ಕನ್ನಡ ಸುದ್ದಿ  /  Entertainment  /  Famous Actor Started Ambulance Service By Appu Name

Puneeth Rajkumar: ಅಪ್ಪು ಹೆಸರಿನಲ್ಲಿ ರಾಜ್ಯಾದ್ಯಂತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ ಖ್ಯಾತ ನಟ

ಪುನೀತ್ ರಾಜ್​​​​ಕುಮಾರ್ ಅಗಲಿ 9 ತಿಂಗಳು ಕಳೆದಿವೆ. ಅವರು ಇಲ್ಲದಿದ್ದರೂ ಜನರು ಒಂದಲ್ಲಾ ಒಂದು ರೀತಿಯಲ್ಲಿ ಅಪ್ಪುವನ್ನು ನೆನೆಯುತ್ತಿದ್ದಾರೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲಬ್ರಿಟಿಗಳಿಗೂ ಅಚ್ಚುಮೆಚ್ಚಿನ ನಟ. ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೂ ಪುನೀತ್ ಎಂದರೆ ಬಹಳ ಪ್ರೀತಿ. ಆ ಕಾರಣದಿಂದಲೇ ಪ್ರಕಾಶ್ ರಾಜ್, ಪುನೀತ್​​ ಹೆಸರಿನಲ್ಲಿ ರಾಜ್ಯಾದ್ಯಂತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ.

ಪುನೀತ್ ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ
ಪುನೀತ್ ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ

ಪುನೀತ್ ರಾಜ್​​ಕುಮಾರ್, ಕನ್ನಡಿಗರ ಮನೆ ಮನಗಳಲ್ಲಿ ಅಚ್ಚಳಿಯದೆ ಉಳಿದಿರುವ ರಾಜಕುಮಾರ. ಪುನೀತ್ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. 50 ರೂಪಾಯಿ ನೀಡಿದರೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವವರ ನಡುವೆ ಅಪ್ಪು ಯಾರಿಗೂ ತಿಳಿಯದಂತೆ ಕಷ್ಟ ಎಂದು ಕೇಳಿದವರಿಗೆ ಸಹಾಯಹಸ್ತ ಚಾಚಿದ್ದರು. ಅಪ್ಪು ನಿಧನರಾದ ನಂತರ ಅವರ ಸ್ಫೂರ್ತಿಯಿಂದ ಎಷ್ಟೋ ಅಭಿಮಾನಿಗಳು ಅವರಂತೆ ಸಮಾಜಸೇವೆ ಆರಂಭಿಸಿದ್ದಾರೆ.

ಪುನೀತ್ ರಾಜ್​​​​ಕುಮಾರ್ ಅಗಲಿ 9 ತಿಂಗಳು ಕಳೆದಿವೆ. ಅವರು ಇಲ್ಲದಿದ್ದರೂ ಜನರು ಒಂದಲ್ಲಾ ಒಂದು ರೀತಿಯಲ್ಲಿ ಅಪ್ಪುವನ್ನು ನೆನೆಯುತ್ತಿದ್ದಾರೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲಬ್ರಿಟಿಗಳಿಗೂ ಅಚ್ಚುಮೆಚ್ಚಿನ ನಟ. ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೂ ಪುನೀತ್ ಎಂದರೆ ಬಹಳ ಪ್ರೀತಿ. ಆ ಕಾರಣದಿಂದಲೇ ಪ್ರಕಾಶ್ ರಾಜ್, ಪುನೀತ್​​ ಹೆಸರಿನಲ್ಲಿ ರಾಜ್ಯಾದ್ಯಂತ ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. ರೋಗಿಗಳಿಗೆ ಉಪಯೋಗವಾಗಬೇಕೆಂಬ ಉದ್ದೇಶದಿಂದ ನಿನ್ನೆ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಅಪ್ಪು ಎಕ್ಸ್​ಪ್ರೆಸ್ ಸೇವೆ ಆರಂಭವಾಗಿದೆ. ಈ ಸಮಯದಲ್ಲಿ ಖ್ಯಾತ ನಿರ್ದೇಶಕ ಸಂತೋಷ್​ ಆನಂದ್ ರಾಮ್​ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶೀಘ್ರದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸೇವೆ ಆರಂಭವಾಗಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, 'ಒಂದು ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಪ್ಪು ಎಕ್ಸ್​​​ಪ್ರೆಸ್ ಸೇವೆ ಆರಂಭವಾಗಲಿದೆ. ಇದಕ್ಕೆ ದಾನಿಗಳ ನೆರವು ಕೇಳಿದ್ದೇನೆ. ಒಂದು ವೇಳೆ ಅಷ್ಟು ಹಣ ಸಂಗ್ರಹವಾಗದಿದ್ದಲ್ಲಿ ತಮ್ಮ ದುಡಿಮೆಯ ಸಂಪೂರ್ಣ ಹಣವನ್ನು ವಿನಿಯೋಗಿಸುವುದಾಗಿ ಪ್ರಕಾಶ್ ರಾಜ್ ಹೇಳಿದ್ದಾರೆ. ಆ್ಯಂಬುಲೆನ್ಸ್ ಸೇವೆ ಜೊತೆಗೆ ರಕ್ತನಿಧಿ ಬ್ಯಾಂಕ್ ಸೇವೆ ಕೂಡಾ ಆರಂಭಿಸಲು ಪ್ರಕಾಶ್ ರಾಜ್​​ ಮುಂದಾಗಿದ್ದಾರೆ. ಅಪ್ಪು ಅಗಲಿದಾಗ ಇಡೀ ರಾಜ್ಯವೇ ಕಣ್ಣೀರಿಟ್ಟಿದೆ. ಹೇಳಿಕೊಳ್ಳಲಾಗದಂತ ನೋವು ಕಾಡುತ್ತಿದೆ. ಒಂದು ವೇಳೆ ಆ ದಿನ ಆ್ಯಂಬುಲೆನ್ಸ್ ಇದ್ದಿದ್ದರೆ ಪುನೀತ್ ಉಳಿದುಬಿಡುತ್ತಿದ್ದರೇನೋ ಎಂಬ ಭಾವನೆ ಕಾಡುತ್ತಿದೆ. ಆ ಕಾರಣದಿಂದಲೇ ನಾನು ಈ ಆ್ಯಂಬುಲೆನ್ಸ್ ಸೇವೆ ಆರಂಭಿಸುತ್ತಿದ್ದೇನೆ' ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಲಾಲ್​ಬಾಗ್​​ನಲ್ಲಿ ಪುನೀತ್ ಹೆಸರಲ್ಲಿ ಪುಷ್ಪೋತ್ಸವ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್‌ಬಾಗ್‌ ಉದ್ಯಾನವೀಗ ಪುನೀತ್‌ಮಯವಾಗಿದೆ . 75ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಇಡೀ ಪುಷ್ಪೋತ್ಸವವನ್ನು ಪುನೀತ್‌ಗೆ ಅರ್ಪಿಸಲಾಗಿದೆ. ಈ ಪುಷ್ಪೋತ್ಸಕ್ಕೆ ಆಗಸ್ಟ್​ 5 ರಂದು ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್‌, ಗೀತಾ ಶಿವರಾಜ್​​ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ , ನಿರ್ಮಾಪಕ ಮುನಿರತ್ನ ಹಾಗೂ ಇನ್ನಿತರರು ಹಾಜರಿದ್ದರು.

ನವೆಂಬರ್​ 1 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಪುನೀತ್ ನಿಧನರಾದ ನಂತರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 1, ಕನ್ನಡ ರಾಜ್ಯೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

IPL_Entry_Point