ಕನ್ನಡ ಸುದ್ದಿ  /  Karnataka  /  Karnataka Congress 40% Sarkara Campaign: Appalled: Bengaluru Actor Says Pic Used Without Consent Amid Cong Campaign

Karnataka Congress 40% sarkara Campaign: ತನ್ನ ಫೋಟೋ ನೋಡಿ ಗಾಬರಿ ಬಿದ್ದ ನಟ ಅಖಿಲ್‌ ಅಯ್ಯರ್‌, ಕಾಂಗ್ರೆಸ್‌ ವಿರುದ್ಧ ಕಾನೂನು ಸಮರ

ಕಾಂಗ್ರೆಸ್‌ ಪ್ರಾಯೋಜಕತ್ವದ ʻ40% ಸರ್ಕಾರ" ಅಭಿಯಾನದ ಪೋಸ್ಟರ್‌ ನೋಡಿ ಬೆಂಗಳೂರು ಮೂಲದ ನಟ ಅಖಿಲ್‌ ಅಯ್ಯರ್‌ ಬೇಸ್ತು ಬಿದ್ದಿದ್ದಾರೆ. ರ್ನಾಟಕ ಕಾಂಗ್ರೆಸ್‌ ಪಕ್ಷ ಆಡಳಿತಾರೂಢ ಬಿಜೆಪಿ ವಿರುದ್ಧ ಅಭಿಯಾನಕ್ಕೆ ತನ್ನ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಅಭಿಯಾನಕ್ಕೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ನಟ ಅಖಿಲ್‌ ಅಯ್ಯರ್‌, ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಅಭಿಯಾನಕ್ಕೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ನಟ ಅಖಿಲ್‌ ಅಯ್ಯರ್‌, ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇಸಿಎಂ ಪೋಸ್ಟರ್‌ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಈಗ 40 ಪರ್ಸೆಂಟ್‌ ಸರ್ಕಾರ ಅಭಿಯಾನದಲ್ಲಿ ಕಾನೂನು ಸಮರ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಬೆಂಗಳೂರು ಮೂಲದ ನಟ ಅಖಿಲ್‌ ಅಯ್ಯರ್‌ ಈಗ ಕರ್ನಾಟಕ ಕಾಂಗ್ರೆಸ್‌ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ʻ40% ಸರ್ಕಾರ" ಅಭಿಯಾನದ ಪೋಸ್ಟರ್‌ನಲ್ಲಿ ತನ್ನ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿರುವುದಕ್ಕೆ ನಟ ಅಖಿಲ್‌ ಅಯ್ಯರ್‌ ಸಾಮಾಜಿಕ ತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ʻ40% ಸರ್ಕಾರ" ಅಭಿಯಾನದ ಪೇಜ್‌ನಲ್ಲಿ ತನ್ನ ಫೋಟೋ ನೋಡಿ ಗಾಬರಿಯಾಗಿದ್ದಾಗಿ ಅಖಿಲ್‌ ಹೇಳಿಕೊಂಡಿದ್ದಾರೆ.
ಅಖಿಲ್‌ ಅಯ್ಯರ್‌ ಅವರ ಟ್ವಿಟರ್‌ ಖಾತೆಯ ಪರಿಚಯದಲ್ಲಿ ಅವರು ತಮ್ಮನ್ನು ನಟ, ಪ್ರೊಡ್ಯೂಸರ್‌ ಎಂದು ಪರಿಚಯಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ʻ40% ಸರ್ಕಾರ" ಅಭಿಯಾನಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ರೀತಿಯಿಂದಲೂ ಈ ಅಭಿಯಾನದಲ್ಲಿ ತಾನು ತೊಡಗಿಕೊಂಡಿಲ್ಲ. ಈ ರೀತಿ ಅನಾಮತ್ತಾಗಿ ಫೋಟೋ ಬಳಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅಖಿಲ್‌ ಹೇಳಿಕೊಂಡಿದ್ದಾರೆ.

"40% ಸರ್ಕಾರ" ಎಂಬ @INCindia ಅಭಿಯಾನಕ್ಕೆ ನನ್ನ ಫೇಸ್‌ ಅನ್ನು ಕಾನೂನುಬಾಹಿರವಾಗಿ ಮತ್ತು ನನ್ನ ಒಪ್ಪಿಗೆಯಿಲ್ಲದೆ ಬಳಸುತ್ತಿರುವುದನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ. ನಾನು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. @RahulGandhi @siddaramaiah @INCKarnataka ದಯವಿಟ್ಟು ಇದನ್ನು ಪರಿಶೀಲಿಸುವಂತೆ ವಿನಂತಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು: “ಅಖಿಲ್ ಅಯ್ಯರ್ ನವ ಭಾರತದ ಮುಖ ಮತ್ತು ಆ ಮುಖವು ಕಾಂಗ್ರೆಸ್ ಸುಳ್ಳು ಮತ್ತು ಸುಳ್ಳು ಪ್ರಚಾರಗಳೊಂದಿಗೆ ಹೊಂದಿಕೆಯಾಗುವುದಿಲ್ಲ. @INCIndia ಮತ್ತು @RahulGandhi ಅವರಿಂದ ಮತ್ತೊಂದು ಸೆಲ್ಫ್ ಗೋಲ್. ನಿಮ್ಮ ಸುಳ್ಳುಗಳನ್ನು ಇಷ್ಟಪಡುವಂತೆ ಮತ್ತು ನಿಮ್ಮ "ದ್ವೇಷ ಅಭಿಯಾನ"ವನ್ನು ಬೆಂಬಲಿಸುವಂತೆ ನೀವು ಜನರನ್ನು ಒತ್ತಾಯಿಸಲು ಸಾಧ್ಯವಿಲ್ಲ, ಮಿಸ್ಟರ್ ರಾಹುಲ್ ಗಾಂಧಿ!‌" ಎಂದು ಹೇಳಿದ್ದಾರೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬೆಂಗಳೂರು ನಗರದಾದ್ಯಂತ ವಿವಾದಾತ್ಮಕ 'ಪೇಸಿಎಂ' ಪೋಸ್ಟರ್‌ಗಳನ್ನು ಅಂಟಿಸುವ ಅಭಿಯಾನವನ್ನು ಕಾಂಗ್ರೆಸ್‌ ಪಕ್ಷವು ಶುರುಮಾಡಿದೆ.

ಇದಲ್ಲದೆ, ‘40 ಪರ್ಸೆಂಟ್ ಸರ್ಕಾರ’ ವೆಬ್‌ಸೈಟ್ ಅನ್ನು ಸಹ ಪ್ರಾರಂಭಿಸಿದೆ. ಆಡಳಿತಾರೂಢ ಬಿಜೆಪಿ ಬಹುತೇಕ ಸಾರ್ವಜನಿಕ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆದ ಆರೋಪವನ್ನೂ ಕಾಂಗ್ರೆಸ್‌ ಮಾಡಿದೆ.

ರಾಜ್ಯ ಸರ್ಕಾರದ ಕೆಲವು ಇಲಾಖೆಗಳು ಪಾವತಿ ಬಿಡುಗಡೆ ಮಾಡಲು 30-40 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ ಇಟ್ಟಿವೆ ಎಂದು ಗುತ್ತಿಗೆದಾರರ ಸಂಘವು ಆರೋಪಿಸುತ್ತಿದ್ದಂತೆ ವಿಷಯ ಸ್ಫೋಟಗೊಂಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಈ ಹಿಂದೆ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತಿ ಯೋಜನೆಗೆ ಗುತ್ತಿಗೆದಾರರಿಂದ ಶೇಕಡಾ 40 ರಷ್ಟು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಮತ್ತು ಕೇವಲ 15 ಲಕ್ಷ ರೂಪಾಯಿಗಳನ್ನು ಲಂಚಕ್ಕಾಗಿ ಖರ್ಚು ಮಾಡಿದ್ದಾರೆ ಎಂದು ಗುತ್ತಿಗೆದಾರರು ಪತ್ರದಲ್ಲಿ ತಿಳಿಸಿದ್ದರು.

IPL_Entry_Point