ಕನ್ನಡ ಸುದ್ದಿ  /  Entertainment  /  Television News Amruthadhaare Serial 230 Episode March 27 Malli Speak With Shakuntaladevi Frinds Bhumika Support Pcp

Amruthadhaare: ಶಕುಂತಲಾದೇವಿ ಸ್ನೇಹಿತೆಯರ ದುಡ್ಡಿನ ಮದ ಇಳಿಸಿದ ಮಲ್ಲಿ; ಇವಳು ಕೆಲಸದವಳು ಅಲ್ಲ, ಈ ಮನೆ ಸೊಸೆ ಎಂದ ಭೂಮಿಕಾ

Amruthadhaare Serial: ಅಮೃತಧಾರೆ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಮಲ್ಲಿಗೆ ಶಕುಂತಲಾದೇವಿಯ ಸ್ನೇಹಿತೆಯರಿಂದ ಅವಮಾನವಾಗಿದೆ. ಮಲ್ಲಿಗೆ ಭೂಮಿಕಾ ಧೈರ್ಯ ತುಂಬುತ್ತಾರೆ. ಆ ಸ್ನೇಹಿತೆಯರ ದುಡ್ಡಿನ ಮದ ಇಳಿಯುವಂತೆ ಮಲ್ಲಿ ಧೈರ್ಯವಾಗಿ ಮಾತನಾಡುತ್ತಾಳೆ.

Amruthadhaare: ಶಕುಂತಲಾದೇವಿ ಸ್ನೇಹಿತೆಯರ ದುಡ್ಡಿನ ಮದ ಇಳಿಸಿದ ಮಲ್ಲಿ
Amruthadhaare: ಶಕುಂತಲಾದೇವಿ ಸ್ನೇಹಿತೆಯರ ದುಡ್ಡಿನ ಮದ ಇಳಿಸಿದ ಮಲ್ಲಿ

ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಬುಧವಾರದ ಕಥೆಯಲ್ಲಿ ಒಂದಿಷ್ಟು ನಾಟಕೀಯ ಬೆಳವಣಿಗೆಗಳು ನಡೆದಿವೆ. ಮಲ್ಲಿ ಮುಂದೆ ಜೈದೇವ್‌ ಮತ್ತೆ ಪ್ರೀತಿಯ ನಾಟಕವಾಡಿದ್ದಾನೆ. ನೀನು ಅಂದ್ರೆ ನನಗೆ ಇಷ್ಟ ಮಲ್ಲಿಎಂದು ಜೈದೇವ್‌ ಹೇಳುತ್ತಾನೆ. ಅದನ್ನು ನಂಬಿ ಆತನನ್ನು ತಬ್ಬಿಕೊಳ್ಳುತ್ತಾಳೆ. ಮನಸ್ಸಲ್ಲಿ "ನಿನ್ನ ಜೀವ ಹೋಗ್ಲಿ ಅಂತ ಕಾಯ್ತಾ ಇದ್ದೇನೆ" ಅನ್ತಾನೆ ಜೈದೇವ್‌. ಇನ್ನೊಂದೆಡೆ ಭೂಮಿಕಾಳನ್ನು ಗೌತಮ್‌ ಹುಡುಕುತ್ತ ಇರುತ್ತಾರೆ. "ಭೂಮಿಕಾ" ಎಂದು ಕರೆಯುತ್ತಾನೆ. "ಏನೂ ಹೆಸರು ಹಿಡಿದು ಕರೆದ್ರಿ" ಅಂತ ಖುಷಿಗೊಳ್ಳುತ್ತಾಳೆ ಭೂಮಿಕಾ. "ಮಧ್ಯಾಹ್ನ ಆಚೆ ಊಟ ಮಾಡಬೇಡಿ. ನಿಮಗೆ ಇಷ್ಟವಾದ ಬೆಂಡೆಕಾಯಿ ಪಲ್ಯ ಮಾಡಿಡ್ತಿನಿ" ಅಂತಾರೆ ಭೂಮಿಕಾ. ಈ ಸಮಯದಲ್ಲಿ ಏನೋ ಮಾತನಾಡುತ್ತ ಗೌತಮ್‌ ಭೂಮಿಕಾಳ ಕೈ ಹಿಡಿಯುತ್ತಾನೆ. ಬೆಂಡೆಕಾಯಿ ಪಲ್ಯದ ಜತೆ ಹುರುಳಿಕಾಯಿ ಪಲ್ಯನೂ ಹಾಕಿ ಅನ್ತಾನೆ. ಒಟ್ಟಾರೆ, ಇಬ್ಬರೂ ಪ್ರೀತಿಯಿಂದ ಮಾತನಾಡುತ್ತ ಇರುತ್ತಾರೆ. ಇಬ್ಬರೂ ಲವ್‌ ಫೀಲಿಂಗ್‌ನಲ್ಲಿದ್ದಾರೆ.

ಶಕುಂತಲಾದೇವಿ ಮನೆಯಲ್ಲಿ ಇದ್ದಾಗ ಅವರ ಸ್ನೇಹಿತೆಯರು ಬರುತ್ತಾರೆ. ಮಂಜುಳಾ ಮೂರು ಕಾಫಿ ಎಂದು ಹೇಳುತ್ತಾರೆ. ಆಗ ಅಲ್ಲಿದ್ದ ಮಲ್ಲಿ ಯಾರೂ ಇಲ್ಲ ನಾನೇ ತೆಗೆದುಕೊಂಡು ಹೋಗ್ತಿನಿ ಎಂದು ನಿರ್ಧರಿಸುತ್ತಾರೆ. ನೀನಂತೂ ನಿನ್ನ ಮಗನ ಮದುವೆಗೆ ಕರೆದಿಲ್ಲ. ನಾವೇ ಬಂದ್ವಿ, ನಿನ್ನ ಸೊಸೆಯನ್ನು ನೋಡಿಕೊಂಡು ಹೋಗ್ತಿವಿ ಅನ್ತಾಳೆ ಶಕುಂತಲಾದೇವಿ ಹೇಳುತ್ತಾರೆ. ರಿಚ್‌ ಫ್ಯಾಮಿಲಿಯಿಂದ ಸೊಸೆ ತಂದಿರ್ತಿಯಾ ಎಂದು ಹೇಳಿದಾಗ ಆ ಕಡೆ ಮಲ್ಲಿ ಕಾಫಿ ತರುತ್ತಾರೆ. "ಯಾರಿವಳು, ನಿಮ್ಮ ಮನೆಯ ಹೊಸ ಕೆಲಸದವಳ?" ಎನ್ನುತ್ತಾರೆ. ಶಕುಂತಲಾ ಏನೂ ಮಾತನಾಡುವುದಿಲ್ಲ. ಕಾಫಿ ಕೊಡುವಾಗ ಕಪ್‌ ಜಾರುತ್ತದೆ. "ಎಷ್ಟು ಕಾಸ್ಟ್ಲಿ ಸೀರೆ, ಇಂತವರಿಗೆ ಸಂಬಳ ಬೇರೆ ಕೊಡಬೇಕಾ?" ಎನ್ನುತ್ತಾರೆ ಒಬ್ಬರು. ಒಂದಿಷ್ಟು ಮಾತಾಗುತ್ತದೆ. ಮಲ್ಲಿಗೆ ಅವಮಾನವಾದರೂ ಶಕುಂತಲಾ ಮಾತನಾಡುವುದಿಲ್ಲ.

ಗೌತಮ್‌ ಮತ್ತು ಆನಂದ್‌ ಮಾತನಾಡುತ್ತ ಇರುತ್ತಾರೆ. ಏನಂದ್ರು ಅತ್ತಿಗೆ ಎಂದು ಆನಂದ್‌ ಕೇಳುತ್ತಾನೆ. "ಗಿಲ್ಟ್‌ ಫೀಲಿಂಗ್‌ ಮಾಡಿಕೊಳ್ಳಬೇಡಿ ಅಂದ್ರು" ಅನ್ತಾನೆ ಗೌತಮ್‌. ಭೂಮಿಕಾಳನ್ನು ಗೌತಮ್‌ ಹೊಗಳುತ್ತಾನೆ. "ನೀನು ಖುಷಿಯಾಗಿರಬೇಕು ಎಂದು ನಾನು ಅಪರ್ಣ ಬಯಸೋದು" ಎಂದು ಆನಂದ್‌ ಹೇಳುತ್ತಾನೆ. "ನನ್ನ ಪ್ರಾರ್ಥನೆ ಫಲಕೊಟ್ಟಿದೆಯೋ ಗೊತ್ತಿಲ್ಲ, ನೀನು ಅಪರ್ಣ ಕೇಳಿಕೊಂಡಿರುವುದರಿಂದ ನನಗೆ ದೇವರು ತಥಸ್ತು ಹೇಳಿದ್ದಾನೆ" ಎಂದು ಗೌತಮ್ ಹೇಳುತ್ತಾನೆ.

ಮಲ್ಲಿ ಅಳುತ್ತಾ ಇರುತ್ತಾಳೆ. ಭೂಮಿಕಾ ಬರುತ್ತಾಳೆ. ಏನು ವಿಚಾರ ಎಂದು ಕೇಳುತ್ತಾಳೆ. ಕಾಫಿ ವಿಷಯ ಹೇಳುತ್ತಾಳೆ. ಆಗಿರುವ ಅಪಮಾನವನ್ನು ಹೇಳುತ್ತಾಳೆ. "ಅತ್ತೆ ಸ್ನೇಹಿತರು ಏನಾದ್ರು ಹೇಳಿದ್ರೆ ನೀನ್ಯಾಕೆ ಸುಮ್ಮನ್ನಿದ್ದೆ. ಯಾಕೆ ಧ್ವನಿ ಎತ್ತಿಲ್ಲ" ಎಂದು ಭೂಮಿಕಾ ಕೇಳುತ್ತಾಳೆ. "ನಮ್ಮ ಅತಿಥಿಗಳು, ಅವರಿಗೆ ಹೇಗೆ ಹೇಳಲಾಗುತ್ತದೆ?" ಎಂದು ಮಲ್ಲಿ ಕೇಳುತ್ತಾರೆ. "ನಮ್ಮತನವನ್ನು ಗೌರವಿಸಿಲ್ಲ ಎಂದರೆ ಹೇಗೆ ಸುಮ್ಮನಿರಲು ಆಗುತ್ತದೆ" ಎಂದೆಲ್ಲ ಭೂಮಿಕಾ ತಿಳಿಹೇಳುತ್ತಾಳೆ. "ನೀನೂ ಯಾರಿಗೂ ಕಮ್ಮಿ ಇಲ್ಲ. ಅವರಿಗೆ ಅವರದ್ಧೇ ಧಾಟಿಯಲ್ಲಿ ಉತ್ತರ ನೀಡು" ಎಂದು ಭೂಮಿಕಾ ಹೇಳುತ್ತಾಳೆ. ಅವರು ನಿನಗೆ ಹೇಳಿಲ್ಲ, ದಿವಾನ್‌ ಮನೆಗೆ ಸೊಸೆಗೆ ಅಂದಿದ್ದಾರೆ ಎಂದೆಲ್ಲ ಹೇಳಿ ಧೈರ್ಯ ತುಂಬುತ್ತಾಳೆ.

ಮಹಿಮಾ ಮನೆಗೆ ಬಂದು ಅಪೇಕ್ಷಾಳಿಗೆ ಒಂದು ಸರ್‌ಪ್ರೈಸ್‌ ನೀಡುತ್ತಾಳೆ. ಶೋಶಾಪರ್‌ ಆಗಿ ಫ್ಯಾಷನ್‌ ಶೋನಲ್ಲಿ ಭಾಗವಹಿಸುವ ಅವಕಾಶವನ್ನು ಅಪೇಕ್ಷಾಳಿಗೆ ನೀಡುತ್ತಾಳೆ. ಅಪೇಕ್ಷಾ, ಆಕೆಯ ತಾಯಿ ಎಲ್ಲರೂ ಖುಷಿಪಡುತ್ತಾರೆ.

ಮಲ್ಲಿ ಅತಿಥಿಗಳ ಹತ್ತಿರ ಹೋಗುತ್ತಾಳೆ. ಶಕುಂತಲಾದೇವಿ ಮತ್ತು ಆಕೆಯ ಸ್ನೇಹಿತೆಯರು ಮಾತನಾಡುತ್ತಾ ಇರುತ್ತಾರೆ. "ಹೇ ಯಾಕೆ ಮತ್ತೆ ಬಂದೆ" ಎಂದು ಒಬ್ಬಾಕೆ ಕೇಳ್ತಾಳೆ. ಕೆಲಸದವಳು ಅನ್ನೋದನ್ನು ಮರೆತು ನಮ್ಮ ಜತೆ ಆಟಿಟ್ಯೂಡ್‌ ತೋರಿಸ್ತಾಳೆ ಎಂದು ಒಬ್ಬಳು ಹೇಳಿದಾಗ "ಬಾಯ್ಮುಚ್ಚಿ" ಎಂದು ಮಲ್ಲಿ ಹೇಳುತ್ತಾಳೆ. ಮಾತನಾಡುವ ಮೊದಲು ಏನು ಮಾತನಾಡಬೇಕು ಎಂದು ನೀವು ಯೋಚಿಸಬೇಕು ಎಂದೆಲ್ಲ ಮಲ್ಲಿ ಹೇಳುತ್ತಾಳೆ. "ಇನ್ನೊಬ್ಬರನ್ನು ಹೀಯಾಳಿಸುವುದು ನಿಮ್ಮ ದೊಡ್ಡಸ್ಥಿಕೆಯ?" ಎಂದು ಕೇಳುತ್ತಾಳೆ. ಅವರಿಬ್ಬರಿಗೆ ಕೋಪ ಬರುತ್ತದೆ. ದೂರದಲ್ಲಿ ನಿಂತು ಭೂಮಿಕಾ ಖುಷಿಪಡುತ್ತಾಳೆ. "ತಪ್ಪು ನಿಮ್ಮದಲ್ಲ, ನಿಮ್ಮ ದುಡ್ಡಿನದ್ದು" ಎಂದು ಮಲ್ಲಿ ಹೇಳಿದಾಗ ಶಕುಂತಲಾ ಸ್ನೇಹಿತೆಗೆ ಕೋಪ ತಡೆಯಲಾರದೆ ಮಲ್ಲಿಗೆ ಹೊಡೆಯಲು ಕೈ ಎತ್ತುತ್ತಾಳೆ. ಆಗ ಅಲ್ಲಿಗೆ ಭೂಮಿಕಾ ಬಂದು ಆಕೆಯನ್ನು ತಡೆಯುತ್ತಾಳೆ. ಶಕುಂತಲಾದೇವಿ ಭಯದಿಂದ ನೋಡುತ್ತಾರೆ. "ಇವಳು ಮನೆಯ ಕೆಲಸದವಳು ಆಗಿದ್ರೆ ಇಷ್ಟು ಮಾತನಾಡುತ್ತ ಇರಲಿಲ್ಲ. ಇವಳು ಈ ಮನೆಯ ಸೊಸೆ" ಎಂದು ಭೂಮಿಕಾ ಹೇಳುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

IPL_Entry_Point