ಕನ್ನಡ ಸುದ್ದಿ  /  ಮನರಂಜನೆ  /  Iti Acharya: ಅಮೆರಿಕನ್ ಮ್ಯೂಸಿಕ್ ವಿಡಿಯೋದಲ್ಲಿ ‘ಕವಚ’ ನಟಿ; ಇತಿ ಆಚಾರ್ಯ ಹೊಸ ಇತಿಹಾಸ..

Iti Acharya: ಅಮೆರಿಕನ್ ಮ್ಯೂಸಿಕ್ ವಿಡಿಯೋದಲ್ಲಿ ‘ಕವಚ’ ನಟಿ; ಇತಿ ಆಚಾರ್ಯ ಹೊಸ ಇತಿಹಾಸ..

ಮೆರ್ಲಿನ್ ಬಾಬಾಜಿ ಅಮೆರಿಕದಲ್ಲಿ ಖ್ಯಾತಿ ಗಳಿಸಿರುವ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ. ಇದೀಗ ಈ ಕಂಪೋಸರ್‌ ಜತೆ ಕೈ ಜೋಡಿಸಿದ್ದಾರೆ ನಟಿ ಇತಿ ಆಚಾರ್ಯ

ಅಮೆರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು..
ಅಮೆರಿಕನ್ ಮ್ಯೂಸಿಕ್ ವೀಡಿಯೋದಲ್ಲಿ ಕನ್ನಡತಿ ಇತಿ ಆಚಾರ್ಯ ಮಿಂಚು..

Iti Acharya: ‘ಕವಚ’ ಸಿನಿಮಾ ಖ್ಯಾತಿಯ ನಟಿ ಹಾಗೂ ನಿರ್ಮಾಪಕಿ ಇತಿ ಆಚಾರ್ಯ ಅಮೆರಿಕನ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಕಂಪೋಸ್ ಮಾಡಿರುವ ಆಲ್ಬಂ ಸಾಂಗ್ ನಲ್ಲಿ ಕನ್ನಡತಿ ಇತಿ ಆಚಾರ್ಯ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೆರ್ಲಿನ್ ಬಾಬಾಜಿ ಅಮೆರಿಕದಲ್ಲಿ ಖ್ಯಾತಿ ಗಳಿಸಿರುವ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ. ಕಳೆದ ವರ್ಷ ಇವರ ‘ವೈಬ್ಸ್’ ಸಾಂಗ್ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಜನಪ್ರಿಯಗೊಂಡಿತ್ತು. ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದ ‘ವೈಬ್ಸ್’ ಸಾಂಗ್ ಹತ್ತು ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಇದೀಗ ಮತ್ತೊಂದು ವೀಡಿಯೋ ಸಾಂಗ್ ಮೂಲಕ ಮೆರ್ಲಿನ್ ಸೆನ್ಸೇಶನ್ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ. ತಮ್ಮ ಹೊಸ ವಿಡಿಯೋ ಹಾಡಿಗೆ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ ಅವರ ಜೊತೆ ಕೈ ಜೋಡಿಸಿರುವುದು ವಿಶೇಷ.

ನಿಜಕ್ಕೂ ಇದು ಖುಷಿಯ ವಿಚಾರ..

"ಮೆರ್ಲಿನ್ ಬಾಬಾಜಿ ಕಳೆದ ಒಂದು ವರ್ಷದಿಂದ ನನಗೆ ಪರಿಚಿತರು. ಅವರ ಸಂಗೀತದ ದೊಡ್ಡ ಅಭಿಮಾನಿ ನಾನು. ‘ಲವ್ ಹರ್ ಟೂ ಮಚ್’ ಸಾಂಗ್ ಕೇಳಿದ ಮೇಲೆ ತುಂಬಾ ಇಷ್ಟವಾಯ್ತು. ನಾನು ಈ ಹಾಡಿನಲ್ಲಿ ನಟಿಸುವೆ ಎಂದು ಹೇಳಿದೆ" ಎಂದು ಇತಿ ಆಚಾರ್ಯ ಸಂತಸ ಹಂಚಿಕೊಂಡಿದ್ದಾರೆ.

ಇತಿ ಆಚಾರ್ಯ ಸಹೋದರ ಅಭಿ ಆಚಾರ್ಯ ಕೂಡ ಅಮೆರಿಕಾದಲ್ಲಿ ಸಂಗೀತ ಕಲಾವಿದರಾಗಿದ್ದು, 2023ರ ಗ್ರ್ಯಾಮ್ಮಿ ಅವಾರ್ಡ್ ನಲ್ಲಿ ಇವರ ಹೆಸರು ನಾಮ ನಿರ್ದೇಶನವಾಗಿತ್ತು. ಅಮೆರಿಕಾದಲ್ಲಿ ನನ್ನ ಸಹೋದರ ನೆಲೆಸಿರುವುದು ಅಲ್ಲಿನ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗಿದೆ ಎನ್ನುತ್ತಾರೆ ಇತಿ ಆಚಾರ್ಯ.

ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಒಳಗೊಂಡಂತೆ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬಿಜಿಯಾಗಿದ್ದಾರೆ.

ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಹಿರಿಮೆ ಇವರದ್ದು, 2022ರ ಕ್ಯಾನಿಸ್ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್ ನಲ್ಲೂ ಇತಿ ಹೆಜ್ಜೆ ಹಾಕಿದ್ದಾರೆ. ಇದೀಗ ಅಮೆರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ.

ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ

Yash: ಗೇಲಿ ಮಾಡೋರ ಬಾಯಿಗೆ ಗೋಲಿ ಹೊಡೆದ ಯಶ್;‌ ‘ನೀನು ನೀನಾಗಿರು..’ ಎಂದು ನಾಲ್ಕು ಭಾಷೆಯಲ್ಲಿ ಹೊಸ ವಿಡಿಯೋ ಶೇರ್‌ ಮಾಡಿದ ರಾಕಿಂಗ್‌ ಸ್ಟಾರ್

ಸ್ಯಾಂಡಲ್‌ವುಡ್‌ ನಟ ಯಶ್‌ ಸಿನಿಮಾಗಾಗಿ ಕೇವಲ ಕರ್ನಾಟಕದ ಅಭಿಮಾನಿಗಳು ಮಾತ್ರವಲ್ಲ ಅವರ ಪ್ಯಾನ್‌ ಇಂಡಿಯಾ ಫ್ಯಾನ್ಸ್‌ ಸಹ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ತುಟಿ ಬಿಚ್ಚಿಲ್ಲ. ಮಹತ್ತರವಾದದ್ದು ನಡೆಯುತ್ತಿದೆ ಎಂದು ತಮ್ಮ ಹುಟ್ಟುಹಬ್ಬದ ದಿನ ಹೇಳಿಕೊಂಡಿದ್ದನ್ನು ಬಿಟ್ಟರೆ, ತಮ್ಮ #Yash19 ಚಿತ್ರದ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಈ ನಡುವೆ ಅವರ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ವಿಡಿಯೋವೊಂದು ತೇಲಿಬಂದಿದೆ. ಗೇಲಿ ಮಾಡುವವರಿಗೆ ಗೋಲಿ ಹೊಡಿ ಎಂದು ಸ್ವತಃ ಯಶ್‌ ಹೇಳಿದ್ದಾರೆ. ಪೂರ್ತಿ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point

ವಿಭಾಗ