ಕನ್ನಡ ಸುದ್ದಿ  /  ಕರ್ನಾಟಕ  /  Project Tiger Explained: ಹುಲಿ ಯೋಜನೆಗೆ ಸುವರ್ಣ ಸಂಭ್ರಮ, ಏನಿದು ಪ್ರಾಜೆಕ್ಟ್‌ ಟೈಗರ್‌? ಬಂಡೀಪುರ ಹುಲಿಸಂರಕ್ಷಿತ ಅರಣ್ಯ ಪ್ರದೇಶದ ಮಹತ್ವ

Project Tiger Explained: ಹುಲಿ ಯೋಜನೆಗೆ ಸುವರ್ಣ ಸಂಭ್ರಮ, ಏನಿದು ಪ್ರಾಜೆಕ್ಟ್‌ ಟೈಗರ್‌? ಬಂಡೀಪುರ ಹುಲಿಸಂರಕ್ಷಿತ ಅರಣ್ಯ ಪ್ರದೇಶದ ಮಹತ್ವ

Project Tiger: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು(Narendra Modi) ಇಂದು ರಾಜ್ಯದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ (Bandipur Tiger Reserve in Karnataka) ಭೇಟಿ ನೀಡಿದ್ದು, ಪ್ರಾಜೆಕ್ಟ್‌ ಟೈಗರ್‌ಗೆ 50 ವರ್ಷ ತುಂಬಿರುವ ಸುವರ್ಣ ಸಂಭ್ರಮದ ಸಮಯದಲ್ಲಿ ಇತ್ತೀಚಿನ ಹುಲಿ ಗಣತಿ ಅಂಕಿಅಂಶವನ್ನು ಬಿಡುಗಡೆ ಮಾಡಿದ್ದಾರೆ.

Project Tiger Explained: ಹುಲಿ ಯೋಜನೆಗೆ ಸುವರ್ಣ ಸಂಭ್ರಮ, ಏನಿದು ಪ್ರಾಜೆಕ್ಟ್‌ ಟೈಗರ್‌?
Project Tiger Explained: ಹುಲಿ ಯೋಜನೆಗೆ ಸುವರ್ಣ ಸಂಭ್ರಮ, ಏನಿದು ಪ್ರಾಜೆಕ್ಟ್‌ ಟೈಗರ್‌? (Twitter account of PM Modi)

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು(Narendra Modi) ಇಂದು ರಾಜ್ಯದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ (Bandipur Tiger Reserve in Karnataka) ಭೇಟಿ ನೀಡಿದ್ದು, ಪ್ರಾಜೆಕ್ಟ್‌ ಟೈಗರ್‌ಗೆ 50 ವರ್ಷ ತುಂಬಿರುವ ಸುವರ್ಣ ಸಂಭ್ರಮದ ಸಮಯದಲ್ಲಿ ಇತ್ತೀಚಿನ ಹುಲಿ ಗಣತಿ ಅಂಕಿಅಂಶವನ್ನು ಬಿಡುಗಡೆ ಮಾಡಿದ್ದಾರೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷ ಕರ್ನಾಟಕಕ್ಕೆ ನೀಡಿದ ಎಂಟನೇ ಭೇಟಿಯಾಗಿದೆ. ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕದ ಮೊದಲ ಭೇಟಿ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಏನಿದು ಪ್ರಾಜೆಕ್ಟ್ ಟೈಗರ್?

ಪ್ರಾಜೆಕ್ಟ್ ಟೈಗರ್ ಎನ್ನುವುದು ಕೇಂದ್ರ ಸರಕಾರದ ಯೋಜನೆಯಾಗಿದೆ. ಭಾರತ ಸರ್ಕಾರವು 1 ಏಪ್ರಿಲ್ 1973 ರಂದು ಅಸ್ಸಾಂ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ವಿವಿಧ ರಾಜ್ಯಗಳ ಒಂಬತ್ತು ಮೀಸಲು ಪ್ರದೇಶದಲ್ಲಿ ಸರಿಸುಮಾರು 14,000 ಚ.ಕಿ.ಮೀ.ಯಲ್ಲಿ ಈ ಪ್ರಾಜೆಕ್ಟ್‌ ಟೈಗರ್‌ ಆರಂಭಿಸಿತು. ಅಭಿವೃದ್ಧಿ ಮತ್ತು ವನ್ಯಜೀವಿ ಸಂರಕ್ಷಣೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಸಂದರ್ಭದಲ್ಲಿ ಹುಲಿ ಜನಸಂಖ್ಯೆಯನ್ನು ಉಳಿಸಿಕೊಳ್ಳುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ವೆಬ್‌ಸೈಟ್‌ನ ಪ್ರಕಾರ, ಹುಲಿಯು ಅಂಬ್ರೆಲ್ಲಾ ಜಾತಿಯ ಒಂದು ಪರಭಕ್ಷಕ, ಬೇಟೆ ಪ್ರಾಣಿಯಾಗಿದ್ದು, ಅರಣ್ಯದಲ್ಲಿ ಪ್ರಾಣಿಗಳ ಜನಸಂಖ್ಯೆ ಸಮತೋಲನಕ್ಕೂ ನೆರವಾಗುತ್ತದೆ. ಆರಂಭದಲ್ಲಿ, ಈ ಯೋಜನೆಯು 18,278 ಚದರ ಕಿಲೋಮೀಟರ್‌ಗಳಲ್ಲಿ ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿತ್ತು. ಈಗ, ಈ ಯೋಜನೆಯು ಸುಮಾರು 75,000 ಚದರ ಕಿಮೀ ಪ್ರದೇಶದ 53 ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ.

ದೇಶವು ಸುಮಾರು 3,000 ಹುಲಿಗಳನ್ನು ಹೊಂದಿದೆ. ಜಾಗತಿಕವಾಗಿ ಇರುವ ಕಾಡು ಹುಲಿ ಜನಸಂಖ್ಯೆಗೆ ಹೋಲಿಸಿದರೆ ಇದು ಶೇಕಡ 70ಕ್ಕಿಂತ ಹೆಚ್ಚು. ಈ ಸಂಖ್ಯೆಯು ವರ್ಷಕ್ಕೆ ಶೇಕಡ 6 ರಷ್ಟು ಹೆಚ್ಚುತ್ತಿದೆ. ಉತ್ತಮ ತಂತ್ರಜ್ಞಾನ ಮತ್ತು ಸಂರಕ್ಷಣಾ ಕಾರ್ಯವಿಧಾನಗಳಿಂದಾಗಿ ಹುಲಿ ಬೇಟೆಯು ಗಮನಾರ್ಹವಾಗಿ ಇಳಿಕೆ ಕಂಡರೂ ಆವಾಸಸ್ಥಾನಗಳ ವಿಘಟನೆ ಮತ್ತು ಅವನತಿಯ ಕಾರಣದಿಂದಾಗಿ ದೊಡ್ಡ ಬೆಕ್ಕುಗಳು ಅಪಾಯದಲ್ಲಿವೆ ಎಂದು ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ ಎಸ್‌ಪಿ ಯಾದವ್ ಹೇಳಿದ್ದಾರೆ.

ಹುಲಿ ಆವಾಸಸ್ಥಾನಗಳನ್ನು ನಿರ್ವಹಿಸುವ ಕಾರ್ಯವನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯು ಅಭಿವೃದ್ಧಿ ಮತ್ತು ಸಂರಕ್ಷಣಾ ಚಟುವಟಿಕೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಸದಸ್ಯ ಕಾರ್ಯದರ್ಶಿಯೂ ಆಗಿರುವ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ 50 ವರ್ಷಗಳ ಯೋಜನೆಯೇನು?

“ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿದ ಆಧಾರದ ಮೇಲೆ ಹುಲಿ ಆವಾಸಸ್ಥಾನಗಳಲ್ಲಿ ಕಾರ್ಯಸಾಧ್ಯವಾದ ಮತ್ತು ಸಮರ್ಥನೀಯವಾದ ಹುಲಿ ಜನಸಂಖ್ಯೆಯನ್ನು ಹೊಂದುವುದು ಪ್ರಮುಖ ಗುರಿಯಾಗಿದೆ. ನಾವು ದೇಶದ ಹುಲಿಗಳ ಸಂಖ್ಯೆಯನ್ನು ಅದೇ ವೇಗದಲ್ಲಿ ಹೆಚ್ಚಿಸಲು ಸಾಧ್ಯವಿಲ್ಲದ ಕಾರಣ (ಅದಕ್ಕೆ) ನಾನು ಸಂಖ್ಯೆಯನ್ನು ತಿಳಿಸುತ್ತಿಲ್ಲ. ಏಕೆಂದರೆ ಅದು ಮನುಷ್ಯರ ಜತೆ ಸಂಘರ್ಷವನ್ನು ಹೆಚ್ಚಿಸುತ್ತದೆ" ಎಂದು ಯಾದವ್‌ ಹೇಳಿದ್ದಾರೆ.

ಪ್ರಾಜೆಕ್ಟ್ ಟೈಗರ್ ಸ್ಥಳೀಯ ಜನರಿಗೆ ವಾರ್ಷಿಕವಾಗಿ 45 ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಅರಣ್ಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಅಲ್ಲದೆ, ಪರಿಸರ ಅಭಿವೃದ್ಧಿ ಸಮಿತಿಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮಹತ್ವ

1973 ರಲ್ಲಿ ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿದಾಗ, ಕರ್ನಾಟಕದ ಬಂಡೀಪುರವು ಪ್ರಮುಖ ಕಾರ್ಯಕ್ರಮದ ಅಡಿಯಲ್ಲಿ ತರಲಾದ ಮೊದಲ ಒಂಬತ್ತು ಮೀಸಲು ಪ್ರದೇಶಗಳಲ್ಲಿ ಒಂದಾಗಿತ್ತು. ಫೆಬ್ರವರಿ 19, 1941 ರ ಸರ್ಕಾರದ ಅಧಿಸೂಚನೆಯ ಅಡಿಯಲ್ಲಿ ಸ್ಥಾಪಿಸಲಾದ ವೇಣುಗೋಪಲ್‌ ವೈಲ್ಡ್‌ಲೈಫ್‌ ಪಾರ್ಕ್‌ನ (Venugopal Wildlife Park) ಬಹುತೇಕ ಅರಣ್ಯ ಪ್ರದೇಶಗಳನ್ನು ಒಳಗೊಂಡಂತೆ ಈ ಬಂಡೀಪುರ ನ್ಯಾಷನಲ್‌ ಪಾರ್ಕ್‌ ಅನ್ನು ಸ್ಥಾಪಿಸಲಾಗಿದೆ. 1985 ರಲ್ಲಿ 874.20 ಚದರ ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ವಿಸ್ತರಿಸಿ ಬಂಡೀಪುರ ನ್ಯಾಷನಲ್‌ ಪಾರ್ಕ್‌ ಎಂದು ಹೆಸರಿಡಲಾಯಿತು. ಕೆಎಫ್‌ಡಿಸಿ (ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ) ಪ್ಲಾಂಟೇಶನ್ ಪ್ರದೇಶದ 39.80 ಚದರ ಕಿ.ಮೀ ಪ್ರದೇಶವನ್ನು 2007-08ರಲ್ಲಿ ಇದಕ್ಕೆ ಹಸ್ತಾಂತರಿಸಲಾಯಿತು. 2010-11ರಲ್ಲಿ 2010-11ರಲ್ಲಿ ನುಗು ವನ್ಯಜೀವಿ ಅಭಯಾರಣ್ಯವನ್ನು(Nugu Wildlife Sanctuary) ಮೈಸೂರಿನ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಲಾಯಿತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ಎತ್ತರದ ಪಶ್ಚಿಮ ಘಟ್ಟಗಳ ಸುಂದರವಾದ ಪರಿಸರದ ನಡುವೆ ಇದೆ. ಇದರ ವಾಯುವ್ಯದಲ್ಲಿ ಕರ್ನಾಟಕದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು (ನಾಗರಹೊಳೆ), ದಕ್ಷಿಣದಲ್ಲಿ ತಮಿಳುನಾಡಿನ ಮುದುಮಲೈಗೆ ರೂಪಿಸುವ ನೀಲಗಿರಿ ಜೈವಿಕ ಮೀಸಲು ಪ್ರದೇಶದ ಮತ್ತು ನೈಋತ್ಯಕ್ಕೆ ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದ ಪ್ರಮುಖ ಭಾಗವಾಗಿದೆ. ಈ ಪ್ರದೇಶವು ಹಿಂದಿನ ಮಹಾರಾಜರ ಖಾಸಗಿ ಬೇಟೆ ಪ್ರದೇಶವಾಗಿತ್ತು. ಹುಲಿ ಮತ್ತು ಅದರ ಆವಾಸಸ್ಥಾನವನ್ನು ಉಳಿಸಲು ದೇಶಾದ್ಯಂತ ಗುರುತಿಸಲಾದ ಮೂವತ್ತು ಮೀಸಲುಗಳಲ್ಲಿ ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶವು ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಕಾಡು ಆನೆಯ ಕೊನೆಯ ಆಶ್ರಯ ತಾಣಗಳಲ್ಲಿ ಒಂದಾಗಿದೆ. ಹುಲಿ ಮತ್ತು ಆನೆ ಹೊರತುಪಡಿಸಿ ಸ್ಲಾತ್‌ ಕರಡಿಗಳು, ಗೌರ್‌ಗಳಂತಹ ಹಲವು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವಾಗಿದೆ.

IPL_Entry_Point