Geetha Govindam 2 Controversy: 'ಗೀತ ಗೋವಿಂದಂ' ಸೀಕ್ವೆಲ್‌ಗಾಗಿ ದಿಲ್ ರಾಜು ಕೈ ಹಿಡಿದ ಪರಶುರಾಮ್...ಅಲ್ಲು ಅರವಿಂದ್ ಬೇಸರ
ಸುಮಾರು 5 ಕೋಟಿ ವೆಚ್ಚ ಮಾಡಿ ತಯಾರಿಸಿದ್ದ 'ಗೀತ ಗೋವಿಂದಂ' ಸಿನಿಮಾ 100 ಕೋಟಿಗೂ ಹೆಚ್ಚು ಲಾಭ ಮಾಡಿತ್ತು. ಇದೇ ಸಮಯದಲ್ಲಿ ಇದರ ಸೀಕ್ವೆಲ್ ತಯಾರಿಸಲು ಕೂಡಾ ಒಪ್ಪಂದವಾಗಿತ್ತು.
ಟಾಲಿವುಡ್ ಟಾಪ್ ನಿರ್ಮಾಪಕರಲ್ಲಿ ಅಲ್ಲು ಅರವಿಂದ್ ಕೂಡಾ ಒಬ್ಬರು. ಅನೇಕ ಹಿಟ್ ಸಿನಿಮಾಗಳನ್ನು ಅವರು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಈ ನಡುವೆ 2018 ರಲ್ಲಿ ತೆರೆ ಕಂಡಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಗೀತ ಗೋವಿಂದಂ' ಸಿನಿಮಾದ ಸೀಕ್ವೆಲ್ ಬರ್ತಿದ್ದು ಆ ಚಿತ್ರಕ್ಕೆ ಗೀತಾ ಆರ್ಟ್ಸ್ ಬ್ಯಾನರ್‌ನ ಅಲ್ಲು ಅರವಿಂದ್ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಿರ್ದೇಶಕ ಪರಶುರಾಮ್, ಈ ಚಿತ್ರಕ್ಕೆ ಬೇರೆ ನಿರ್ಮಾಪರನ್ನು ಫಿಕ್ಸ್ ಮಾಡಿ ನಿರ್ಮಾಪಕ ಅಲ್ಲು ಅರವಿಂದ್‌ಗೆ ಶಾಕ್ ನೀಡಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಸುಮಾರು 5 ಕೋಟಿ ವೆಚ್ಚ ಮಾಡಿ ತಯಾರಿಸಿದ್ದ 'ಗೀತ ಗೋವಿಂದಂ' ಸಿನಿಮಾ 100 ಕೋಟಿಗೂ ಹೆಚ್ಚು ಲಾಭ ಮಾಡಿತ್ತು. ಇದೇ ಸಮಯದಲ್ಲಿ ಇದರ ಸೀಕ್ವೆಲ್ ತಯಾರಿಸಲು ಕೂಡಾ ಒಪ್ಪಂದವಾಗಿತ್ತು. ಆದರೆ 'ಗೀತ ಗೋವಿಂದಂ' ನಂತರ ಪರಶುರಾಮ್ ಮಹೇಶ್ ಬಾಬು ಅಭಿನಯದ 'ಸರ್ಕಾರುವಾರಿ ಪಾಟ' ನಂತರ ನಾಗಚೈತನ್ಯ ಜೊತೆ 'ನಾಗೇಶ್ವರ್ ರಾವ್' ಎಂಬ ಸಿನಿಮಾ ಮಾಡಲು ಮುಂದಾದರು. ಆದರೆ ಸ್ಕ್ರಿಪ್ಟ್ ವಿಚಾರದಲ್ಲಿ ಗೊಂದಲ ಅಗಿದ್ದರಿಂದ ನಾಗಚೈತನ್ಯ ಜೊತೆ ಸಿನಿಮಾ ಮಾಡಲಿಲ್ಲ. ಈ ಕಾರಣದಿಂದ 'ಗೀತ ಗೋವಿಂದಂ' ಸೀಕ್ವೆಲ್ ಸಾಧ್ಯವಾಗಲಿಲ್ಲ. ಕೆಲವು ದಿನಗಳ ಹಿಂದೆ ಪರಶುರಾಮ್, ಅಲ್ಲು ಅರವಿಂದ್ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಚರ್ಚಿಸಿ ದೊಡ್ಡ ಮೊತ್ತದ ಅಡ್ವಾನ್ಸ್ ಕೂಡಾ ಪಡೆದಿದ್ದರು ಎನ್ನಲಾಗಿದೆ. ಇನ್ನು ಸಿನಿಮಾ ಕೆಲಸಗಳು ಆರಂಭವಾಗಬೇಕು ಎಂದುಕೊಳ್ಳುವಷ್ಟರಲ್ಲಿ ನಿರ್ದೇಶಕ ಪರಶುರಾಮ್, ಅಲ್ಲು ಅರವಿಂದ್ ಅವರನ್ನು ಬಿಟ್ಟು ದಿಲ್ ರಾಜು ಅವರನ್ನು ನಿರ್ಮಾಪಕರನ್ನಾಗಿ ಘೋಷಿಸಿದ್ದಾರೆ ಎಂಬ ವಿಚಾರ ವೈರಲ್ ಆಗಿದೆ.
ಈ ವಿಚಾರ ಅಲ್ಲು ಅರವಿಂದ್‌ಗೂ ತಲುಪಿದೆ, ಕೂಡಲೇ ಅವರು ಪರಶುರಾಮ್ ಹಾಗೂ ದಿಲ್ ರಾಜು ಅವರಿಗೆ ಕರೆ ಮಾಡಿದರೆ ಇಬ್ಬರೂ ಪೋನ್ ರಿಸೀವ್ ಮಾಡಿಲ್ಲ. ಈ ಕಾರಣದಿಂದಲೇ ಬೇಸರಗೊಂಡ ಅಲ್ಲು ಅರವಿಂದ್ ಪ್ರೆಸ್ ಮೀಟ್ ಕರೆದಿದ್ದಾರೆ. ಆದರೆ ಮತ್ತೆ ಪ್ರೆಸ್ ಮೀಟ್ ಕ್ಯಾನ್ಸಲ್ ಆಗಿದೆ. ಆದರೆ ಈ ಮೂವರ ನಡುವೆ ಏನು ನಡೆಯುತ್ತಿದೆ ಎಂಬುದು ಮಾತ್ರ ಇಂದಿಗೂ ಗೊಂದಲದಲ್ಲಿದೆ. ಮತ್ತೊಂದೆಡೆ ದಿಲ್ ರಾಜು, ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪರಶುರಾಮ್ ಜೊತೆಯಾಗಿ ಕೂತು ಡಿಸ್ಕ್‌ಸ್ ಮಾಡುತ್ತಿರುವ ಫೋಟೋವನ್ನು ವಿಜಯ್ ದೇವರಕೊಂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿಲ್ ರಾಜು ಅವರ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಟ್ವೀಟ್ ಮಾಡಿದ್ದು, ಬ್ಲಾಕ್ ಬಸ್ಟರ್ ಕಾಂಬಿನೇಶನ್ ಮತ್ತೆ ಒಂದಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಾದು ನೋಡಿ ಎಂಬ ಪೋಸ್ಟ್ ಹಂಚಿಕೊಳ್ಳಲಾಗಿದೆ. ಒಟ್ಟಿನಲ್ಲಿ ಪರಶುರಾಮ್, ಅಲ್ಲು ಅರವಿಂದ್ ಬಿಟ್ಟು ದಿಲ್ ರಾಜು ಅವರ ಜೊತೆ ಸಿನಿಮಾ ಮಾಡ್ತಿರೋದು ಹೆಚ್ಚು ಸಂಭಾವನೆ ಕಾರಣಕ್ಕೋ ಅಥವಾ ಬೇರೆ ಕಾರಣ ಏನು ಎಂಬುದು ಮಾತ್ರ ಇನ್ನೂ ಸೀಕ್ರೇಟ್ ಆಗಿ ಉಳಿದಿದೆ.
ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ 'ಗೀತ ಗೋವಿಂದಂ' ಚಿತ್ರವನ್ನು ನಿರ್ಮಿಸಿದ್ದು ಪರಶುರಾಮ್ ಕಥೆ ಬರೆದು ನಿರ್ದೇಶನ ಮಾಡಿದ್ದರು. 15 ಆಗಸ್ಟ್ 2018 ರಂದು ಸಿನಿಮಾ ತೆರೆ ಕಂಡಿತ್ತು. ಚಿತ್ರದ ಹಾಡುಗಳಿಗೆ ಗೋಪಿ ಸುಂದರ್ ಸಂಗೀತ ನೀಡಿದ್ದರು. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಜೊತೆಗೆ ನಾಗ ಬಾಬು, ವೆನ್ನಿಲ ಕಿಶೋರ್, ರವಿ ಪ್ರಕಾಶ್ ನಟಿಸಿದ್ದರು. ಇದೀಗ ಸೀಕ್ವೆಲ್ ಬರುವುದು ಕನ್ಫರ್ಮ ಆಗಿದೆ. ಆದರೆ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಮತ್ತೆ ರಶ್ಮಿಕಾ ನಟಿಸಲಿದ್ದಾರಾ ಅಥವಾ ಬೇರೆ ನಟಿ ಬರಲಿದ್ದಾರಾ ಕಾದು ನೋಡಬೇಕು.