ಕನ್ನಡ ಸುದ್ದಿ  /  Karnataka  /  Karnataka Election News Congress Leader D K Shivakumar File Police Complaint Against Union Home Minister Amit Shah Mnk

Karnataka Election 2023: ಸ್ಟಾರ್‌ ಕ್ಯಾಂಪೇನರ್‌ ಬಾಯಲ್ಲಿ ಇಂಥ ಮಾತೇ; ಕೋಮು ಗಲಭೆಗೆ ಪ್ರಚೋದನೆ ನೀಡಿದ ಶಾ ವಿರುದ್ಧ ಕಾಂಗ್ರೆಸ್‌ ದೂರು

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಸೃಷ್ಟಿಯಾಗಲಿದೆ ಎಂಬ ಅಮಿತ್‌ ಶಾ ಹೇಳಿಕೆ ಖಂಡಿಸಿರುವ ಕಾಂಗ್ರೆಸ್‌, ಬಿಜೆಪಿಯ ಸ್ಟಾರ್‌ ಕ್ಯಾಂಪೇನರ್‌ ವಿರುದ್ಧ ದೂರು ನೀಡಿದೆ.

ಸ್ಟಾರ್‌ ಕ್ಯಾಂಪೇನರ್‌ ಬಾಯಲ್ಲಿ ಇಂಥ ಮಾತೇ; ಕೋಮು ಗಲಭೆಗೆ ಪ್ರಚೋದನೆ ನೀಡಿದಕ್ಕೆ ಶಾ ವಿರುದ್ಧ ಕಾಂಗ್ರೆಸ್‌ ದೂರು
ಸ್ಟಾರ್‌ ಕ್ಯಾಂಪೇನರ್‌ ಬಾಯಲ್ಲಿ ಇಂಥ ಮಾತೇ; ಕೋಮು ಗಲಭೆಗೆ ಪ್ರಚೋದನೆ ನೀಡಿದಕ್ಕೆ ಶಾ ವಿರುದ್ಧ ಕಾಂಗ್ರೆಸ್‌ ದೂರು

Karnataka Election 2023: ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದರೆ, ಕೋಮ ಗಲಭೆಗೆ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಕಾಂಗ್ರೆಸ್‌ ಕಿಡಿ ಕಾರಿದ್ದು, ಕೇಂದ್ರ ಸಚಿವರ ವಿರುದ್ಧ ದೂರು ನೀಡಿದೆ.

ಕಾಂಗ್ರೆಸ್‌ನ ಮುಖಂಡ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಡಿ.ಕೆ ಶಿವಕುಮಾರ್‌ ಸಮ್ಮುಖದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಗುರುವಾರ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ದೂರು ನೀಡಿ, ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದಂಥವರು ಈ ರೀತಿಯ ಕೆಟ್ಟ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್‌, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ ಎಂದು ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ನಮ್ಮ ರಾಜ್ಯ ಶಾಂತಿಯ ಪ್ರತೀಕ. ಹೀಗಿರುವಾಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಸೃಷ್ಟಿಯಾಗಲಿದೆ ಎಂದಿದ್ದಾರೆ. ಇದರ ಅರ್ಥ ಏನು? ಈ ಮೂಲಕ ವಿಷದ ರಾಜಕಾರಣ ಮಾಡುತ್ತಿದ್ದಾರೆ. ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದಿದ್ದಾರೆ.

"ಬಿಜೆಪಿಯ ಸ್ಟಾರ್‌ ಕ್ಯಾಂಪೇನರ್‌ ಅವರು. ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ನಾವು ಸರ್ಕಾರದ ವಿರುದ್ಧ ಪೇ ಸಿಎಂ ಪ್ರತಿಭಟನೆ ಸಂದರ್ಭದಲ್ಲಿ, ರೈತರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿದಾಗ, ರಾಹುಲ್‌ ಗಾಂಧಿ ಬಂಧನದ ವೇಳೆಯೂ ಪ್ರತಿಭಟನೆ ಮಾಡಿದ್ದೇವು. ಪ್ರತಿ ಸಲವೂ ನಮ್ಮ ಮೇಲೆ ಕೇಸ್‌ ಹಾಕುತ್ತಲೇ ಬರಲಾಗುತ್ತಿದೆ. ಇದೀಗ ಅವರ ವಿರುದ್ಧ ನಾವೂ ದೂರು ನೀಡಿದ್ದೇವೆ" ಎಂದಿದ್ದಾರೆ ಡಿ.ಕೆ ಶಿವಕುಮಾರ್.‌

ದೇಶದ ಗೃಹ ಮಂತ್ರಿಗಳಾದ ಅಮಿತ್‌ ಶಾ ಅವರು, ಜನರ ಮೇಲೆ ಪ್ರಭಾವ ಬೀರಬಲ್ಲವರು. ಇಂಥ ವ್ಯಕ್ತಿ ಕಾಂಗ್ರೆಸ್‌ಗೆ ವೋಟ್‌ ಹಾಕಬೇಡಿ ಎಂದು ಜನರನ್ನೇ ಹೆದರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂಸಾಚಾರ ಆಗಲಿದೆ ಎಂದು ರ್ಯಾಲಿಯಲ್ಲಿ ಮತದಾರರಿಗೆ ಹೇಳುತ್ತಿದ್ದಾರೆ. ಈ ರೀತಿಯ ಬೆದರಿಕೆ ಎಷ್ಟು ಸರಿ. ಹಾಗಾಗಿ ಅಮಿತ್‌ ಶಾ ವಿರುದ್ಧ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ನೀಡಿದ್ದೇವೆ ಎಂದಿದ್ದಾರೆ.

IPL_Entry_Point