ಕನ್ನಡ ಸುದ್ದಿ  /  ಮನರಂಜನೆ  /   Samantha Tweet About Khushi: ವಿಜಯ್‌ ದೇವರಕೊಂಡ ಫ್ಯಾನ್ಸ್‌ ಬಳಿ ಕ್ಷಮೆ ಯಾಚಿಸಿದ ಸಮಂತಾ...ಈ ಬ್ಯೂಟಿ ಮಾಡಿದ ತಪ್ಪಾದ್ರೂ ಏನು?

Samantha Tweet about Khushi: ವಿಜಯ್‌ ದೇವರಕೊಂಡ ಫ್ಯಾನ್ಸ್‌ ಬಳಿ ಕ್ಷಮೆ ಯಾಚಿಸಿದ ಸಮಂತಾ...ಈ ಬ್ಯೂಟಿ ಮಾಡಿದ ತಪ್ಪಾದ್ರೂ ಏನು?

ಸಮಂತಾ ಹಾಲಿವುಡ್‌ ಸೈನ್ಸ್‌ ಫಿಕ್ಷನ್‌ ಸಿಟಾಡೆಲ್‌ನ ಹಿಂದಿ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಈ ಸೀರೀಸ್‌ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಆದರೆ ವಿಜಯ್ ದೇವರಕೊಂಡ ಜೊತೆಗಿನ ಚಿತ್ರಕ್ಕೆ ಸ್ಯಾಮ್ ಡೇಟ್ಸ್ ನೀಡುತ್ತಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ವಿಜಯ್‌ ದೇವರಕೊಂಡ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಸಮಂತಾ
ವಿಜಯ್‌ ದೇವರಕೊಂಡ ಅಭಿಮಾನಿಗಳಿಗೆ ಕ್ಷಮೆ ಕೇಳಿದ ಸಮಂತಾ

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಷ ತಾನು ಮಯೋಸಿಟಿಸ್‌ ಕಾಯಿಲೆಯಿದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಈ ಚೆಲುವೆ ಈಗ ಆರೋಗ್ಯ ಸಮಸ್ಯೆಯಿಂದ ಹೊರ ಬರುತ್ತಿದ್ದಾರೆ. ಇದೇ ಕಾರಣದಿಂದ ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿದ್ದ ಸ್ಯಾಮ್‌ ಈಗ ಮತ್ತೆ ಕೆಲಸಕ್ಕೆ ವಾಪಸಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಮಂತಾ, ವಿಜಯ ದೇವರಕೊಂಡ ಜೊತೆ ಖುಷಿ ಚಿತ್ರವನ್ನು ಒಪ್ಪಿಕೊಂಡಿದ್ದರು. ಆದರೆ ಕಳೆದ ವರ್ಷ ಜೂನ್‌ನಲ್ಲಿ ಚಿತ್ರ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿತ್ತು. ಮತ್ತೆ ಚಿತ್ರೀಕರಣ ಆರಂಭಿಸಬೇಕು ಎಂದುಕೊಳ್ಳುವಷ್ಟರಲ್ಲಿ ಸ್ಯಾಮ್ ಅನಾರೋಗ್ಯಕ್ಕೆ ಒಳಗಾದರು. ಇತ್ತ ವಿಜಯ್‌ ದೇವರಕೊಂಡ 'ಲೈಗರ್‌' ಸೋಲಿನ ನಂತರ ಹೊಸ ಸಿನಿಮಾ ಯಾವುದೂ ತೆರೆ ಕಂಡಿಲ್ಲ. ಹೊಸ ಸಿನಿಮಾವನ್ನು ಕೂಡಾ ಅನೌನ್ಸ್‌ ಮಾಡಿಲ್ಲ. ಅಭಿಮಾನಿಗಳು ಮಾತ್ರ 'ಖುಷಿ' ಸಿನಿಮಾ ಬಗ್ಗೆ ಕೇಳುತ್ತಲೇ ಇದ್ದಾರೆ. ವಿಜಯ್‌ ದೇವರಕೊಂಡ ಅಭಿಮಾನಿಗಳ ಪ್ರಶ್ನೆಗೆ ಸಮಂತಾ ಉತ್ತರಿಸಿದ್ದಾರೆ, ಫ್ಯಾನ್ಸ್‌ಗೆ ಕ್ಷಮೆ ಕೂಡಾ ಕೇಳಿದ್ದಾರೆ.

ಸಮಂತಾ ಹಾಲಿವುಡ್‌ ಸೈನ್ಸ್‌ ಫಿಕ್ಷನ್‌ ಸಿಟಾಡೆಲ್‌ನ ಹಿಂದಿ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಈ ಸೀರೀಸ್‌ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಆದರೆ ವಿಜಯ್ ದೇವರಕೊಂಡ ಜೊತೆಗಿನ ಚಿತ್ರಕ್ಕೆ ಸ್ಯಾಮ್ ಡೇಟ್ಸ್ ನೀಡುತ್ತಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದು ವಿಜಯ್‌ ದೇವರಕೊಂಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಖುಷಿ ಸಿನಿಮಾ ಕಥೆ ಏನು..? ಸಿನಿಮಾ ನಿಂತು ಹೋಯ್ತಾ..? ಎಂದು ಎಂದು ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮಂತಾ, ''ನಾನು ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ಸದ್ಯದಲ್ಲೇ 'ಖುಷಿ' ಸಿನಿಮಾ ಮತ್ತೆ ಶುರುವಾಗಲಿದೆ" ಎಂದಿದ್ದಾರೆ. ಸ್ಯಾಮ್‌ ಉತ್ತರ, ಇಬ್ಬರ ಅಭಿಮಾನಿಗಳಿಗೂ ಖುಷಿ ನೀಡಿದೆ. ಸಿನಿಮಾದ ಬಗ್ಗೆ ಮತ್ತಷ್ಟು ಅಪ್‌ಡೇಟ್‌ ತಿಳಿಯಲು ಫ್ಯಾನ್ಸ್‌ ಕಾಯುತ್ತಿದ್ದಾರೆ.

ಖುಷಿ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ಜಯರಾಮ್, ಸಚಿನ್ ಖೇಡ್ಕರ್, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಖುಷಿ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆ ಆಗಲಿದೆ.

'ಶಾಕುಂತಲಂ' ಬಿಡುಗಡೆಗೆ ಕಾಯುತ್ತಿರುವ ಸಮಂತಾ

ಫೆಬ್ರವರಿ 17 ರಂದು 'ಶಾಕುಂತಲಂ' ಚಿತ್ರ ಬಿಡುಗಡೆಯಾಗಲಿದೆ. ಸದ್ಯ ನಟಿ ಸಮಂತಾ ಸಿನಿಮಾ ಪ್ರಚಾರದಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಗುಣಶೇಖರ್ ನಿರ್ದೇಶನದ ಚಿತ್ರ 'ಶಾಕುಂತಲಂ'ನಲ್ಲಿ ಶಾಕುಂತಲೆ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಭರತನ ಪಾತ್ರದಲ್ಲಿ ನಟಿಸಿದ್ದಾಳೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದುಬೈ ಟ್ರಿಪ್‌ನಲ್ಲಿರುವ ವಿಜಯ್‌ ದೇವರಕೊಂಡ

ಈ ನಡುವೆ ವಿಜಯ್‌ ದೇವರಕೊಂಡ ತಮ್ಮ ತಂದೆ ತಾಯಿ ಜೊತೆ ದುಬೈ ಟ್ರಿಪ್‌ ತೆರಳಿದ್ದಾರೆ. ಆಶ್ಚರ್ಯ ಎಂದರೆ ರಶ್ಮಿಕಾ ಕೂಡಾ ವಿಜಯ್‌ ಫ್ಯಾಮಿಲಿ ಜೊತೆ ತೆರಳಿದ್ದು ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

IPL_Entry_Point