Sun Transit: ಮೇ 14ವರೆಗೂ ಮೇಷ ರಾಶಿಯಲ್ಲಿ ರವಿಯ ಸಂಚಾರ; ದ್ವಾದಶ ರಾಶಿಗಳಿಗೆ ದೊರೆಯಲಿದೆ ಮಿಶ್ರ ಫಲ
Sun Transit: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಆಗ್ಗಾಗ್ಗೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಗ್ರಹಗಳು ನಿರ್ದಿಷ್ಟ ರಾಶಿಗೆ ಬಂದಾಗ ಆಯಾ ರಾಶಿಯವರು ಮಿಶ್ರ ಫಲಗಳನ್ನು ಪಡೆಯುತ್ತಾರೆ. ಮೇ 14ವರೆಗೂ ಸೂರ್ಯನು ಮೇಷ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲಾ ರಾಶಿಯವರ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ.
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಮೇ 14ರವರೆಗೂ ರವಿಯು ಮೇಷದಲ್ಲಿ ಸಂಚರಿಸುತ್ತಾನೆ. ಮೇಷವು ಉಚ್ಚಕ್ಷೇತ್ರದಲ್ಲಿ ಇರುವ ಕಾರಣ ಪೂರ್ಣ ಶಕ್ತಿಶಾಲಿಯಾಗುತ್ತಾನೆ. ರವಿಯ ಜೊತೆಯಲ್ಲಿ ಗುರುವು ಇರುವ ಕಾರಣ ಶುಭಫಲಗಳು ದೊರೆಯಲಿವೆ. ಕಳೆಯ ಬಾರಿ ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ ಆರೋಗ್ಯವನ್ನು ಗಳಿಸುತ್ತಾರೆ. ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ವೈರಿಗಳಾಗಿದ್ದವನ್ನು ಉತ್ತಮ ಸ್ನೇಹಿತರಂತೆ ವರ್ತಿಸುತ್ತಾರೆ. ಆದರೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ಪ್ರತಿಯೊಂದು ರಾಶಿಯವರೂ ತಮ್ಮದೇ ಆದ ಫಲಗಳನ್ನು ಪಡೆಯುತ್ತಾರೆ.
ಮೇಷ
ಮಕ್ಕಳ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಜವಾಬ್ದಾರಿಗಳಿಗೆ ಅವರ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಗುರಿ ತಲುಪಲಿದ್ದಾರೆ. ನಿಮ್ಮ ಮಕ್ಕಳಿಗೆ ತಂದೆಯವರಿಂದ ಸಹಕಾರ ದೊರೆಯುತ್ತದೆ. ಮಕ್ಕಳಿಗೆ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ರಾಜಕೀಯದಲ್ಲಿ ಉಂಟಾಗುವ ಬದಲಾವಣೆಗಳು ನಿಮಗೆ ಅನುಕೂಲಕರವಾಗಿರುತ್ತದೆ. ಅಸಾಧ್ಯವೆನಿಸುವ ಕೆಲಸ ಕಾರ್ಯಗಳನ್ನು ಕಷ್ಟಪಟ್ಟು ಪೂರ್ಣಗೊಳಿಸುವಿರಿ. ಬುದ್ಧಿವಂತಿಕೆಯಿಂದ ಸಮಾಜದ ನಾಯಕತ್ವವನ್ನು ವಹಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಆತ್ಮೀಯರನ್ನು ಆತಂಕದ ಸನ್ನಿವೇಶವೊಂದರಿಂದ ಪಾರು ಮಾಡುವಿರಿ. ನೀವು ಮಾಡುವ ಪ್ರತಿ ಕೆಲಸಗಳಿಗೆ ಅಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಈ ಅವಧಿಯಲ್ಲಿ ಉತ್ತಮ ಬದಲಾವಣೆಗಳು ಉಂಟಾಗಲಿವೆ.
ವೃಷಭ
ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನ ಮಾನ ಲಭಿಸುತ್ತದೆ. ಉತ್ತಮ ಆದಾಯ ಉಂಟಾಗಲಿದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಲಾಗುವಿರಿ. ಬೇರೊಬ್ಬರ ಸಹಾಯವಿಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ವಂಶಕ್ಕೆ ಸಂಬಂಧಿಸಿದ ಆಸ್ತಿಯ ತೊಂದರೆ ದೂರವಾಗುತ್ತದೆ. ಆದಾಯಕ್ಕಿಂತಲೂ ಖರ್ಚಿನ ಬಾಬ್ತು ಹೆಚ್ಚಿನದಾಗಿರುತ್ತದೆ. ಉದ್ಯೋಗದಲ್ಲಿ ಉನ್ನತ ಹುದ್ದೆ ದೊರೆತರೂ ಪರಸ್ಥಳಕ್ಕೆ ವರ್ಗವಾಗುತ್ತದೆ. ಹೊಂದಾಣಿಕೆಯ ಗುಣ ಇದ್ದಷ್ಟೂ ಒಳ್ಳೆಯದು. ನೀವು ತೆಗೆದುಕೊಳ್ಳುವ ತೀರ್ಮಾನಗಳು ಸರಿ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಗಣ್ಯ ವ್ಯಕ್ತಿಗಳ ಸ್ನೇಹ ದೊರೆತರೂ ಅದನ್ನು ಬಳಸಿಕೊಳ್ಳಲಾರಿರಿ. ತಾಯಿಯವರ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಕಾನೂನಾತ್ಮಕವಾಗಿ ಆರಂಭಿಸುವ ವ್ಯಾಪಾರದಲ್ಲಿ ಉತ್ತಮ ಆದಾಯವನ್ನು ಗಳಿಸುವಿರಿ. ತಾಯಿಯ ಮಧ್ಯಸ್ಥಿಕೆಯಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.
ಮಿಥುನ
ಉದ್ಯೋಗದಲ್ಲಿ ಎದುರಾಗಿದ್ದ ಆತಂಕದ ಪರಿಸ್ಥಿತಿ ದೂರವಾಗಲಿದೆ. ಅಪೂರ್ಣಗೊಂಡಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಭೂವಿವಾದದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ನಿಮಗೆ ವರಪ್ರದವಾಗಲಿವೆ. ತಡವಾದರೂ ಕುಟುಂಬದಲ್ಲಿ ಉನ್ನತ ಸ್ಥಾನಮಾನ ನಿಮ್ಮದಾಗುತ್ತದೆ. ಉದ್ಯೋಗಸ್ಥರು ಅಥವಾ ವಿದ್ಯಾರ್ಥಿಗಳು ಪ್ರಯಾಸದಿಂದ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಏಕಾಂಗಿಯಾಗಿ ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವಿರಿ. ತಂದೆಗೆ ಸಂಬಂಧಪಟ್ಟಂತಹ ಆಸ್ತಿಯ ವಿವಾದವು ಆತ್ಮೀಯರ ಮಧ್ಯಸ್ಥಿಕೆಯಿಂದ ಪರಿಹಾರಗೊಳ್ಳುತ್ತದೆ. ಒಮ್ಮೆ ತೆಗೆದುಕೊಂಡ ತೀಮಾನಗಳಿಗೆ ಸಾಧ್ಯವಾದಷ್ಟೂ ಬದ್ಧರಾಗಿರಿ. ವಿದೇಶಕ್ಕೆ ತೆರಳುವ ಮನಸ್ಸಿರುತ್ತದೆ. ಮಾನಸಿಕವಾಗಿ ಸದೃಢರಾಗಬೇಕಿದೆ.
ಕಟಕ
ಅರೋಗ್ಯ ಸಮಸ್ಯೆ ದೂರವಾಗಲಿದೆ. ಸದಾ ಯಾವುದಾದರೊಂದು ಕೆಲಸದಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ನಿರೀಕ್ಷಿಸಿದ ಮಟ್ಟ ತಲುಪುವಿರಿ. ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಸೋದರರ ನಡುವಿನ ಮನಸ್ತಾಪಕ್ಕೆ ತಂದೆಯವರಿಂದ ಪರಿಹಾರ ದೊರೆಯಲಿದೆ. ಮಕ್ಕಳ ಸಲುವಾಗಿ ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಹೆಸರಿನಲ್ಲಿ ಇರುವ ಭೂಸಂಬಧಿತವಾಗಿ ವಿವಾದ ಏರ್ಪಡುತ್ತದೆ. ಕುಟುಂಬವಲ್ಲದೆ ಸಮಾಜದಲ್ಲಿಯೂ ಜವಾಬ್ದಾರಿಯುತ ಸ್ಥಾನಮಾನ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕಾನೂನಿನ ತೊಂದರೆ ಒಂದರಿಂದ ಪಾರಾಗುವಿರಿ. ಹಿರಿಯ ಸೋದರಿಗೆ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ.
ಸಿಂಹ
ಕೈಹಾಕುವ ಬಹುತೇಕ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಗೌರವ ಮತ್ತು ಪ್ರತಿಷ್ಥಿತ ಸ್ಥಾನ ಮಾನಗಳಿಗಾಗಿ ಯಾವುದೇ ತ್ಯಾಗ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ವಿವಾದ ಎದುರಾದರೂ ತೊಂದರೆ ಇರದು. ಸಂದರ್ಭಾನುಸಾರವಾಗಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ನೇರ ಮತ್ತು ನಿಷ್ಟುರದ ಮಾತು ವಿರೋಧಿಗಳನ್ನು ಹೆಚ್ಚಿಸುತ್ತದೆ. ಉದ್ಯೋಗದಲ್ಲಿ ಅಧಿಕಾರದ ಪಟ್ಟಕ್ಕಾಗಿ ವಾದ ವಿವಾದ ಹೆಚ್ಚುತ್ತವೆ. ತಂದೆಯೊಂದಿಗೆ ಅನಾವಶ್ಯಕ ವಾದ ವಿವಾದ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆದರೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಬೇರೆಯವರಿಗಾಗಿ ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕುಟುಂಬದವರ ಜೊತೆಯಲ್ಲಿನ ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭವಿರುತ್ತದೆ.
ಕನ್ಯಾ
ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಮಾತುಗಳಿಂದ ಜನರ ವಿರೋಧ ಎದುರಿಸಬೇಕಾಗುತ್ತದೆ. ಸುಲಭವಾದ ಹಾದಿಯಲ್ಲಿ ಹಣ ಸಂಪಾದಿಸಲು ಪ್ರಯತ್ನಿಸುವಿರಿ. ಸಾಹಸದ ಬುದ್ದಿಯ ಕಾರಣ ತೊಂದರೆಗೆ ಒಳಗಾಗುವಿರಿ. ಶಾಂತಿ ಸಹನೆಯಿಂದ ಇದ್ದರೆ ಎಲ್ಲರೂ ಸ್ನೇಹಿತರಂತೆ ವರ್ತಿಸುತ್ತಾರೆ. ಉದ್ಯೋಗದಲ್ಲಿ ವಿವಾದ ಎದುರಿಸಬೇಕಾಗುತ್ತದೆ. ಮಕ್ಕಳು ತಮ್ಮ ಮುಗ್ಧತೆಯಿಂದ ಎಲ್ಲರ ಮನ ಗೆಲ್ಲುವರು. ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ. ಅನಾವಶ್ಯಕ ವಿಚಾರಗಳಿಗೆ ಹಣ ಖರ್ಚಾಗುವ ಸಾಧ್ಯತೆಗಳಿವೆ. ವಾಹನ ದುರಸ್ತಿಗೆ ಹಣದ ಅವಶ್ಯಕತೆ ಇದೆ. ಟೀಕಿಸದೆ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ. ಆತ್ಮೀಯರ ಸಹಾಯದಿಂದ ಅವಿವಾಹಿತರಿಗೆ ವಿವಾಹವಾಗಲಿದೆ.
ತುಲಾ
ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಪ್ರಯತ್ನವನ್ನು ಅನುಸರಿಸಿ ಫಲಾಫಲಗಳನ್ನು ಪಡೆಯುವಿರಿ. ಬೇರೆಯವರ ತಪ್ಪನ್ನು ಮರೆತು ಬಾಳುವಿರಿ. ಸ್ತ್ರೀಯರು ಸುಖ ಸಂತೋಷದಿಂದ ಬಾಳುತ್ತಾರೆ. ವಿದ್ಯಾರ್ಥಿಗಳು ನಿರೀಕ್ಷಿತ ಯಶಸ್ಸು ಗಳಿಸುತ್ತಾರೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಉನ್ನತ ಹುದ್ದೆ ಗಳಿಸುವಿರಿ. ಹಣವನ್ನು ಸುಲಭವಾಗಿ ಸಂಪಾದಿಸಬಲ್ಲಿರಿ. ವಾಸ ಸ್ಥಳ ಬದಲಿಸಲು ಸಾಧ್ಯವಾಗುವುದಿಲ್ಲ. ಅನಾವಶ್ಯಕವಾಗಿ ಯೋಚನೆ ಮಾಡುವಿರಿ. ತಂದೆಯ ಸಹಾಯದಿಂದ ಜೀವನದಲ್ಲಿ ಧನಾತ್ಮಕ ಪ್ರತಿಫಲ ಪಡೆಯುವಿರಿ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಕುಟುಂಬಕ್ಕೆ ಸಂಬಂಧಿಸಿದ ಭೂಮಿಯ ವಿವಾದದ ವಿಚಾರದಲ್ಲಿ ಕಾನೂನಿನ ಸಹಾಯವನ್ನು ದೊರೆಯಲಿದೆ.
ವೃಶ್ಚಿಕ
ಹೊಸ ಮನೆ ಕೊಳ್ಳುವ ಆಸೆ ಈಡೇರಲಿದೆ. ಹಳೆಯ ಮನೆಯನ್ನು ನವೀಕರಿಸುವಿರಿ. ಯಾರ ಸಹಾಯವನ್ನು ಬಯಸುವುದಿಲ್ಲ. ತಂದೆ ಅಥವಾ ತಾಯಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಪರೋಕ್ಷವಾಗಿ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ. ಮನಸ್ಸಿನಲ್ಲಿ ಬೇಸರವಿರುತ್ತದೆ. ಹಣದ ಕೊರತೆ ಕಾಡುತ್ತದೆ. ಸೋದರಿಯ ಸಹಾಯ ನಿಮ್ಮ ಜೀವನವನ್ನು ರೂಪಿಸುತ್ತದೆ. ತಂದೆಯವರು ಉದ್ಯೋಗಸ್ಥರಾಗಿದ್ದಲ್ಲಿ ಉನ್ನತ ಅಧಿಕಾರ ಲಭ್ಯವಾಗುತ್ತದೆ. ಅತಿ ಮುಖ್ಯ ವಿಚಾರಗಳನ್ನು ರಹಸ್ಯವಾಗಿ ಇರಿಸುವಿರಿ. ಕಷ್ಟಕ್ಕೆ ಬೆದರದೆ ನೀವು ಸಂತಸದಿಂದ ಬಾಳುವಿರಿ. ಸೋದರಿಯು ಸುಖವಾದ ಜೀವನವನ್ನು ನಡೆಸುವರು.
ಧನಸ್ಸು
ಸ್ಥಿರವಾದ ಮನಸ್ಸು ಇರದೆ ಹೋದರೂ ಧೈರ್ಯ ಮತ್ತುಸಾಹಸದಿಂದ ಬಾಳುವಿರಿ. ಸಾಹಿತಿಗಳು ಅಥವಾ ಕವಿಗಳಿಗೆ ಸಮಾಜದ ಉನ್ನತ ಪ್ರಶಸ್ತಿ ದೊರೆಯುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಸಫಲರಾಗುವಿರಿ. ಯಶಸ್ಸು ದೊರೆಯುವರೆಗೂ ವಿಶ್ರಾಂತಿ ದೊರೆಯುವುದಿಲ್ಲ. ಕೆಲಸ ಆರಂಭಿಸುವ ಮುನ್ನವೇ ಅದರ ಪ್ರತಿಫಲಗಳ ಬಗ್ಗೆ ಅರಿತುಕೊಳ್ಳುವಿರಿ. ಅನಿರೀಕ್ಷಿತ ಧನ ಲಾಭವಿದೆ. ಸೋದರಿಯ ವಿವಾಹ ನಿಶ್ಚಯವಾಗಬಹುದು. ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಹೆಸರು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಸಾಹಸ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಮಕರ
ಆದಾಯದ ಕೊರತೆ ಇದ್ದರೂ ಹಣ ಉಳಿಸುವಿರಿ. ನಿಮ್ಮ ಸಂಪೂರ್ಣ ಜೀವನ ಆಡುವ ಮಾತಿನ ಮೇಲೆ ನಿಂತಿರುತ್ತದೆ. ವ್ಯಾಪಾರಗಳಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ನೆಮ್ಮದಿ ಕೆಡಿಸುತ್ತದೆ. ಬೇಸರ ಕಳೆಯಲು ಕುಟುಂಬದಿಂದ ದೂರವಾಗಿ ಪ್ರವಾಸಕ್ಕೆ ತೆರಳುವಿರಿ. ಕುಟುಂಬದಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಒಮ್ಮೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯಾವುದೇ ಸವಾಲುಗಳನ್ನು ಎದುರಿಸಬಲ್ಲಿರಿ. ತಂದೆಯಿಂದ ಧನ ಸಹಾಯ ದೊರೆಯುತ್ತದೆ. ಆತ್ಮೀಯರ ತಪ್ಪಾದ ನಿರ್ಧಾರಗಳಿಗೆ ಸಹನೆ ಕಳೆದುಕೊಳ್ಳುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಒಡನಾಟ ಗಳಿಸುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.
ಕುಂಭ
ಯಾವುದೇ ಕೆಲಸ ಮಾಡಲು ಮನಸಾಗುವುದಿಲ್ಲ. ವಿಶ್ರಾಂತಿಯನ್ನು ಬಯಸುವಿರಿ. ಮಕ್ಕಳಲ್ಲಿ ಸೋಮಾರಿತನ ಆವರಿಸುತ್ತದೆ. ಉತ್ತಮ ಪ್ರಯತ್ನವಿದ್ದಲ್ಲಿ ಕೆಲಸ ಕಾರ್ಯಗಳು ಯಶಸ್ವಿಯಾಗಲಿವೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಅನಾರೋಗ್ಯದಿಂದ ಬಳಲುವಿರಿ. ಉತ್ತಮ ಜ್ಞಾನ ಸಂಪಾದಿಸುವಿರಿ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡದಿದ್ದಾರೆ. ಸಹೋದ್ಯೋಗಿಗಳನ್ನು ಸುಲಭವಾಗಿ ನಂಬುವುದಿಲ್ಲ. ಜನಸೇವೆಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಗಳಿಸುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಸಂಗಾತಿಯೊಂದಿಗೆ ಸಂಭ್ರಮದಿಂದ ಬಾಳುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡೆ ತಡೆ ಇರುವುದಿಲ್ಲ. ಆಡುವ ಮಾತಿನ ಮೇಲೆ ಹತೋಟಿ ಇರುವುದಿಲ್ಲ. ದುಡುಕು ಮಾತಿನಿಂದಾಗಿ ಹಣ ಗಳಿಕೆಯ ಅವಕಾಶವೊಂದನ್ನು ಕಳೆದುಕೊಳ್ಳುವಿರಿ.
ಮೀನ
ಜನಿಸಿದ ಸ್ಥಳ ಬಿಟ್ಟು ಬೇರೆ ಕಡೆ ನೆಲೆಸುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಮನಸ್ಸಿನಲ್ಲಿ ಆತಂಕದ ಭಾವನೆ ಇರುತ್ತದೆ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದು. ಕೈತುಂಬಾ ಹಣವಿದ್ದರೂ, ಮನಸ್ಸಿದ್ದರೂ ಬೇರೆಯವರಿಗೆ ಸಹಾಯ ಮಾಡುವುದಿಲ್ಲ. ಉದ್ದಿಮೆ ಇದ್ದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲರಾಗುವಿರಿ. ಗೊತ್ತಿದ್ದೂ ಮಾಡುವ ತಪ್ಪಿಗೆ ಜನರ ಅವಕೃಪೆಗೆ ಒಳಗಾಗುವಿರಿ. ವಿವಾಹ ಯೋಗವಿದೆ. ನೇರ ನಿಷ್ಠುರದ ಮಾತುಕತೆಯಿಂದ ತೊಂದರೆಗೆ ಒಳಗಾಗುವಿರಿ. ಅನಾವಶ್ಯಕ ವಿಚಾರಗಳಿಗೆ ಹಣ ಖರ್ಚು ಮಾಡುವಿರಿ. ಆತ್ಮೀಯರೇ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಾರೆ ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿದ್ದರೆ ಜೀವನ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯ ಮಾಡುವಿರಿ. ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).