ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Parenting Tips: ಮಕ್ಕಳಲ್ಲಿ ಬೆಳೆಯುತ್ತಿರುವ ನಕಾರಾತ್ಮಕ ಗುಣಗಳನ್ನು ಬದಲಾಯಿಸಲು ಇಲ್ಲಿವೆ ಸಲಹೆಗಳು

Parenting Tips: ಮಕ್ಕಳಲ್ಲಿ ಬೆಳೆಯುತ್ತಿರುವ ನಕಾರಾತ್ಮಕ ಗುಣಗಳನ್ನು ಬದಲಾಯಿಸಲು ಇಲ್ಲಿವೆ ಸಲಹೆಗಳು

Parenting: ಮಕ್ಕಳನ್ನು ಸಾಕುವುದು ಎಂದರೆ ಸುಲಭದ ಕೆಲಸವಲ್ಲ. ಅವರ ಗುಣ ನಡತೆಗಳನ್ನು ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದರೆ ಪೋಷಕರು ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಮಕ್ಕಳಲ್ಲಿರುವ ನಕಾರಾತ್ಮಕ ಗುಣವನ್ನು ತಾಳ್ಮೆಯಿಂದ ಶಮನ ಮಾಡಲು ಪೋಷಕರಿಗೆ ಇಲ್ಲಿದೆ ಕೆಲವು ಮುಖ್ಯ ಸಲಹೆಗಳು

ಮಕ್ಕಳ ನಕಾರಾತ್ಮಕ ಮನಸ್ಸನ್ನು ಕಡಿಮೆ ಮಾಡಲು ಟಿಪ್ಸ್‌
ಮಕ್ಕಳ ನಕಾರಾತ್ಮಕ ಮನಸ್ಸನ್ನು ಕಡಿಮೆ ಮಾಡಲು ಟಿಪ್ಸ್‌ (PC: Pixabay)

Parenting: ಮಕ್ಕಳು ಇಷ್ಟಪಟ್ಟಿದ್ದನ್ನು ತಂದುಕೊಟ್ಟ ಮಾತ್ರಕ್ಕೆ ಅದನ್ನು ಉತ್ತಮ ಪೋಷಕರ ಲಕ್ಷಣ ಅಂತಾ ಹೇಳಲು ಆಗುವುದಿಲ್ಲ. ಮಕ್ಕಳ ಇಷ್ಟ ಕಷ್ಟಗಳಿಗೆ ಆದ್ಯತೆ ನೀಡುವುದರ ಜೊತೆಯಲ್ಲಿ ಅವರ ಗುಣ, ವರ್ತನೆ ಹಾಗೂ ನಡತೆಯನ್ನು ಸರಿಪಡಿಸುವ ಜವಾಬ್ದಾರಿ ಕೂಡ ಪೋಷಕರ ಮೇಲೆ ಇರುತ್ತದೆ. ನಿಮ್ಮ ಮಗು ಕೆಟ್ಟ ಮನಸ್ಥಿತಿಯನ್ನು ಹೊರ ಹಾಕಿದಾಗ ಅದರ ಬಗ್ಗೆ ನಿರ್ಲಕ್ಷ್ಯವನ್ನು ತೋರದೇ ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ಪೋಷಕರಾಗಿ ನೀವು ಯೋಚಿಸಬೇಕಿದೆ. ಮಗುವಿನ ಗುಣ ನಡತೆಗಳನ್ನು ಸರಿಪಡಿಸಲು ನೀವು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ

ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಬದಲಾಯಿಸಿ

ಮಕ್ಕಳು ತಮ್ಮ ಪೋಷಕರ ಗಮನವನ್ನು ಸೆಳೆಯುವ ಸಲುವಾಗಿ ನಕರಾತ್ಮಕವಾಗಿ ವರ್ತಿಸುತ್ತಾರೆ. ಪ್ರತಿಯೊಂದರ ಬಗ್ಗೆಯೂ ದೂರುವುದನ್ನು ನಿಮ್ಮ ಮಗು ಮಾಡುತ್ತಿದ್ದರೆ ಇದಕ್ಕೆ ನೀವು ನಕಾರಾತ್ಮಕವಾಗಿಯೇ ಪ್ರತಿಕ್ರಿಯೆ ನೀಡುವುದರ ಬದಲು ಆ ಸಮಸ್ಯೆಗಳನ್ನು ಆದಷ್ಟು ಶಾಂತವಾಗಿ ಹಾಗೂ ನಯವಾಗಿ ಪರಿಹರಿಸುವುದರ ಬಗ್ಗೆ ನೀವು ಯೋಚಿಸಬೇಕು. ಒಂದು ವೇಳೆ ಮಗು ಊಟ ಚೆನ್ನಾಗಿಲ್ಲ ಎಂದು ದೂರಿದರೆ ನೀವು ಇದಕ್ಕೆ ಮಗುವಿಗೆ ರೇಗುವುದನ್ನು ಬಿಟ್ಟು ಆ ಊಟ ಎಷ್ಟು ರುಚಿಯಾಗಿದೆ ಹಾಗೂ ಆರೋಗ್ಯಕ್ಕೆ ಎಷ್ಟು ಲಾಭ ನೀಡುತ್ತದೆ ಎಂಬುದನ್ನು ಅವರಿಗೆ ಅರ್ಥವಾಗುವ ವಿಧಾನದಲ್ಲಿ ತಿಳಿ ಹೇಳಬೇಕು. ಈ ರೀತಿ ಪ್ರತಿಯೊಂದರ ಬಗ್ಗೆಯೂ ಮಕ್ಕಳಲ್ಲಿ ಧನಾತ್ಮಕತೆಯನ್ನು ತುಂಬುವ ಕೆಲಸವನ್ನು ಪೋಷಕರಾಗಿ ನೀವು ಮಾಡಬೇಕಿದೆ.

ಮಕ್ಕಳ ಗಮನ ಬೇರೆಡೆ ತಿರುಗಿಸುವುದು

ಚಿಕ್ಕ ಮಕ್ಕಳು ಒಂದೇ ವಿಷಯದ ಮೇಲೆ ಹೆಚ್ಚು ಹೊತ್ತು ಗಮನ ಕೊಡಲಾರರು. ಹೀಗಾಗಿ ಅವರು ಯಾವುದಕ್ಕಾದರೂ ಹಟ ಹಿಡಿದಾಗ ಅವರ ಗಮನ ಬೇರೆಡೆ ಸೆಳೆಯುವಂತೆ ಮಾಡಬೇಕು. ಒಂದು ವೇಳೆ ನೀವು ಹೊರಗಡೆ ಹೊರಟಾಗ ಮಗು ಹಿಡಿಯಲು ಆರಂಭಿಸಿತು ಎಂದಾಗ ಮಗುವನ್ನು ಬೈಯ್ದು ಎಳೆದುಕೊಂಡು ಹೋಗುವ ಬದಲು ನಾವು ಹೋಗುವಲ್ಲಿ ಐಸ್​ಕ್ರೀಂ ಸಿಗುತ್ತದೆ ಎಂದು ನಂಬಿಸಿ ಕರೆದುಕೊಂಡು ಹೋಗಬೇಕು.

ಆಶಾವಾದವನ್ನು ಉತ್ತೇಜಿಸಿ

ನೀವು ಮಕ್ಕಳಲ್ಲಿ ಆಶಾವಾದಿತನವನ್ನು ಬೆಳೆಸುವುದನ್ನು ರೂಢಿಸಬೇಕು. ಮಕ್ಕಳು ಯಾವುದರ ಬಗ್ಗೆಯಾದರೂ ಬೇಸರಗೊಂಡಂತಹ ಸಂದರ್ಭದಲ್ಲಿ ಆ ಬೇಸರದ ನಡುವೆಯೂ ಧನಾತ್ಮಕ ಅಂಶವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ನೀವು ಕಲಿಸಬೇಕು. ಮಕ್ಕಳ ಆಟಿಕೆ ಮುರಿದು ಹೋದರೆ ಅದರ ಬಗ್ಗೆ ಬೇಸರಿಸುವ ಬದಲು ನನ್ನ ಬಳಿ ಇನ್ನೂ ಹೆಚ್ಚಿನ ಆಟಿಕೆಗಳಿವೆ. ಒಂದು ಮುರಿದಿದ್ದರಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದು ಮಕ್ಕಳ ತಲೆಯಲ್ಲಿ ಮೊದಲು ಬರುವಂತೆ ಮಾಡಬೇಕು . ಇದರಿಂದ ಮಕ್ಕಳು ಜೀವನದಲ್ಲಿಯೂ ಕೂಡ ಕಷ್ಟವನ್ನು ಎದುರಿಸುವುದನ್ನು ಕಲಿತುಕೊಳ್ಳುತ್ತಾರೆ.

ಮಕ್ಕಳ ನಕಾರಾತ್ಮಕ ಮನಸ್ಥಿತಿಯನ್ನು ನಿರ್ಲಕ್ಷಿಸಬೇಕು

ನಿಮ್ಮ ಮಗುವಿನ ನಡವಳಿಕೆಯನ್ನು ಬಲವಂತವಾಗಿ ಬದಲಾಯಿಸುವ ಪ್ರಯತ್ನವು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇದು ಮಕ್ಕಳ ಹಾಗೂ ಪೋಷಕರ ನಡುವಿನ ಸಂಬಂಧವನ್ನೇ ಹಾಳು ಮಾಡಿಬಿಡಬಹುದು. ಹೀಗಾಗಿ ಮಕ್ಕಳು ಯಾವುದಕ್ಕೋ ಹಠ ಹಿಡಿದ ಕೂಡಲೇ ಮಕ್ಕಳ ಮೇಲೆ ರೇಗಬಾರದು. ಬದಲಾಗಿ ಅದನ್ನು ನಿರ್ಲಕ್ಷಿಸುವುದು ಉತ್ತಮ.

ವಿಭಾಗ