ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಬಾಳಸಂಗಾತಿಯಾಗುವಂತೆ ಮನದ ಬಯಕೆ ಹೇಳಿಕೊಂಡ ಸಹನಾ, ಸುನಾಮಿ ಮುಂದೆ ಬಯಲಾಯ್ತು ಆಕಾಶ್‌ ಪ್ರೀತಿ ಸತ್ಯ

Brundavana Serial: ಬಾಳಸಂಗಾತಿಯಾಗುವಂತೆ ಮನದ ಬಯಕೆ ಹೇಳಿಕೊಂಡ ಸಹನಾ, ಸುನಾಮಿ ಮುಂದೆ ಬಯಲಾಯ್ತು ಆಕಾಶ್‌ ಪ್ರೀತಿ ಸತ್ಯ

Brindavana Kannada Serial Today Episode April 23rd: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸೀರೆಯುಟ್ಟು ಬರುವ ಸಹನಾ ಸಾಂಪ್ರದಾಯಿಕ ರೀತಿಯಲ್ಲಿ ಆಕಾಶ್‌ಗೆ ಪ್ರಪೋಸ್‌ ಮಾಡುತ್ತಾಳೆ. ಊರಿನಿಂದ ತಂದ ದೇವರ ವಿಗ್ರಹ ಬಿದ್ದು ಹೋಗಿದ್ದನ್ನು ನೋಡಿ ಆತಂಕವಾಗು ಭಯದಲ್ಲಿದ್ದಾಳೆ ಪುಷ್ಪಾ. ಸುನಾಮಿ ಬಳಿ ತನ್ನ ಪ್ರೀತಿ ಯಾರೆಂದು ಹೇಳಿದ ಆಕಾಶ್‌.

ಬಾಳಸಂಗಾತಿಯಾಗುವಂತೆ ಮನದ ಬಯಕೆ ಹೇಳಿಕೊಂಡ ಸಹನಾ, ಸುನಾಮಿ ಮುಂದೆ ಬಯಲಾಯ್ತು ಆಕಾಶ್‌ ಪ್ರೀತಿ ಸತ್ಯ
ಬಾಳಸಂಗಾತಿಯಾಗುವಂತೆ ಮನದ ಬಯಕೆ ಹೇಳಿಕೊಂಡ ಸಹನಾ, ಸುನಾಮಿ ಮುಂದೆ ಬಯಲಾಯ್ತು ಆಕಾಶ್‌ ಪ್ರೀತಿ ಸತ್ಯ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 23) ಸಂಚಿಕೆಯಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಕಾಲೇಜಿಗೆ ಬರುವ ಸಹನಾಗೆ ಮಿಂಚು ಎದುರಾಗುತ್ತಾಳೆ. ಸಹನಾಳನ್ನು ಸೀರೆಯಲ್ಲಿ ನೋಡಿದ ಮಿಂಚು ʼಇವತ್ತಾದ್ರೂ ಯಾವುದೇ ಅಡೆತಡೆಯಿಲ್ಲದೇ ಆಕಾಶ್‌ಗೆ ನಿನ್ನ ಪ್ರೀತಿ ಹೇಳಿಕೋʼ ಎಂದು ಸಲಹೆ ನೀಡುತ್ತಾಳೆ. ಆಗ ಸಹನಾ ʼನಾನು ಪ್ರೀತಿ ಹೇಳಿಕೊಳ್ಳುವುದಿಲ್ಲ, ಪುಷ್ಪಾ ಸಲಹೆ ಕೊಟ್ಟಂತೆ ಕೊನೆವರೆಗೂ ನನ್ನ ಜೊತೆ ಇರಿ ಎಂದು ಈ ಕುಂಕುಮ, ತಾಳಿ, ಬಳೆ ಎಲ್ಲಾ ಕೊಟ್ಟು ನನ್ನ ಬಾಳಸಂಗಾತಿಯಾಗುವಂತೆ ಆಕಾಶ್‌ ಬಳಿ ಕೇಳಿಕೊಳ್ಳುತ್ತೇನೆʼ ಎನ್ನುತ್ತಾಳೆ. ಮಿಂಚು ಆಕಾಶ್‌ನನ್ನು ಕರೆದು ಸಹನಾ ಮುಂದೆ ನಿಲ್ಲಿಸುತ್ತಾನೆ. ಆಕಾಶ್‌ ಬಂದಿದ್ದೆ ತಡ ತನ್ನ ಮನದ ಮಾತುಗಳನ್ನು ಬ್ರೇಕ್‌ ಇಲ್ಲದಂತೆ ಹೇಳುತ್ತಾಳೆ ಸಹನಾ.

ಟ್ರೆಂಡಿಂಗ್​ ಸುದ್ದಿ

ಬಾಳಸಂಗಾತಿಯಾಗುವಂತೆ ಕೇಳಿಕೊಳ್ಳುವ ಸಹನಾ

ಕೈಯಲ್ಲಿ ತಾಳಿ, ಅರಿಸಿನ, ಕುಂಕುಮ, ಹೂ, ಬಳೆ, ಕಾಲುಂಗರ ಹಿಡಿದು ತಂದ ಸಹನಾ ತನ್ನ ಮನದ ಬಯಕೆಯನ್ನು ಆಕಾಶ್‌ ಬಳಿ ಹೇಳಿಕೊಳ್ಳುತ್ತಾಳೆ. ತಾಳಿ, ಕಾಲುಂಗರ ಈ ಎಲ್ಲದರ ಅರ್ಥ ಹೇಳುತ್ತಾ ಈ ಎಲ್ಲದ್ದಕ್ಕೂ ನೀವೇ ಒಡೆಯ ಆಗಬೇಕು. ನೀವು ನನ್ನ ಬಾಳಸಂಗಾತಿಯಾಗಬೇಕು. ಈ ಜನ್ಮ ಅಲ್ಲ ಏಳೇಳು ಜನ್ಮದಲ್ಲೂ ನೀವೇ ನನ್ನ ಸಂಗಾತಿ ಮಾಡಬೇಕು. ನಿಮ್ಮ ಬದುಕನಲ್ಲಿ, ನಿಮ್ಮ ಮನೆಯಲ್ಲಿ ನನಗೊಂದು ಸ್ಥಾನ ಕೊಡಿ ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾಳೆ. ಆಕಾಶ್‌ ಮಧ್ಯೆದಲ್ಲಿ ಮಾತನಾಡಲು ಬಂದರೂ ಬಿಡದ ಸಹನಾ ಪ್ರಪೋಸ್‌ ಮಾಡಿ, ಕೈಯಲ್ಲಿರುವ ಬಳೆ, ತಾಳಿ, ಕುಂಕುಮ ಎಲ್ಲಾ ಇರುವ ಬಾಕ್ಸ್‌ ನೀಡಿ ಅಲ್ಲಿಂದ ಓಡಿ ಹೋಗುತ್ತಾಳೆ. ಸಹನಾ ಪ್ರಪೋಸ್‌ ಮಾಡಿದ್ದು ನೋಡಿ ಮಿಂಚು ಹಾಗೂ ಸುನಾಮಿ ಸಖತ್‌ ಖುಷಿಯಾಗಿರುತ್ತಾರೆ. ಆದರೆ ಇವರ್ಯಾರಿಗೂ ಆಕಾಶ್‌ ಮನಸ್ಸಿನಲ್ಲಿ ಏನಿದೆ ಎಂದು ಅರಿವಾಗುವುದಿಲ್ಲ.

ದೇವರಕೋಣೆ ಮುಂದೆ ಬೀಳುವ ಮೂರ್ತಿ

ಪುಷ್ಪಾ ಭಾರ್ಗವಿ ಮನೆಗೆ ಹೋಗಿ ಅವಳಿಗೆ ಧಮಕಿ ಹಾಕಿ ಬಂದ ವಿಚಾರ ಮಾತನಾಡುವ ಅನುಪಮಾ ನಿನಗೆ ಅಷ್ಟು ಧೈರ್ಯ ಹೇಗೆ ಬಂತು ಎಂದು ಪುಷ್ಪಾಳ ಬಳಿ ಕೇಳುತ್ತಾಳೆ. ಅದಕ್ಕೆ ಪುಷ್ಪಾ ತನ್ನ ಊರಿನಲ್ಲಿ ಕೋಳಿ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ಹದ್ದನ್ನೇ ಹಿಡಿದ ಕಥೆ ಹೇಳಿ, ಬೃಂದಾವನಕ್ಕೆ ಏನಾದ್ರೂ ಆದ್ರೆ ನಾನು ಖಂಡಿತ ಸುಮ್ಮನಿರೊಲ್ಲ, ನನ್ನ ಜೀವ ಕೊಟ್ಟಾದ್ರೂ ಕಾಪಾಡ್ತೀನಿ ಎಂದು ಅನುಪಮಾ ಬಳಿ ಹೇಳುತ್ತಾಳೆ. ಅಲ್ಲದೇ ಊರಿಂದ ಪೂಜೆ ಮಾಡಿ ತಂದ ಮೂರ್ತಿಯನ್ನು ಅನುಪಮಾಗೆ ತೋರಿಸುವ ಪುಷ್ಪಾ ಇದನ್ನು ದೇವರ ಮನೆಯಲ್ಲಿ ಇಡುತ್ತೇನೆ ಎಂದು ಹೋಗುತ್ತಾಳೆ. ಆಗ ಮೂರ್ತಿ ಕೈ ಜಾರಿ ಕೆಳಗೆ ಬೀಳುತ್ತದೆ. ಇದರಿಂದ ಗಾಬರಿಗೊಳ್ಳುವ ಪುಷ್ಪಾ ಏನೋ ಕೇಡಿನ ಸೂಚನೆ ಇರಬಹುದು ಎಂದು ಭಯದಲ್ಲಿ ಹೇಳುತ್ತಾಳೆ. ಅವಳನ್ನು ಸಮಾಧಾನ ಮಾಡುವ ಅನುಪಮಾ ನಮ್ಮ ಮನಸ್ಸು ಒಳ್ಳೆದಾಗಿದ್ರೆ ದೇವರು ಎಂದಿಗೂ ಕೆಟ್ಟದ್ದು ಮಾಡುವುದಿಲ್ಲ ಎಂದು ಧೈರ್ಯ ತುಂಬುತ್ತಾಳೆ.

ಪುಷ್ಪಾಳೇ ತನ್ನ ಪ್ರೀತಿ ಎಂದು ಒಪ್ಪಿಕೊಳ್ಳುವ ಆಕಾಶ್‌

ಇತ್ತ ಸಹನಾ ಕೊಟ್ಟ ಗಿಫ್ಟ್‌ ಹಿಡಿದು ಕಾರ್‌ ಬಳಿಗೆ ಆಕಾಶ್‌ ಬಳಿ ಸಹನಾ ತನ್ನ ಪ್ರೀತಿ ಹೇಳಿಕೊಳ್ಳಲು ತಾನೇ ಕಾರಣ, ಆಕಾಶ್‌ ಪ್ರೀತಿ ಮುಂದುವರಿಯಲು ತಾನು ಅವನ ಡೈರಿಯನ್ನು ಸಹನಾಗೆ ಕೊಟ್ಟಿದ್ದೆ ಕಾರಣ ಎಂಬ ವಿಚಾರವನ್ನು ಹೇಳುತ್ತಾನೆ ಸುನಾಮಿ. ಇದರಿಂದ ಆಕಾಶ್‌ ಖುಷಿಯಾಗಬಹುದು ಎಂದು ಭಾವಿಸಿದ್ದ ಸುನಾಮಿಗೆ ಕೆನ್ನೆ ಮೇಲೆ ಹೊಡೆಯುತ್ತಾನೆ ಆಕಾಶ್‌. ಅಲ್ಲದೇ ತನ್ನ ಪ್ರೀತಿ ಸಹನಾ ಅಲ್ಲ, ತಾನು ಮನಸಾರೆ ಪ್ರೀತಿಸುತ್ತಿರುವುದು ಪುಷ್ಪಾಳನ್ನು ಎಂದು ಮನವರಿಕೆ ಮಾಡುತ್ತಾನೆ. ಇದನ್ನು ಕೇಳಿದ ಸುನಾಮಿ ಶಾಕ್‌ ಆಗುವುದು ಮಾತ್ರವಲ್ಲ, ಪುಷ್ಪಾ ಯಾರು ಎಂಬ ಗೊಂದಲದಲ್ಲಿ ಮುಳುಗುತ್ತಾನೆ.

ಸಹನಾಗೆ ಆಕಾಶ್‌ ಪ್ರೀತಿಸುತ್ತಿರುವುದು ನಿನ್ನನ್ನಲ್ಲ ಪುಷ್ಪಾಳನ್ನು ಎಂದು ಹೇಳುತ್ತಾನಾ ಸುನಾಮಿ, ಪುಷ್ಪಾ ಅಂದುಕೊಂಡಂತೆ ಮೂರ್ತಿ ಬಿದ್ದಿದ್ದರಿಂದ ಕೇಡಾಗುತ್ತಾ?, ಭಾರ್ಗವಿಯ ಮುಂದಿನ ಪ್ಲಾನ್‌ ಏನು, ಸಹನಾ ಕಥೆಯೇನು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point