Numerology: ಈ 4 ದಿನಾಂಕಗಳಲ್ಲಿ ಜನಿಸಿದವರ ಬುದ್ಧಿ ಬಲು ಚುರುಕು; ಸಂಪತ್ತು ಹೆಚ್ಚಳ, ಜೀವನದಲ್ಲಿ ಸದಾ ಸಂತೋಷ ಇರುತ್ತೆ
ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ನಿರ್ಣಯಿಸಲಾಗುತ್ತದೆ. ಆ ಮೂಲಕ 2, 11, 20 ಹಾಗೂ 29 ರ ಸಂಖ್ಯೆಯಲ್ಲಿ ಹುಟ್ಟಿದವರ ವಿಶೇಷ ಗುಣಗಳನ್ನು ತಿಳಿಯೋಣ. ಇವರ ಬುದ್ಧಿ ಇತರರಿಗಿಂತ ತುಂಬಾ ಚುರುಕಾಗಿರುತ್ತೆ.
ಮನುಷ್ಯನ ಜೀವನಲ್ಲಿ ಸಂಖ್ಯೆಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆಯ ಅಧಾರದ ಮೇಲೆ ಅಂದರೆ ಹುಟ್ಟಿದ ದಿನಾಂಕದ ಆಧಾರದ ಮೇಲೆ ಭವಿಷ್ಯ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯ, ಸಂಖ್ಯಾಶಾಸ್ತ್ರದಲ್ಲಿ ಜನ್ಮ ದಿನಾಂಕದ ಆಧಾರದ ಮೇಲೆ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ನಿರ್ಣಯಿಸಲಾಗುತ್ತದೆ. ಸಂಖ್ಯಾಶಾಸ್ತ್ರವು ಜ್ಯೋತಿಷ್ಯದಂತೆಯೇ ಜನರ ಭವಿಷ್ಯವನ್ನು ಊಹಿಸಲು ಹಲವು ವರ್ಷಗಳಿಂದ ಅನುಸರಿಸುವ ವಿಧಾನವಾಗಿದೆ. ಸಂಖ್ಯಾಶಾಸ್ತ್ರವು ವ್ಯಕ್ತಿಯ ಜೀವನದಲ್ಲಿ ಶುಭ ಮತ್ತು ಅಶುಭ ಘಟನೆಗಳನ್ನು ಅಂದಾಜಿಸಲಾಗುತ್ತದೆ. ಪ್ರತಿ ಹೆಸರಿಗೆ ಅನುಗುಣವಾದ ಚಿಹ್ನೆ ಹಾಗೂ ಪ್ರತಿ ಸಂಖ್ಯೆಗೆ ಅನುಗುಣವಾಗಿ ಸಂಖ್ಯಾಶಾಸ್ತ್ರಲ್ಲಿ ರಾಡಿಕ್ಸ್ ಸಂಖ್ಯೆಗಳಿವೆ. ರಾಶಿ ಚಿಹ್ನೆಗಳಂತೆ, ಪ್ರತಿ ರಾಡಿಕ್ಸ್ ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತವೆ.
ವ್ಯಕ್ತಿಯ ಜನ್ಮ ದಿನಾಂಕವನ್ನು ಯುನಿಟ್ ಅಂಕೆಗೆ ಸೇರಿಸಿ ನಂತರ ಬರುವ ಫಲಿತಾಂಶದ ಸಂಖ್ಯೆಯನ್ನು ನಿಮ್ಮ ರಾಡಿಕ್ಸ್ ಎಂದು ಕರೆಯಲಾಗುತ್ತದೆ. ನಿಮ್ಮ ಜನ್ಮ ದಿನಾಂಕ, ತಿಂಗಳು ಹಾಗೂ ವರ್ಷವನ್ನು ಯುನಿಟ್ ಅಂಕೆಗೆ ಸೇರಿಸಿರೆ ಫಲಿತಾಂಶದ ಸಂಖ್ಯೆಯನ್ನು ಅದೃಷ್ಟ ಸಂಖ್ಯೆ ಎಂದು ಕರೆಯಲಾಗುತ್ತದೆ. ಉದಾಹರಣೆಗೆ 1,10,19, 18 ರಂದು ಜನಿಸಿದವರು ಸಂಖ್ಯೆ 1 ಅನ್ನು ಹೊಂದಿರುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು 2, 11, 20 ಹಾಗೂ 29 ರಂದು ಜನಿಸಿದವರ ಅದೃಷ್ಟ ಸಂಖ್ಯೆ 2 ಆಗಿರುತ್ತದೆ. ಸಂಖ್ಯೆ 2 ಹೊಂದಿರುವ ಜನರು ಸ್ವಾಭಾವಿಕವಾಗಿ ತುಂಬಾ ಶಾಂತವಾಗಿರುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಯ ಅಡಿಯಲ್ಲಿ ಜನಿಸಿದ ಜನರು ಯಾವಾಗಲೂ ಇತರರಿಗಿಂತ ಸ್ಮಾರ್ಟ್ ಆಗಿರುತ್ತಾರೆ ಎಂದು ಹೇಳುತ್ತಾರೆ. ಈ ಸಂಖ್ಯೆಯಲ್ಲಿ ಹುಟ್ಟಿದವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ.
ಅದೃಷ್ಟದ ಸಂಖ್ಯೆ 2 (ಎಲ್ಲಾ ತಿಂಗಳುಗಳ 2,11,20,29 ರಂದು ಜನಿಸಿವರು)
ಇವರು ಸೂಪರ್ ಸ್ಮಾರ್ಟ್ ಜನರು
ಸಂಖ್ಯಾಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಸಂಖ್ಯೆ 2ರ ಅಡಿಯಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರು ಆಗಿರುತ್ತಾರೆ. ಈ ದಿನಾಂಕದಂದು ಜನಿಸಿದವರು ತಮ್ಮ ಬುದ್ಧಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡುತ್ತಾರೆ. ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. 2ನೇ ಸಂಖ್ಯೆಯ ಅಡಿಯಲ್ಲಿ ಜನಿಸದವರು ಚುರುಕಿನ ಬುದ್ಧಿಯಿಂದಾಗಿಯೇ ಸಮಾಜದಲ್ಲಿ ಇತರರಿಗಿಂತ ಹೆಚ್ಚು ಗೌರವವನ್ನು ಪಡೆಯುತ್ತಾರೆ.
ಸಂಪತ್ತು ಸಂಗ್ರಹಿಸುವುದರಲ್ಲಿ ನಿಪುಣರು
ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 2 ಹೊಂದಿರುವವರು ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ. ಕೆಲಸದಲ್ಲಿ ಮಾತ್ರವಲ್ಲದೆ, ವ್ಯವಹಾರದಲ್ಲಿಯೂ ಉತ್ತಮ ಯಶಸನ್ನು ಸಾಧಿಸುತ್ತಾರೆ. ಸಂಗೀತ, ಗಾಯನ ಹಾಗೂ ಕಲೆಯಂತಹ ಕ್ಷೇತ್ರಗಳಲ್ಲೂ ಪ್ರತಿಭೆಯನ್ನು ಹೊಂದಿರುತ್ತಾರೆ.
2, 11, 20 ಹಾಗೂ 29ನೇ ದಿನಾಂಕದಂದು ಜನಿಸಿ ಸಂಖ್ಯೆ 2 ಅನ್ನು ಹೊಂದಿರುವವರಿಗೆ ಮುಂದೆಯೂ ತುಂಬಾ ಅದೃಷ್ಟದ ದಿನಗಳು ಇರುತ್ತವೆ. ಈ ದಿನಾಂಕಗಳು ನಿಮ್ಮ ಉತ್ತಮ ಫಲಗಳನ್ನು ತರಲಿವೆ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಸೋಮವಾರ, ಶುಕ್ರವಾರ ಹಾಗೂ ಭಾನುವಾರ ಸಂಖ್ಯೆ 2ಕ್ಕೆ ಸಂಬಂಧಿದ ದಿನಾಂಕಗಳಲ್ಲಿ ಜನಿಸಿದವರಿಗೆ ಅದೃಷ್ಟದ ದಿನಗಳು. ಈ ದಿನಗಳು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂದು ಪರಿಗಣಿಸಲಾಗಿದೆ.