ಕನ್ನಡ ಸುದ್ದಿ  /  ಕರ್ನಾಟಕ  /  Prabhakar Bhat On Arun Puthila: ಅವರದ್ದು ಯಾವ ಸೀಮೆಯ ಹಿಂದುತ್ವ; ಅರುಣ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ

Prabhakar Bhat on Arun Puthila: ಅವರದ್ದು ಯಾವ ಸೀಮೆಯ ಹಿಂದುತ್ವ; ಅರುಣ್ ಪುತ್ತಿಲ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ವಾಗ್ದಾಳಿ

Arun Puthila Hindutva Remark: ಬಿಜೆಪಿಗೆ ರೆಬೆಲ್ ಆಗಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರನಾಗಿ ನಿಂತಿರುವ ಅರುಣ್ ಕುಮಾರ್ ಪುತ್ತಿಲ, ತಾನು ಹಿಂದುತ್ವದ ಆಧಾರದಲ್ಲಿ ಸ್ಪರ್ಧೆಗಿಳಿದಿದ್ದೇನೆ ಎಂದು ಹೇಳುತ್ತಿರುವುದಕ್ಕೆ ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಪುತ್ತೂರಿನ ಡಾ. ಎಂ.ಕೆ.ಪ್ರಸಾದ್ ಭಂಡಾರಿ ಹರಿಹಾಯ್ದಿದಿದ್ದಾರೆ.

ಅರುಣ್ ಕುಮಾರ್ ಪುತ್ತಿಲ (ಎಡಚಿತ್ರ) - ಕಲ್ಲಡ್ಕ ಪ್ರಭಾಕರ ಭಟ್ (ಬಲಚಿತ್ರ)
ಅರುಣ್ ಕುಮಾರ್ ಪುತ್ತಿಲ (ಎಡಚಿತ್ರ) - ಕಲ್ಲಡ್ಕ ಪ್ರಭಾಕರ ಭಟ್ (ಬಲಚಿತ್ರ)

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಪುತ್ತೂರು ಕ್ಷೇತ್ರದಿಂದ (Puttur Constituency) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿರುವ ಅರುಣ್ ಕುಮಾರ್ ಪುತ್ತಿಲ (Arun Kumar Puthila) ತಾನು ಹಿಂದುತ್ವದಡಿ ಸ್ಪರ್ಧೆಗಿಳಿದಿದ್ದೇನೆ ಎಂದು ಹೇಳಿಕೆ ನೀಡಿರುವುದರ ವಿರುದ್ಧ ಹಿಂದು ಸಂಘಟನೆಗಳ ಪ್ರಮುಖ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುತ್ವ (Hindutva) ಹೆಸರಲ್ಲಿ ಸ್ಪರ್ಧೆ ಎನ್ನುವ ಪುತ್ತಿಲರದ್ದು ಯಾವ ಸೀಮೆಯ ಹಿಂದುತ್ವ ಎಂದು ಪ್ರಶ್ನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಿಜೆಪಿಗಿಂತ ದೊಡ್ಡ ಹಿಂದುತ್ವ ಯಾವುದೂ ಇಲ್ಲ

ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಪ್ರವೀಣ್ ನೆಟ್ಟಾರು ಅವರ ಮನೆಯ ಗೃಹಪ್ರವೇಶಕ್ಕೆಂದು ಸುಳ್ಯಕ್ಕೆ ಆಗಮಿಸಿದ ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಬಳಿ ಸುದ್ದಿಗಾರರು ಪುತ್ತಿಲ ಸ್ಪರ್ಧೆ ಕುರಿತು ಪ್ರಶ್ನಿಸಿದರು. ಬಿಜೆಪಿಯಿಂದ ದೊಡ್ಡ ಹಿಂದುತ್ವ ಯಾವುದ್ರೀ, ಇಡೀ ಜಗತ್ತು ಬಿಜೆಪಿಯನ್ನು ಹಿಂದುತ್ವದ ಪಾರ್ಟಿ ಎಂದು ಹೇಳುತ್ತದೆ. ಯಾರೋ ಒಬ್ಬ ನಿಂತು ನಾನು ಹಿಂದುತ್ವ ಎಂದು ಹೇಳಿದ್ದಾರೆ. ಗೋಸಾಗಾಟ ತಡೆ ಸಂದರ್ಭ ಮುಂದೆ ನಿಂತ್ರೆ ಹಿಂದುತ್ವವಾಗುವುದಿಲ್ಲ. ಅವರೆಂಥ ಹಿಂದುತ್ವ? ಭಾರತೀಯ ಜನತಾ ಪಾರ್ಟಿಗಿಂತ ಮೇಲಿನ ಹಿಂದುತ್ವ ಯಾವುದೂ ಇಲ್ಲ. ಅಮಿತ್ ಶಾ ಮಾತಾಡ್ತೇನೆ ಎಂದರೂ ಧಿಕ್ಕರಿಸಿದ ವ್ಯಕ್ತಿ ಅವರೇನು ಹಿಂದುತ್ವಕ್ಕಾಗಿ ಕೆಲಸ ಮಾಡಬಹುದು, ಪಕ್ಷ ಇಲ್ಲದವರು ಏನು ಅಭಿವೃದ್ಧಿ ಮಾಡಬಹುದು ಎಂದು ಪ್ರಶ್ನಿಸಿದರು. ಬಿಜೆಪಿ ಉಳಿಸಿ ಬೆಳೆಸಿದರೇ ಹಿಂದುತ್ವ ಉಳಿಸಿದಂತೆ ಎಂದು ಹೇಳಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಯಾವತ್ತಾದರೂ ಬಿಜೆಪಿಗೆ ಓಟು ಹಾಕಿದ್ದಾರಾ?

ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದು ಮುಖಂಡ ಡಾ. ಎಂ.ಕೆ.ಪ್ರಸಾದ್ ಭಂಡಾರಿ, ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ವಿರುದ್ದ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರು ಈ ತನಕ ಯಾವತ್ತಾದರೂ ಬಿಜೆಪಿಗೆ ಓಟು ಹಾಕಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು.

ಬಿಜೆಪಿ ನೀಡಿದ ಹುದ್ದೆಯನ್ನು ಅವರು ತಿರಸ್ಕರಿಸುತ್ತಾ, ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡದೆ, ಕಚೇರಿಗೂ ಬಾರದೆ, ಮುಖಂಡರನ್ನೂ ಸಂಪರ್ಕಿಸದೆ, ತನಗೆ ಟಿಕೆಟ್ ನೀಡಬೇಕು ಎಂದರೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಡಾ. ಭಂಡಾರಿ, ಅವರ ಮೇಲೆ ವಿವಿಧ ಪ್ರಕರಣಗಳಲ್ಲಿ ಹಲವಾರು ಆಪಾದನೆಗಳಿವೆ. ಹಿಂದುಗಳಿಗೇ ತೊಂದರೆ ನೀಡಿದ ಆಪಾದನೆಗಳೂ ಇವೆ. ಇಂಥವರನ್ನು ಹಿಂದೂ ನಾಯಕ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎಲ್ಲಾದ್ರೂ ಗಲಾಟೆ ಆದಾಗ ನಡುವೆ ಬಂದು ನಿಂತು ಫೋಸು ಕೊಟ್ಟು, ಬಳಿಕ ನಾನು ಪರಿಹರಿಸಿದೆ ಎಂದು ಹೇಳುವುದು ಆತನದ್ದು ವಕ್ರ ಮನಸ್ಸು ನನಗೆ ಅಧಿಕಾರ ಬೇಕು ಎಂಬ ಹಂಬಲ. ತಾನು ಮೋದಿ ಬೆಂಬಲಿಗ, ಬಿಜೆಪಿ ಬೆಂಬಲಿಗ ಎನ್ನುವ ಪುತ್ತಿಲ ಅವರು ಪಕ್ಷದ ವರಿಷ್ಠರಾದ ಮೋದಿ, ನಡ್ಡಾ, ಅಮಿತ್ ಶಾ ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸದೆ. ಪಕ್ಷದ ವರಿಷ್ಠರು ದೂರವಾಣಿ ಕರೆ ಮಾಡಿದಾಗ ಅದನ್ನು ಧಿಕ್ಕರಿಸಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಇದೀಗ ಪಕ್ಷದ ಮತ್ತು ಮೋದಿ ಅವರ ಹೆಸರು ಬಳಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಸಂಘಟನೆಗಳನ್ನು ಬದಲಾಯಿಸಿದರು

ಈ ಹಿಂದೆ ಬಜರಂಗದಳ ಜಿಲ್ಲಾ ಸಂಚಾಲಕರಾಗಿದ್ದ ಪುತ್ತಿಲ ನಂತರ ಪ್ರಮೋದ್ ಮುತಾಲಿಕ್‌ರೊಂದಿಗೆ ಕೈಜೋಡಿಸಿ ಶ್ರೀರಾಮ ಸೇನೆಯ ಸಂಚಾಲಕರಾದರು. ತನ್ನದೇ ಹಿಂದೂ ಸೇನೆ ರಚಿಸಿಕೊಂಡರು. ಬಳಿಕ ಅದನ್ನೂ ಅರ್ಧದಲ್ಲಿ ಕೈ ಬಿಟ್ಟರು. ಮೋದಿ ಪರಿಚಯದ ದೃಷ್ಠಿಯಿಂದ ಸ್ಥಾಪಿಸಲಾದ ನಮೋ ಬ್ರಿಗೇಡ್‌ನಲ್ಲಿ ನಾನೇ ಅವರನ್ನು ಸೇರಿಕೊಂಡಿದ್ದೆ. ನಮಗೆ ಉಗ್ರ ಪ್ರವೃತ್ತಿಯ ಶಾಸಕರು ಬೇಡ. ಶಾಂತ ಪ್ರವೃತ್ತಿಯ ಶಾಸಕರು ಬೇಕು. ಆಶಾ ತಿಮ್ಮಪ್ಪ ಅವರು ಶಾಂತ ಪ್ರವೃತ್ತಿಯವರು ಅವರು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪುತ್ತಿಲ ಅವರಿಗೆ ಕಾಂಗ್ರೆಸ್ ಹಿಂಬಾಗದಿಂದ ಸಹಾಯ ಮಾಡುತ್ತಿದೆ. ಆದರೆ ಅವರು ಗೆಲ್ಲುವುದಿಲ್ಲ. ಅವರಿಗೆ ಗೆಲುವಿನ ಕನಸು ಬೇಡ. ಆಶಾ ತಿಮ್ಮಪ್ಪ ಅವರ ಹೆಸರನ್ನು ಸೂಚಿಸಿರುವುದು ನಾನೇ ಎಂದು ಡಾ. ಪ್ರಸಾದ್ ಅವರು ಹೇಳಿದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point