ಕನ್ನಡ ಸುದ್ದಿ  /  ಮನರಂಜನೆ  /  Guru Shishyaru Ott Release: ಒಟಿಟಿಗೆ ಬರ್ತಿದ್ದಾರೆ ‘ಗುರು ಶಿಷ್ಯರು’; ಇಲ್ಲಿದೆ ದಿನಾಂಕ, ಸ್ಟ್ರೀಮಿಂಗ್‌ ವೇದಿಕೆಯ ವಿವರ

Guru Shishyaru OTT Release: ಒಟಿಟಿಗೆ ಬರ್ತಿದ್ದಾರೆ ‘ಗುರು ಶಿಷ್ಯರು’; ಇಲ್ಲಿದೆ ದಿನಾಂಕ, ಸ್ಟ್ರೀಮಿಂಗ್‌ ವೇದಿಕೆಯ ವಿವರ

ಚಿತ್ರಮಂದಿರದಲ್ಲಿ ಪ್ರೇಕ್ಷಕ ಮಹಾಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಸೂಪರ್ ಹಿಟ್ ಆಗಿದ್ದ ಈ ಚಿತ್ರ ನವೆಂಬರ್ 11ರಿಂದ ಜೀ 5 ಒಟಿಟಿಯಲ್ಲಿ ಲಭ್ಯವಿರಲಿದೆ.

ಒಟಿಟಿಗೆ ಬರ್ತಿದ್ದಾರೆ ‘ಗುರು ಶಿಷ್ಯರು’; ಇಲ್ಲಿದೆ ದಿನಾಂಕ, ಸ್ಟ್ರೀಮಿಂಗ್‌ ವೇದಿಕೆಯ ವಿವರ
ಒಟಿಟಿಗೆ ಬರ್ತಿದ್ದಾರೆ ‘ಗುರು ಶಿಷ್ಯರು’; ಇಲ್ಲಿದೆ ದಿನಾಂಕ, ಸ್ಟ್ರೀಮಿಂಗ್‌ ವೇದಿಕೆಯ ವಿವರ

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್, ನಿಶ್ವಿಕಾ ನಾಯ್ಡು ಅಭಿನಯದ ‘ಗುರು ಶಿಷ್ಯರು’ ಸಿನಿಮಾ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ಈ ಪ್ರಯುಕ್ತ ಸ್ಪೋರ್ಟ್ಸ್ ಡ್ರಾಮಾ ಕುರಿತಾದ ಗುರು ಶಿಷ್ಯರು ಸಿನಿಮಾವನ್ನು ನವೆಂಬರ್ 11ರಂದು ಜೀ 5ನಲ್ಲಿ ಬಿಡುಗಡೆ ಮಾಡಲಾಗ್ತಿದೆ.

ಟ್ರೆಂಡಿಂಗ್​ ಸುದ್ದಿ

ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆಕಂಡ ಈ ಸಿನಿಮಾ ಖೋ ಖೋ ಆಟದ ಸುತ್ತ ಹೆಣೆಯಲಾದ ಕಥಾಹಂದರ ಒಳಗೊಂಡಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕ ಮಹಾಪ್ರಭುಗಳಿಂದ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡು ಸೂಪರ್ ಹಿಟ್ ಆಗಿದ್ದ ಈ ಚಿತ್ರ ನವೆಂಬರ್ 11ರಿಂದ ಜೀ 5 ಒಟಿಟಿಯಲ್ಲಿ ಲಭ್ಯವಿರಲಿದೆ.

ಸೆಪ್ಟೆಂಬರ್ 2ರಂದು ಬಿಡುಗಡೆಯಾದ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಕೇವಲ 24ಗಂಟೆಯಲ್ಲೇ 500 ಮಿಲಿಯನ್ ಸ್ಟ್ರೀಮಿಂಗ್ ಕಂಡು ದಾಖಲೆ ಸೃಷ್ಟಿಸಿತ್ತು. ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾದ ‘ಗಾಳಿಪಟ-2’ ಸಿನಿಮಾ ಕೂಡ 48ಗಂಟೆಯಲ್ಲಿ 10 ಕೋಟಿ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಹೀಗೆ ಬ್ಯಾಕ್ ಟು ಬ್ಯಾಕ್ ಉತ್ತಮ ಕಂಟೆಂಟ್ ವುಳ್ಳ ಸೂಪರ್ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ಜೀ 5ನಲ್ಲಿ ಇದೀಗ 'ಗುರು ಶಿಷ್ಯರು' ಸಿನಿಮಾ ಬಿಡುಗಡೆಯಾಗುತ್ತಿದೆ.

ಗ್ರಾಮೀಣ ಕರ್ನಾಟಕದ ಪುಟ್ಟ ಊರೊಂದರಲ್ಲಿ ನಡೆಯುವ ಈ ಕಥೆಯಲ್ಲಿ ಖೋಖೋ ಕ್ರೀಡೆಯು ಪ್ರಮುಖ ಪಾತ್ರವಹಿಸಲಿದ್ದು, ಶರಣ್ ಶಿಕ್ಷಕರಾಗಿ ಅಭಿನಯಿಸಿದ್ದಾರೆ. ಅವರೊಂದಿಗೆ ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್, ಅಪೂರ್ವ ಕಾಸರವಳ್ಳಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶರಣ್ ಗುರುವಾಗಿ ನಟಿಸಿದರೆ, ಅವರಿಗೆ ಶಿಷ್ಯಂದಿರಾಗಿ ಅವರ ಮಗ ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷತ್ ನಟಿಸಿದ್ದಾರೆ.

‘ಗುರು ಶಿಷ್ಯರು’ ಚಿತ್ರವು ಶರಣ್ ನಿರ್ಮಾಣದ ಮೂರನೆಯ ಚಿತ್ರವಾಗಿದ್ದು, ನಟ-ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ ಮೊದಲ ಚಿತ್ರವಾಗಿದೆ. ನಿರ್ಮಾಣದ ಜೊತೆಗೆ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿಯೂ ತರುಣ್ ಕೆಲಸ ಮಾಡಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ ‘ಜೆಂಟಲ್‌ಮೆನ್’ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಹಂಪಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಮಾಸ್ತಿ ಮಂಜು ಅವರ ಸಂಭಾಷಣೆ, ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ‘ಗುರು ಶಿಷ್ಯರು’ ಚಿತ್ರವು ಸೆ. 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ ಸಂಸ್ಥೆಗಳಡಿ ಜಂಟಿಯಾಗಿ ನಿರ್ಮಿಸಲಾಗಿದೆ.

IPL_Entry_Point