Kannada News  /  Entertainment  /  Rashmika Mandanna Starrer Goodbye To Release In Cinemas On This Date
ರಶ್ಮಿಕಾ ಮಂದಣ್ಣ ಚೊಚ್ಚಲ ಬಾಲಿವುಡ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ
ರಶ್ಮಿಕಾ ಮಂದಣ್ಣ ಚೊಚ್ಚಲ ಬಾಲಿವುಡ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

Rashmika Mandanna: ರಶ್ಮಿಕಾ ಮಂದಣ್ಣ ಚೊಚ್ಚಲ ಬಾಲಿವುಡ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

23 July 2022, 18:47 ISTHT Kannada Desk
23 July 2022, 18:47 IST

ಸದ್ಯ ಬಾಲಿವುಡ್‌ನಲ್ಲಿಯೇ ಬಿಜಿಯಾಗಿದ್ದರೂ ರಶ್ಮಿಕಾ ಮಂದಣ್ಣ ಅವರ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿಲ್ಲ. ಯಾವಾಗ ಬಿಡುಗಡೆ ಎಂದು ಸ್ವತಃ ಅವರೇ ಕಾದು ಕಾದು ಸುಸ್ತಾಗಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದರೂ, ಈ ವರೆಗೂ ಅವರ ಒಂದೂ ಚಿತ್ರ ತೆರೆಕಂಡಿಲ್ಲ

ಮುಂಬೈ: ಸದ್ಯ ಬಾಲಿವುಡ್‌ನಲ್ಲಿಯೇ ಬಿಜಿಯಾಗಿದ್ದರೂ ರಶ್ಮಿಕಾ ಮಂದಣ್ಣ ಅವರ ಒಂದೇ ಒಂದು ಸಿನಿಮಾ ಬಿಡುಗಡೆ ಆಗಿಲ್ಲ. ಯಾವಾಗ ಬಿಡುಗಡೆ ಎಂದು ಸ್ವತಃ ಅವರೇ ಕಾದು ಕಾದು ಸುಸ್ತಾಗಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದರೂ, ಈ ವರೆಗೂ ಅವರ ಒಂದೂ ಚಿತ್ರ ತೆರೆಕಂಡಿಲ್ಲ. "ಮಿಷನ್‌ ಮಜ್ನು" ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಕೂತಿದ್ದರೂ, ಆ ಚಿತ್ರದಿಂದಲೂ ಯಾವುದೇ ಅಪ್‌ಡೇಟ್‌ ಇಲ್ಲ. ಇದೀಗ ಕೊನೆಗೂ ಆ ಕಾಯುವಿಕೆಗೆ ಉತ್ತರ ಸಿಕ್ಕಿದೆ. ಅಕ್ಟೋಬರ್‌ 7ಕ್ಕೆ ಅಮಿತಾಬ್‌ ಬಚ್ಚನ್‌ ಜತೆಗಿನ "ಗುಡ್‌ ಬೈ" ಸಿನಿಮಾ ಬಿಡುಗಡೆ ಆಗಲಿದೆ.

"ಗುಡ್ ಬೈ" ನಿರ್ಮಾಪಕರು ಶನಿವಾರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅಕ್ಟೋಬರ್ 7 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಇತ್ತ ತಮ್ಮ ಬಾಲಿವುಡ್‌ನ ಚೊಚ್ಚಲ ಚಿತ್ರ "ಗುಡ್ ಬೈ" ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ ಎಂದು ಟ್ವಿಟರ್‌ನಲ್ಲಿ ರಶ್ಮಿಕಾ ಸಹ ತಿಳಿಸಿದ್ದಾರೆ.

ಫ್ಯಾಮಿಲಿ ಸೆಂಟಿಮೆಂಟ್‌ ಮತ್ತು ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಬಾಲಿವುಡ್‌ನ ದಿಗ್ಗಜ ನಟ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಬ್ ಮಗಳಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಸಹ ಮಾಡಿದ್ದರು. ವಿಕಾಸ್ ಬಾಹ್ಲ ನಿರ್ದೇಶನದ ಈ ಚಿತ್ರವನ್ನು ಏಕ್ತಾ ಕಪೂರ್ ಮತ್ತು ಶಿವಾಂಶಿ ಸರ್ಕಾರ್ ನಿರ್ಮಿಸಿದ್ದಾರೆ.

ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ಇನ್ನೇನು ಶೀಘ್ರದಲ್ಲೇ ತೆಲುಗಿನ "ಪುಷ್ಪ 2" ಚಿತ್ರೀಕರಣದಲ್ಲಿಯೂ ಭಾಗವಹಿಸಲಿದ್ದಾರೆ. ಮೊದಲ ಭಾಗದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಡಿ ಗ್ಲಾಮರಸ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಇದೀಗ ಎರಡನೇ ಭಾಗದಲ್ಲಿ ಆ ಪಾತ್ರ ಹೇಗೆ ಮೂಡಿಬರಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. "ಪುಷ್ಪ; ದಿ ರೂಲ್" ಜತೆಗೆ "ಸೀತಾರಾಮಮ್" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ವಿಜಯ್‌ ಜತೆಗೆ "ವರಿಸು" ಚಿತ್ರದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ರಣಬೀರ್‌ ಕಪೂರ್‌ ಜತೆಗಿನ "ಅನಿಮಲ್ʼ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅಬುದಾಬಿಯಲ್ಲಿ ರಶ್ಮಿಕಾ ಮಂದಣ್ಣ

ಸಿನಿಮಾ ಶೂಟಿಂಗ್‌ ಸಲುವಾಗಿಯೇ ದೂರದ ಅಬುದಾಬಿಯಲ್ಲಿ ಇರುವುದಾಗಿ ರಶ್ಮಿಕಾ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದಾರೆ. ಆದರೆ, ಯಾವ ಸಿನಿಮಾ ಸಲುವಾಗಿ ಪ್ರಯಾಣ ಬೆಳೆಸಿದ್ದೇನೆ ಎಂದು ಎಲ್ಲಿಯೂ ಅವರು ಹೇಳಿಕೊಂಡಿಲ್ಲ. "ಪ್ರಯಾಣವನ್ನು ನಾನು ಪ್ರೀತಿಸುತ್ತೇನೆ. ಅದರಲ್ಲೂ ಸಿನಿಮಾ ಸಂಬಂಧಿ ಕೆಲಸದ ನಿಮಿತ್ತ ಯಾವಾಗ ಪ್ರಯಾಣಿಸುತ್ತೇನೋ ಅದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ" ಎಂದು ಕ್ಯಾಪ್ಶನ್‌ ನೀಡಿದ್ದಾರೆ.