Radhika Kumaraswamy: ಏಳು ಭಾಷೆಗಳಲ್ಲಿ ತಯಾರಾಗ್ತಿದೆ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅಜಾಗ್ರತ; ಹೈದರಾಬಾದ್‌ನಲ್ಲಿ ನೆರವೇರಿದ ಮುಹೂರ್ತ-sandalwood news radhika kumaraswamy ajagratha movie launched in telangana hyderabad raviraj production ajagratha movie r ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Radhika Kumaraswamy: ಏಳು ಭಾಷೆಗಳಲ್ಲಿ ತಯಾರಾಗ್ತಿದೆ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅಜಾಗ್ರತ; ಹೈದರಾಬಾದ್‌ನಲ್ಲಿ ನೆರವೇರಿದ ಮುಹೂರ್ತ

Radhika Kumaraswamy: ಏಳು ಭಾಷೆಗಳಲ್ಲಿ ತಯಾರಾಗ್ತಿದೆ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅಜಾಗ್ರತ; ಹೈದರಾಬಾದ್‌ನಲ್ಲಿ ನೆರವೇರಿದ ಮುಹೂರ್ತ

ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಅಜಾಗ್ರತ ಸಿನಿಮಾ ನಿರ್ಮಾಣವಾಗುತ್ತಿದೆ. ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ
ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ

ಬಹಳ ದಿನಗಳ ಗ್ಯಾಪ್‌ ನಂತರ ರಾಧಿಕಾ ಕುಮಾರಸ್ವಾಮಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ನಾಯಕಿಯಾಗಿ ನಟಿಸುತ್ತಿರುವ 'ಅಜಾಗ್ರತ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ.

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ, 'ಅಜಾಗ್ರತ' ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮರಾ ಚಾಲನೆ ಮಾಡಿದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಬಾಲಿವುಡ್‌ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅಜಾಗ್ರತ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಾವ್ ರಮೇಶ್‌, ಸುನಿಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಅಜಾಗ್ರತ ಸಿನಿಮಾ ನಿರ್ಮಾಣವಾಗುತ್ತಿದೆ. ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಂ. ಶಶಿಧರ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಅಜಾಗ್ರತ ಚಿತ್ರಕ್ಕೆ ಇದೆ. ಡಬ್ಬಿಂಗ್‌ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯುತ್ತಿರುವುದು ಈ ಚಿತ್ರದ ಸ್ಪೆಷಲ್.‌

 'ಅಜಾಗ್ರತ' ಸಿನಿಮಾ ಮುಹೂರ್ತ
'ಅಜಾಗ್ರತ' ಸಿನಿಮಾ ಮುಹೂರ್ತ

ಮತ್ತಷ್ಟು ಮನರಂಜನೆ ಸುದ್ದಿಗಳು

ರಸ್ತೆ ಬದಿಯಲ್ಲೇ ಊಟ ನಿದ್ರೆ; ನೇಪಾಳ ಭೂತಾನ್‌ ನಂತರ ಮತ್ತೆ ಬೈಕ್‌ನಲ್ಲಿ ವರ್ಲ್ಡ್‌ ಟೂರ್‌ ಮಾಡಲು ನಟ ಅಜಿತ್‌ ಪ್ಲ್ಯಾನ್‌

ತಮಿಳು ನಟ ಅಜಿತ್‌ ಕುಮಾರ್‌ ಸಿನಿಮಾ ನಟ ಆಗಿ ಮಾತ್ರವಲ್ಲದೆ ಸ್ಪೋರ್ಟ್ಸ್‌ ಮ್ಯಾನ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸ್ವಲ್ಪ ಬಿಡುವು ದೊರೆತರೂ ಫ್ಯಾಮಿಲಿ ಜೊತೆ ಸಮಯ ಕಳೆಯುವುದರ ಜೊತೆಗೆ ಬೈಕ್‌ ರೇಸ್‌ ಕೂಡಾ ಹೋಗಿ ಬರುತ್ತಾರೆ. ಬೈಕ್‌ ರೇಸ್‌ ಫೋಟೋಗಳನ್ನು ಅಜಿತ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಆಗ್ಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಜಿತ್‌ ಅವರ ಬೈಕ್‌ ಕ್ರೇಜ್‌ ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಟ ಅಜಿತ್‌ ಫೋಟೋಗಳನ್ನು ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ಒಂದು ಕಾಲದಲ್ಲಿ ಬಾಲಿವುಡ್‌ ಖ್ಯಾತ ನಟಿ ಈಗ ಬೌದ್ಧ ಸನ್ಯಾಸಿನಿ;ಭೂತ್‌ ಚಿತ್ರದ ನಟಿ ಬರ್ಖಾ ಮದನ್‌ ಈ ನಿರ್ಧಾರಕ್ಕೆ ಬಂದಿದ್ದೇಕೆ

ಜೀವನದಲ್ಲಿ ಕಷ್ಟ ಸುಖ ನೋವು ನಲಿವುಗಳನ್ನು ನೋಡಿದ ಅನೇಕರು ನಂತರ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಅನೇಕ ಉದಾಹರಣೆಗಳಿವೆ. ಬಣ್ಣದ ಲೋಕದಲ್ಲಿ ಹೆಸರು ಮಾಡಿ ಕೊನೆಗೆ ಎಲ್ಲವನ್ನೂ ತ್ಯಜಿಸಿ ಬೌದ್ಧ ಸನ್ಯಾಸಿನಿ ಆದ ಬರ್ಖಾ ಮದನ್‌ ಎಂಬ ಯುವತಿಯ ಕಥೆ ಇಲ್ಲಿದೆ. ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ ಬರ್ಖಾ ಮದನ್‌, ಇದ್ದಕ್ಕಿದ್ದಂತೆ ಬಣ್ಣದ ಬದುಕು, ಪಾಶ್‌ ಜೀವನವನ್ನು ತ್ಯಾಗ ಮಾಡಿ 2012ರಲ್ಲಿ ಟಿಬೆಟ್‌ ಸೆರಾಜೆನ್‌ ಮಠದಲ್ಲಿ ಸನ್ಯಾಸತ್ವ ಸ್ವೀಕರಿಸಿದರು.ಬರ್ಕಾ ಮದನ್‌ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

mysore-dasara_Entry_Point