ಭಗವದ್ಗೀತೆ: ಪ್ರಯತ್ನವನ್ನೇ ಮಾಡದ ಮನುಷ್ಯ ಭೂಮಿ ಮೇಲೆ ಸುಖವಾಗಿ ಬದುಕಲಾರ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಪ್ರಯತ್ನವನ್ನೇ ಮಾಡದ ಮನುಷ್ಯ ಭೂಮಿ ಮೇಲೆ ಸುಖವಾಗಿ ಬದುಕಲಾರ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಪ್ರಯತ್ನವನ್ನೇ ಮಾಡದ ಮನುಷ್ಯ ಭೂಮಿ ಮೇಲೆ ಸುಖವಾಗಿ ಬದುಕಲಾರ; ಗೀತೆಯ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ನಾಯಂ ಲೋಕೋಸ್ತ್ಯಯಜ್ಞಸ್ಯ ಕುತೋನ್ಯಃ ಕುರುಸತ್ತಮ ||31||

ಕುರುವಂತೆ ಶ್ರೇಷ್ಠನೇ, ಯತ್ನಗಳನ್ನು ಮಾಡದ ಮನುಷ್ಕನು ಈ ಭೂಮಿಯ ಮೇಲಾಗಲಿ ಅಥವಾ ಈ ಜನ್ಮದಲ್ಲಾಗಲಿ ಸುಖಿಯಾಗಿ ಬದುಕಲಾರ. ಇನ್ನು ಮುಂದಿನ ಜನ್ಮದ ಮಾತೇನು?

ಮನುಷ್ಯನ ಐಹಿತ ಅಸ್ತಿತ್ವದ ರೂಪ ಏನೇ ಆಗಿರಲಿ, ಅವನಿಗೆ ತನ್ನ ನಿಜಸ್ಥಿತಿಯ ಅರಿವು ಇರುವುದಿಲ್ಲ. ಎಂದರೆ, ಐಹಿಕ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವುದಕ್ಕೆ ಕಾರಣ ನಮ್ಮ ಪಾಪಜೀವನಗಳ ಬಹು ಪ್ರತಿಕ್ರಿಯೆಗಳು. ಪಾಪಜೀವನಕ್ಕೆ ಕಾರಣ ಆಜ್ಞಾನ, ಮನುಷ್ಯನ ಐಹಿಕ ಅಸ್ತಿತ್ವವು ಮುಂದುವರಿಯುತ್ತಲೇ ಹೋಗುವುದಕ್ಕೆ ಪಾಪಜೀವನವೇ ಕಾರಣ. ಈ ಗೋಜಿನಿಂದ ಬಿಡುಗಡೆಯಾಗಲು ಮಾನವಜನ್ಮವೊಂದೇ ಅವಕಾಶ. ಆದುದರಿಂದ ನಾವು ತಪ್ಪಿಸಿಕೊಂಡು ಹೋಗಲು ವೇದಗಳು ಒಂದು ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಧರ್ಮ, ಆರ್ಥಿಕ ನೆಮ್ಮದಿ, ನಿಯಂತ್ರಿಸಿದ ಇಂದ್ರಿಯತೃಪ್ತಿ ಮತ್ತು ಕಟ್ಟಕಡೆಗೆ, ದುಃಖದ ಸ್ಥಿತಿಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳುವ ರೀತಿ ಇವನ್ನು ವೇದಗಳು ತೋರಿಸಿಕೊಡುತ್ತವೆ. ಧರ್ಮದ ಮಾರ್ಗದಿಂದ ಅಥವಾ ಮೇಲೆ ಸೂಚಿಸಿದ ವಿವಿಧ ಯಜ್ಞಗಳಿಂದ ನಮ್ಮ ಆರ್ಥಿಕ ಸಮಸ್ಯೆಗಳು ತಂತಾನೆ ಪರಿಹಾರವಾಗುತ್ತವೆ.

ಯಜ್ಞಾಚರಣೆಯಿಂದ, ಜನಸಂಖ್ಯೆ ಹೆಚ್ಚಾದರೂ ಸಹ, ನಮಗೆ ಅಗತ್ಯವಾದಷ್ಟು ಆಹಾರ, ಹಾಲು ಮೊದಲಾದುವೆಲ್ಲ ದೊರೆಯುತ್ತವೆ. ದೇಹಕ್ಕೆ ಬೇಕಾದುದೆಲ್ಲ ದೊರೆತನಂತರ ಸಹಜವಾಗಿ ಮುಂದಿನ ಘಟ್ಟ ಇಂದ್ರಿಯತೃಪ್ತಿ. ಆದುದರಿಂದ ವೇದಗಳು ನಿಯಂತ್ರಿತ ಇಂದ್ರಿಯ ತೃಪ್ತಿಗಾಗಿ ಪವಿತ್ರ ವಿವಾಹವನ್ನು ವಿಧಿಸಿದೆ. ಇದರಿಂದ ಮನುಷ್ಯನು ಐಹಿಕ ಬಂಧನದಿಂದ ಮುಕ್ತಿಯ ನೆಲೆಗೆ ಕ್ರಮೇಣ ಏರುತ್ತಾನೆ. ಮುಕ್ತ ಜೀವನದ ಅತ್ಯುನ್ನತ ಪರಿಪೂರ್ಣತೆಯೆಂದರೆ ಭಗವಂತನ ಸಹವಾಸ. ಮೇಲೆ ವರ್ಣಿಸಿದಂತೆ ಯಜ್ಞಗಳನ್ನು ಮಾಡುವುದರಿಂದ ಪರಿಪೂರ್ಣತೆಯನ್ನು ಸಾಧಿಸಬಹುದು. ವೇದಗಳು ವಿಧಿಸಿದಂತೆ ಯಜ್ಞಾಚರಣೆ ಮಾಡಲು ಮನುಷ್ಯನಿಗೆ ಒಲವಿಲ್ಲದಿದ್ದರೆ, ಈಗಿನ ದೇಹದಲ್ಲಿ ಸಹ ಅವನು ಸುಖವಾಗಿರುವನೆಂದು ನಿರೀಕ್ಷಿಸುವುದು ಹೇಗೆ? ಇನ್ನೊಂದು ಗ್ರಹದಲ್ಲಿ ಬೇರೊಂದು ದೇಹದ ಪಾಡೇನು? ಬೇರೆಬೇರೆ ಸ್ವರ್ಗಗ್ರಹಗಳಲ್ಲಿ ಬೇರೆಬೇರೆ ಮಟ್ಟಗಳ ಭೌತಿಕ ನೆಮ್ಮದಿಯುಂಟು. ವಿವಿಧ ಯಜ್ಞಗಳಲ್ಲಿ ನಿರತರಾದವರಿಗೆ ಇವುಗಳಲ್ಲಿ ಬಹು ಸುಖವುಂಟು. ಆದರೆ ಮನುಷ್ಯನಾದವನು ಸಾಧಿಸಬಹುದಾದ ಅತ್ಯಂತ ಉನ್ನತ ರೀತಿಯ ಸುಖ ಎಂದರೆ ಕೃಷ್ಣಪ್ರಜ್ಞೆಯನ್ನು ಅನುಸರಿಸಿ ದಿವ್ಯಗ್ರಹಗಳಿಗೆ ಏರುವುದು. ಆದುದರಿಂದ ಐಹಿಕ ಅಸ್ತಿತ್ವದ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಕೃಷ್ಣಪ್ರಜ್ಞೆಯ ಬದುಕು.

ಸರ್ವೇಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ |

ಯಜ್ಞಶಿಷ್ಟಾಮೃತಭುಜೋ ಯಾನ್ತಿ ಬ್ರಹ್ಮ ಸನಾತನಮ್ ||30||

ಯಜ್ಞದ ಅರ್ಥವನ್ನು ಬಲ್ಲ ಇವರೆಲ್ಲರೂ ಪಾಪವನ್ನು ಕಳೆದುಕೊಂಡು ನಿರ್ಮಲರಾಗುತ್ತಾರೆ ಮತ್ತು ಯಜ್ಞಫಲದ ಅದ್ಭುತವನ್ನು ಸವಿದು, ಪರದು ನಿತ್ಯ ಆವರಣದತ್ತ ಮುನ್ನಡೆಯುತ್ತಾರೆ.

ಬೇರೆಬೇರೆ ವಿಧವಾದ ಯಜ್ಞಗಳ (ದ್ರವ್ಯಮಯ ಯಜ್ಞ, ಸ್ವಾಧ್ಯಾಯ ಯಜ್ಞ ಮತ್ತು ಯೋಗಯಜ್ಞ) ವಿವರಣೆಯಿಂದ ಇವೆಲ್ಲವುಗಳ ಗುರಿಗಿ ಒಂದೇ, ಅದು ಇಂದ್ರಿಯ ನಿಯಂತ್ರಣ ಎಂದು ಅರ್ಥವಾಗುತ್ತದೆ. ಐಹಿಕ ಅಸ್ತಿತ್ವದ ಮೂಲ ಕಾರಣ ಇಂದ್ರಿಯ ತೃಪ್ತಿಯೇ. ಆದುದರಿಂದ ಇಂದ್ರಿಯತೃಪ್ತಿಯಿಂದ ದೂರವಾದ ವೇದಿಕೆಯಲ್ಲಿ ನೆಲೆಸದೆ ಹೋದರೆ, ಸಂಪೂರ್ಣ ಜ್ಞಾನ, ಸಂಪೂರ್ಣ ಆನಂದ ಮತ್ತು ಸಂಪೂರ್ಣ ಬದುಕು ಇವುಗಳ ಶಾಶ್ವತ ನೆಲೆಗೆ ಎರಲು ಸಾಧ್ಯವೇ ಇಲ್ಲ. ಈ ಹಂತವು ಶಾಶ್ವತ ವಾತಾವರಣದ ಅಥವಾ ಬ್ರಹ್ಮನ್ ವಾತಾವರಣದ ನೆಲೆ. ಐಹಿಕ ಅಸ್ತಿತ್ವದ ಪಾಪ ಪ್ರತಿಕ್ರಿಯೆಗಳನ್ನೆಲ್ಲ ಕಳೆದುಕೊಂಡು ಶುಚಿಯಾಗಲು ಮೇಲಿನ ಯಜ್ಞಗಳೆಲ್ಲ ನೆರವಾಗುತ್ತವೆ. ಬದುಕಿನಲ್ಲಿ ಹೀಗೆ ಮುನ್ನಡೆದ ಮನುಷ್ಯನು ಈ ಜನ್ಮದಲ್ಲಿ ಸುಖಿಯೂ ಶ್ರೀಮಂತನೂ ಆಗುವುದು ಮಾತ್ರವಲ್ಲ, ಕಡೆಯಲ್ಲಿ ಆತನು ಭಗವಂತನ ಶಾಶ್ವತ ಸಾಮ್ರಾಜ್ಯವನ್ನು ಪ್ರವೇಶಿಸುವನು, ನಿರಾಕಾರಬ್ರಹ್ಮನಲ್ಲಿ ಲೀನವಾಗುವವನು ಇಲ್ಲವೇ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ಸಹವಾಸದಲ್ಲಿರುವನು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.