ಕನ್ನಡ ಸುದ್ದಿ  /  Karnataka  /  Karnataka Election Result 2023 Vote Counting Date Time When Where To Watch The Poll Results Live Updates In Kannada Uks

Election Result: ಕರ್ನಾಟಕ ಚುನಾವಣೆ 2023ರ ಫಲಿತಾಂಶದ ಲೈವ್‌ ಅಪ್ಡೇಟ್ಸ್‌, ತಾಜಾ ಸುದ್ದಿಗಳನ್ನು ಪಡೆಯಲು ಹೀಗೆ ಮಾಡಿ

Karnataka Election Result 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ (ಮೇ 13) ಪ್ರಕಟವಾಗಲಿದೆ. ಮತ ಎಣಿಕೆ ಕಾರ್ಯದ ಕ್ಷಣ ಕ್ಷಣದ ಅಪ್ಡೇಟ್‌ಗಾಗಿ ಎಲ್ಲಿ ಹುಡುಕುವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರಿನ ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿರುವ ಇವಿಎಂ ಯಂತ್ರಗಳು. (ಸಾಂದರ್ಭಿಕ ಚಿತ್ರ)
ಬೆಂಗಳೂರಿನ ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿರುವ ಇವಿಎಂ ಯಂತ್ರಗಳು. (ಸಾಂದರ್ಭಿಕ ಚಿತ್ರ) (PTI Photo/Shailendra Bhojak)

ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ (Karnataka Assembly Elections) ಬುಧವಾರ ( ಮೇ 10) ಮುಗಿದಿದೆ. ಮೇ 13ಕ್ಕೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಈ ಕಾರಣಕ್ಕಾಗಿ ಮೇ 13ರ ಬೆಳಿಗ್ಗೆ 6 ಗಂಟೆಯಿಂದ ಮೇ 14ರ ಬೆಳಿಗ್ಗೆ 6 ಗಂಟೆಯ ವರೆಗೆ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ (prohibition) ಜಾರಿಗೊಳಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ನಿರ್ಣಾಯಕ ಘಟ್ಟ ತಲುಪಿದೆ. ಮತ ಎಣಿಕೆ ಕಾರ್ಯ ಶನಿವಾರ ನಡೆಯಲಿದೆ. ಮತ ಎಣಿಕೆಯ ಪ್ರತಿ ಸುತ್ತಿನ ಫಲಿತಾಂಶದ ವಿವರ ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇದೆ.

ಕರ್ನಾಟಕದಲ್ಲಿ ಕೆಲವು ಕಡೆ ತ್ರಿಕೋನ ಸ್ಪರ್ಧೆ ಇದ್ದರೆ , ಇನ್ನು ಹಲವೆಡೆ ನೇರಾನೇರ ಸ್ಪರ್ಧೆ ಇದೆ. ಬಿಜೆಪಿ, ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷಗಳಾಗಿದ್ದರೆ, ಜೆಡಿಎಸ್‌ ರಾಜ್ಯ ಪಕ್ಷವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಇನ್ನೊಂದು ರಾಷ್ಟ್ರೀಯ ಪಕ್ಷ ಆಮ್‌ ಆದ್ಮಿ ಪಾರ್ಟಿ ಖಾತೆ ತೆರೆಯುವ ಆಕಾಂಕ್ಷೆಯೊಂದಿಗೆ ಸ್ಪರ್ಧೆ ನಡೆಸಿದೆ.

ಮತದಾನೋತ್ತರ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಎಂದರೆ, ಇನ್ನು ಕೆಲವು ಅತಂತ್ರ ಜನಾದೇಶ ಎಂದಿವೆ. ಒಂದೆರೆಡು ಸಮೀಕ್ಷೆ ಬಿಜೆಪಿಗೆ ಬಹುಮತವನ್ನೂ, ಇನ್ನು ಕೆಲವು ಅಡ್ಡಗೋಡೆ ಮೇಲೆ ದೀಪ ಇಟ್ಟಂತಹ ಸಮೀಕ್ಷೆಯನ್ನು ಪ್ರಕಟಿಸಿವೆ. ಈಗ ಏನಿದ್ದರೂ ಫಲಿತಾಂಶದ ಕಡೆಗೆ ಎಲ್ಲರ ಗಮನ.

ಕರ್ನಾಟಕ ಚುನಾವಣೆ ಫಲಿತಾಂಶ; ಮತ ಎಣಿಕೆ ದಿನಾಂಕ ಮತ್ತು ಸಮಯ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ (ಮೇ 13) ನಡೆಯಲಿದೆ.

ಮತ ಎಣಿಕೆ ಕಾರ್ಯವು ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆ ಶುರುವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಬಹುತೇಕ ಚಿತ್ರಣ ಸಿಗಲಿದ್ದು, ಸಂಜೆ ವೇಳೆಗೆ ಸ್ಪಷ್ಟ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣಾ ಫಲಿತಾಂಶದ ಲೈವ್‌ ಅಪ್ಡೇಟ್ಸ್‌ ಪಡೆಯುವುದು ಹೀಗೆ…

ಹೌದು.. ಓದುಗರ ಈ ಕುತೂಹಲ ತಣಿಸುವ ಕೆಲಸವನ್ನು ಹಿಂದುಸ್ತಾನ್‌ ಟೈಮ್ಸ್‌ ಕನ್ನಡ (HT ಕನ್ನಡ) ಮಾಡಲಿದೆ. | 👉🏻 Karnataka Election Result Live: ಕರ್ನಾಟಕ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ, 8 ಗಂಟೆಗೆ ಅಂಚೆ ಮತಗಳ ಎಣಿಕೆ, 8.30ರಿಂದ ಇವಿಎಂ ಮತ ಎಣಿಕೆ

ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿ ಪ್ರಕಾರ, ಶನಿವಾರ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ಪ್ರತಿ ಸುತ್ತಿನ ಬಳಿಕ ಫಲಿತಾಂಶ ಪ್ರಕಟವಾಗಲಿದ್ದು, ಅಭ್ಯರ್ಥಿಗಳ, ಪಕ್ಷಗಳ ಹಿನ್ನಡೆ, ಮುನ್ನಡೆ ವಿವರ ಬಹಿರಂಗವಾಗಲಿದೆ. ಅಂತಿಮ ಫಲಿತಾಂಶ ಸಂಜೆ ವೇಳೆ ಪ್ರಕಟವಾಗಲಿದೆ.

ಚುನಾವಣಾ ಸುದ್ದಿಗಳ ಅಪ್ಡೇಟ್ಸ್‌ಗಾಗಿ ಮುಂದಿನ ಶೀರ್ಷಿಕೆ ಮೇಲೆ ಕ್ಲಿಕ್‌ ಮಾಡಿ 👉🏻 HT Kannada ವಾಟ್ಸಾಪ್‌ ಕಮ್ಯುನಿಟಿಗೆ ಸೇರಿ

ಅಧಿಕೃತ ಫಲಿತಾಂಶವು ಚುನಾವಣಾ ಆಯೋಗದ ವೆಬ್‌ಸೈಟ್ (eci.gov.in) ನಲ್ಲಿ ಪ್ರಕಟವಾಗಲಿದೆ. ಇದಕ್ಕೆ ಹೊರತಾಗಿ ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ಸೇರಿ ವಿವಿಧ ಟಿವಿ ಚಾನೆಲ್‌ಗಳು, ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ನೋಡುವ ವಿಧಾನ ಹೀಗಿದೆ..

ಹಂತ 1: ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ “” ಗೆ ಭೇಟಿ ನೀಡುವುದು

ಹಂತ 2 : “General Elections to Karnataka Assembly May 2023” ಎಂಬುದರ ಮೇಲೆ ಕ್ಲಿಕ್‌ ಮಾಡಬೇಕು.

ಹಂತ 3: ಕ್ಷೇತ್ರವಾರು ಅಥವಾ ಇಡೀ ರಾಜ್ಯದ ಫಲಿತಾಂಶವನ್ನು ಆಯ್ಕೆ ಮಾಡಬೇಕು.

ಹಂತ 4: ರಿಯಲ್‌ ಟೈಮ್‌ನ ಫಲಿತಾಂಶ ಪರದೆ ಮೇಲೆ ಕಾಣಿಸಿಕೊಳ್ಳಲಿದೆ.

ಇದಲ್ಲದೆ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ವೋಟರ್‌ ಹೆಲ್ಪ್‌ಲೈನ್‌ ಅಪ್ಲಿಕೇಶನ್ ಅನ್ನು ಫಲಿತಾಂಶಗಳನ್ನು ಟ್ರ್ಯಾಕ್ ಮಾಡಲು ಸಹ ಬಳಸಬಹುದು.

IPL_Entry_Point