ಕನ್ನಡ ಸುದ್ದಿ  /  ಮನರಂಜನೆ  /  Dhruva Sarja Daughter: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡು 'ಐ ಲವ್‌ ಯೂ ಮಗಳೇ' ಎಂದ ಧ್ರುವ!

Dhruva Sarja Daughter: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡು 'ಐ ಲವ್‌ ಯೂ ಮಗಳೇ' ಎಂದ ಧ್ರುವ!

ಧ್ರುವ ಪತ್ನಿ ಪ್ರೇರಣಾ, ಕಳೆದ ತಿಂಗಳು ಮೊದಲ ಬಾರಿಗೆ ಮಗುವಿನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಧ್ರುವ ಕೂಡಾ ಮಗಳ ಜೊತೆಗಿನ ಮುದ್ಧಾದ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಮಗುವಿನ ಮುಖ ಕಾಣುತ್ತಿಲ್ಲ. ತಾವು ಹಂಚಿಕೊಂಡಿರುವ ಫೋಟೋಗೆ ಧ್ರುವ ಲವ್‌ ಎಮೋಜಿಯೊಂದಿಗೆ ''ನನ್ನ ಮಗಳು, ಲವ್‌ ಯೂ ಮಗಳೇ'' ಎಂದು ಬರೆದುಕೊಂಡಿದ್ದಾರೆ.

ಮಗಳೊಂದಿಗಿನ ಫೋಟೋ ಹಂಚಿಕೊಂಡ ಧ್ರುವ ಸರ್ಜಾ
ಮಗಳೊಂದಿಗಿನ ಫೋಟೋ ಹಂಚಿಕೊಂಡ ಧ್ರುವ ಸರ್ಜಾ (PC: Dhruva Sarja Instagram)

'ಮಾರ್ಟಿನ್‌' ಸಿನಿಮಾ ಶೂಟಿಂಗ್‌ ಮುಗಿಸಿರುವ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಈಗ ಪ್ಯಾನ್‌ ಇಂಡಿಯಾ 'KD' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಚಿತ್ರವನ್ನು ಪ್ರೇಮ್‌ ನಿರ್ದೇಶಿಸುತ್ತಿದ್ದು ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಕಳೆದ ವರ್ಷ ಚಿತ್ರತಂಡ ರಿಲೀಸ್‌ ಮಾಡಿರುವ ಟೀಸರ್‌ ಕೂಡಾ ಭಾರೀ ಗಮನ ಸೆಳೆದಿತ್ತು.

ಟ್ರೆಂಡಿಂಗ್​ ಸುದ್ದಿ

ಮತ್ತೊಂದೆಡೆ ಧ್ರುವ ಸರ್ಜಾಗೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಕಳೆದ ವರ್ಷ ಅವರು ಹೆಣ್ಣು ಮಗುವಿನ ತಂದೆ ಆಗಿದ್ದಾರೆ. ಶೂಟಿಂಗ್‌ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಧ್ರುವ ಮಗಳನ್ನು ನೋಡಲು ಹಾತೊರೆಯುತ್ತಿರುತ್ತಾರೆ. ಧ್ರುವ ಪತ್ನಿ ಪ್ರೇರಣಾ, ಕಳೆದ ತಿಂಗಳು ಮೊದಲ ಬಾರಿಗೆ ಮಗುವಿನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಧ್ರುವ ಕೂಡಾ ಮಗಳ ಜೊತೆಗಿನ ಮುದ್ಧಾದ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಮಗುವಿನ ಮುಖ ಕಾಣುತ್ತಿಲ್ಲ. ತಾವು ಹಂಚಿಕೊಂಡಿರುವ ಫೋಟೋಗೆ ಧ್ರುವ ಲವ್‌ ಎಮೋಜಿಯೊಂದಿಗೆ ''ನನ್ನ ಮಗಳು, ಲವ್‌ ಯೂ ಮಗಳೇ'' ಎಂದು ಬರೆದುಕೊಂಡಿದ್ದಾರೆ.

ಈ ಮುದ್ದಾದ ಫೋಟೋಗೆ ಧ್ರುವ ಅಭಿಮಾನಿಗಳು, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಲೈಕ್‌, ಕಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪನ್ನಗಾಭರಣ, ಅದ್ವಿತಿ ಶೆಟ್ಟಿ, ವಿಜೆ ಹೇಮಲತಾ, ಸುಕೃತಾ ವಾಗ್ಲೆ, ಅಮೂಲ್ಯ ಜಗದೀಶ್‌, ಮೇಘನಾ ಸರ್ಜಾ, ಐಶ್ವರ್ಯ ಅರ್ಜುನ್‌ ಹಾಗೂ ಇನ್ನಿತರರು ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆ. ಆದಷ್ಟು ಬೇಗ ಮಗುವಿನ ಮುಖ ತೋರಿಸಿ ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.

ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪ್ರೇರಣಾ

24 ನವೆಂಬರ್‌ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಕಳೆದ ವರ್ಷ ಸೆಪ್ಟೆಂಬರ್‌ 3 ರಂದು ತಾವು ಪೋಷಕರಾಗುತ್ತಿರುವ ಸುದ್ದಿಯನ್ನು ಈ ಜೋಡಿ ಹಂಚಿಕೊಂಡಿದ್ದರು. ಅಕ್ಟೋಬರ್‌ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯ ವಿಚಾರವನ್ನು ಕೂಡಾ ಧ್ರುವ ತಮ್ಮ ಅಭಿಮಾನಿಗಳೊಂದಿಗೆ ಶೇರ್‌ ಮಾಡಿದ್ದರು.

ಮಾರ್ಟಿನ್‌ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಮಾರ್ಟಿನ್‌' ಸಿನಿಮಾ ಟೀಸರ್‌ ಕಳೆದ ತಿಂಗಳು ಬಿಡುಗಡೆ ಆಗಿದೆ. ಈ ಚಿತ್ರದ ಮೂಲಕ ಮತ್ತೆ ನಿರ್ದೇಶಕ ಎ.ಪಿ ಅರ್ಜುನ್‌ ಹಾಗೂ ಧ್ರುವ ಸರ್ಜಾ ಮತ್ತೆ ಒಂದಾಗಿದ್ದಾರೆ. 'ಮಾರ್ಟಿನ್‌' ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಧ್ರುವ ತೋಳಿನ ಮೇಲೆ INDIAN ಬರಹ ಕೂಡಾ ಗಮನ ಸೆಳೆದಿತ್ತು. ಟೀಸರ್‌ ಇಡೀ ಹೊಡೆದಾಟದ ದೃಶ್ಯಗಳಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. 'ಪೊಗರು' ಚಿತ್ರದಲ್ಲಿರುವಂತೆ ಈ ಟೀಸರ್‌ನಲ್ಲಿ ಕೂಡಾ ಧ್ರುವ ಸರ್ಜಾ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ಗಳ ಜೊತೆ ಸೆಣಸಾಡಿದ್ಧಾರೆ. ಬಾಂಬ್‌, ಬಂದೂಕು, ಪಾಕಿಸ್ತಾನ ಬಾವುಟ, ಅಲ್ಲಿನ ಜೈಲಿಗೆ ನಾಯಕ ಮಾರ್ಟಿನನ್ನು ಬಿಗಿ ಭದ್ರತೆಯಲ್ಲಿ ಕರೆತರುವ ದೃಶ್ಯ, ಹಿ ಇಸ್‌ ಅನ್‌ ಇಂಡಿಯನ್‌, I Know I am Strong ಡೈಲಾಗ್‌ಗಳು ಈ ಟೀಸರ್‌ನ ಹೈ ಲೈಟ್ಸ್‌. ಟೀಸರ್‌ ಎಷ್ಟು ಕ್ರೇಜ್‌ ಕ್ರಿಯೇಟ್‌ ಮಾಡಿದೆ ಎಂದರೆ ಬಿಡುಗಡೆ ಆದ 14 ಗಂಟೆಗಳಲ್ಲಿ 15 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಆಗಿದೆ. ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ 'ಮಾರ್ಟಿನ್‌' ಟೀಸರ್‌ ರಿಲೀಸ್‌ ಆಗಿದೆ.

IPL_Entry_Point