ಕನ್ನಡ ಸುದ್ದಿ  /  ಮನರಂಜನೆ  /  Ott Release This Week: ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಸ್ಟ್ರೀಮಿಂಗ್‌ ಶುರು?

OTT Release This Week: ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಸ್ಟ್ರೀಮಿಂಗ್‌ ಶುರು?

ಈ ವಾರ (ಏ. 19) ಒಂದಕ್ಕಿಂತ ಒಂದು ಕುತೂಹಲಭರಿತ ಸಿನಿಮಾಗಳು ಒಟಿಟಿ ಅಂಗಳವನ್ನು ಪ್ರವೇಶಿಸಲಿವೆ. ಅದರಲ್ಲೂ ಕ್ರೈಂ ಥ್ರಿಲ್ಲರ್‌ ಸಿನಿಮಾ ಪ್ರಿಯರಿಗೆ ಇಷ್ಟವಾಗುವ ಹಲವು ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಲು ಸಜ್ಜಾಗಿವೆ.

OTT Release This Week: ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಸ್ಟ್ರೀಮಿಂಗ್‌ ಶುರು?
OTT Release This Week: ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾಗಳದ್ದೇ ಕಾರುಬಾರು; ಯಾವೆಲ್ಲ ಚಿತ್ರಗಳ ಸ್ಟ್ರೀಮಿಂಗ್‌ ಶುರು?

OTT Release This Week: ಶುಕ್ರವಾರ ಬಂತೆಂದರೆ ಬರೀ ಚಿತ್ರಮಂದಿರದಲ್ಲಷ್ಟೇ ಅಲ್ಲ, ಒಟಿಟಿಯಲ್ಲೂ ಬಗೆಬಗೆ ಸಿನಿಮಾಗಳ ಆಗಮನವಾಗುತ್ತವೆ. ಅದರಂತೆ ಈ ವಾರವೂ ಹಲವು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಐದು ಸಿನಿಮಾಗಳ ಮಾಹಿತಿ ಇಲ್ಲಿದೆ. ಅದರಲ್ಲೂ ಕ್ರೈಂ ಥ್ರಿಲ್ಲರ್‌ ಇಷ್ಟಪಡುವವರಿಗೆ ಈ ವಾರ ನಿಜಕ್ಕೂ ಹಬ್ಬದೂಟವೇ ಸರಿ.

ಟ್ರೆಂಡಿಂಗ್​ ಸುದ್ದಿ

ಆರ್ಟಿಕಲ್‌ 370

ಆರ್ಟಿಕಲ್‌ 370 (ಹಿಂದಿ) ಏ. 19ರಿಂದ ಜಿಯೋ ಸಿನಿಮಾದಲ್ಲಿ ಪ್ರಸಾರ; ಪ್ರಿಯಾ ಮಣಿ ಮತ್ತು ಯಾಮಿ ಗೌತಮ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಫೆ. 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈಗ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಆದಿತ್ಯ ಸುಹಾಸ್‌ ಜಾಂಬಲೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಕಾಮ್‌ ಚಾಲು ಹೈ

ಕಾಮ್‌ ಚಾಲು ಹೈ (ಹಿಂದಿ) ಏ 19ರಿಂದ ಜೀ5ನಲ್ಲಿ ಪ್ರಸಾರ: ಪಲಾಷ್‌ ಮುಚ್ಚಲ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ಕಾಮ್‌ ಚಾಲು ಹೈ. ರಾಜ್‌ಪಾಲ್‌ ಯಾದವ್‌, ಗಿಯಾ ಮನೇಕ್‌, ಕುರಾಂಗಿ ನಾಗರಾಜ್‌ ಪ್ರಮುಖ ಪಾತ್ರದಲ್ಲಿ ನಟಿಸಿದ ಚಿತ್ರವಿದೆ. ಜೀ 5 ಒಟಿಟಿಯಲ್ಲಿ ಏ. 19ರಿಂದ ಕಾಮ್‌ ಚಾಲು ಹೈ ಚಿತ್ರ ಸ್ಟ್ರೀಮ್‌ ಆಗಲಿದೆ.

ಸೈರನ್‌

ಸೈರನ್‌ (ತಮಿಳು) ಡಿಸ್ನಿ ಏ 19ರಿಂದ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್:‌ ಕೀರ್ತಿ ಸುರೇಶ್‌, ಜಯಂ ರವಿ, ಅನುಪಮಾ ಪರಮೇಶ್ವರನ್‌, ಸಮುದ್ರಖಣಿ, ಯೋಗಿ ಬಾಬು ಮುಖ್ಯಭೂಮಿಕೆಯಲ್ಲಿರುವ ಸೈರನ್‌ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಕ್ರೈಂ ಥ್ರಿಲ್ಲರ್‌ ಕಥಾಹಂದರದ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ.

ರಣಮ್

ರಣಮ್ (ತಮಿಳು)‌ ಏ. 19ರಿಂದ ಅಮೆಜಾನ್‌ ಪ್ರೈಂನಲ್ಲಿ ಪ್ರಸಾರ: ಕಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ರಣಂ ಸಿನಿಮಾ ಕ್ರೈಂ ಥ್ರಿಲ್ಲರ್‌ ಶೈಲಿಯದ್ದು. ಶರೀಫ್‌ ನಿರ್ದೇಶನಲ್ಲಿನ ಮೂಡಿ ಬಂದ ಈ ಸಿನಿಮಾದಲ್ಲಿ ವೈಭವ್‌ ರೆಡ್ಡಿ, ನಂದಿತಾ ಶ್ವೇತಾ, ತಾನ್ಯಾ ಹೋಪ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನರ್ಸ್‌ ಕೊಲೆ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ.

ರೆಬೆಲ್‌ ಮೂನ್‌

ರೆಬೆಲ್‌ ಮೂನ್‌ (ಇಂಗ್ಲೀಷ್‌) ಏ. 19ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌: ಸೈನ್ಸ್‌ ಫಿಕ್ಷನ್‌ ಕಥಾಹಂದರದ ರೆಬೆಲ್‌ ಮೂನ್‌ ಪಾರ್ಟ್‌ 2 ಸಿನಿಮಾ, ನೆಟ್‌ಫ್ಲಿಕ್ಸ್‌ನಲ್ಲಿ 19ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಜಾಕ್‌ ಸ್ನೈಡರ್‌ ನಿರ್ದೇಶನದ ಈ ಸಿನಿಮಾ ಮೂಡಿಬಂದಿದೆ.

IPL_Entry_Point