ಕನ್ನಡ ಸುದ್ದಿ  /  ಮನರಂಜನೆ  /  ವಿವಾಹಿತ ನಿರ್ದೇಶಕನ ಜತೆ ಸಂಬಂಧ, ಅಬಾರ್ಷನ್‌ಗೆ 75 ಲಕ್ಷಕ್ಕೆ ಡಿಮಾಂಡ್‌! ನಟಿ ರಮ್ಯಾ ಕೃಷ್ಣನ್ ಆ ದಿನಗಳು

ವಿವಾಹಿತ ನಿರ್ದೇಶಕನ ಜತೆ ಸಂಬಂಧ, ಅಬಾರ್ಷನ್‌ಗೆ 75 ಲಕ್ಷಕ್ಕೆ ಡಿಮಾಂಡ್‌! ನಟಿ ರಮ್ಯಾ ಕೃಷ್ಣನ್ ಆ ದಿನಗಳು

ಬಹುಭಾಷಾ ನಟಿ ರಮ್ಯಾ ಕೃಷ್ಣನ್‌ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಈ ನಡುವೆ, ಇದೇ ನಟಿಯ ಬಗ್ಗೆ ದಶಕಗಳ ಹಿಂದೆ ದೊಡ್ಡ ಸುದ್ದಿಯೊಂದು ಸದ್ದು ಮಾಡಿತ್ತು.

ವಿವಾಹಿತ ನಿರ್ದೇಶಕನ ಜತೆ  ಸಂಬಂಧ, ಅಬಾರ್ಷನ್‌ಗೆ 75 ಲಕ್ಷಕ್ಕೆ ಡಿಮಾಂಡ್‌! ನಟಿ ರಮ್ಯಾ ಕೃಷ್ಣನ್ ಆ ದಿನಗಳು
ವಿವಾಹಿತ ನಿರ್ದೇಶಕನ ಜತೆ ಸಂಬಂಧ, ಅಬಾರ್ಷನ್‌ಗೆ 75 ಲಕ್ಷಕ್ಕೆ ಡಿಮಾಂಡ್‌! ನಟಿ ರಮ್ಯಾ ಕೃಷ್ಣನ್ ಆ ದಿನಗಳು

Ramya Krishanan: ಬಹುಭಾಷಾ ನಟಿ ರಮ್ಯಾ ಕೃಷ್ಣನ್‌ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಖ್ಯಾತಿ ಗಿಟ್ಟಿಸಿಕೊಂಡವರು. ಚಿತ್ರೋದ್ಯಮದಲ್ಲಿ ಸ್ಟಾರ್‌ ಹೀರೋಗಳ ಜತೆಗೆ ನಾಯಕಿಯಾಗಿ ಮಿಂಚಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡಿರುವ ರಮ್ಯಾ, ಪೋಷಕ ಪಾತ್ರಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗೆ ಬಣ್ಣದ ಲೋಕದಲ್ಲಿ ಹಣ, ಕೀರ್ತಿ ಗಳಿಸಿದಷ್ಟೇ ಅಲ್ಲದೇ ಒಂದಷ್ಟು ವಿವಾದಗಳು, ವದಂತಿಗಳಿಗೂ ರಮ್ಯಾ ಕೃಷ್ಣನ್‌ ಸುದ್ದಿಯ ಮುನ್ನೆಲೆಗೆ ಬಂದಿದ್ದರು.

ಟ್ರೆಂಡಿಂಗ್​ ಸುದ್ದಿ

ಒಂದು ಕಾಲದಲ್ಲಿ ನಟಿ ರಮ್ಯಾ ಕೃಷ್ಣನ್‌ ಸ್ಟಾರ್‌ ನಾಯಕಿಯಾಗಿ ಗುರುತಿಸಿಕೊಂಡವರು. ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದವರು. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಇದೇ ನಟಿಯ ಅಕ್ರಮ ಸಂಬಂಧದ ವಿಚಾರವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದ್ಯಾವ ಮಟ್ಟಿಗೆ ಎಂದರೆ, ವಿವಾಹಿತ ನಿರ್ದೇಶಕನಿಂದ ರಮ್ಯಾ ಕೃಷ್ಣನ್‌ ಗರ್ಭಿಣಿಯಾಗಿದ್ದಾರೆ ಎಂಬುದು! ಬಣ್ಣದ ಲೋಕದಲ್ಲಿ ಸಣ್ಣ ಸಣ್ಣ ವಿಚಾರಗಳೇ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಹೀಗಿರುವಾಗ, ರಮ್ಯಾ ಕೃಷ್ಣನ್‌ ಅವರ ಈ ಸುದ್ದಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ರವಿಕುಮಾರ್‌ ಜತೆ ರಮ್ಯಾ ಹೆಸರು ತಳುಕು

ಅದು 1999. ಖ್ಯಾತ ನಿರ್ದೇಶಕ ರವಿಕುಮಾರ್‌ ಜತೆಗೆ ಸಾಲು ಸಾಲು ಸಿನಿಮಾಗಳಲ್ಲಿ ರಮ್ಯಾ ಕೃಷ್ಣನ್‌ ನಾಯಕಿಯಾಗಿ ನಟಿಸತೊಡಗಿದರು. ನಿರ್ದೇಶಕ ರವಿಕುಮಾರ್‌ ಸಹ ನಾಯಕಿಯನ್ನಾಗಿ ರಮ್ಯಾ ಕೃಷ್ಣನ್‌ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪಡಯಪ್ಪ (Padayappa), ಪಾತ್ತಲ್ಲಿ (Paattali) ಸಿನಿಮಾ ಬಳಿಕ ಪಂಚತಂತ್ರ ಸಿನಿಮಾದಲ್ಲೂ ರಮ್ಯಾ ಅವರೇ ನಾಯಕಿಯಾದರು. ಹೀಗೆ ರಮ್ಯಾಗೆ ಸಾಲು ಸಾಲು ಸಿನಿಮಾ ಅವಕಾಶ ನೀಡುತ್ತಿದ್ದ ರವಿಕುಮಾರ್‌ ಮೇಲೆ ಅವರ ಆಪ್ತ ವಲಯದಲ್ಲೂ ಒಂದಷ್ಟು ಗುಮಾನಿ ಹರಿದಾಡತೊಡಗಿದವು.

ನಿರ್ದೇಶಕ ಕೆ.ಎಸ್‌ ರವಿಕುಮಾರ್‌ ಮತ್ತು ರಮ್ಯಾ ಕೃಷ್ಣನ್
ನಿರ್ದೇಶಕ ಕೆ.ಎಸ್‌ ರವಿಕುಮಾರ್‌ ಮತ್ತು ರಮ್ಯಾ ಕೃಷ್ಣನ್

ವಿವಾಹಿತ ನಿರ್ದೇಶಕನ ಜತೆ ಸಂಬಂಧ

ಇತ್ತ ರಮ್ಯಾ ಕೃಷ್ಣನ್‌ ಮತ್ತು ರವಿಕುಮಾರ್‌ ನಡುವಿನ ಸಂಬಂಧ ಗಟ್ಟಿಯಾಗತೊಡಗಿತು. ಇದು ನೋಡುಗರ ದೃಷ್ಟಿಯಲ್ಲೂ ಬೇರೆ ಬೇರೆ ರೀತಿಯ ಸ್ವರೂಪ ಪಡೆದುಕೊಂಡಿತು. ಇಬ್ಬರೂ ಪ್ರೀತಿಯಲ್ಲಿದ್ದಾರೆ. ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಗುಮಾನಿಯೂ ಇಂಡಸ್ಟ್ರಿಯಲ್ಲಿ ಜೋರಾಗಿಯೇ ಕೇಳಿಬಂತು. ಈ ನಡುವೆ ಕರ್ಪಗಂ ಎಂಬುವವರ ಜತೆಗೆ ಅದಾಗಲೇ ನಿರ್ದೇಶಕ ರವಿಕುಮಾರ್‌ ಅವರ ವಿವಾಹವಾಗಿತ್ತು. ಈ ಸತ್ಯ ಗೊತ್ತಿದ್ದರೂ, ಇವರ ನಡುವಿನ ಪ್ರೀತಿ ಪ್ರೇಮ ಮುಂದುವರಿದಿತ್ತಂತೆ. ಇಬ್ಬರ ನಡುವಿನ ಪ್ರೀತಿಯೂ ಗಾಢವಾಗತೊಡಗಿತು.

ಸಂಚಲನ ಸೃಷ್ಟಿಸಿದ ರಮ್ಯಾ ಪ್ರಗ್ನೆಂಟ್‌ ವಿಚಾರ!

ಪ್ರೀತಿಯ ಬಳಿಕ ಇಬ್ಬರೂ ದೈಹಿಕವಾಗಿಯೂ ಒಂದಾದರು. ಒಂದು ಸಮಯದಲ್ಲಿ ರಮ್ಯಾ ಕೃಷ್ಣನ್‌ ಗರ್ಭಿಣಿ ಎಂಬ ಪುಕಾರು ಜೋರಾಗಿ ಸದ್ದು ಮಾಡಿತು. ಇತ್ತ ರಮ್ಯಾ ಕೃಷ್ಣನ್‌ ಜತೆ ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸ್ವತಃ ನಿರ್ದೇಶಕ ರವಿಕುಮಾರ್‌ ಪತ್ನಿ ಕರ್ಪಗಂ ಕಡೆಯಿಂದಲೂ ರಮ್ಯಾಗೂ ಎಚ್ಚರಿಕೆ ರವಾನಿಸಿದ್ದರು. ಇದು ರವಿಕುಮಾರ್‌ ಮತ್ತು ಅವರ ಪತ್ನಿ ಕರ್ಪಗಂ ನಡುವಿನ ದಾಂಪತ್ಯದಲ್ಲೂ ಬಿರುಕು ಉಂಟು ಮಾಡಿತ್ತು.

ಗರ್ಭಪಾತಕ್ಕೆ 75 ಲಕ್ಷ ಡಿಮಾಂಡ್‌

ಇದ್ಯಾವುದೂ ಬೇಡವೇ ಬೇಡ ಎಂದು ನಿರ್ಧರಿಸಿ ರಮ್ಯಾ ಕೃಷ್ಣನ್‌ ಜತೆಗಿನ ನಂಟನ್ನು ಕಡಿತಮಾಡಿಕೊಳ್ಳಲು ನಿರ್ಧರಿಸಿದರು ರವಿಕುಮಾರ್. ರಮ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ಅಬಾರ್ಷನ್‌ ಮಾಡಿಸಲು ಮುಂದಾದರು. ಮಗುವನ್ನು ಅಬಾರ್ಷನ್‌ ಮಾಡಿಸಿಕೊಳ್ಳಲು ರಮ್ಯಾಗೆ ಲಕ್ಷ ಲಕ್ಷ ಹಣದ ಆಮೀಷವೊಡ್ಡಿದ್ದರಂತೆ ರವಿಕುಮಾರ್‌. ಬರೋಬ್ಬರಿ 75 ಲಕ್ಷ ಹಣ ನೀಡಿದ್ದರು ಎಂದೂ ಆವತ್ತು ವರದಿಯಾಗಿತ್ತು. ‌ಸ್ವತಃ ರಮ್ಯಾ ಕೃಷ್ಣನ್‌ ಇಷ್ಟೊಂದು ಹಣಕ್ಕೆ ಬೇಡಿಕೆ ಇಟ್ಟಿದ್ದರಾ? ಅಥವಾ ಕೆ.ಎಸ್‌ ರವಿಕುಮಾರ್‌ ಅವರೇ ಹಣ ಕೊಡಲು ಮುಂದಾಗಿದ್ದರಾ ಎಂಬ ವಿಚಾರದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಬಳಿ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿತ್ತು ಈ ಜೋಡಿ . 

IPL_Entry_Point