ಭಗವದ್ಗೀತೆ: ಆತ್ಮ ಪರಿಶುದ್ಧವಿಲ್ಲದ ಮನುಷ್ಯನಿಗೆ ಜಯ ಸಿಗುವುದಿಲ್ಲ; ಗೀತೆಯಲ್ಲಿನ ಅರ್ಥ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಆತ್ಮ ಪರಿಶುದ್ಧವಿಲ್ಲದ ಮನುಷ್ಯನಿಗೆ ಜಯ ಸಿಗುವುದಿಲ್ಲ ಎಂಬುದರ ಅರ್ಥ ತಿಳಿಯಿರಿ.
ನ ಕರ್ಮಣಾಮನಾರಮ್ಭಾನ್ ನೈಷ್ಕರ್ಮ್ಯಂ ಪುರುಷೋಶ್ನುತೇ |
ನ ಚ ಸನ್ನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ||4||
ಕಾರ್ಯ ಮಾಡದಿರುವುದರಿಂದಲೇ ಪ್ರತಿಕ್ರಿಯೆಯಿಂದ ಬಿಡುಗಡೆ ದೊರೆಯುವುದಿಲ್ಲ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ.
ಲೌಕಿಕ ಜನರ ಹೃದಯಗಳನ್ನು ಪರಿಶುದ್ಧಗೊಳಿಸಲು ವಿಧಿಸಿರುವ ಕರ್ತವ್ಯಗಳಿವೆ. ಇವನ್ನು ನಿರ್ವಹಿಸಿ ಪರಿಶುದ್ಧನಾದನಂತರ ಮನುಷ್ಯನು ಸನ್ಯಾಸವನ್ನು ಸ್ವೀಕರಿಸಿಬಹುದು. ಪರಿಶುದ್ಧವಾಗದೆ ಥಟ್ಟನೆ ಸನ್ಯಾಸವನ್ನು ಸ್ವೀಕರಿಸಿದ ಮನುಷ್ಯನಿಗೆ ಜಯವು ಲಭಿಸುವುದಿಲ್ಲ. ಅನುಭವಗಮ್ಯ ತತ್ವಶಾಸ್ತ್ರಜ್ಞರ ಅಭಿಪ್ರಾಯದಲ್ಲಿ, ಸನ್ಯಾಸವನ್ನು ಸ್ವೀಕರಿಸಿದ ಮಾತ್ರದಿಂದಲೇ ಅಥವಾ ಫಲಾಪೇಕ್ಷಿತ ಕರ್ಮದಿಂದ ದೂರವಾದ ಮಾತ್ರಕ್ಕೆ ಮನುಷ್ಯನು ಕೂಡಲೇ ನಾರಾಯಣನಿಗೆ ಸಮನಾಗುವನು.
ಆದರೆ ಶ್ರೀಕೃಷ್ಣನು ಈ ತತ್ವವನ್ನು ಒಪ್ಪುವುದಿಲ್ಲ. ಹೃದಯವು ಶುದ್ಧವಾಗದೆ ಸನ್ಯಾಸವು ಸಾಮಾಜಿಕ ವ್ಯವಸ್ಥೆಯ ಕ್ಷೋಭೆಯಷ್ಟೆ ಆಗುತ್ತದೆ. ಅದಕ್ಕೆ ಪ್ರತಿಯಾಗಿ ಮನುಷ್ಯನು ತನ್ನ ನಿಯತ ಕರ್ತವ್ಯಗಳನ್ನು ಮಾಡದೆಯೇ ಭಗವಂತನ ಅಲೌಕಿಕ ಸೇವೆಯಲ್ಲಿ ನಿರತನಾದರೆ, ಈ ಗುರಿಯಲ್ಲಿ ಸಾಧಿಸಿದುದೆಲ್ಲವನ್ನೂ ಭಗವಂತನು ಸ್ವೀಕರಿಸುತ್ತಾನೆ (ಬುದ್ಧಿಯೋಗ). ಸ್ವಲ್ಪಮ್ ಅಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್. ಇಂತಹ ತತ್ವವನ್ನು ಸ್ವಲ್ಪಮಟ್ಟಿಗೆ ಆಚರಿಸಿದರೂ ಅಂತಹ ಮನುಷ್ಯನು ಮಹಾ ಕಷ್ಟಗಳನ್ನು ನಿವಾರಿಸಿಕೊಳ್ಳಬಲ್ಲ.
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ||5||
ಪ್ರಕೃತಿಯಿಂದ ಬಂದ ಗುಣಗಳಿಗೆ ಅನುಗುಣವಾಗಿ ಕರ್ಮವನ್ನು ಪ್ರತಿಯೊಬ್ಬನೂ ಮಾಡಲೇಬೇಕಾಗುತ್ತದೆ. ಆದುದರಿಂದ ಯಾರೂ ಒಂದು ಕ್ಷಣವಾದರೂ ಏನನ್ನೂ ಮಾಡದೆ ಇರಲು ಸಾಧ್ಯವಿಲ್ಲ.
ಇದು ದೇಹಗತ ಜೀವನದ ಪ್ರಶ್ನೆಯಲ್ಲ. ಸದಾ ಕಾರ್ಯ ನಿರತನಾಗಿರುವುದೇ ಆತ್ಮನ ಸ್ವಭಾವ. ಆತ್ಮವು ದೇಹದಲ್ಲಿರದಿದ್ದರೆ ದೇಹವು ಚಲಿಸಲಾರದು. ಆತ್ಮವು ಸದಾ ಕಾರ್ಯನಿರತವಾಗಿರುತ್ತದೆ. ಒಂದು ಕ್ಷಣವೂ ಸುಮ್ಮನಿರಲಾರದು. ಆತ್ಮವು ಸದಾ ಕಾರ್ಯನಿರತವಾಗಿರುತ್ತದೆ. ಒಂದು ಕ್ಷಣವೂ ಸುಮ್ಮನಿರಲಾರದು. ದೇಹವೇನಿದ್ದರೂ ಆತ್ಮವನ್ನು ಕೆಲಸದಲ್ಲಿ ಕೊಡಿಸಬೇಕಾದ ನಿರ್ಜೀವ ವಾಹನ. ಈ ಕಾರಣದಿಂದ ಆತ್ಮವು ಕೃಷ್ಣಪ್ರಜ್ಞೆಯ ಪುಣ್ಯ ಕಾರ್ಯದಲ್ಲಿ ತೊಡಗಿರಬೇಕು.
ಇಲ್ಲವಾದರೆ ಅದು ಮಾಯಾ ಶಕ್ತಿಯು ನಿರ್ದೇಶಿಸಿದ ಕೆಲಸಗಳಲ್ಲಿ ನಿರತವಾಗಿರುತ್ತದೆ. ಐಹಿಕ ಶಕ್ತಿಯೊಡನೆ ಸಂಪರ್ಕವಿದ್ದಾಗ ಆತ್ಮವು ಐಹಿಕ ಗುಣಗಳನ್ನು ಪಡೆದುಕೊಳ್ಳುತ್ತದೆ. ಇಂತಹ ವ್ಯಾಮೋಹಗಳಿಂದ ಆತ್ಮವನ್ನು ಶುದ್ಧಿಗೊಳಿಸಲು ಶಾಸ್ತ್ರಗಳು ವಿಧಿಸಿದ ಕರ್ತವ್ಯಗಳಲ್ಲಿ ತೊಡಗುವುದು ಅಗತ್ಯ. ಆದರೆ ಆತ್ಮವು ಕೃಷ್ಣಪ್ರಜ್ಞೆಯ ತನ್ನ ಸಹಜ ಕ್ರಿಯೆಯಲ್ಲಿ ತೊಡಿಗಿದ್ದರೆ ಅದು ಮಾಡಿದುದೆಲ್ಲ ಅದಕೆ ಒಳಿತಾದುದೇ ಆಗುತ್ತದೆ. ಶ್ರೀಮದ್ಭಾಗವತವು (1.5.17) ಇದನ್ನು ದೃಢವಾಗಿ ಹೇಳುತ್ತದೆ.
ತ್ಯಕ್ತ್ವಾ ಸ್ವಧರ್ಮಂ ಚರಣಾಮ್ಭುಜಂ ಹರೇ-
ರ್ಭಜನ್ನಪಕ್ವೋಥ ಪತೇತ್ತತೋ ಯದಿ |
ಯತ್ರ ಕ್ವ ವಾಭದ್ರಮಭೂದಮುಷ್ಯಕಿಂ
ಕೋ ವಾರ್ಥ ಆಪ್ತೋಭಜತಾಂ ಸ್ವಧರ್ಮತಃ ||
ಕೃಷ್ಣಪ್ರಜ್ಞೆಯನ್ನು ಅನುಸರಿಸುವವನು ಶಾಸ್ತ್ರಗಳು ವಿಧಿಸಿದ ಕರ್ತವ್ಯಗಳನ್ನು ಮಾಡದಿರಬಹುದು, ಭಕ್ತಿಸೇವೆಯನ್ನು ಸಮರ್ಪಕವಾಗಿ ಸಲ್ಲಿಸದೆ ಹೋಗಬಹುದು. ತಾನಿರಬೇಕಾದ ಮಟ್ಟದಿಂದ ಕೆಳಕ್ಕೆ ಬೀಳಬಹುದು. ಆದರೂ ಅವನಿಗೆ ನಷ್ಟವಾಗಲಿ ಕೇಡಾಗಲಿ ಇಲ್ಲ. ಆದರೆ ಶಾಸ್ತ್ರಗಳು ಪರಿಶುದ್ಧವಾಗುವುದಕ್ಕಾಗಿ ವಿಧಿಸಿದ ಎಲ್ಲ ಆಜ್ಞೆಗಳನ್ನೂ ಪರಿಪಾಲಿಸಿದರೂ ಆತನು ಕೃಷ್ಣಪ್ರಜ್ಞೆಯ ಹಂತವನ್ನು ಮುಟ್ಟಲು ಅಗತ್ಯ. ಯಾವುದೇ ಪರಿಶುದ್ಧತೆಯ ಪ್ರಕ್ರಿಯೆ ಅಥವಾ ಸನ್ಯಾಸವು ಅಂತಿಮಗುರಿಯಾದ ಕೃಷ್ಣಪ್ರಜ್ಞೆಯನ್ನು ಮುಟ್ಟಲು ನೆರವಾಗುತ್ತದೆ. ಆದರೆ, ಕೃಷ್ಣಪ್ರಜ್ಞೆ ಇಲ್ಲದೆ ಹೋದರೆ ಉಳಿದದ್ದೆಲ್ಲ ವಿಫಲ ಎಂದೇ ಭಾವಿಸಬೇಕು.