ಮಳೆಯಿಂದ ಪಂದ್ಯ ರದ್ದು; ಪ್ಲೇಆಫ್ಗೆ ಲಗ್ಗೆಯಿಟ್ಟ ಎಸ್ಆರ್ಹೆಚ್, ಗುಜರಾತ್ಗೆ ನಿರಾಸೆ, ಡೆಲ್ಲಿ ಕ್ಯಾಪಿಟಲ್ಸ್ ಹೊರಕ್ಕೆ
- Sunrisers Hyderabad qualify: ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮಳೆಯ ಕಾರಣದಿಂದ ರದ್ದುಗೊಂಡಿದೆ. ಇದರೊಂದಿಗೆ ಎಸ್ಆರ್ಹೆಚ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿತು.
- Sunrisers Hyderabad qualify: ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮಳೆಯ ಕಾರಣದಿಂದ ರದ್ದುಗೊಂಡಿದೆ. ಇದರೊಂದಿಗೆ ಎಸ್ಆರ್ಹೆಚ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿತು.
(1 / 8)
17ನೇ ಆವೃತ್ತಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ 66ನೇ ಪಂದ್ಯವು ಮಳೆಯಿಂದ ರದ್ದುಗೊಂಡಿತು. ಬಿಟ್ಟೂಬಿಡದೆ ಸುರಿದ ಮಳೆಯಿಂದ ಟಾಸ್ ಪ್ರಕ್ರಿಯೆ ಜರುಗಲಿಲ್ಲ.(AP)
(2 / 8)
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯವು ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತು. ನಿಲ್ಲದ ಮುನ್ಸೂಚನೆ ಸಿಗದ ಕಾರಣ ಅಂಪೈರ್ಗಳು ಉಭಯ ತಂಡಗಳ ನಾಯಕರನ್ನು ಪಂದ್ಯ ರದ್ದುಪಡಿಸುವ ಮಾಹಿತಿ ನೀಡಿದರು.(PTI)
(3 / 8)
ಪಂದ್ಯ ರದ್ದುಗೊಂಡು ಕಾರಣ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. ಇದರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿತು. (PTI)
(4 / 8)
ಎಸ್ಆರ್ಹೆಚ್ ತಂಡವು 15 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಿದರೆ, ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಹುಮ್ಮಸ್ಸಿನಲ್ಲಿದ್ದ ಗುಜರಾತ್ ಟೈಟಾನ್ಸ್ಗೆ ಭಾರಿ ನಿರಾಸೆಯಾಯಿತು.(PTI)
(5 / 8)
ಮತ್ತೊಂದೆಡೆ ಪ್ಲೇಆಫ್ ಪ್ರವೇಶಿಸಲು ಸಾಸಿವೆ ಕಾಳಷ್ಟು ಕನಸು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ಹೊರಬಿತ್ತು. ಡೆಲ್ಲಿ 14 ಅಂಕ ಪಡೆದಿದ್ದು, ಮೈನಸ್ ನೆಟ್ರನ್ರೇಟ್ ಹೊಂದಿದೆ.(PTI)
(6 / 8)
ಗುಜರಾತ್ ಟೈಟಾನ್ಸ್ ತನ್ನ ಕೊನೆಯ ಪಂದ್ಯ ರದ್ದಾಗಿದ್ದು, ಟೂರ್ನಿಯಲ್ಲಿ ಒಟ್ಟು 12 ಅಂಕಗಳೊಂದಿಗೆ ಮುಗಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೂ ಅವಕಾಶ ಇದ್ದರೂ ಪ್ಲೇಆಫ್ ಪ್ರವೇಶ ಬಹುತೇಕ ಅನುಮಾನವಾಗಿದೆ. ಏಕೆಂದರೆ ರನ್ರೇಟ್ ಮೈಸನ್ ಇದೆ.(AP)
(7 / 8)
ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿದ್ದರೆ, ಉಳಿದ ಒಂದು ಸ್ಥಾನಕ್ಕೆ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪೈಪೋಟಿ ಏರ್ಪಟ್ಟಿದೆ.(PTI)
ಇತರ ಗ್ಯಾಲರಿಗಳು