ಕನ್ನಡ ಸುದ್ದಿ  /  ಮನರಂಜನೆ  /  ಕೊನೆಗೂ ಆ ಟೈಮ್‌ ಬಂದೇ ಬಿಡ್ತು, ಶಾರುಖ್‌ ಖಾನ್‌ ಜತೆ ನಟಿಸಲಿದ್ದಾರಂತೆ ಯಶ್!?‌ ಬಾಲಿವುಡ್‌ ಅಂಗಳದಲ್ಲಿ ಹೀಗೊಂದು ಸುದ್ದಿ

ಕೊನೆಗೂ ಆ ಟೈಮ್‌ ಬಂದೇ ಬಿಡ್ತು, ಶಾರುಖ್‌ ಖಾನ್‌ ಜತೆ ನಟಿಸಲಿದ್ದಾರಂತೆ ಯಶ್!?‌ ಬಾಲಿವುಡ್‌ ಅಂಗಳದಲ್ಲಿ ಹೀಗೊಂದು ಸುದ್ದಿ

ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ನಿರತರಾಗಿರುವ ಯಶ್‌ ಬಗ್ಗೆ ಬಾಲಿವುಡ್‌ನಲ್ಲಿ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ. ಶಾರುಖ್‌ ಖಾನ್‌ ಜತೆ ಯಶ್‌ ಸಿನಿಮಾ ಮಾಡ್ತಾರಂತೆ. ಒಳ್ಳೆ ಕಥೆ ಸಿಕ್ಕರೆ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊನೆಗೂ ಆ ಟೈಮ್‌ ಬಂದೇ ಬಿಡ್ತು, ಶಾರುಖ್‌ ಖಾನ್‌ ಜತೆ ನಟಿಸಲಿದ್ದಾರಂತೆ ಯಶ್!?‌ ಬಾಲಿವುಡ್‌ ಅಂಗಳದಲ್ಲಿ ಹೀಗೊಂದು ಸುದ್ದಿ
ಕೊನೆಗೂ ಆ ಟೈಮ್‌ ಬಂದೇ ಬಿಡ್ತು, ಶಾರುಖ್‌ ಖಾನ್‌ ಜತೆ ನಟಿಸಲಿದ್ದಾರಂತೆ ಯಶ್!?‌ ಬಾಲಿವುಡ್‌ ಅಂಗಳದಲ್ಲಿ ಹೀಗೊಂದು ಸುದ್ದಿ

Yash: ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಕಳೆದ ತಿಂಗಳ ಜನವರಿ 6ರಂದು ಯಶ್‌ ಬರ್ತ್‌ಡೇ ನಿಮಿತ್ತ ಟಾಕ್ಸಿಕ್‌ ಸಿನಿಮಾದ ಶೀರ್ಷಿಕೆ ರಿವೀಲ್‌ ಆಗಿದೆ. ಕನ್ನಡದ ಜತೆಗೆ ಭಾರತದ ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಚ್ಚರಿಯ ವಿಚಾರ ಏನೆಂದರೆ, ಇಂಗ್ಲೀಷ್‌ನಲ್ಲೂ ಈ ಸಿನಿಮಾ ರಿಲೀಸ್‌ ಆಗಿಲಿದೆ. ಈ ನಡುವೆ, ಟಾಕ್ಸಿಕ್‌ ಹೊರತುಪಡಿಸಿ ಯಶ್‌ ಅವರ ಬೇರಾವ ಸಿನಿಮಾ ಘೋಷಣೆ ಆಗಿಲ್ಲ. ಆದರೆ, ಕೆಲ ಬಾಲಿವುಡ್‌ ಚಿತ್ರಗಳಲ್ಲಿ ಯಶ್‌ ನಟಿಸಲಿದ್ದಾರೆ ಎಂಬ ಪುಕಾರು ಹರಿದಾಡುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

ಯಶ್ ಈಗಾಗಲೇ ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆಯಾದರೂ, ಅಧಿಕೃತವಾಗಿಲ್ಲ. ಈ ಚಿತ್ರದಲ್ಲಿ ರಾವಣನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಇದೀಗ ಹೊಸ ಸುದ್ದಿ ಏನೆಂದರೆ, ಮತ್ತೊಂದು ಬಾಲಿವುಡ್‌ ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಲಿದ್ದಾರೆ ಎಂಬ ವದಂತಿ ಬಿಟೌನ್‌ ಅಂಗಳದಲ್ಲಿ ಗುಲ್ಲೆಬ್ಬಿಸಿದೆ. ಶಾರುಖ್‌ ಖಾನ್‌ ಜತೆಗೂ ಒಂದು ಸಿನಿಮಾದಲ್ಲಿ ನಟಿಸುವ ವಿಚಾರವೂ ಇದೀಗ ಮುನ್ನೆಲೆಗೆ ಬಂದಿದೆ.

ಕೆಜಿಎಫ್‌ ಸಿನಿಮಾ ಮೂಲಕ ತಮ್ಮ ಖ್ಯಾತಿಯನ್ನು ಹಿರಿದಾಗಿಸಿಕೊಂಡ ಯಶ್‌, ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಡುವೆ ಹಿಂದಿ ಚಿತ್ರೋದ್ಯಮದಲ್ಲೂ ನೆಲೆಕಂಡುಕೊಳ್ಳಲು ಬಯಸಿದ್ದಾರಂತೆ. ಈಗಾಗಲೇ ಶಾರುಖ್‌ ಖಾನ್‌ ಮತ್ತು ಯಶ್‌ ಇಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿದ್ದಾರಂತೆ. ಅದರಂತೆ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಈ ಜೋಡಿ ಕಾಯುತ್ತಿದೆ. ಅದು ಸಿಗುತ್ತಿದ್ದಂತೆ, ಸಿನಿಮಾ ಶುರುವಾಗಲಿದೆ" ಎಂದು ಮುಂಬೈ ಮೂಲಗಳು ವರದಿ ಮಾಡಿವೆ.

ಮತ್ತೊಂದು ಕಡೆ ಇದೇ ಸುದ್ದಿಯನ್ನು ಯಶ್‌ ಆಪ್ತ ಮೂಲಗಳು ಅಲ್ಲಗೆಳೆದಿವೆ. ಸದ್ಯಕ್ಕೆ ಯಶ್‌ ಅವರು ಕೈಯಲ್ಲಿರುವ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ" ಎಂದಿದೆ. ಈ ನಡುವೆ ರಾಮಾಯಣ ಸಿನಿಮಾ ವಿಚಾರವನ್ನು ನೋಡುವುದಾದರೆ, ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟ ಯಶ್‌ 150 ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಟಾಕ್ಸಿಕ್‌ ಕೆಲಸಗಳಲ್ಲಿ ಯಶ್‌ ಬಿಜಿ

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌, ಟಾಕ್ಸಿಕ್‌ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಟಾಕ್ಸಿಕ್‌ ಸಿನಿಮಾದ ಶೀರ್ಷಿಕೆ ಝಲಕ್‌ ಬಿಡುಗಡೆ ಆಗಿದ್ದು, ಭೂಗತ ಜಗತ್ತಿನ ಜತೆಗೆ ಮಾಫಿಯಾವೊಂದರ ಸುತ್ತ ಇಡೀ ಸಿನಿಮಾ ಸುತ್ತಲಿದೆ. ಅಂತಾರಾಷ್ಟ್ರೀಯ ಕನೆಕ್ಷನ್‌ ಸಹ ಈ ಸಿನಿಮಾಕ್ಕಿರಲಿದೆ. ಚಿತ್ರದ ಬಹುತೇಕ ಶೂಟಿಂಗ್‌ ಗೋವಾದಲ್ಲಿ ನಡೆಯಲಿದೆ ಎಂಬ ಮಾಹಿತಿಯೂ ಸಿಕ್ಕಿದ್ದು, ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ. ವಿಶೇಷವಾಗಿ ಇಂಗ್ಲಿಷ್‌ನಲ್ಲಿಯೂ ಈ ಸಿನಿಮಾ ತೆರೆ ಕಾಣಲಿದೆ ಎಂದೇ ಹೇಳಲಾಗುತ್ತಿದೆ.

IPL_Entry_Point