ಕಾಂತಾರದ ಕಂಬಳ ಕೋಣ ಬಳಸೋಣ ಅಲ? ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರದ ಕಂಬಳ ಕೋಣ ಬಳಸೋಣ ಅಲ? ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ

ಕಾಂತಾರದ ಕಂಬಳ ಕೋಣ ಬಳಸೋಣ ಅಲ? ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ

ಕಾಂತಾರ ಸಿನಿಮಾದ ಮೂಲಕ ದೇಶ-ವಿದೇಶದ ಸಿನಿಪ್ರಿಯರ ಗಮನ ಸೆಳೆದ ರಿಷಬ್‌ ಶೆಟ್ಟಿ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ಹೊಸ ಅಧ್ಯಾಯದ ಪ್ರಮೋಷನ್‌ಗಾಗಿ ಕಾಂತಾರ ಸಿನಿಮಾದಲ್ಲಿ ಬಳಸಿದ್ದ ಕೋಣವನ್ನು ಬಳಸಿರುವ ಕುರಿತು ಮಾತನಾಡಿದ್ದಾರೆ.

ಕಾಂತಾರದ ಕಂಬಳ ಕೋಣ ಬಳಸೋಣ ಅಲ? ಆರ್‌ಸಿಬಿ ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ
ಕಾಂತಾರದ ಕಂಬಳ ಕೋಣ ಬಳಸೋಣ ಅಲ? ಆರ್‌ಸಿಬಿ ಹೊಸ ಅಧ್ಯಾಯದ ಕುರಿತು ರಿಷಬ್‌ ಶೆಟ್ಟಿ ಪ್ರತಿಕ್ರಿಯೆ

ಬೆಂಗಳೂರು: ಆರ್‌ಸಿಬಿ-ಸಿಎಸ್‌ಕೆ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಗೆಲುವಿನ ಸಂಭ್ರಮ ಇನ್ನೂ ಮರೆಯಾಗಿಲ್ಲ. ಕನ್ನಡಿಗರು ಇನ್ನೂ ಆರ್‌ಸಿಬಿ ಗೆದ್ದ ಗುಂಗಿನಲ್ಲೇ ಇದ್ದಾರೆ. ಆರ್‌ಸಿಬಿ ಪಂದ್ಯ ನಡೆಯುವ ಸಮಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ರಿಷಬ್‌ ಶೆಟ್ಟಿ ಸಂದರ್ಶನ ನೀಡಿದ್ದರು. ಈ ಸಮಯದಲ್ಲಿ ತನ್ನ ಕ್ರಿಕೆಟ್‌ ಕ್ರೇಜ್‌ ಮತ್ತು ಇತರೆ ವಿಷಯಗಳ ಕುರಿತು ಮಾತನಾಡಿದ್ದಾರೆ. ವಿಶೇಷವಾಗಿ, ಆರ್‌ಸಿಬಿ ಹೊಸ ಅಧ್ಯಾಯಕ್ಕೆ ಕಂಬಳದ ಕೋಣವನ್ನು ಬಳಸಿರುವ ಕುರಿತೂ ಮಾತನಾಡಿದ್ದಾರೆ.

ಸ್ಟೇಡಿಯಂನಲ್ಲಿ ಮ್ಯಾಚ್‌ ನೋಡೋದು ಇದೇ ಮೊದಲು

ವಿಶೇಷವೆಂದರೆ, ರಿಷಬ್‌ ಶೆಟ್ಟಿ ಅವರು ಸ್ಟೇಡಿಯಂನಲ್ಲಿ ಮ್ಯಾಚ್‌ ನೋಡುತ್ತಿರುವುದು ಇದೇ ಮೊದಲೆಂದು ಹೇಳಿದ್ದಾರೆ. ಈ ಮ್ಯಾಚ್‌ಗೆ ಆಗಮಿಸಿರುವುದು ತುಂಬಾ ಖುಷಿಯಾಗುತ್ತಿದೆ. ಸ್ಟೇಡಿಯಂನಲ್ಲಿ ಕ್ರಿಕೆಟ್‌ ನೋಡುತ್ತಿವುದು ಇದೇ ಮೊದಲು. ಆರ್‌ಸಿಬಿ ಪ್ಲೇ ಆಪ್‌ಗೆ ಹೋಗಬೇಕೆಂದು ಆಸೆಯಿದೆ. ಆರಂಭದಿಂದಲೂ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿದ್ದೆ. ಮೊದಲಿನಿಂದಲೂ ಕ್ರಿಕೆಟ್‌ ಅಂದರೆ ಇಷ್ಟ. ನಮ್ಮ ಸಸರ್ಕಲ್‌ನಲ್ಲೂ "ಆರ್‌ಸಿಬಿ ಆರ್‌ಸಿಬಿ" ಎಂಬ ಹೋರಾಟ ನಡೆಯುತ್ತ ಇತ್ತು. ಕ್ರಿಕೆಟ್‌ ಆಟವೆಂದರೆ ನನಗೆ ಇಷ್ಟ.. ಬ್ಯಾಟಿಂಗ್‌ ಮಾಡುವುದು ತುಂಬಾ ಇಷ್ಟ" ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಆರ್‌ಸಿಬಿ ಹೊಸ ಅಧ್ಯಾಯಕ್ಕೆ ಕಾಂತಾರ ಕಂಬಳ ಟೀಮ್‌

ಆರ್‌ಸಿಬಿ ಹೆಸರನ್ನು ಬ್ಯಾಂಗಲೂರು ಬದಲು ಬೆಂಗಳೂರು ಎಂದು ಬದಲಾಯಿಸಿದ ಸಂದರ್ಭದಲ್ಲಿ ವಿಡಿಯೋ ಮಾಡುವಂತೆ ಕಾಲ್‌ ಬಂದಿತ್ತು. ಡ್ಯಾನಿಶ್‌ ಸೇಠ್‌ ಕೂಡ ಕಾಲ್‌ನಲ್ಲಿದ್ದರು. ನನಗೆ ಅದು ನಾರ್ಮಲ್‌ ಎನಿಸಿತ್ತು. "ಇದರ ಬದಲು ಕಂಬಳದ ಕೋಣ ಬಳಸೋಣ ಅಲ" ಎಂದು ಐಡಿಯಾ ನೀಡಿದೆ. ಹೊಂಬಾಳೆ ಸಂಸ್ಥೆಯ ನಿರ್ಮಾಪಕರೂ ಅಲ್ಲಿದ್ದರು. ಅದರ ಪರಿಣಾಮವಾಗಿ ವಿಭಿನ್ನವಾದ ಪ್ರಮೋ ಮೂಡಿ ಬಂತು. ಕಾಂತಾರಕ್ಕೆ ಯೂಸ್‌ ಮಾಡಿದ ಕಂಬಳದ ಟೀಮ್‌ನವರಿಗೆ ಹೇಳಿ ಕೋಣ ಎಲ್ಲಾ ಅರೆಂಜ್‌ ಮಾಡಿದೆವು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಐಡಿಯಾನ ಅಲ್ಲಿ ಶೂಟ್‌ ಮಾಡಿದ್ವಿ. ನಮಗೂ ಅದು ತುಂಬಾ ಇಂಟ್ರೆಸ್ಟಿಂಗ್‌ ಅನಿಸ್ತು. ಇಷ್ಟು ವರ್ಷ ಆರ್‌ಸಿಬಿ ಫ್ಯಾನ್‌ ಆಗಿದ್ದವರು ಈ ವರ್ಷ ಪ್ರಮೋಷನ್‌ ಭಾಗವಾಗಿರುವುದಕ್ಕೆ ಖುಷಿಯಾಯ್ತು ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಕ್ರಿಸ್‌ಗೇಲ್‌ ಅವರ ದೊಡ್ಡ ಅಭಿಮಾನಿ ನಾನು. ಅನುಷ್ಕಾ ಶೆಟ್ಟಿಯವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಅವರನ್ನು ಇಲ್ಲಿ ನೋಡಿ ತುಂಬಾ ಖುಷಿಯಾಯ್ತು. ಸ್ಮೃತಿ ಮಂದನಾ ಸೇರಿದಂತೆ ವುಮೆನ್‌ ಕ್ರಿಕೆಟ್‌ ಟೀಮ್‌ನ ಇಲ್ಲಿ ನೋಡಿ ತುಂಬಾ ಖುಷಿಯಾಗಿದೆ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಈ ಬಾರಿಯ ಆರ್‌ಸಿಬಿ ಮ್ಯಾಚ್‌ ಸಂದರ್ಭ ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 17ನೇ ಆವೃತ್ತಿಯ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವನ್ನು ಸ್ಯಾಂಡಲ್‌ವುಡ್‌ನ ಶಿವರಾಜ್‌ ಕುಮಾರ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರಂಜನಿ ರಾಘವನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಣ್ತುಂಬಿಕೊಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 17ನೇ ಆವೃತ್ತಿಯ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವಿನ ಪಂದ್ಯವನ್ನು ಸ್ಯಾಂಡಲ್‌ವುಡ್‌ನ ಶಿವರಾಜ್‌ ಕುಮಾರ್‌, ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ, ರಂಜನಿ ರಾಘವನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ವೀಕ್ಷಿಸಿದ್ದಾರೆ.

Whats_app_banner