ಯಾವ ದಿನಾಂಕದಂದು ಜನಿಸಿದವರಿಗೆ ಎಂತಹ ಹುದ್ದೆ ಸಿಗಬಹುದು ಎಂಬುದನ್ನು ತಿಳಿದುಕೊಳ್ಳಬಹುದು. ಭವಿಷ್ಯದ ವೃತ್ತಿ ಮಾರ್ಗವನ್ನು ಪೂರ್ವಭಾವಿಯಾಗಿ ಯೋಜಿಸಲು ಇದೊಂದು ರೀತಿಯಲ್ಲಿ ಉತ್ತಮ ಮಾರ್ಗದರ್ಶಿಯಾಗಿದೆ. ಹುಟ್ಟಿದ ದಿನಾಂಕ, ಹೆಸರಿನ ವಿಶ್ಲೇಷಣೆಯೊಂದಿಗೆ ಯಾವ ದಿನಾಂಕದಂದು ಹುಟ್ಟಿದವರಿಗೆ ಯಾವೆಲ್ಲಾ ಹುದ್ದೆಗಳು ಸಿಗಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಯಾವ ಸಂಖ್ಯೆಗೆ ಯಾವ ಅಕ್ಷರ ಮತ್ತು ಆ ಸಂಖ್ಯೆಯ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತೆ?

ಸಂಖ್ಯೆ 1 (ಎ,ಐ, ಜೆ, ಕ್ಯೂ ಹಾಗೂ ವೈ ಅಕ್ಷರಗಳು)

ಸಂಖ್ಯೆ 4 ( ಇ,ಹೆಚ್‌, ಎನ್‌ ಹಾಗೂ ಎಕ್ಸ್ ಅಕ್ಷರಗಳು)

ಸಂಖ್ಯೆ 8 (ಎಫ್‌ ಮತ್ತು ಪಿ ನಂತಹ ಅಕ್ಷರಗಳು)

ಸಂಖ್ಯೆ 9 ( ಡಿ, ಎಂ ಹಾಗೂ ಟಿ ನಂತಹ ಅಕ್ಷರಗಳು)

ಸಂಖ್ಯೆ - 1ರ ಜನರ ಸ್ವಭಾವ ಹೇಗಿರುತ್ತೆ?

ಸಂಖ್ಯೆ 1 ಅನ್ನು ಹೊಂದಿರುವವರು ಸಾಮಾನ್ಯವಾಗಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳನ್ನು ಪಡೆಯುತ್ತಾರೆ. ನಾಯಕತ್ವ, ಮಹತ್ವಕಾಂಕ್ಷೆ ಹಾಗೂ ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಹುದ್ದೆಗಳು ಹೆಸರುವಾಸಿಯಾಗಿವೆ. ಈ ಸಂಖ್ಯೆಯ ಜನರು ಜೀವನದಲ್ಲಿ ನೈಸರ್ಗಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ನಿರ್ಣಾಯಕವಾಗಿ ವರ್ತಿಸುತ್ತಾರೆ. ಇತರರನ್ನು ಪ್ರೇರೇಪಿಸುವ ಅವರ ಸಾಮರ್ಥ್ಯವು ನಾಯಕತ್ವಕ್ಕೆ ಹೆಚ್ಚು ಮೌಲ್ಯಯುತವಾಗಿರುತ್ತದೆ. ಹೀಗಾಗಿ ಅವರು ಉನ್ನತ ಆಡಳಿತ ಮತ್ತು ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.

ಸಂಖ್ಯೆ - 4 ರ ಜನರ ಸ್ವಭಾವ ಹೇಗಿರುತ್ತೆ?

ಸಂಖ್ಯೆ 4 ಕೂಡ ಐಎಎಸ್ ಮತ್ತು ಐಪಿಎಸ್ ಹುದ್ದೆಗಳ ಬಗ್ಗೆ ಸೂಚಿಸುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಸಂಖ್ಯೆಯಡಿ ಜನಿಸುವವರು ಶ್ರದ್ಧೆ, ಶಿಸ್ತು ಹಾಗೂ ವಾಸ್ತವಿಕತೆಯಿಂದ ಕೂಡಿರುತ್ತಾರೆ. ಐಎಎಸ್, ಐಪಿಎಸ್ ಹುದ್ದಗೆಳಿಗೆ ಸಂಪೂರ್ಣ ತಯಾರಿ ನಡೆಸುತ್ತಾರೆ. ಶಿಸ್ತಿನ ಪರಿಸರಕ್ಕೆ ಇವರ ಗುಣಗಳು ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ. ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು, ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸುವಂತ ಮನೋಭಾವ ಇರಲ್ಲಿ ಇರುತ್ತದೆ.

ಸಂಖ್ಯೆ - 8

1, 4 ಜೊತೆಗೆ 8 ನೇ ಸಂಖ್ಯೆಯು ಉನ್ನತ ಹುದ್ದೆಗಳನ್ನು ಪಡೆಯುವವರಿಗೆ ಸಂಬಂಧಿಸಿದ್ದಾಗಿದೆ. ಇವರಿಗೆ ಅಧಿಕಾರಿ, ಶಕ್ತಿ ಹಾಗೂ ನಿರ್ವಹಣಾ ಸಾಮರ್ಥ್ಯ ಹೆಚ್ಚಿರುತ್ತದೆ. ಜೊತೆಗೆ ಪರಿಣಾಮಕಾರಿಯಾಗಿ ಸಂಪನ್ಮೂಲ ಮತ್ತು ಜನರ ನಿರ್ವಹಣೆಯಲ್ಲೂ ಇವರು ಪರಿಣತರಾಗಿರುತ್ತಾರೆ. ಹಣಕಾಸು ನಿರ್ವಹಣೆಯಲ್ಲಿ ಇವರು ಪರಿಣಿತರಾಗಿರುತ್ತಾರೆ. ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಇವರಲ್ಲಿ ಹೆಚ್ಚು ಇರುತ್ತದೆ.

ಸಂಖ್ಯೆ - 9

ಈ ಸಂಖ್ಯೆಯ ಜನರು ಸ್ವಲ್ಪ ಸಹಾನುಭೂತಿಯನ್ನು ಹೊಂದಿರುತ್ತಾರೆ. ಜೊತೆಗೆ ಮಾನವೀಯತೆಯನ್ನು ಹೆಚ್ಚು ಅಳವಡಿಸಿಕೊಂಡಿರುತ್ತಾರೆ. ಆದರ್ಶವಾಗುವಂತಹ ಹಲವು ಕೆಲಸಗಳನ್ನು ಮಾಡುವ ಗುಣಗಳನ್ನು ಸಂಖ್ಯೆ 9ರ ಜನರು ಹೊಂದಿರುತ್ತಾರೆ. ಸಮಾಜನದಲ್ಲಿನ ಜನರಿಗೆ ಸಹಾಯ ಮಾಡುವ ಅಗತ್ಯಗಳಿಂದ ಇವರು ಪ್ರೇರಣೆ ಪಡೆದಿರುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.