ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೀತಾ ನವಮಿ 2024: ಜಾನಕಿ ಜಯಂತಿ ಯಾವಾಗ, ಸೀತಾ ನವಮಿ ದಿನಾಂಕ, ಮಹತ್ವ, ಪೂಜಾ ವಿಧಾನ ವಿವರ

ಸೀತಾ ನವಮಿ 2024: ಜಾನಕಿ ಜಯಂತಿ ಯಾವಾಗ, ಸೀತಾ ನವಮಿ ದಿನಾಂಕ, ಮಹತ್ವ, ಪೂಜಾ ವಿಧಾನ ವಿವರ

Sita navami 2024 date: ಶ್ರೀರಾಮ ಚಂದ್ರ ದೇವರ ಪತ್ನಿ ಸೀತೆ ಜನಿಸಿದ ದಿನವನ್ನು ಸೀತಾ ನವಮಿ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಜಾನಕಿ ಜನನವಾದ ಈ ದಿನದಂದು ಸೀತಾ ಮಾತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವರ್ಷ ಸೀತಾ ನವಮಿ ಯಾವಾಗ? ಮಹತ್ವವೇನು? ಇಲ್ಲಿದೆ ವಿವರ.

ಸೀತಾ ನವಮಿ 2024: ಜಾನಕಿ ಜಯಂತಿ ಯಾವಾಗ, ಸೀತಾ ನವಮಿ ದಿನಾಂಕ, ಮಹತ್ವ, ಪೂಜಾ ವಿಧಾನ ವಿವರ
ಸೀತಾ ನವಮಿ 2024: ಜಾನಕಿ ಜಯಂತಿ ಯಾವಾಗ, ಸೀತಾ ನವಮಿ ದಿನಾಂಕ, ಮಹತ್ವ, ಪೂಜಾ ವಿಧಾನ ವಿವರ

Sita navami 2024: ಪ್ರತಿವರ್ಷ ವೈಶಾಕ ಮಾಸದ ಶುಕ್ಲಪಕ್ಷದ ನವಮಿಯಂದು (ಒಂಬತ್ತನೇ ದಿನ) ಸೀತಾ ನವಮಿ ಆರಿಸಲಾಗುತ್ತದೆ. ಜನಕ ಮಹಾರಾಜನಿಗೆ ಸೀತಾ ಮಾತೆ ದೊರಕಿದ ದಿನವಿದು. ಈ ದಿನದಂದು ಸೀತಾ ಮಾತೆಯನ್ನು ಪೂಜಿಸಿದರೆ ಸೌಭಾಗ್ಯ ದೊರಕುತ್ತದೆ. ಸೀತಾ ನವಮಿಯಂದು ಮುತ್ತೈದೆಯರು ಸೀತಾ ಅಥವಾ ಜಾನಕಿ ದೇವಿಯನ್ನು ಪೂಜಿಸಬೇಕು. ಸೀತಾ ಮಾತೆಯು ತನ್ನ ಪತಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ರಾಮನಿಗೆ ಎಂತಹ ಸಂಕಷ್ಟದ ಸಮಯ ಬಂದಾಗಲೂ ಜತೆಗಿದ್ದ ಮಾತೆ ಇವರು. ಮೊದಲಿಗೆ ಈ ವರ್ಷ ಸೀತಾ ನವಮಿ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳೋಣ.

2024 ಸೀತಾ ನವಮಿ ದಿನಾಂಕ ಮತ್ತು ಮಹೂರ್ತ

ಸೀತಾ ನವಮಿ ದಿನಾಂಕ: ಮೇ 16, 2024

ಸೀತಾ ನವಮಿ ಮಹೂರ್ತ: ಬೆಳಗ್ಗೆ 11: 04 ಗಂಟೆಯಿಂದ ಮಧ್ಯಾಹ್ನ 1: 34 ಗಂಟೆಯವರೆಗೆ

ಸೀತಾ ನವಮಿ ಅವಧಿ: 2 ಗಂಟೆ 30 ನಿಮಿಷಗಳು

ರಾಮ ನವಮಿ ಯಾವಾಗ: ಏಪ್ರಿಲ್‌ 17, 2024

ಸೀತಾ ನವಮಿ ಮಧ್ಯಾಹ್ನದ ಮಹೂರ್ತ: 12: 19 ಗಂಟೆ (ಅಪರಾಹ್ನ)

ನವಮಿ ತಿಥಿ ಆರಂಭ: ಬೆಳಗ್ಗೆ 6.22ಗಂಟೆ, ಮೇ 16, 2024

ಸೀತಾ ನವಮಿ ಮುಕ್ತಾಯ: ಮೇ 17, ಬೆಳಗ್ಗೆ 8.48 ಗಂಟೆ.

ಸೀತಾ ನವಮಿ ಪೂಜೆ ಹೇಗೆ?

ಮುತ್ತೈದೆಯರು ಸೀತಾ ನವಮಿಯನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಬೇಕು. ಅಂದು ಬೆಳಗ್ಗೆ ಬೇಗ ಎದ್ದು ಸೀತಾ ನವಮಿ ವ್ರತ ಕೈಗೊಳ್ಳುವಂತಹ ಸಂಕಲ್ಪ ಮಾಡಬೇಕು. ಮನೆಯಲ್ಲಿರುವ ಸೀತಾ ರಾಮನ ಮೂರ್ತಿ, ಫೋಟೋ ಕ್ಲೀನ್‌ ಮಾಡಿ, ಜಳಕ ಪೂರೈಸಿ ಪೂಜೆ ಮಾಡಬೇಕು. ದೇವಿಗೆ ಪೂಜೆ ಮಾಡಿದ ಬಳಿಕ ಸಿಹಿ ನೈವೇದ್ಯ ಹಂಚಬೇಕು. ಮುತ್ತೈದೆಯರನ್ನು ಕರೆದು ಸತ್ಕರಿಸಬೇಕು.

ರಾಮ ನವಮಿ ಮತ್ತು ಸೀತಾ ನವಮಿ

ರಾಮ ನವಮಿ ಮತ್ತು ಸೀತಾ ನವಮಿಗೆ ಸಂಬಂಧಪಟ್ಟಂತೆ ಆಸಕ್ತಿದಾಯಕ ಅಂಶವೊಂದಿದೆ. ಇಬ್ಬರ ಹುಟ್ಟುಹಬ್ಬ ಒಂದೇ ತಿಥಿಯಲ್ಲಿ (ನವಮಿಯಲ್ಲಿ) ಬರುತ್ತವೆ. ಚೈತ್ರ ತಿಂಗಳ (ಏಪ್ರಿಲ್‌-ಮೇ) ನವಮಿಯಂದು ಸೀತೆ ಮತ್ತು ರಾಮ ನವಮಿ ಬರುತ್ತದೆ.

ಸೀತೆಯ ಜನನ ಕಥೆಗಳು

ಸೀತೆಯ ಜನನದ ಕುರಿತು ಹಲವು ಕಥೆಗಳು ಇವೆ. ಮಿಥಿಲಾ ರಾಜ ಜನಕನ ಮಗಳು. ಹೀಗಾಗಿ ಇವಳಿಗೆ ಜಾನಕಿ ಎಂದು ಹೆಸರು. ಈಕೆಯ ಕುರಿತು ವಾಲ್ಮೀಕಿ ರಾಮಾಯಣದಲ್ಲಿ ಭೂಮಿಯ ಪುತ್ರಿ ಎಂದು ಹೇಳಲಾಗಿದೆ. ಜನಕನು ಉಳುಮೆ ಮಾಡುವ ಸಮಯದಲ್ಲಿ ಭೂಮಿಯಲ್ಲಿ ಮಗುವೊಂದನ್ನು ನೋಡಿದನು. ಆ ಮಗುವಿಗೆ ಜಾನಕಿ ಎಂದು ಹೆಸರಿಟ್ಟನು. ಅದ್ಭುತ ರಾಮಾಯಣದ ಪ್ರಕಾರ ಈಕೆ ರಾವಣನ ಮಗಳು. ಈಕೆ ಭೂಮಿಯ ಮಗಳು, ಪೃಥ್ವಿಯ ಮಗಳು ಎಂಬ ಕಥೆಗಳೂ ಇವೆ.