ಕನ್ನಡ ಸುದ್ದಿ  /  Entertainment  /  Sandalwood News Chikkanna S Upadhyaksha Movie Collects 5 Crore 27 Lakhs Rs In 3 Days Upadhyaksha Day 3 Collection Mnk

ಸ್ಟಾರ್‌ ಸಿನಿಮಾ ರೇಂಜ್‌ನಲ್ಲಿ ಕಲೆಕ್ಷನ್‌ ಮಾಡ್ತಿದೆ ಚಿಕ್ಕಣ್ಣನ ‘ಉಪಾಧ್ಯಕ್ಷ’ ಚಿತ್ರ; 3 ದಿನದಲ್ಲಿ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ!

ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಚೊಚ್ಚಲ ಉಪಾಧ್ಯಕ್ಷ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಫಸಲನ್ನೇ ತೆಗೆಯುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಕೋಟಿ ಕೋಟಿ ಮೊತ್ತವನ್ನು ಈ ಸಿನಿಮಾ ಬಾಚಿಕೊಂಡಿದೆ. ಹಾಗಾದರೆ, ಈ ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

Upadhyaksha: ಸ್ಟಾರ್‌ ಸಿನಿಮಾ ರೇಂಜ್‌ನಲ್ಲಿ ಕಲೆಕ್ಷನ್‌ ಮಾಡ್ತಿದೆ ಚಿಕ್ಕಣ್ಣನ ‘ಉಪಾಧ್ಯಕ್ಷ’ ಚಿತ್ರ; 3 ದಿನದಲ್ಲಿ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ!
Upadhyaksha: ಸ್ಟಾರ್‌ ಸಿನಿಮಾ ರೇಂಜ್‌ನಲ್ಲಿ ಕಲೆಕ್ಷನ್‌ ಮಾಡ್ತಿದೆ ಚಿಕ್ಕಣ್ಣನ ‘ಉಪಾಧ್ಯಕ್ಷ’ ಚಿತ್ರ; 3 ದಿನದಲ್ಲಿ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ!

Upadhyaksha Collection: ಈ ವರೆಗೂ ಹಾಸ್ಯ ನಟನಾಗಿಯೇ ಗುರುತಿಸಿಕೊಂಡಿದ್ದ ನಟ ಚಿಕ್ಕಣ್ಣ (Chikkanna), ಉಪಾಧ್ಯಕ್ಷ ಸಿನಿಮಾ ಮೂಲಕ ಮೊದಲ ಸಲ ನಾಯಕನಾಗಿ ನಟಿಸಿದ್ದಾರೆ. ಕಳೆದ ಶುಕ್ರವಾರ (ಜ. 26) ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲ ಕಡೆಯಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡವೂ ಹೇಳಿಕೊಂಡಿದೆ. ಈ ನಡುವೆ ಇದೇ ಸಿನಿಮಾದ ಕಲೆಕ್ಷನ್‌ ವಿಚಾರವೂ ಇದೀಗ ಅಚ್ಚರಿ ಮೂಡಿಸಿದೆ.

ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಉಪಾಧ್ಯಕ್ಷ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಶರಣ್‌ ಅಭಿನಯದ Rambo 2 ಸಿನಿಮಾ ಸೇರಿ ಹಲವು ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಅನಿಲ್‌ ಕುಮಾರ್‌, ಉಪಾಧ್ಯಕ್ಷ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಾಮಿಡಿ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಚಿಕ್ಕಣ್ಣನ ಜತೆಗೆ ಕಿರುತೆರೆ ನಟಿ ಮಲೈಕಾ ವಸುಪಾಲ್‌ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಧ್ಯಕ್ಷ ಶರಣ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

10 ವರ್ಷಗಳ ಹಿಂದೆ ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ ಅಧ್ಯಕ್ಷ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದ ಯಶಸ್ಸಿನ ಬಳಿಕ 10 ವರ್ಷಗಳ ಬಳಿಕ ಆ ಚಿತ್ರದ ಮುಂದುವರಿದ ಭಾಗವಾಗಿ ಉಪಾಧ್ಯಕ್ಷ ಸಿನಿಮಾ ಬಿಡುಗಡೆ ಆಗಿದೆ. ಕಲೆಕ್ಷನ್‌ ವಿಚಾರದಲ್ಲೂ ಉಪಾಧ್ಯಕ್ಷ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್‌ ಬಾಚಿಕೊಂಡಿದ್ದಾನೆ ಉಪಾಧ್ಯಕ್ಷ. ಹಾಗಾದರೆ, ಒಟ್ಟಾರೆ ಕಲೆಕ್ಷನ್ ಎಷ್ಟು, ದಿನವಾರು ಗಳಿಕೆಯ ವಿವರ ಇಲ್ಲಿದೆ.

ಉಪಾಧ್ಯಕ್ಷ ಕಲೆಕ್ಷನ್‌ ವಿವರ

ಚಿತ್ರತಂಡ ಅಧಿಕೃತ ಮಾಹಿತಿಯ ಪ್ರಕಾರ ಉಪಾಧ್ಯಕ್ಷ ಸಿನಿಮಾ ಮೂರು ದಿನಗಳಲ್ಲಿ 5 ಕೋಟಿ 27 ಲಕ್ಷ ಕಲೆಕ್ಷನ್‌ ಮಾಡಿದೆ. ಮೊದಲ ದಿನ 1 ಕೋಟಿ 31 ಲಕ್ಷ, ಎರಡನೇ ದಿನ 1 ಕೋಟಿ 63 ಲಕ್ಷ, ಮೂರನೇ ದಿನವಾದ ಭಾನುವಾರ 2 ಕೋಟಿ 33 ಲಕ್ಷ ಕಲೆಕ್ಷನ್‌ ಮಾಡಿದೆ. ಈ ಮೂಲಕ ಸ್ಟಾರ್‌ ಹೀರೋಗಳ ರೇಂಜಿನಲ್ಲಿ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾ ಗಳಿಕೆಯಲ್ಲಿ ದಾಪುಗಾಲಿಡುತ್ತಿದೆ. ಈಗಾಗಲೇ ಸಿನಿಮಾಕ್ಕೆ ಸಿಕ್ಕಿರುವ ಅಭೂತಪೂರ್ವ ರೆಸ್ಪಾನ್ಸ್‌ ಕಂಡು ರಾಜ್ಯಾದ್ಯಂತ ಯಶಸ್ಸಿನ ಯಾತ್ರೆಯನ್ನೂ ಆರಂಭಿಸಿದೆ.

ಉಪಾಧ್ಯಕ್ಷನನ್ನು ಮೆಚ್ಚಿದ ಯಶ್‌

ಇನ್ನು ಈಗಾಗಲೇ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್‌, ಧ್ರುವ ಸರ್ಜಾ, ಅಭಿಷೇಕ್‌ ಅಂಬರೀಶ್‌, ವಿನೋದ್‌ ಪ್ರಭಾಕರ್ ಸೇರಿ ಇನ್ನೂ ಹಲವು ಸೆಲೆಬ್ರಿಟಿಗಳು ಉಪಾಧ್ಯಕ್ಷ ಸಿನಿಮಾ ಕಣ್ತುಂಬಿಕೊಂಡು, ನಗಾಡಿದ್ದಾರೆ. ಈ ನಡುವೆ ನಟ ಯಶ್‌ ಮತ್ತು ರಾಧಿಕಾ ಸಹ ಚಿಕ್ಕಣ್ಣನ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಇತ್ತೀಚಿಗಷ್ಟೇ ಚಿಕ್ಕಣ್ಣ ಮತ್ತು ಚಿತ್ರದ ನಾಯಕಿ ಮಲೈಕಾ ಇಬ್ಬರನ್ನೂ ಮನೆಗೆ ಕರೆಸಿಕೊಂಡ ಯಶ್‌, ಅವರ ಜತೆ ಕೂತು ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ಸಂಭ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲೂ ಹರಿದಾಡುತ್ತಿವೆ.

IPL_Entry_Point