ಕನ್ನಡ ಸುದ್ದಿ  /  ಕರ್ನಾಟಕ  /  Tigers In India: ದೇಶದಲ್ಲಿವೆ 3,167 ಹುಲಿಗಳು; ಪ್ರಧಾನಿ ಮೋದಿ ಅವರಿಂದ 2022ರ ವರೆಗಿನ ಹುಲಿಗಣತಿ ವರದಿ ಬಿಡುಗಡೆ

Tigers in India: ದೇಶದಲ್ಲಿವೆ 3,167 ಹುಲಿಗಳು; ಪ್ರಧಾನಿ ಮೋದಿ ಅವರಿಂದ 2022ರ ವರೆಗಿನ ಹುಲಿಗಣತಿ ವರದಿ ಬಿಡುಗಡೆ

2022 ರ ವೇಳೆಗೆ ಭಾರತದಲ್ಲಿ 3,167 ಹುಲಿಗಳಿವೆ. 2018 ರಿಂದ 2022ರವರೆಗೆ 200 ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2018 ರಲ್ಲಿ ಭಾರತದಲ್ಲಿ 2,967 ಹುಲಿಗಳಿದ್ದವು. ಆ ಸಂಖ್ಯೆ ಇದೀಗ 3,176ಕ್ಕೆ ಏರಿಕೆಯಾಗಿದೆ.

2022ರ ವರೆಗೆ ದೇಶದಲ್ಲಿ 3,167 ಹುಲಿಗಳಿವೆ ಎಂಬ ಹುಲಿಗಣತಿಯ ವರದಿಯನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ.
2022ರ ವರೆಗೆ ದೇಶದಲ್ಲಿ 3,167 ಹುಲಿಗಳಿವೆ ಎಂಬ ಹುಲಿಗಣತಿಯ ವರದಿಯನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ನಿರೀಕ್ಷೆಯಂತೆ ದೇಶದಲ್ಲಿನ ಹುಲಿಗಳ ಸಂಖ್ಯೆಯನ್ನು (Tigers in India) ಬಿಡುಗಡೆ ಮಾಡಿದ್ದಾರೆ. ಇಂದು ಬಂಡೀಪುರದಲ್ಲಿ (Bandipur) ಸಫಾರಿ ನಡೆಸಿದ್ದ ನಮೋ 2022ರ ವರೆಗಿನ ಹುಲಿಗಣತಿ ವರದಿಯನ್ನು(Tiger Census Report) ಬಹಿರಂಗ ಪಡಿಸಿದ್ದಾರೆ.

ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಮನಾರ್ಹವಾಗಿ ಏರಿಕೆ ಕಂಡುಬಂದಿದೆ ಎಂಬುದನ್ನ ಪ್ರಧಾನಿ ಮೋದಿ ತಿಳಿಸಿದ್ದು, ಇವತ್ತು (ಏ.9, ಭಾನುವಾರ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2022 ರ ವೇಳೆಗೆ ಭಾರತದಲ್ಲಿ 3,167 ಹುಲಿಗಳಿವೆ. 2018 ರಿಂದ 2022ರವರೆಗೆ 200 ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2018 ರಲ್ಲಿ ಭಾರತದಲ್ಲಿ 2,967 ಹುಲಿಗಳಿದ್ದವು. ಆ ಸಂಖ್ಯೆ ಇದೀಗ 3,176ಕ್ಕೆ ಏರಿಕೆಯಾಗಿದೆ.

ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅಂಕಿಅಂಶಗಳು ಮಾಹಿತಿಯನ್ನು ಬಹಿರಂಗಪಡಿಸಿವೆ. 2006ರಲ್ಲಿ ಭಾರತದಲ್ಲಿ 1,411 ಹುಲಿಗಳಿದ್ದವು, ಈ ಸಂಖ್ಯೆ 2010 ರ ವೇಳೆಗೆ 1,706 ಕ್ಕೆ ಏರಿಕೆ ಕಂಡಿದೆ. 2014 ರಲ್ಲಿ ಭಾರತದಲ್ಲಿ 2,226 ಹುಲಿಗಳಿದ್ದವು. ಈ ಅಂಕಿಅಂಶಗಳನ್ನು ನೋಡಿದಾಗ ದೇಶದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ.

ಹುಲಿ ಯೋಜನೆ ಯಶಸ್ಸು ಜಗತ್ತಿಗೆ ಹೆಮ್ಮೆಯ ವಿಷಯ

ಪ್ರಾಜೆಕ್ಟ್ ಟೈಗರ್‌ನ 50 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಂದು ರಾಜ್ಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ನಮ್ಮ ದೇಶವು ಹುಲಿಗಳನ್ನ ಸಂರಕ್ಷಿಸಿರುವುದು ಮಾತ್ರವಲ್ಲದೆ ಅವುಗಳ ಅಭಿವೃದ್ಧಿಗಾಗಿ ಪರಿಸರ ವ್ಯವಸ್ಥೆಯನ್ನು ಸಹ ಮಾಡಿದೆ. ಭಾರತವು ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಸಹಬಾಳ್ವೆಯನ್ನು ನಂಬುವ ದೇಶವಾಗಿದೆ.

ವಿಶ್ವದಲ್ಲೇ ಅತಿ ದೊಡ್ಡ ಹುಲಿ ಶ್ರೇಣಿಯ ದೇಶ ಭಾರತವಾಗಿದ್ದು, ದೊಡ್ಡ ಯಶಸ್ಸು ಮತ್ತು ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳ ಮಾಡುವುದು ನಮ್ಮ ವನ್ಯಜೀವಿಗಳನ್ನು ಉಳಿಸಲು ಎಷ್ಟು ಅಭಿವೃದ್ಧಿ ಹೊಂದಿದ್ದೇವೆ ಎಂಬುದನ್ನ ಸಾಬೀತುಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹುಲಿಯು ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳ ಭಾಗವಾಗಿದೆ ಎಂದು ಒತ್ತಿ ಹೇಳಿರುವ ಪ್ರಧಾನಿ, ಹುಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಅವಿಭಾಜ್ಯ ಅಂಗವೂ ಆಗಿದೆ.

ಭಗವಾನ್ ಅಯ್ಯಪ್ಪನಿಂದ ಹಿಡಿದು ದುರ್ಗಾ ಮಾತೆಯವರೆಗೆ, ಹುಲಿ ನಮ್ಮ ದೇವರು ಮತ್ತು ದೇವತೆಗಳಿಗೆ 'ವಾಹನ' ಕೂಡ ಆಗಿದೆ. ನಮ್ಮ ಪುರಾಣ ಗ್ರಂಥಗಳಲ್ಲಿ ಮತ್ತು ಐತಿಹಾಸಿಕ ಕೆತ್ತನೆಗಳಲ್ಲಿಯೂ ಹುಲಿಗಳ ಉಲ್ಲೇಖವಿದೆ. ಅವು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಜಾತಿಗಳಾಗಿವೆ ಎಂದು ಹೇಳಿದ್ದಾರೆ.

ಪಿಎಂ ಮೋದಿ ಅವರು ಇಂಟರ್ ನ್ಯಾಷನಲ್ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಅನ್ನು ಪ್ರಾರಂಭಿಸಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯ ಪರಿಣಾಮಕಾರಿ ಮೌಲ್ಯಮಾಪನದ 5ನೇ ಚರಣದ ಸಾರಾಂಶ ವರದಿಯನ್ನ ಇವತ್ತು ಬಿಡುಗಡೆ ಮಾಡಿದ್ದಾರೆ.

ಐಬಿಸಿಎ ವಿಶ್ವದ ಏಳು ಪ್ರಮುಖ ಪ್ರಾಣಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪುಮಾ, ಬೆಕ್ಕು ಹಾಗೂ ಜಾಗ್ವಾರ್ ಈ ಜಾತಿಗಳ ಪ್ರಾಣಿಗಳಿಗೆ ಆಶ್ರಯ ನೀಡುವ ಶ್ರೇಣಿಯ ದೇಶಗಳ ಸದಸ್ಯತ್ವದೊಂದಿಗೆ ಐಬಿಸಿಎಂ ಅನ್ನು ಆರಂಭಿಸಲಾಗಿದೆ.

IPL_Entry_Point

ವಿಭಾಗ