Amruthadhaare: ಅವಮಾನವಾದಗ ಬಾಯ್ಮುಚ್ಚಿ ಎಂದು ಅಬ್ಬರಿಸಿದ ಮಲ್ಲಿ; ಕಿರಿಸೊಸೆ ಪರವಾಗಿ ನಿಂತ ಹಿರಿಸೊಸೆ ಭೂಮಿಕಾ, ಶಕುಂತಲಾಗೆ ತಕ್ಕ ಶಾಸ್ತ್ರಿ
- Amruthadhaare Serial Today: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಆಸಕ್ತಿದಾಯಕವಾದ ಘಟನೆಯೊಂದು ನಡೆದಿದೆ. ಮನೆಗೆ ಬಂದವರು ಕೆಲಸದವಳು ಎಂದಾಗ ಮಲ್ಲಿ ಧೈರ್ಯವಾಗಿ ಬಾಯ್ಮುಚ್ಚಿ ಎಂದಿದ್ದಾಳೆ. ಕಿರಿಸೊಸೆಯ ಬೆಂಬಲಕ್ಕೆ ಹಿರಿಸೊಸೆ ಭೂಮಿಕಾ ನಿಂತಿದ್ದಾಳೆ. ಬನ್ನಿ ಇವತ್ತಿನ ಕಥೆ ಏನಿರಬಹುದು ತಿಳಿಯೋಣ ಬನ್ನಿ.

(1 / 11)
ಅಮೃತಧಾರೆ ಸೀರಿಯಲ್‌ನಲ್ಲಿ ಇಂದೇನಾಗಬಹುದು ಎಂದು ಬಹುತೇಕರು ಕಾಯುತ್ತಿರಬಹುದು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.
(2 / 11)

(3 / 11)
ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.
(4 / 11)
ಶಕುಂತಲಾದೇವಿಯ ಸ್ನೇಹಿತೆಯರು ಮನೆಗೆ ಬಂದಿದ್ದಾರೆ. ಆ ಸಮಯದಲ್ಲಿ ಮಂಜುಳಾ ಮೂರು ಕಾಫಿ ಎಂದು ಶಕುಂತಲಾದೇವಿ ಹೇಳುತ್ತಾರೆ. ಕೆಲಸದವರ ಬದಲು ಅಲ್ಲಿದ್ದ ಮಲ್ಲಿಯೇ ಕಾಫಿ ತಂದುಕೊಡುತ್ತಾಳೆ.
(5 / 11)
ಆ ಸಮಯದಲ್ಲಿ ಮಲ್ಲಿ ಕೈ ಜಾರಿ ಟೀ ಕಪ್ ಕೆಳಕ್ಕೆ ಬೀಳುತ್ತದೆ. ತಕ್ಷಣ ಅತಿಥಿಯಾಗಿ ಬಂದ ಶಕುಂತಲಾದೇವಿ ಸ್ನೇಹಿತೆ "ಹೇ ಎಷ್ಟು ಕಾಸ್ಟ್ಲಿ ಸೀರೆ ಗೊತ್ತ?" ಎಂದು ಹೇಳುತ್ತಾಳೆ.
(6 / 11)
ಕೆಲಸದವಳು ಎನ್ನುವುದನ್ನು ಮರೆತು ನಮ್ಮ ಮುಂದೆಯೇ ಆಟಿಟ್ಯೂಡ್ ತೋರಿಸ್ತಾಳೆ, ಇವಳನ್ನು ಹೋಗಿ ಹೋಗಿ ಕೆಲಸಕ್ಕೆ ಇಟ್ಟುಕೊಂಡಿದ್ಯಾಲ್ವ ಎಂದು ಮತ್ತೊಬ್ಬಳು ಹೇಳುತ್ತಾಳೆ.
(7 / 11)
ತಕ್ಷಣ ಧೈರ್ಯದಿಂದ ಮಲ್ಲಿ "ಬಾಯ್ಮುಚ್ಚಿ" ಎನ್ನುತ್ತಾಳೆ. ಅಲ್ಲೇ ಪಕ್ಕದಲ್ಲಿದ್ದ ಭೂಮಿಕಾ ಮುಖದಲ್ಲಿ ನಗು ಮೂಡುತ್ತದೆ. ಶಕುಂತಲಾ ದೇವಿ ಮುಖದಲ್ಲಿ ಆತಂಕ ಕಾಣಿಸುತ್ತದೆ. ಆಕೆಗಿದು ಅನಿರೀಕ್ಷಿತ.
(8 / 11)
ಆಫ್ಟರ್ ಆಲ್ ನೀನೋಬ್ಬಳು ಸರ್ವೆಂಟ್, ನಮ್ಮ ಮಾತಿಗೆ ಎದುರಾಡ್ತಿಯ ಎಂದು ಮನೆಗೆ ಬಂದವಳು ಮಲ್ಲಿ ಕೆನ್ನೆಗೆ ಹೊಡೆಯಲು ಮುಂದಾಗುತ್ತಾಳೆ.
(9 / 11)
ತಕ್ಷಣ ಅದನ್ನು ತಡೆದ ಭೂಮಿಕಾ "ಈ ರೀತಿ ಕೈ ಮಾಡೋದು ತಪ್ಪಲ್ವ" ಎಂದು ಭೂಮಿಕಾ ಕೇಳುತ್ತಾರೆ. "ಕೆಲಸದವಳು" ಎಂದು ಆಕೆ ಹೇಳಿದಾಗ "ಇವಳು ಕೆಲಸದವಳು ಅಲ್ಲ, ಈ ಮನೆ ಸೊಸೆ" ಎನ್ನುತ್ತಾಳೆ ಭೂಮಿಕಾ. ಪ್ರಮೋದಲ್ಲಿ ಇಷ್ಟು ವಿಚಾರ ಇದೆ.
(10 / 11)
ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡಿರುವುದು, ಮಲ್ಲಿಯ ಬೆಂಬಲಕ್ಕೆ ಭೂಮಿಕಾ ಬಂದಿರುವುದು ಒಂದೆಡೆಯಾದರೆ ತನ್ನ ಸ್ನೇಹಿತೆಯರ ಎದುರು ಶಕುಂತಲಾದೇವಿಗೆ ತಕ್ಕ ಶಾಸ್ತ್ರಿಯಾಗಿದೆ.
ಇತರ ಗ್ಯಾಲರಿಗಳು