ಕನ್ನಡ ಸುದ್ದಿ  /  ಕರ್ನಾಟಕ  /  Sslc Result: 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಿಸಲ್ಟ್ ಹೀಗೆ ನೋಡಿ, ಡೈರೆಕ್ಟ್ ಲಿಂಕ್ ಇಲ್ಲಿದೆ

SSLC Result: 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಿಸಲ್ಟ್ ಹೀಗೆ ನೋಡಿ, ಡೈರೆಕ್ಟ್ ಲಿಂಕ್ ಇಲ್ಲಿದೆ

ಎಸ್‌ಎಸ್‌ಎಲ್‌ಸಿ (SSLC Result 2023) ಫಲಿತಾಂಶವನ್ನು ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯ ಬಳಿಕ karresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು.

SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು 10 ಗಂಟೆಗೆ ಪ್ರಕಟ
SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಂದು 10 ಗಂಟೆಗೆ ಪ್ರಕಟ

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC Result 2023) ಫಲಿತಾಂಶವನ್ನು ಇಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಲಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯ ಬಳಿಕ https://karresults.nic.in/ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರಾಜ್ಯದ ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಫಲಿತಾಂಶ ಪ್ರಕಟವಾಗುವುದನ್ನು ಕಾಯುತ್ತಿದ್ದಾರೆ. ಈ ಹಿಂದಿನ ಅಪ್‌ಡೇಟ್‌ಗಳ ಪ್ರಕಾರ ಚುನಾವಣೆ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಇದೀಗ ಚುನಾವಣೆಗೆ ಮೊದಲೇ ಫಲಿತಾಂಶ ಪ್ರಕಟವಾಗುತ್ತಿದೆ. ಈಗ ಎಲ್ಲರಲ್ಲಿಯೂ ಸ್ಮಾರ್ಟ್‌ಫೋನ್‌ ಇರುವುದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಬೆರಳ ತುದಿಯಲ್ಲಿಯೇ ಲಭ್ಯವಾಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ಮೊಬೈಲ್‌ ಲಭ್ಯತೆ ಇಲ್ಲದವರು, ಇಂಟರ್‌ನೆಟ್‌ ಸ್ಲೋ ಇರುವವರು ಫಲಿತಾಂಶ ವೀಕ್ಷಣೆಗೆ ಹತ್ತಿರದ ಸೈಬರ್‌ ಕೇಂದ್ರಗಳು ಅಥವಾ ಇತರರ ಸಹಾಯ ಪಡೆಯಬೇಕಾಗಬಹುದು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆಗೆ ವೆಬ್‌ಸೈಟ್‌ ವಿಳಾಸ

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಣೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಎರಡು (ಅಧಿಕೃತ ಲಿಂಕ್‌ ಒಂದು ಮತ್ತು ಅಧಿಕೃತ ಲಿಂಕ್‌ ಎರಡು) ಪ್ರಮುಖ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು. ಅತ್ಯಧಿಕ ಜನರು ಫಲಿತಾಂಶ ವೀಕ್ಷಣೆಗೆ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ ಆರಂಭದಲ್ಲಿ ಕೆಲವರಿಗೆ ಸರ್ವರ್‌ ಡೌನ್‌ ಅಥವಾ ಸರ್ವರ್‌ ಸ್ಲೋ ಇತ್ಯಾದಿ ಅನುಭವವಾಗಬಹುದು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಲು ನೇರ ಲಿಂಕ್‌ ಇಲ್ಲಿದೆ. ಕ್ಲಿಕ್‌ ಮಾಡಿ

ಎಸ್‌ಎಂಎಸ್‌ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ

ವಿದ್ಯಾರ್ಥಿಗಳು ಶಾಲಾ ದಾಖಲಾತಿ ಸಮಯದಲ್ಲಿ ನೋಂದಾಯಿಸಿಕೊಂಡ ಫೋನ್‌ ನಂಬರ್‌ಗಳಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಎಸ್‌ಎಂಎಸ್‌ ಮೂಲಕ ಬರುತ್ತದೆ. ಹೀಗಾಗಿ, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಸಂಕ್ಷಿಪ್ತ ಸಂದೇಶವನ್ನು ಮೊಬೈಲ್‌ ಮೂಲಕವೇ ಪಡೆಯಬಹುದಾಗಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡುವುದು ಹೇಗೆ?

ಮೊದಲಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಎರಡು ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದು ವೆಬ್‌ಸೈಟ್‌ಗೆ ಹೋಗಿ. ವೆಬ್‌ಸೈಟ್‌ ವಿಳಾಸ: https://karresults.nic.in/ ಮತ್ತು https://kseab.karnataka.gov.in

ಅಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಎಂಬ ಲಿಂಕ್‌ ಇರುತ್ತದೆ. ಆ ಕೊಂಡಿಯನ್ನು ಕ್ಲಿಕ್‌ ಮಾಡಿ.

ಬಳಿಕ ತೆರೆದುಕೊಳ್ಳುವ ಪುಟದಲ್ಲಿ ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಮತ್ತು ರಿಜಿಸ್ಟ್ರೇಷನ್‌ ಸಂಖ್ಯೆ ನೀಡಿ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.

ಫಲಿತಾಂಶದ ಪುಟ ತೆರೆದುಕೊಳ್ಳುತ್ತದೆ. ಫಲಿತಾಂಶವನ್ನು ಪ್ರಿಂಟ್‌ ತೆಗೆದುಕೊಳ್ಳಿ ಅಥವಾ ಪಿಡಿಎಫ್‌ ಆಗಿ ಸೇವ್‌ ಮಾಡಿಟ್ಟುಕೊಳ್ಳಿ.

ಈ ವರ್ಷ ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಮಾರ್ಚ್ 30 ರಿಂದ ಏಪ್ರಿಲ್ 15 ರವರಗೆ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು.

IPL_Entry_Point