ಕನ್ನಡ ಸುದ್ದಿ  /  ಮನರಂಜನೆ  /  ಸಲ್ಮಾನ್‌ ಖಾನ್‌ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಿಂದ ಶಿಫ್ಟ್‌ ಆಗ್ತಾರ? ಸಮಸ್ಯೆ ಇರುವುದು ಮನೆಯಲ್ಲಿ ಅಲ್ಲವೆಂದ್ರು ಅರ್ಬಾಜ್ ಖಾನ್‌

ಸಲ್ಮಾನ್‌ ಖಾನ್‌ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಿಂದ ಶಿಫ್ಟ್‌ ಆಗ್ತಾರ? ಸಮಸ್ಯೆ ಇರುವುದು ಮನೆಯಲ್ಲಿ ಅಲ್ಲವೆಂದ್ರು ಅರ್ಬಾಜ್ ಖಾನ್‌

ಇತ್ತೀಚೆಗೆ ಸಲ್ಮಾನ್‌ ಖಾನ್‌ ಮನೆಯ ಹೊರಗಡೆ ಶೂಟೌಟ್‌ ನಡೆದಿತ್ತು. ಈ ಘಟನೆಯ ಬಳಿಕ ಮುಂಬೈನ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಬಿಟ್ಟು ಬೇರೆ ಮನೆಗೆ ಶಿಫ್ಟ್‌ ಆಗುವ ಯೋಜನೆಯಲ್ಲಿದ್ದಾರ? ಈ ಪ್ರಶ್ನೆಗೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಉತ್ತರಿಸಿದ್ದಾರೆ.

ಸಲ್ಮಾನ್‌ ಖಾನ್‌ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಿಂದ ಶಿಫ್ಟ್‌
ಸಲ್ಮಾನ್‌ ಖಾನ್‌ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಿಂದ ಶಿಫ್ಟ್‌

ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಇತ್ತೀಚೆಗೆ ಅಪರಿಚಿತರು ಗುಂಡಿನ ದಾಳಿ ನಡೆಸಿದರು. ಈ ಕುರಿತು ಅವರ ಸಹೋದರ ಅರ್ಬಾಜ್‌ ಖಾನ್‌ರನ್ನು ಝೂಮ್‌ ಮಾಧ್ಯಮವು ಪ್ರಶ್ನಿಸಿದೆ. ಸಲ್ಮಾನ್‌ ಖಾನ್‌ ಮತ್ತು ಅವರ ಕುಟುಂಬವು ಕೊಲೆ ಬೆದರಿಕೆ ಬಳಿಕ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಿಂದ ಬೇರೆ ಕಡೆಗೆ ಶಿಫ್ಟ್‌ ಆಗುವ ಪ್ಲಾನ್‌ ಹೊಂದಿದ್ದಾರೆಯೇ ಎಂದು ಕೇಳಲಾಯಿತು. ಈ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಹಿರಿಯ ಗೀತೆ ರಚನೆಕಾರರಾದ ಸಲೀಂ ಖಾನ್‌ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ರೀತಿ "ಸ್ಥಳಾಂತರವು ವಾಸ್ತವವನ್ನು ಬದಲಾಯಿಸುವುದಿಲ್ಲ" ಎಂದು ಅರ್ಬಾಜ್‌ ಖಾನ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಲ್ಮಾನ್‌ ಖಾನ್‌ ಮನೆ ಬದಲಾವಣೆ

ಸಲ್ಮಾನ್‌ ಖಾನ್‌ ಅವರು ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಬಿಟ್ಟು ಬೇರೆ ಕಡೆಗೆ ಶಿಫ್ಟ್‌ ಆಗುತ್ತಾರ? ಎಂಬ ಪ್ರಶ್ನೆಗೆ ಅರ್ಬಾಜ್‌ ಖಾನ್‌ ಉತ್ತರಿಸಿದಾರೆ. "ಈ ರೀತಿ ಮನೆ ಬದಲಾಯಿಸಿದರೆ ಬೆದರಿಕೆಗಳು ಮಾಯವಾಗುತ್ತವೆ ಎಂದು ನೀವು ಭಾವಿಸುವಿರಾ? ನೀವು ಸ್ಥಳವನ್ನು ಬದಲಾಯಿಸಬಹುದು. ಆದರೆ, ಬೆದರಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ರೀತಿ ಯಾರಾದರೂ ಬೆದರಿಸಿದಾಗ ಮನೆ ಬದಲಾಯಿಸುತ್ತ ಹೋಗಲು ಸಾಧ್ಯವೇ. ಈ ರೀತಿ ಯಾರಾದರೂ ಬೆದರಿಸಿದಾಗ ನಾವು ಓಡುತ್ತಲೇ ಇರಬೇಕಾಗುತ್ತದೆ. ಇದರ ಬದಲು ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ. ನನ್ನ ತಂದೆ ಈ ಸ್ಥಳದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಸಲ್ಮಾನ್‌ ಖಾನ್‌ ಕೂಡ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನೀವು ಮನೆ ಬದಲಾಯಿಸಿ ನಿಮ್ಮನ್ನು ಸುಮ್ಮನೆ ಬಿಡುತ್ತೇವೆ ಎಂಬ ಬೆದರಿಕೆ ನಮಗಿಲ್ಲ. ಮನೆ ಬದಲಾಯಿಸಿದಾಗ ಸಮಸ್ಯೆ ಬಗೆಹರಿಯುತ್ತಿದ್ದರೆ ನಾವು ಹಾಗೆಯೇ ಮಾಡುತ್ತಿದ್ದೇವು" ಎಂದು ಅರ್ಬಾಜ್‌ ಖಾನ್‌ ಹೇಳಿದ್ದಾರೆ.

ಸಾಮಾನ್ಯರಂತೆ ಬದುಕುವ ಪ್ರಯತ್ನ

"ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದೊಂದೇ ಸರಿಯಾದ ಮಾರ್ಗ. ವೈಯಕ್ತಿಕವಾಗಿ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು. ಸರಕಾರ ನಮಗೆ ಭದ್ರತೆ ಒದಗಿಸಬಹುದು. ಇಂತಹ ಸಂದರ್ಭದಲ್ಲಿ ಸಹಜವಾಗಿ ಬದುಕಲು ಯತ್ನಿಸುವುದೊಂದೇ ದಾರಿ. ನಿರಂತರ ಬೆದರಿಕೆ ಅಥವಾ ಬದುಕುವ ಬದಲು ಸಾಮಾನ್ಯ ಜೀವನ ನಡೆಸುವುದು ಉತ್ತಮ. ಭಯ ಅಥವಾ ಬೆದರಿಕೆಯಲ್ಲಿ ಬದುಕಿದರೆ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹೊಡೆದಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4.51 ರ ಸುಮಾರಿಗೆ ಈ ಘಟನೆ ನಡೆದಿತ್ತು. ಬಾಂದ್ರಾದಲ್ಲಿರುವ ಸಲ್ಮಾನ್‌ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದನು. ಇದಾದ ಬಳಿಕ ಬಾಲಿವುಡ್‌ ನಟನ ಮನೆಯ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗ, ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮನೆಯ ಹೊರಗೆ ಹಾರಿಸಲಾದ ಗುಂಡುಗಳ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ. ಗನ್‌ ಒದಗಿಸಿದವರನ್ನೂ ಬಂಧಿಸಲಾಗಿದೆ.

IPL_Entry_Point