ಬೆಂಗಳೂರು ನಗರದ ಹವಾಮಾನ ಮಾಹಿತಿ, ವಾತಾವರಣ ವಿವರ, ಮಳೆ ಮುನ್ಸೂಚನೆ, ಉಷ್ಣಾಂಶ ವಿವರ, Temperature, Weather Report, Rain Updates, Rain Predictions
ಕನ್ನಡ ಸುದ್ದಿ  /  ಹವಾಮಾನ  /  ಬೆಂಗಳೂರು

ಬೆಂಗಳೂರು ಹವಾಮಾನ

ಬೆಂಗಳೂರು ವಾತಾವರಣ
?Clouds
25
  • ಕನಿಷ್ಠ:18
  • ಗರಿಷ್ಠ:25
  • ಸೂರ್ಯೋದಯ: 
    06:45 AM
    ಸೂರ್ಯಾಸ್ತ: 
    06:11 PM
  • ತೇವಾಂಶ : 
  • ಇಂದು ಹವಾಮಾನ, ಬೆಂಗಳೂರು

    ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣವು ಬೆಂಗಳೂರು ನಗರದ ಹವಾಮಾನ ಮುನ್ಸೂಚನೆ, ಲೈವ್ ಅಪ್‌ಡೇಟ್‌ಗಳನ್ನು ನಿಮಗೆ ನೀಡುತ್ತಿದೆ. ಹವಾಮಾನದ ತಾಜಾ ಮಾಹಿತಿ ಇಲ್ಲಿ ಲಭ್ಯವಿದೆ. ಹವಾಮಾನ ಮುನ್ಸೂಚನೆಯೊಂದಿಗೆ ಮಾಸಿಕ ಸರಾಸರಿ ಮಳೆ ವಿವರ, ಉಷ್ಣಾಂಶದ ಏರಿಳಿತ, ಚಂಡಮಾರುತ, ವಾಯುಭಾರ ಕುಸಿತ, ಸಮುದ್ರದಲ್ಲಿ ಅಲೆಗಳ ಅಬ್ಬರದ ಮಾಹಿತಿಯೂ ಇಲ್ಲಿ ಲಭ್ಯ.

    ಕರ್ನಾಟಕ ರಾಜ್ಯದ ಹವಾಮಾನವನ್ನು ನಿಖರವಾಗಿ ಅಂದಾಜಿಸಲು ನಾವು ಪ್ರಯತ್ನಿಸುತ್ತೇವೆ. ಹವಾಮಾನ ಮುನ್ಸೂಚನೆ, ಉಷ್ಣಾಂಶ, ತೇವಾಂಶ ವಿವರ, ಗಾಳಿಯ ದಿಕ್ಕು ಮತ್ತು ವೇಗದ ಮಾಹಿತಿಯೂ ಇಲ್ಲಿ ಲಭ್ಯವಿದೆ.

    ಕರ್ನಾಟಕ ಹವಾಮಾನ
    ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 1248 ಮಿಮೀ (ಮಿಲಿಮೀಟರ್) ಇದೆ. ರಾಜ್ಯವ್ಯಾಪಿ ಇಷ್ಟೇ ಮಳೆ ಸುರಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಕರಾವಳಿ, ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ ವ್ಯತ್ಯಾಸವಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಸಾಮಾನ್ಯವಾಗಿ ವಾರ್ಷಿಕ ಗರಿಷ್ಠ ಮಳೆ ದಾಖಲಾಗುತ್ತದೆ. ಇತ್ತೀಚಿನ ದಾಖಲೆಗಳ ಪ್ರಕಾರ ಇಲ್ಲಿ 7,640 ಮಿಮೀ ಮಳೆ ಸುರಿದಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾರ್ಷಿಕ ಕನಿಷ್ಠ ಮಳೆ ದಾಖಲಾಗುತ್ತದೆ. ಇತ್ತೀಚಿನ ದಾಖಲೆಗಳ ಪ್ರಕಾರ ಇಲ್ಲಿ 500 ಮಿಮೀ ಮಳೆಯಾಗಿತ್ತು.

    ಉದಾಹರಣೆಗೆ, ಚಿತ್ರದುರ್ಗ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ ಮಳೆ ಕೇವಲ 560 ಮಿ.ಮೀ. ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ನಿಂದಾಗಿ 602 ಮಿ.ಮೀ, ಈಶಾನ್ಯ ಮಾನ್ಸೂನ್ ನಿಂದಾಗಿ 203 ಮಿ.ಮೀ, ಬೇಸಿಗೆಯಲ್ಲಿ 73 ಮಿ.ಮೀ ಮತ್ತು ಚಳಿಗಾಲದಲ್ಲಿ 18 ಮಿ.ಮೀ. ಮಳೆ ದಾಖಲಾಗಿದೆ.

    ಪಕ್ಕದ ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚಂಡಮಾರುತಗಳ ಹಾವಳಿ ಕಡಿಮೆ. ಮುಂಗಾರು ಆರ್ಭಟ ಹೆಚ್ಚಾಗಿರುವಾಗ ಮಂಗಳೂರು ಸುತ್ತಮುತ್ತ ಕಡಲಕೊರೆತದಿಂದ ಜನರು ಸಂಕಷ್ಟ ಅನುಭವಿಸುತ್ತಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿದಾಗ ಕೃಷ್ಣಾ ನದಿ ಉಕ್ಕಿ ಹರಿದು ಉತ್ತರ ಕರ್ನಾಟಕದ ಜನರು ಪ್ರವಾಹದ ಭೀತಿ ಅನುಭವಿಸುತ್ತಾರೆ. ಇಷ್ಟು ಬಿಟ್ಟರೆ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿವೃಷ್ಟಿ ಮತ್ತು ಬರದ ಭೀತಿ ಕಡಿಮೆ.

    ಹವಾಮಾನ ವೈಪರಿತ್ಯ ಮತ್ತು ಏಕಾಏಕಿ ಸುರಿಯುವ ಧಾರಾಕಾರ ಮಳೆಯಿಂದಾಗಿ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಭೂಕುಸಿತದಿಂದಾಗಿ ನೂರಾರು ಎಕರೆ ಕಾಫಿ, ಅಡಿಕೆ ತೋಟಗಳು ವಸತಿ ಪ್ರದೇಶಗಳೂ ಹಾಳಾಗಿವೆ. ವಾರ್ಷಿಕ ಮಳೆ ಪ್ರಮಾಣ ಅಷ್ಟೇ ಇದ್ದರೂ ಬೀಳುವ ಅವಧಿಯಲ್ಲಿ ಏರುಪೇರಾಗಿರುವುದು ಬೆಳೆ ನಷ್ಟವೂ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

    ಕರ್ನಾಟದಲ್ಲಿ ಸಾಮಾನ್ಯವಾಗಿ ಮುಂಗಾರು ಜೂನ್ ತಿಂಗಳಲ್ಲಿ ಆರಂಭವಾಗುತ್ತದೆ. ಕೇರಳದಿಂದ ಕರ್ನಾಟಕಕ್ಕೆ ಮುಂಗಾರು ಮಾರುತಗಳು ಪ್ರವೇಶಿಸುತ್ತವೆ. ಹಿಂಗಾರು ಡಿಸೆಂಬರ್‌ನಲ್ಲಿ ಆರಂಭವಾಗುತ್ತದೆ. ಇದು ಚಳಿಗಾಲವೂ ಹೌದು. ಮಾರ್ಚ್‌ನಿಂದ ಜೂನ್ ನಡುವಣ ಅವಧಿಯಲ್ಲಿ ಒಣಹವೆ ಇರುತ್ತದೆ.

    ಬೆಂಗಳೂರು ಸೇರಿದಂತೆ ಕರ್ನಾಟಕದ ಮುಖ್ಯ ನಗರಗಳಲ್ಲಿ ಐಟಿ ಮತ್ತು ಸೇವಾ ವಲಯ ಬೆಳೆದಿದೆ. ಆದರೆ ಉತ್ತರ ಕರ್ನಾಟಕ ಸೇರಿದಂತೆ ಗ್ರಾಮೀಣ ಭಾಗದ ಆರ್ಥಿಕತೆಯು ಬೇಸಾಯವನ್ನು ಅವಲಂಬಿಸಿದೆ. ಕೃಷ್ಣಾ, ಕಾವೇರಿ, ತುಂಗಭದ್ರಾ ಕರ್ನಾಟಕದ ಪ್ರಮುಖ ನದಿಗಳು. ಈ ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟು ನಿರ್ಮಿಸಲಾಗಿದ್ದು, ಬೇಸಾಯಕ್ಕೆ ನೀರು ಹರಿಸಲಾಗುತ್ತಿದೆ.

    ಕರ್ನಾಟಕದಲ್ಲಿ ಬೇಸಿಗೆ ಕಾಲ: ಕರ್ನಾಟಕದಲ್ಲಿ ಮಾರ್ಚ್‌ನಿಂದ ಜೂನ್‌ವರೆಗೆ ಬೇಸಿಗೆ ಇರುತ್ತದೆ. ರಾಯುಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ತಾಪಮಾನ ತೀವ್ರವಾಗಿರುತ್ತದೆ. ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶ ಒಂದು ಹಂತ ದಾಟಿ ಸಾಮಾನ್ಯವಾಗಿ ಹೆಚ್ಚಾಗುವುದಿಲ್ಲ

    ಕರ್ನಾಟಕದಲ್ಲಿ ಮಳೆಗಾಲ: ಕರ್ನಾಟಕದಲ್ಲಿ ಜೂನ್‌ನಿಂದ ಅಕ್ಟೋಬರ್‌ ವರೆಗೂ ಮುಂಗಾರು ಹಂಗಾಮು. ಈ ಅವಧಿಯಲ್ಲಿ ಸಾಮಾನ್ಯವಾಗಿ ರಾಜ್ಯಾದ್ಯಂತ ಮಳೆ ಸುರಿಯುವುದು ವಾಡಿಕೆ. ಆದರೆ ಕಲ್ಯಾಣ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಮಳೆ ಕೊರತೆ ಸಾಮಾನ್ಯ.

    ಕರ್ನಾಟಕದಲ್ಲಿ ಚಳಿಗಾಲ: ಕರ್ನಾಟಕದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೂ ಚಳಿಗಾಲ ಇರುತ್ತದೆ. ಈ ಅವಧಿಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ 20 ಡಿಗ್ರಿಗಿಂತಲೂ ಕಡಿಮೆಯಾಗುತ್ತದೆ. ಬೀದರ್‌ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಕನಿಷ್ಠ ತಾಪಮಾನ ದಾಖಲಾಗುತ್ತದೆ.

    ವಾರದ ಆಗಮನ

    ಇಂದು
    ?
    broken clouds
    25
    18
    ಬುಧವಾರ
    ?
    broken clouds
    26
    16
    ಗುರುವಾರ
    ?
    scattered clouds
    26
    16
    ಶುಕ್ರವಾರ
    ?
    scattered clouds
    26
    15
    ಶನಿವಾರ
    ?
    overcast clouds
    24
    14
    ಭಾನುವಾರ
    ?
    overcast clouds
    24
    17
    ಸೋಮವಾರ
    ?
    overcast clouds
    25
    18

    ಪದೇಪದೆ ಕೇಳುವ ಪ್ರಶ್ನೆಗಳು

    ಬೆಂಗಳೂರು ನಾಳೆಯ ಹವಾಮಾನ ಹೇಗಿರುತ್ತೆ?

    ಬೆಂಗಳೂರು ನಾಳೆ ಮಳೆಯಾಗುವ ಸಾಧ್ಯತೆಯಿದೆ

    ಬೆಂಗಳೂರು ನಾಳೆಯ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಎಷ್ಟು

    ಬೆಂಗಳೂರು ನಾಳೆಯ ತಾಪಮಾನವು 18 ಮತ್ತು 25 ಡಿಗ್ರಿ ಸೆಂಟಿಗ್ರೇಡ್ ನಡುವೆ ಇರಲಿದೆ

    ಬೆಂಗಳೂರು ನಾಳೆ ಮಳೆಯಾಗಲಿದೆಯೇ?

    ಬೆಂಗಳೂರು ನಾಳೆ ಮಳೆ ಸಾಧ್ಯತೆ ಶೇ 0

    ಬೆಂಗಳೂರು ನಾಳೆ ವೇಗವಾಗಿ ಗಾಳಿ ಬೀಸಲಿದೆಯೇ?

    ಬೆಂಗಳೂರು ನಾಳೆ ಗಂಟೆಗೆ 18 ಕಿಮೀ ಇಂದ 31 ಕಿಮೀ ವರೆಗೂ ಗಾಳಿ ಬೀಸುವ ಸಾಧ್ಯತೆ ಇದೆ

    ಬೆಂಗಳೂರು ನಾಳೆ ಸೂರ್ಯನ ಬೆಳಕು ಎಷ್ಟು ತಾಸು ಇರುತ್ತದೆ?

    ಬೆಂಗಳೂರು ನಾಳೆ 9.8 ಗಂಟೆಗಳಷ್ಟು ಸೂರ್ಯನ ಬೆಳಕು ಬೀಳಲಿದೆ.

    ಬೆಂಗಳೂರು ನಾಳೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವೇನು?

    ಬೆಂಗಳೂರು ನಾಳೆ ಮುಂಜಾನೆ 06:45 AMಕ್ಕೆ ಸೂರ್ಯೋದಯ ಮತ್ತು ಸಂಜೆ 06:11 PMಕ್ಕೆ ಸೂರ್ಯಾಸ್ತ

    ಇಂದಿನ ಹವಾಮಾನ ಸುದ್ದಿ

    ಮಳೆ ವೇಳೆ ಸಿಡಿಲು ಬಂದರೆ ನಿಮ್ಮ ಮುನ್ನೆಚ್ಚರಿಕೆ ಹೀಗಿರಲಿ

    Lightning Safety Tips: ಬೇಸಿಗೆಯಲ್ಲೂ ಗುಡುಗು- ಸಿಡಿಲು ವಾತಾವರಣ; ಸಿಡಿಲು ಹೊಡೆಯುವ ಮುನ್ನಾ ಹೀಗಿರಲಿ ಮುನ್ನೆಚ್ಚರಿಕೆ

    Monday, April 28, 2025

    ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ.

    ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಶೇ. 6ಕ್ಕೆ ಕುಸಿತ, ಲಿಂಗನಮಕ್ಕಿ ನೀರ ಪ್ರಮಾಣ ಶೇ.30ಕ್ಕೆ ಇಳಿಕೆ, ಬೇಸಿಗೆವರೆಗೂ ಹೇಗಿರಲಿದೆ ಸ್ಥಿತಿ

    Saturday, April 26, 2025

    ಕರ್ನಾಟಕ ಹವಾಮಾನ ಏ 26: ಬಿಸಲು- ಮಳೆಯಾಟ ಇರುವ ಕಾರಣ ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ, ಮರೆಯಬೇಡಿ ಮತ್ತೆ. (ಸಾಂಕೇತಿಕ ಚಿತ್ರ)

    ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ

    Saturday, April 26, 2025

    ಬೆಳಗಾವಿ ಜಿಲ್ಲೆಯ ಕೆಲವೆಡೆ ಇನ್ನು ಕೆಲವೇ ಗಂಟೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಶೂಚನೆ ನೀಡಿದೆ. (ಸಾಂಕೇತಿಕ ಚಿತ್ರ)

    ಕರ್ನಾಟಕ ಹವಾಮಾನ: ಕೆಲವೇ ಗಂಟೆಗಳಲ್ಲಿ ಬೆಳಗಾವಿ ಜಿಲ್ಲೆಯ ಕೆಲವೆಡೆ ಗುಡುಗು, ಸಿಡಿಲು ಮಳೆ ಸಾಧ್ಯತೆ, ಇನ್ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಬಹುದು

    Friday, April 25, 2025

    ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

    ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

    Friday, April 25, 2025

    ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ ಕಾಡಬಹುದು ಎಂದು ಇಂದಿನ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

    ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ - ಹೀಗಿರಲಿದೆ ಇಂದಿನ ಕರ್ನಾಟಕ ಹವಾಮಾನ

    Thursday, April 24, 2025

    ಎಲ್ಲವನ್ನೂ ನೋಡಿ