ಕನ್ನಡ ಸುದ್ದಿ  /  Karnataka  /  Ashwathnarayan Says Contribution Of Kshatriyas To The Country Is Immense

Ashwathnarayan C N: 'ನಾಡಿನ ರಕ್ಷಣೆಗೆ ಕ್ಷತ್ರಿಯರ ಕೊಡುಗೆ ಅಪಾರ, ನಿಮ್ಮ ನಡೆ ವಿಧಾನಸೌಧಕ್ಕೂ ಮುಂದುವರೆಯಬೇಕು'

ಕ್ಷತ್ರಿಯರ ನಡೆ, ರಾಜಧಾನಿಯ ಕಡೆ ಎಂಬ ಘೋಷವಾಕ್ಯದೊಂದಿಗೆ ಸಮಾವೇಶ ನಡೆಯುತ್ತಿದೆ. ಅದಕ್ಕೂ ಮೀರಿ ಕ್ಷತ್ರಿಯರ ನಡೆ ವಿಧಾನಸೌಧದ ಒಳಕ್ಕೂ ಮುಂದುವರೆಯಬೇಕು ಎಂದು ಸಚಿವರು ಆಶಿಸಿದ್ದಾರೆ.

ಡಾ. ಸಿ ಎನ್ ಅಶ್ವತ್ಥನಾರಾಯಣ
ಡಾ. ಸಿ ಎನ್ ಅಶ್ವತ್ಥನಾರಾಯಣ

ಬೆಂಗಳೂರು: ನಾಡಿನ ರಕ್ಷಣೆ ಹಾಗೂ ಸಂಸ್ಕೃತಿ ಪರಂಪರೆಗಳ ಹಿರಿಮೆಗೆ ಕ್ಷತ್ರಿಯರ ಕೊಡುಗೆ ಅಪಾರವಾದುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕರ್ನಾಟಕ ಕ್ಷತ್ರಿಯರ ಒಕ್ಕೂಟದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಕ್ಷತ್ರಿಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಕ್ಷತ್ರಿಯರ ನಡೆ, ರಾಜಧಾನಿಯ ಕಡೆ" ಎಂಬ ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯುತ್ತಿದೆ. ಅದಕ್ಕೂ ಮೀರಿ ಕ್ಷತ್ರಿಯರ ನಡೆ ವಿಧಾನಸೌಧದ ಒಳಕ್ಕೂ ಮುಂದುವರೆಯಬೇಕು ಎಂದು ಅವರು ಆಶಿಸಿದರು.

ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕ್ಷತ್ರಿಯರ ಹಿತರಕ್ಷಣೆಗೆ ಬದ್ಧವಾಗಿದ್ದು, ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.

ಅಖಂಡ ಭಾರತ ನಿರ್ಮಾಣಕ್ಕೆ ಕ್ಷತ್ರಿಯರ ಕೊಡುಗೆ ಏನೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಧರ್ಮ, ಭಾಷೆ ಹಾಗೂ ಭೂಪ್ರದೇಶದ ರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿರುವ ಕ್ಷತ್ರಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಆರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೂ ಮಾತನಾಡಿದರು. ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್, ತಿಗಳರ ಜನಾಂಗದ ಮುಖಂಡ ಸುಬ್ಬಣ್ಣ ಮತ್ತಿತರರು ಇದ್ದರು.

ಮನ್‌ ಕಿ ಬಾತ್‌ ಕಾರ್ಯಕ್ರಮ ಆಲಿಸಿದ ಸಚಿವರು

ಪ್ರಧಾನಿ ನರೇಂದ್ರ ಮೋದಿ ಅವರ ವರ್ಷದ ಮೊದಲ ಮನ್‌ ಕಿ ಬಾತ್‌ ರೇಡಿಯೋ ಕಾರ್ಯಕ್ರಮವನ್ನು ಪುಲಕೇಶಿನಗರದ ಕಾರ್ಯಕರ್ತರ ಜತೆ ಸಚಿವರು ವೀಕ್ಷಿಸಿದರು. ಸಮಾಜದ ಶ್ರೇಯಕ್ಕಾಗಿ ಶ್ರಮಿಸುತ್ತಿರುವ ದೇಶದ ತೆರೆ ಮರೆಯ ಸಾಧಕರನ್ನು ಗುರುತಿಸಿ, ಗೌರವಿಸುವ ಜತೆ ದೇಶೀಯ ಕೃಷಿ, ಸ್ವದೇಶಿ ಉತ್ಪನ್ನಗಳನ್ನು ಪ್ರಧಾನಿಯವರು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ರಾಜ್ಯ ನಮ್ಮದು

ರಾಜ್ಯದ ಕಲಬುರಗಿ, ಬೀದರ್ ಜಿಲ್ಲೆಗಳ ಸಿರಿಧಾನ್ಯ ಉತ್ಪನ್ನಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ಭಾಷಣದಲ್ಲಿ ಶ್ಲಾಘಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ರಾಜ್ಯ ನಮ್ಮದು. ಅವುಗಳ ಉತ್ಪನ್ನದ ಮೌಲ್ಯವರ್ಧನೆ, ಹೆಚ್ಚಿನ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಮಲ್ಲೇಶ್ವರದ ಸದಾಶಿವನಗರದಲ್ಲಿ ಬೇಸ್‌ಲೈನ್‌ ಅಕಾಡೆಮಿ ಆಯೋಜಿಸಿದ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿಗೆ ಆಗಮಿಸಿದ ವಿವಿಧ ತಂಡಗಳಿಗೆ ಸಚಿವರು ಶುಭ ಹಾರೈಸಿದರು. ಆಡುಮಲ್ಲೇಶ್ವರ ಪರಿಕಲ್ಪನೆಯಡಿ ಕ್ಷೇತ್ರದಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ಕ್ರೀಡಾ ಸೌಲಭ್ಯ ಕಲ್ಪಿಸಲಾಗಿದೆ. ಕ್ರೀಡಾಸಕ್ತ ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂಬುದು ಸಚಿವರು ಆಶಯ ವ್ಯಕ್ತಪಡಿಸಿದರು.

IPL_Entry_Point