ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಮಗಳ ಪ್ರೀತಿಯನ್ನೇ ದಾಳವಾಗಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಹೊರಟ ಭಾರ್ಗವಿಗೆ ಶಾಕ್‌ ನೀಡಿದ ಆಕಾಶ್‌

Brundavana Serial: ಮಗಳ ಪ್ರೀತಿಯನ್ನೇ ದಾಳವಾಗಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಹೊರಟ ಭಾರ್ಗವಿಗೆ ಶಾಕ್‌ ನೀಡಿದ ಆಕಾಶ್‌

April 24th: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಆಕಾಶ್‌ ಸುನಾಮಿ ಮುಂದೆ ತನಗೆ ಮದುವೆಯಾಗಿರುವುದು, ತಾನು ಪುಷ್ಪಾಳನ್ನ ಪ್ರೀತಿಸುತ್ತಿರುವ ವಿಚಾರವನ್ನು ಹೇಳಿಕೊಳ್ಳುತ್ತಾನೆ. ಸಹನಾ ಕೊಟ್ಟ ಗಿಫ್ಟ್‌ ಮರಳಿ ನೀಡಲು ಅವಳ ಮನೆಗೆ ಹೋಗಿ ಭಾರ್ಗವಿಗೆ ಶಾಕ್‌ ನೀಡುತ್ತಾನೆ. ಪ್ರೀತಿ ಹೇಳಿಕೊಳ್ಳಲು ಸಹಾಯ ಮಾಡಿದ ಪುಷ್ಪಾಗೆ ಧನ್ಯವಾದ ತಿಳಿಸಿದ ಸಹನಾ.

ಮಗಳ ಪ್ರೀತಿಯನ್ನೇ ದಾಳವಾಗಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಹೊರಟ ಭಾರ್ಗವಿಗೆ ಶಾಕ್‌ ನೀಡಿದ ಆಕಾಶ್‌
ಮಗಳ ಪ್ರೀತಿಯನ್ನೇ ದಾಳವಾಗಿಸಿಕೊಂಡು ಬೃಂದಾವನದ ನೆಮ್ಮದಿ ಕೆಡಿಸಲು ಹೊರಟ ಭಾರ್ಗವಿಗೆ ಶಾಕ್‌ ನೀಡಿದ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 24)ಸಂಚಿಕೆಯಲ್ಲಿ ಆಕಾಶ್‌ ಸುನಾಮಿ ಮುಂದೆ ತನ್ನ ಬದುಕಿನ ಸತ್ಯವನ್ನೆಲ್ಲಾ ತಿಳಿಸುತ್ತಾನೆ. ಪುಷ್ಪಾ ಯಾರು ಎಂದು ಸುನಾಮಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಆಕಾಶ್‌ ʼಪುಷ್ಪಾ ನಾನು ತಾಳಿ ಕಟ್ಟಿದ ಹುಡುಗಿ. ನಮ್ಮ ಮನೆಯ 35 ಜನರು ಒಪ್ಪಿಕೊಂಡ ಹುಡುಗಿ. ನಾನು ವಿದೇಶದಲ್ಲಿ ಇದ್ದಾಗಲೇ ನನ್ನ ಅಜ್ಜಿ ನನಗೆ ಮದುವೆ ನಿಶ್ಚಯ ಮಾಡಿದ್ದರು. ಆದರೆ ಸೈಬರ್‌ನಲ್ಲಿ ಆದ ಒಂದು ಎಡವಟ್ಟಿನಿಂದ ಪುಷ್ಪಾ ಬದಲು ಸಹನಾ ಫೋಟೊ ಬಂದು ನನ್ನ ಕೈ ಸೇರಿತ್ತು. ಆದರೆ ನನಗೆ ಸಹನಾ, ಪುಷ್ಪಾ ಬೇರೆ ಬೇರೆ ಎಂಬುದು ತಿಳಿದಿರಲಿಲ್ಲ. ಕಣ್ಣು ಬಯಸಿದ್ದು ಸಹನಾನೇ ಆದ್ರೂ ಮನಸ್ಸು ಬಯಸಿದ್ದು ಪುಷ್ಪಾಳನ್ನ. ಆದರೆ ಆರಂಭದಲ್ಲಿ ನಾನು ಪುಷ್ಪಾಳ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ. ಆ ಕಾರಣಕ್ಕೆ ಸಹನಾಳನ್ನು ಕಾಲೇಜಿನಲ್ಲಿ ನೋಡಿದಾಗ ಇಷ್ಟಪಟ್ಟಿದ್ದು. ಆದರೆ ದಿನಕಳೆದಂತೆ ಪುಷ್ಪಾ ಏನು, ಅವರ ಗುಣ ಏನು, ಮನೆಯವರಿಗಾಗಿ ಅವರು ಮಿಡಿಯುವ ರೀತಿ ಎಲ್ಲವೂ ನನಗೆ ಅರ್ಥ ಆಯ್ತುʼ ಎಂದು ನನ್ನ ಬದುಕಿನಲ್ಲಿ ಆಗಿದ್ದನ್ನೆಲ್ಲಾ ವಿವರವಾಗಿ ಹೇಳುತ್ತಾನೆ. ಆಗ ಸುನಾಮಿ ʼಸಹನಾ ನಿನ್ನ ಮೇಲೆ ಜೀವವನ್ನೆ ಇಟ್ಟುಕೊಂಡಿದ್ದಾಳೆ, ನಿನ್ನನ್ನೇ ಮದುವೆಯಾಗಬೇಕು ಎಂದು ಕನಸು ಕಾಣುತ್ತಿದ್ದಾಳೆ, ಸರಿ ಈಗ ನಿನ್ನ ಮನಸ್ಸಿನಲ್ಲಿ ಇರುವುದು ಯಾರು?ʼ ಎಂದು ಆಕಾಶ್‌ಗೆ ಪ್ರಶ್ನಿಸುತ್ತಾನೆ ಸುನಾಮಿ. ಅದಕ್ಕೆ ಸ್ಪಷ್ಟವಾಗಿ ಉತ್ತರಿಸುವ ಆಕಾಶ್‌ ʼನನ್ನ ಮನಸ್ಸಿನಲ್ಲಿ ಇರುವುದು, ಮನೆಯಲ್ಲಿ ಇರುವುದು ಪುಷ್ಪಾ. ನಾನು ಈ ಉಡುಗೊರೆಯನ್ನು ಸಹನಾಗೆ ಹಿಂದಿರುಗಿಸಿ ಈ ಪ್ರೀತಿ ಸಾಧ್ಯ ಇಲ್ಲʼ ಎಂದು ಹೇಳಿ ಬರುತ್ತೇನೆ ಎನ್ನುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಸಹನಾ ಪ್ರೀತಿ ಯಶಸ್ವಿಯಾಗಲಿ ಎಂದು ಹಾರೈಸುವ ಪುಷ್ಪಾ 

ಇತ್ತ ಆಕಾಶ್‌ಗೆ ಪ್ರಪೋಸ್‌ ಮಾಡಿದ ಖುಷಿಯಲ್ಲಿ ಹಕ್ಕಿಯಂತೆ ಹಾರಾಡಿಕೊಂಡು ಮನೆಗೆ ಬರುವ ಸಹನಾಳ ಬಳಿ ಭಾರ್ಗವಿ ʼಏನ್‌ ಸ್ವೀಟಿ ಆಕಾಶ್‌ಗೆ ಪ್ರಪೋಸ್‌ ಮಾಡಿದ್ಯಾ, ಅವನು ಏನ್‌ ಅಂದʼ ಎಂದು ಕೇಳುತ್ತಾಳೆ. ಅದಕ್ಕೆ ಖುಷಿಯಿಂದ ಉತ್ತರಿಸುವ ಸಹನಾ ʼಹೇಳೋದೇನು ಮಾಮ್‌, ನಾನು ಪ್ರಪೋಸ್‌ ಮಾಡಿದ ರೀತಿ ನೋಡಿ ಅವರು ಶಾಕ್‌ ಆಗಿದ್ರು, ನಾನು ತಾಳಿ, ಕುಂಕುಮ, ಬಳೆ ಎಲ್ಲ ತೆಗೆದುಕೊಂಡು ಹೋಗಿ ನನ್ನನ್ನು ಮದುವೆಯಾಗುವಂತೆ ಕೇಳಿದೆ, ಅವರು ಮಾತೆ ಬರದೇ ನಿಂತಿದ್ದರುʼ ಎಂದು ಸಂಭ್ರಮದಿಂದ ತಾಯಿ ಹಾಗೂ ಮಾವನ ಮುಂದೆ ಹೇಳಿಕೊಳ್ಳುತ್ತಾರೆ. ಜೊತೆಗೆ ಈ ರೀತಿ ಪ್ರಪೋಸ್‌ ಮಾಡಲು ಐಡಿಯಾ ನೀಡಿದ್ದು ತನ್ನ ಹೊಸ ಫ್ರೆಂಡ್‌ ಎಂದು ಹೇಳುವ ಸಹನಾ ಪುಷ್ಪಾಳನ್ನು ಹೊಗಳುತ್ತಾಳೆ. ಸಹನಾಗೆ ಸಹಾಯ ಮಾಡಿದ್ದು ಪುಷ್ಪಾ ಎಂದು ತಿಳಿಯದ ಭಾರ್ಗವಿ ಮೊದಲು ಆ ನಿನ್ನ ಫ್ರೆಂಡ್‌ಗೆ ಥ್ಯಾಂಕ್ಸ್‌ ಹೇಳು ಎಂದು ಮಗಳಿಗೆ ಉಪದೇಶ ಮಾಡುತ್ತಾಳೆ.

ಪುಷ್ಪಾಗೆ ಕರೆ ಮಾಡುವ ಸಹನಾ ಕಾಲೇಜಿನಲ್ಲಿ ನಡೆದಿದ್ದನ್ನೆಲ್ಲಾ ಹೇಳುತ್ತಾಳೆ. ಜೊತೆಗೆ ನಿನ್ನಂಥ ಸ್ನೇಹಿತೆ ಇರುವ ಕಾರಣಕ್ಕೆ ನಾನು ಇಂದು ಆಕಾಶ್‌ಗೆ ಡಿಫ್ರೆಂಟ್‌ ಆಗಿ ಪ್ರಪೋಸ್‌ ಮಾಡಲು ಆಗಿದ್ದು ತುಂಬಾ ಥ್ಯಾಂಕ್ಸ್‌ ಎನ್ನುತ್ತಾಳೆ. ಸಹನಾ ಪ್ರಪೋಸ್‌ ಮಾಡಿದ್ದು ಆಕಾಶ್‌ಗೆ ಎಂದು ತಿಳಿಯದ ಪುಷ್ಪಾ ನಿಮ್ಮಿಬ್ಬರ ಜೋಡಿ ಸದಾ ಹೀಗೆ ಇರಲಿ. ನಿಮ್ಮ ಪ್ರೀತಿಗೆ ಗೆಲುವು ಸಿಗಲಿ ಎಂದು ಮನಸಾರೆ ಹಾರೈಸುತ್ತಾಳೆ.

ಗಿಫ್ಟ್‌ ಮರಳಿಸಿ ಶಾಕ್‌ ನೀಡುವ ಆಕಾಶ್‌

ಇತ್ತ ಮಗಳ ಪ್ರೀತಿ ಆಕಾಶ್‌ ಒಪ್ಪಿಕೊಂಡ ಎಂಬ ಭ್ರಮೆಯಲ್ಲಿರುವ ಭಾರ್ಗವಿ, ಭಾಸ್ಕರ ಆಕಾಶ್‌ನಿಂದ ಬೃಂದಾವನವನ್ನು ಹೇಗೆ ಒಡೆಯಬೇಕು ಎಂಬುದನ್ನು ಪ್ಲಾನ್‌ ಮಾಡುತ್ತಿರುತ್ತಾರೆ. ಆಕಾಶ್‌ನನ್ನು ಸಹನಾಳಿಗೆ ಮದುವೆ ಮಾಡಿಸಿ ಅವನಿಂದ ಬೃಂದಾವನ ನೆಮ್ಮದಿ ಕಸಿಯಬೇಕು ಎಂದು ಭಾರ್ಗಿವಿ ಪ್ಲಾನ್‌ ಮಾಡುತ್ತಿರುತ್ತಾಳೆ. ಆ ಹೊತ್ತಿಗೆ ಸಿಸಿ ಕ್ಯಾಮೆರಾದಲ್ಲಿ ಹೊರಗೆ ನೋಡುವ ಭಾಸ್ಕರನಿಗೆ ಮನೆ ಮುಂದೆ ಸಹನಾ ನೀಡಿದ ಗಿಫ್ಟ್‌ನೊಂದಿಗೆ ಆಕಾಶ್‌ ನಿಂತಿರುವುದು ಕಾಣಿಸುತ್ತದೆ. ಆಕಾಶ್‌ ಮಗಳನ್ನು ಕೇಳಲು ಬಂದಿದ್ದಾನೆ ಎಂದು ಖುಷಿ ಪಡುವ ಕುತಂತ್ರಿಗಳಿಗೆ ಮುಂಬರುವ ಶಾಕ್‌ನ ಅರಿವಿರುವುದಿಲ್ಲ.

ಮನೆಯೊಳಗೆ ಬರುವ ಆಕಾಶ್‌ಗೆ ಮಾತನಾಡಲು ಬಿಡದೇ ಮದುವೆವರೆಗೂ ಮಾತನಾಡುವ ಭಾರ್ಗವಿಗೆ ಒಂದೇ ಮಾತಿನ ಮೂಲಕ ಶಾಕ್‌ ನೀಡುತ್ತಾನೆ ಆಕಾಶ್‌. ನಾನು ಬಂದಿದ್ದು ಸಹನಾಳಿಗೆ ಈ ಗಿಫ್ಟ್‌ ವಾಪಾಸ್‌ ನೀಡಿ, ಈ ಪ್ರೀತಿ ಸಾಧ್ಯವಿಲ್ಲ ಎಂದು ಹೇಳುವ ಸಲುವಾಗಿ. ನಾನು ಸಹನಾಳನ್ನು ಪ್ರೀತಿಸುತ್ತಿಲ್ಲ ಎಂದು ನೇರವಾಗಿ ಹೇಳುತ್ತಾನೆ.

ಆಕಾಶ್‌ ಸಹನಾಳನ್ನು ಪ್ರೀತಿಸುತ್ತಿಲ್ಲ ಎಂದು ತಿಳಿದ ಭಾರ್ಗವಿ ಮುಂದಿನ ನಡೆಯೇನು, ಸಹನಾ ಕನಸು ನುಚ್ಚು ನೂರಾಗುತ್ತಾ, ಇದರಿಂದ ಬೃಂದಾವನದ ಮೇಲೆ ಭಾರ್ಗವಿ ದ್ವೇಷ ಹೆಚ್ಚಾಗುತ್ತಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point