ಕನ್ನಡ ಸುದ್ದಿ  /  Karnataka  /  Karnataka Assembly Election 2023 Result Live Updates Vote Count Bjp Congress Jds Highlights Political News In Kannada

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ

CM Bommai Resigns: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ

04:54 PM ISTPraveen Chandra B
  • twitter
  • Share on Facebook
04:54 PM IST

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿರುವ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತ. ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆ ಇದೀಗ ಗರಿಗೆದರಿದ್ದು, ಡಿಕೆಶಿ ಮತ್ತು ಸಿದ್ದರಾಮಯ್ಯ ಬಣ ಸಕ್ರಿಯವಾಗಿವೆ. ಇಷ್ಟು ಹೊತ್ತು ವಿಧಾನಸಭೆ ಫಲಿತಾಂಶದ ಬಗ್ಗೆ ಇದ್ದ ಜನರ ಕುತೂಹಲ ಇದೀಗ ಸಿಎಂ ಯಾರು ಎಂಬ ಬಗ್ಗೆ ಹೊರಳಿದೆ.

Sat, 13 May 202304:53 PM IST

ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬೊಮ್ಮಾಯಿಗೆ ರಾಜ್ಯಪಾಲರ ಸೂಚನೆ 

ನೀವು ನೀಡಿದ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದೇನೆ. ಪರ್ಯಾಯ ವ್ಯವಸ್ಥೆಗಳನ್ನು ಮಾಡುವವರೆಗೆ ದಯವಿಟ್ಟು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ ಎಂದು ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆ. 

ಬೊಮ್ಮಾಯಿಗೆ ರಾಜ್ಯಪಾಲರ ಪತ್ರ
ಬೊಮ್ಮಾಯಿಗೆ ರಾಜ್ಯಪಾಲರ ಪತ್ರ

Sat, 13 May 202304:40 PM IST

ಡಿಕೆ ಶಿವಕುಮಾರ್ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಅಭಿನಂದನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಟಾಲಿನ್ ಅವರು ಶನಿವಾರ ರಾತ್ರಿ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದರು.

ಸ್ಟಾಲಿನ್ ಅವರಿಗೆ ಧನ್ಯವಾದ ಹೇಳಿದ ಡಿ ಕೆ ಶಿವಕುಮಾರ್ ಅವರು ತಮಿಳುನಾಡಿಗೆ ಬಂದು ತಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.

Sat, 13 May 202304:35 PM IST

ನಮ್ಮ ತಪ್ಪುಗಳನ್ನು ಗುರುತಿಸಿ ಕೆಲಸ ಮಾಡುತ್ತೇವೆ: ಅನುರಾಗ್ ಠಾಕೂರ್

ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ನಾವು ತುಂಬಾ ಶ್ರಮಿಸಿದ್ದೇವೆ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಕರ್ನಾಟಕವು ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಪಡೆದಿದೆ. ನಮ್ಮ ಆಡಳಿತದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಗಗನಕ್ಕೇರಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಕರ್ನಾಟಕದ ಜನರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ತಪ್ಪುಗಳನ್ನು ಗುರುತಿಸಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. 

Sat, 13 May 202304:30 PM IST

ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದ ಹಿನ್ನೆಲೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಭವನಕ್ಕೆ ಬಂದು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ‘ನಾನು ರಾಜೀನಾಮೆ ಸಲ್ಲಿಸಿದ್ದು, ಇದನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.

Sat, 13 May 202304:25 PM IST

ವಾಟಾಳ್ ನಾಗರಾಜ್ ಪಡೆದ ಮತಗಳು ಎಷ್ಟು ಗೊತ್ತೇ? 

ಚಾಮರಾಜನಗರ: ಈ ಬಾರಿ ನನ್ನನ್ನು ಗೆಲ್ಲಿಸದಿದ್ದರೆ ಮತ್ತೆ ಇಲ್ಲಿಗೆ ಕಾಲಿಡುವುದಿಲ್ಲ ಎಂದಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಮತದಾರರಿಂದ ಕೇವಲ 658 ಮತಗಳನ್ನು ಮಾತ್ರ ಪಡೆದಿದ್ದಾರೆ.

ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಸಿ.ಪುಟ್ಟರಂಗಶೆಟ್ಟಿ ಅವರು 83858 ಮತಗಳನ್ನು ಪಡೆದು ಪುನರಾಯ್ಕೆಯಾಗಿದ್ದಾರೆ. ಬಿಜೆಪಿ ಹುರಿಯಾಳಾಗಿದ್ದ ವಿ.ಸೋಮಣ್ಣ 76325 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

Sat, 13 May 202304:25 PM IST

ರಾಜೀನಾಮೆ ಸಲ್ಲಿಸಲು ಬಂದ ಸಿಎಂ ಬೊಮ್ಮಾಯಿ 

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಕರ್ನಾಟಕ ಸಿಎಂ ಹಾಗೂ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. 

Sat, 13 May 202304:25 PM IST

ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳು: 3 ಕಾಂಗ್ರೆಸ್, 1 ಜೆಡಿಎಸ್, ಬಿಜೆಪಿ ಶೂನ್ಯ

ಚಾಮರಾಜನಗರ ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳು ಇವೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಕ್ಷೇತ್ರಗಳು. ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದು ಯಾವ ಕ್ಷೇತ್ರದಲ್ಲೂ ಬಿಜೆಪಿ ಪಕ್ಷದ ಹೆಸರಿಲ್ಲದಂತೆ ಮಾಡಿದೆ.

Sat, 13 May 202304:25 PM IST

ಗೆಲುವು ದಾಖಲಿಸಿದ ಕಾಂಗ್ರೆಸ್‌ನ ಕಿರಿಯ ಅಭ್ಯರ್ಥಿ ಇವರೇ 

ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ. ಅನಾಥ ಮಗು, ಬಡ ಕುಟುಂಬದವನಾಗಿದ್ದ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಹಣವಿಲ್ಲದೆ ನಾನು ಚುನಾವಣೆಯಲ್ಲಿ ಗೆದ್ದೆ. ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್‌ನ ಕಿರಿಯ ಅಭ್ಯರ್ಥಿ ಪ್ರದೀಪ್ ಈಶ್ವರ್ ಹೇಳಿದ್ದಾರೆ.  

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹಾಲಿ ಸಚಿವ ಡಾ ಕೆ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಗೆಲುವಿನ ನಗೆ ಬೀರಿದ್ದಾರೆ. 

Sat, 13 May 202303:36 PM IST

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ 

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಆಸೀಫ್​ ಸೇಠ್​ ಗೆದ್ದಿದ್ದು, ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಕೆಲವರು ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆಗಳನ್ನು ಕೂಗಿದ್ದಾರೆ. 

Sat, 13 May 202304:25 PM IST

ಅಸ್ಸಾಂ ಸಿಎಂ ಹೀಗಂದ್ರು..

ಪ್ರತಿ ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ನೀವು ಅದನ್ನು ಟ್ರೆಂಡ್ ಆಗಿ​ ನೋಡಬಹುದು.  2014ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಸಂಸತ್ತಿನಲ್ಲಿ ಪ್ರಧಾನಿ ಮೋದಿ ಗೆದ್ದಿದ್ದರು ಎಂದು ಅಸ್ಸಾಂ ಸಿಎಂ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

Sat, 13 May 202304:25 PM IST

ಖರ್ಗೆ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತರವು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಒಟ್ಟು 9 ವಿಧಾನಸಭೆ ಕ್ಷೇತ್ರಗಳಲ್ಲಿ 7 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, 2 ಸ್ಥಾನ ಬಿಜೆಪಿ ಪಾಲಾಗಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ ಕೇವಲ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಗೆಲುವಿನ ನಗೆ ಬೀರಿತ್ತು.

Sat, 13 May 202304:25 PM IST

Hunsur News: ಮಗನಿಗೆ ಸಿಹಿಮುತ್ತು ಕೊಟ್ಟು ಸಂಭ್ರಮಿಸಿದ ಜಿಟಿ ದೇವೇಗೌಡ

ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದ ಹರೀಶ್‌ಗೌಡಗೆ ತಂದೆ ಶಾಸಕ ಜಿ.ಟಿ.ದೇವೇಗೌಡ ಅವರಿಂದ ಸಿಹಿ ಮುತ್ತು ಕೊಟ್ಟು ಸಂಭ್ರಮಿಸಿದರು. ಜಿ.ಟಿ.ದೇವೇಗೌಡ ಸಹ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

Sat, 13 May 202304:25 PM IST

Siddramaiah: ಅಧಿಕಾರ ಜನಪರ ಆಡಳಿತ ಕೊಡುವುದಕ್ಕೆ ಸಿಕ್ಕ ಅವಕಾಶ ಇದು - ಸಿದ್ದರಾಮಯ್ಯ

ಪಾರದರ್ಶಕ ಅಡಳಿತ ಕೊಡುತ್ತೇವೆ. ಜಾತ್ಯತೀತವಾಗಿ ಜನ ಬೆಂಬಲಿಸಿರುವ ಕಾರಣ ಅದೇ ರೀತಿ ಆಡಳಿತವನ್ನೂ ಕೊಡುತ್ತೇವೆ. ಐದು ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ. ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಮೊದಲ ಕ್ಯಾಬಿನೆಟ್‌ನಲ್ಲಿ ನಾವು ಅದನ್ನು ಅನುಷ್ಠಾನಗೊಳಿಸುತ್ತೇವೆ. ನರೇಂದ್ರ ಮೋದಿಯವರು ಹೇಳಿದ್ರು, ಈ ಗ್ಯಾರೆಂಟಿಗಳನ್ನೆಲ್ಲ ಈಡೇರಿಸಕೋದಕ್ಕೆ ಆಗಲ್ಲ. ರಾಜ್ಯ ದಿವಾಳಿ ಆಗಬಹುದು ಎಂದು ಹೇಳಿದ್ದರು. ವಾಸ್ತವದಲ್ಲಿ ದೇಶವನ್ನು ದಿವಾಳಿ ಅಂಚಿಗೆ ತಳ್ಳುತ್ತಿರುವವರು ಬಿಜೆಪಿಯವರು. ಒಂಭತ್ತು ವರ್ಷದಲ್ಲಿ 53.11 ಲಕ್ಷ ಕೋಟಿ ಇತ್ತು. 102 ಲಕ್ಷಕೋಟಿ ರೂಪಾಯಿ ಸಾಲ ಮಾಡಿದ್ದಾರೆ ನರೇಂದ್ರ ಮೋದಿ. ಕರ್ನಾಟಕದ ಮೇಲಿದ್ದ ಸಾಲ 2.42 ಲಕ್ಷ ಕೋಟಿ ರೂಪಾಯಿ ಸಾಲ ಇತ್ತು 2018ರ ಮಾರ್ಚ್‌ ಕೊನೆಗೆ. ಈಗ ಅದು ಅವರೇ ಬಜೆಟ್‌ನಲ್ಲಿ ಹೇಳಿದ ಪ್ರಕಾರ 5.64 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿದೆ. ರಾಜ್ಯವನ್ನು ದಿವಾಳಿ ಮಾಡಿದ್ದು ಯಾರು? ಜನ ಅವರ ಮಾತನ್ನು ನಂಬಲ್ಲ. ಬೆಲೆಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಮಹಿಳೆಯರ ಸಮಸ್ಯೆ, ಕಾರ್ಮಿಕ ಸಮಸ್ಯೆ ಮುಂತಾದವು ಎಲ್ಲ ಇರುವ ಕಾರಣ ಜನ ಅವರನ್ನು ತಿರಸ್ಕರಿಸಿದ್ದಾರೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202304:25 PM IST

ಯಾರಿಗೆ ಮೊದಲ ಪೇಡ: ಜಂಟಿ ಸುದ್ದಿಗೋಷ್ಠಿಯಲ್ಲಿ ಜಾಣತನ ಮೆರೆದ ಮಲ್ಲಿಕಾರ್ಜುನ ಖರ್ಗೆ

ಜಂಟಿ ಪತ್ರಿಕಾಗೋ‍ಷ್ಠಿಯ ಕೊನೆಯಲ್ಲಿ ನಂದಿನಿ ಪೇಡವನ್ನು ಎಲ್ಲರಿಗೂ ಕೊಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಪೊಟ್ಟಣವೊಂದನ್ನು ನೀಡಿದರು. ಮೊದಲ ಪೇಡೆ ಯಾರಿಗೆ ಸಿಗಲಿದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾಗ ಖರ್ಗೆ ಅವರು ಸುರ್ಜೇವಾಲರ ಬಾಯಿಗೆ ಸಿಹಿ ಪೇಡೆ ಇಟ್ಟರು. ನಂತರ ವೇಣುಗೋಪಾಲರನ್ನು ಕರೆದರು. ನಂತರ ಅತ್ತ ಡಿಕೆ ಶಿವಕುಮಾರ್, ಇತ್ತ ಸಿದ್ದರಾಮಯ್ಯ ಖರ್ಗೆ ಅವರ ಕೈಗಳನ್ನೇ ನೋಡುತ್ತಿದ್ದರು. ಖರ್ಗೆ ಅವರು ಸಿದ್ದರಾಮಯ್ಯ ಅವರ ಬಾಯಿಯ ಬಳಿ ಪೇಡೆ ತೆಗೆದುಕೊಂಡು ಹೋಗಿ ತುಸು ಹಿಂದು-ಮುಂದು ಆಟವಾಡಿಸಿ ಬಾಯಿಗಿಟ್ಟರು. ನಂತರ ಅತ್ಯಂತ ಪ್ರೀತಿಯನ್ನು ಸೂಸುವಂತೆ ಡಿಕೆ ಶಿವಕುಮಾರ್ ಬೆನ್ನುತಟ್ಟಿ ಸಿಹಿ ತಿನ್ನಿಸಿದರು.

Sat, 13 May 202304:25 PM IST

Siddramaiah: ಬಿಜೆಪಿ ದುರಾಡಳಿತದಿಂದ ಜನ ಬೇಸತ್ತ ಕಾರಣವೇ ಕಾಂಗ್ರೆಸ್‌ಗೆ 136+1 ಸ್ಥಾನ ಬಂತು - ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಅಥವಾ ಕುಮಾರಸ್ವಾಮಿ ಯಾವಾಗೆಲ್ಲ ಆಡಳಿತ ಹಿಡಿದಿದ್ದರೋ ಆಗ ಸುಭದ್ರ ಸರ್ಕಾರ ಕೊಡುವುದು ಸಾಧ್ಯವಾಗಿರಲೇ ಇಲ್ಲ. ಆದ್ದರಿಂದ ಜನ ಒಂದು ಪಕ್ಷಕ್ಕೆ ಅಧಿಕಾರ ನೀಡಲು ಬಯಸಿದ್ದರು. 2013ರ ಚುನಾವಣೆ ನೋಡಿ. ಆಗಲೂ ಜನ ಅವಕಾಶ ಕೊಟ್ಟದ್ದು ಕಾಂಗ್ರೆಸ್‌ ಪಕ್ಷಕ್ಕೆ. ಆ ಸಂದರ್ಭದಲ್ಲಿ ಎಷ್ಟೆಲ್ಲ ಜನೋಪಯೋಗಿ ಕೆಲಸಗಳಾದವು. ಈಗ ಮತ್ತೆ ಸರ್ಕಾರ ನಡೆಸುವ ಅಕವಾಶ ಕಾಂಗ್ರೆಸ್‌ಗೆ ಸಿಕ್ಕಿದೆ. ಬಿಜೆಪಿಯವರು ರಾಜ್ಯಕ್ಕೆ ಬಹುದೊಡ್ಡ ಕಳಂಕ ತಂದಿಟ್ಟರು. ಅವರ ಭ್ರಷ್ಟಾಚಾರ., ಆಡಳಿತ ನಿರಾಸಕ್ತಿ ಎಲ್ಲದರಿಂದ ಜನ ರೋಸಿ ಹೋಗಿದ್ದರು. ಹಾಗಾಗಿಯೇ ಜನ ಕಾಂಗ್ರೆಸ್‌ ಬೆಂಬಲಕ್ಕೆ ನಿಂತರು. 136+1 ಸ್ಥಾನಗಳಲ್ಲಿ ಗೆಲುವು ನಮ್ಮದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202304:25 PM IST

Siddaramaiah: ಬಿಜೆಪಿ ಯಾವತ್ತೂ ಸ್ಪಷ್ಟ ಜನಾದೇಶ ಪಡೆದು ಸರ್ಕಾರ ರಚಿಸಿಯೇ ಇಲ್ಲ - ಸಿದ್ದರಾಮಯ್ಯ 

ಇದು ಕನ್ನಡಿಗರ ಗೆಲುವು. ಕಾಂಗ್ರೆಸ್‌ ಪಕ್ಷ, ಕಾರ್ಯಕರ್ತರ ಗೆಲುವು ಅಷ್ಟೇ ಅಲ್ಲ, ಏಳು ಕೋಟಿ ಕನ್ನಡಿಗರ ಗೆಲುವು. ಬಿಜೆಪಿ ಅಧಿಕಾರಕ್ಕೆ ಬಂದಾಗ, ಯಾವತ್ತೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ, 2008 ಅಥವಾ 2018 ಇರಬಹುದು. ಆಪರೇಷನ್‌ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಯಾವಾಗೆಲ್ಲ ಅತಂತ್ರ ಜನಾದೇಶ ಬಂದಾಗ ಸುಭದ್ರ ಸರ್ಕಾರ ಕೊಡುವುದು ಸಾಧ್ಯವಾಗಲಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿದರೆ, ಒಬ್ಬ ಮುಖ್ಯಮಂತ್ರಿಗಿಂತ ಹೆಚ್ಚು ಮುಖ್ಯಮಂತ್ರಿ ಆದರೆ, ಒಂದಕ್ಕಿಂತ ಹೆಚ್ಚು ಪಕ್ಷ ಸೇರಿ ಅಧಿಕಾರ ನಡೆಸಿದರೆ ಸುಭದ್ರ ಸರ್ಕಾರ ಕೊಡುವುದು ಸಾಧ್ಯವೇ ಇಲ್ಲ. ಎಲ್ಲಿ ಸುಭದ್ರ ಸರ್ಕಾರ ಇಲ್ಲವೋ ಅಲ್ಲಿ ಅಭಿವೃದ್ಧಿ ಆಗುವುದು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

Sat, 13 May 202304:25 PM IST

D K Shivakumar : ರಾಜ್ಯಕ್ಕೆ ಹಿಡಿದ ಗ್ರಹಣ ಬಿಡಿಸಿದ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆ - ಡಿಕೆಶಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಇದು ಭಾರತ್‌ ಜೋಡೋ ಭವನ. ಈ ಚುನಾವಣೆಯಲ್ಲಿ ಭಾರತವನ್ನು ಜೋಡಿಸುವ ಪ್ರಯತ್ನಕ್ಕೆ ಸಿಕ್ಕ ಫಲ. ಇದು ನಮ್ಮ ಗೆಲುವಲ್ಲ. ಕರ್ನಾಟಕ ಜನತೆಗೆ ಸಿಕ್ಕ ವಿಜಯ. ಕರ್ನಾಟಕಕ್ಕೆ ಮೂರೂವರೆ ವರ್ಷದಿಂದ ಹಿಡಿದ ಗ್ರಹಣ ಬಿಡುಗಡೆ ಆಗಿದೆ. ಗ್ರಹಣ ಬಿಡಿಸಿದ ರಾಜ್ಯದ ಜನತೆಗೆ ಹೃದಯ ಪೂರ್ವಕ ಅಭಿನಂದನೆ. ಇದು 40 ಪರ್ಸೆಂಟ್‌ ಕಮಿಷನ್‌ ಸರ್ಕಾರದ ವಿರುದ್ಧದ ಗೆಲುವು, ಇದು ಭ್ರಷ್ಟಾಚಾರದ ವಿರುದ್ಧ ಗೆಲುವು, ಬೆಲೆ ಏರಿಕೆ, ಬಿಜೆಪಿ ಸರಕಾರ ರೈತರಿಗೆ ಕೊಟ್ಟ ಕಷ್ಟದ ವಿರುದ್ಧದ ಗೆಲುವು, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿಗೆ ಸಿಕ್ಕ ಗೆಲುವು.

ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿಯನ್ನು ಜಾರಿಗೊಳಿಸುವುದಕ್ಕೆ ಬದ್ಧರಾಗಿದ್ದೇವೆ. ನಾಡದೇವಿ ಚಾಮುಂಡಿಯ ಸನ್ನಿಧಿಯಲ್ಲಿ ಈ ಕುರಿತು ಭರವಸೆಯನ್ನು ನಾನು ಮತ್ತು ಸಿದ್ದರಾಮಯ್ಯ ನೀಡಿದ್ದೆವು. ಅದನ್ನು ಈಡೇರಿಸುತ್ತೇವೆ. ಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ಸಿಕ್ಕಿದೆ. ಕನ್ನಡಿಗರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಎಲ್ಲ ನಾಯಕರು, ಕಾರ್ಯಕರ್ತರ ಸಹಕಾರ ಸಿಕ್ಕಿತು. ಸೋನಿಯಾ ಗಾಂಧಿ ಅವರಿಗೆ ಕೊಟ್ಟ ಮಾತು ಉಳಿಸುವ ಭಾಗ್ಯ ನನಗೆ ಸಿಕ್ಕಿದೆ. ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಕೆಲಸ ಮಾಡುತ್ತೇವೆ. ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಉಳಿದೆಲ್ಲ ವಿಚಾರ ಅಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು. 

 

Sat, 13 May 202304:25 PM IST

Mallikarjuna Kharge: ಹಿಂದಿಯಲ್ಲಿ ಮಾತನಾಡಲು ಮಾಧ್ಯಮದವರು ಹೇಳಿದಾಗ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ಇಷ್ಟು

ಕಾಂಗ್ರೆಸ್‌ ಪಕ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡ ಕಾರಣ, ಏರ್ಪಡಿಸಿದ್ದ ಜಂಟಿ ವಿಶೇಷ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಹಿಂದಿಯಲ್ಲಿ ಮಾತನಾಡುವಂತೆ ಹೇಳಿದರು. ಅದಕ್ಕೆ ಅವರು, ತಮಿಳುನಾಡಿಗೆ ಹೋದರೆ ಅಲ್ಲಿನ ನಾಯಕರ ಮಾತನ್ನು ಅಲ್ಲಿನ ಭಾಷೆಯಲ್ಲೇ ಕೇಳ್ತೀರಿ. ಕೇರಳಕ್ಕೆ ಹೋದರೆ ಅಲ್ಲಿಯ ಭಾಷೆ, ಆಂಧ್ರ, ತೆಲಂಗಾಣ ಹೋದರೆ ಅಲ್ಲಿನ ಭಾಷೆಯ ಮಾತನ್ನು ಆಲಿಸ್ತೀರಿ. ಇಲ್ಲಿ ಮಾತ್ರ ಯಾಕೆ ಹೀಗೆ ಎಂದು ಪ್ರಶ್ನಿಸಿದರು. ಬಳಿಕ ಹಿಂದಿಯಲ್ಲಿ ಮಾತು ಆರಂಭಿಸಿದರು. ಆದರೂ ನಡು ನಡುವೆ ಕನ್ನಡದಲ್ಲೂ ಮಾತನಾಡಿದರು.

Sat, 13 May 202302:32 PM IST

ನನ್ನನ್ನು ನೋಡಿ ಮತ ಕೊಡಿ ಎಂದರೆ ಕನ್ನಡಿಗರು ಎಷ್ಟು ಸಲ ನಿಮ್ಮನ್ನು ನೋಡಬೇಕು- ಮಲ್ಲಿಕಾರ್ಜುನ ಖರ್ಗೆ

ಪ್ರಧಾನಮಂತ್ರಿಯವರಿಗೆ ನೀಡಬೇಕಾದ ಗೌರವ ಕೊಡುತ್ತೇವೆ. ಅದನ್ನು ನಾವು ಹೆದರಿಕೊಂಡು ಗೌರವ ಕೊಡುತ್ತೇವೆ ಎಂದು ಬಿಂಬಿಸಿದರೆ ತಪ್ಪಾಗುವುದಿಲ್ಲವೇ? ಆದದ್ದೂ ಅದುವೇ. ಪ್ರಧಾನ ಮಂತ್ರಿಯವರು ಕರ್ನಾಟಕಕ್ಕೆ ಬಂದು ನನ್ನನ್ನು ನೋಡಿ ಮತ ಕೊಡಿ, ನನ್ನನ್ನು ನೋಡಿ ಮತ ಕೊಡಿ ಎಂದು ಎಲ್ಲ ಕಡೆ ಓಡಾಡಿದರೆ ಜನ ಎಷ್ಟು ಅಂತ ನೋಡಿಯಾರು? ಅವರಿಗೂ ವಾಕರಿಕೆ ಬುವುದಿಲ್ಲವೆ?. ಅದಕ್ಕೇ ಈ ಸಲ ಕನ್ನಡಿಗರು ಕಾಂಗ್ರೆಸ್‌ ಸರ್ಕಾರವನ್ನು ಆಯ್ಕೆ ಮಾಡಿದಾರೆ. ಡಿಕೆಶಿವಕುಮಾರ್‌, ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಮನ್ನಣೆ ಕೊಟ್ಟಿದ್ಧಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಮೋದಿಗೆ ಟಾಂಗ್​ ನೀಡಿದ್ದಾರೆ. 

Sat, 13 May 202302:22 PM IST

Mallikarjuna Kharge: ನೀವು ಗುಜರಾತಿನ ಭೂಮಿ ಪುತ್ರ, ನಾನು ಕರ್ನಾಟಕದ ಭೂಮಿ ಪುತ್ರ- ಮಲ್ಲಿಕಾರ್ಜನ ಖರ್ಗೆ

ಭಾರತ್‌ ಜೋಡೋ ಯಾತ್ರೆ ಮೂಲಕ ರಾಜ್ಯದ ಬಹುತೇಕ ಕಡೆಗೆ ಪಕ್ಷ ಸಂಘಟನೆ ಆಗಿದೆ. ಪಕ್ಷದ ಅಧ್ಯಕ್ಷನಾಗಿ ನನಗೂ ಹೆಮ್ಮೆ ಇದು. ಇದರ ಕ್ರೆಡಿಟ್‌ ರಾಹುಲ್‌ ಗಾಂಧಿಗೆ ಸಲ್ಲಬೇಕು. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಐಸಿಸಿ ಅಧ್ಯಕ್ಷನಾಗಿದ್ದ ಹೊಸದರಲ್ಲಿ ಗುಜರಾತ್‌ಗೆ ಹೋಗಿದ್ದೆ. ಆಗ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಇತ್ತು. ಅವರು ರೋಡ್‌ ಶೋ ಮಾಡಿ ಒಂದು ಕಾರ್ನರ್‌ನಲ್ಲಿ ಮೀಟಿಂಗ್‌ ಮಾಡ್ತಾ ಇದ್ರು. ಅಲ್ಲಿ ಹೋಗಿ, ನಾನು ಗುಜರಾತ್‌ನ ಸುಪುತ್ರ, ನಾನು ಭೂಮಿ ಪುತ್ರ. ನೀವು ನನ್ನನ್ನು ತಲೆತಗ್ಗಿಸುವಂತೆ ಮಾಡಬಾರದು. ನನಗೆ ಮತ ನೀಡಿ ದೇಶದಲ್ಲಿ, ದೆಹಲಿಯಲ್ಲಿ ನಿಂತು ನಿಮ್ಮನ್ನು ಮಾದರಿಯಾಗಿ ತೋರಿಸುವಂತೆ ಮಾಡಬೇಕು ನೀವು ಎಂದು ಹೇಳುತ್ತಿದ್ದರು.

ನಾನು ಅದನ್ನೆ ಹೇಳಿದೆ. ನೀವು ಗುಜರಾತಿನ ಭೂಮಿಪುತ್ರ, ನಾನು ಕರ್ನಾಟಕದ ಭೂಮಿ ಪುತ್ರ. ಅದಕ್ಕಾಗಿ ನಿಮಗೇನು ಸ್ವಾಭಿಮಾನದಿಂದ ಜನ ಮತ ಹಾಕಿದ್ರೋ ಈಗ ನನ್ನ ಸರದಿಯಲ್ಲಿ ಕರ್ನಾಟಕ ಜನತೆ ನನಗೆ ವೋಟ್‌ ಹಾಕುತ್ತಾರೆಯೇ ಹೊರತು ನಿಮಗಲ್ಲ ಎಂಬುದನ್ನು ನಾನು ಹೇಳಿದೆ. ಒಬ್ಬ ಪ್ರಧಾನಿಯಾಗಿ ಅವರು ಆ ರೀತಿ ಅಭಿಯಾನ ಮಾಡಬಾರದಿತ್ತು. ಹಾಗೆ ಹೇಳಿದ ಮೇಲೆ ನಾವು ಉತ್ತರ ಕೊಡಲೇ ಬೇಕು. ಇಲ್ಲಾಂದ್ರೆ ನೀವು ತಪ್ಪು ತಿಳಿದುಕೊಳ್ಳುತ್ತೀರಿ ಎಂದು ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. 

Sat, 13 May 202302:22 PM IST

Mallikarjuna Kharge: ಡಿಕ್ಟೇಟರ್‌ಶಿಪ್‌ ಆಗಬಾರದು, ಕನ್ನಡಿಗರು ಪಾಠ ಕಲಿಸಿದ್ರು - ಮಲ್ಲಿಕಾರ್ಜುನ ಖರ್ಗೆ

ಅಹಂಕಾರದಿಂದ ಯಾರು ಏನೇ ಮಾತನಾಡಿದರೂ ಅದು ನಡೆಯದು. ಪ್ರಜಾಪ್ರಭುತ್ವದಲ್ಲಿ ಜನರ ನೋವನ್ನು ಅರ್ಥಮಾಡಿಕೊಂಡು ತಗ್ಗಿ ಬಗ್ಗಿ ನಡೆದುಕೊಂಡು ಜನಸೇವೆ ಮಾಡಿದರೆ ಮಾತ್ರವೇ ಸಫಲರಾಗುವುದು ಸಾಧ್ಯ. ಇದು ಕನ್ನಡಿಗರ ವಿಜಯವೇ ಹೊರತು, ವ್ಯಕ್ತಿಯ ವಿಜಯವಲ್ಲ. ಇದು ಸಾಮೂಹಿಕ ನಾಯಕತ್ವದ ಫಲ. ಎಲ್ಲರೂ ಬಿಡಿ ಬಿಡಿಯಾಗಿ ದೂರ ಇದ್ದಿದ್ದರೆ ಕಳೆದ ಚುನಾವಣೆಯ ಫಲಿತಾಂಶವೇ ಬರುತ್ತಿತ್ತು. ಕನ್ನಡಿಗರಿಗೆ ನಾನು ನಮಸ್ಕಾರ ಮಾಡ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸಂವಿಧಾನದ ರಕ್ಷಣೆಗಾಗಿ ಒಟ್ಟಾಗಿ ಬಂದು ಮತದಾನ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೆ ನಮಸ್ಕಾರ ಮಾಡುತ್ತೇನೆ. ಒಂದೊಮ್ಮೆ ಇದು ತಪ್ಪಿ ಹೋಗಿದ್ದರೆ ಡಿಕ್ಟೇಟರ್‌ ಶಿಪ್‌ ಆಗ್ತಿತ್ತು. ಜನರಿಗೆ, ಕನ್ನಡಿಗರಿಗೆ ಇದು ಅರ್ಥ ಆಗಿತ್ತು. ಡಿಕ್ಟೇಟರ್‌ ಶಿಪ್‌ ಬರಬಾರದು ಅಂಥಾನೇ ಮತದಾನ ಮಾಡಿ ಹೊಸ ಬೆಳಕು ತೋರಿದ್ದಾರೆ. ಇದಕ್ಕಾಗಿ ನಾನು ಕನ್ನಡಿಗರಿಗೆ, ಮತದಾರರಿಗೆ 100 ಸಲ ನಮಸ್ಕಾರ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಖರ್ಗೆ ಹೇಳಿದರು.

Sat, 13 May 202302:17 PM IST

Mallikarjuna Khagre: ಬಿಜೆಪಿ ಮುಕ್ತ ದಕ್ಷಿಣ ಭಾರತ ಆಯಿತು ನೋಡಿ- ಮಲ್ಲಿಕಾರ್ಜುನ ಖರ್ಗೆ

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ಐತಿಹಾಸಿಕ. ಈ ಗೆಲುವಿನ ವಿಚಾರವನ್ನು ಪದೇಪದೆ ನಾವು ಹೇಳುತ್ತ ಬಂದಿದ್ದೆವು. ಒಂದು ದೊಡ್ಡ ವಿಜಯ ಸಿಕ್ಕಿದೆ ನಮಗೆ. ದೇಶದಲ್ಲೇ ಒಂದು ಹೊಸ ಉತ್ಸಾಹ ಬಂದಿದೆ. ವಿಶೇಷವಾಗಿ ನಮಗೆ ಪ್ರತಿಸಲ ಕೆಣಕಿ ಮಾತನಾಡುತ್ತಿದ್ದ ಬಿಜೆಪಿಯವರಿಗೆ ಸಿಕ್ಕ ಹೊಡೆತ ಇದು. ಕಾಂಗ್ರೆಸ್‌ ಪಾರ್ಟಿಗೆ ಟಾಂಟ್‌ ಹೊಡೆದು, ಬಾಗಿಲು ಬಂದ್‌ ಆಯಿತು ಎಂದು ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತೇವೆ ಎಂದು ಮಾಡುವುದಾಗಿ ಹೇಳಿದ್ದರು. ಈಗ ಬಿಜೆಪಿ ಮುಕ್ತ ದಕ್ಷಿಣ ಭಾರತ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Sat, 13 May 202302:06 PM IST

Karnataka Election Result: ಕರ್ನಾಟಕದಲ್ಲಿ 600 ಕಿ.ಮೀ. ಭಾರತ್‌ ಜೋಡೋ ಕೊಟ್ಟ ಫಲ ಇದು - ಸುರ್ಜೆವಾಲಾ

ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಫಲ ಇದು. ಯಾತ್ರೆ ಹೋದ ಪ್ರದೇಶದಲ್ಲೆಲ್ಲ ಪಕ್ಷ ಗೆಲುವು ಕಂಡಿದೆ. ಎಲ್ಲ ಟೀಕೆಗಳನ್ನು, ವಾಗ್ದಾಳಿಗಳನ್ನು ಎದುರಿಸಿದ ರಾಹುಲ್‌ ಗಾಂಧಿಯವರ ಪ್ರಯತ್ನವನ್ನು ಮರೆಯುವಂತಿಲ್ಲ. ಅದೇ ರೀತಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಲ್ಲಿದ್ದರೂ, ಎಲ್ಲರ ಜತೆಗೆ ಸಂಪರ್ಕದಲ್ಲಿದ್ದು ಪಕ್ಷದ ಗೆಲುವಿಗೆ ಹುರಿದುಂಬಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಕನ್ನಡಿಗರ ಜತೆಗೂಡಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

Sat, 13 May 202302:22 PM IST

Congress Pressmeet: ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕು ತೋರಿದ ಕನ್ನಡಿಗರು; ಸುರ್ಜೇವಾಲಾ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ನಾಯಕರಾದ ಡಿಕೆ ಶಿವಕುಮಾರ್​, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಜಂಟಿ ಸುದ್ದಿಗೋಷ್ಠಿ ಆರಂಭವಾಗಿದೆ. ಆರಂಭದಲ್ಲಿ ಮಾತನಾಡಿಸಿದ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್, 'ಇದು ಐತಿಹಾಸಿಕ ದಿನ' ಎಂದು ಬಣ್ಣಿಸಿದರು. 'ಕರ್ನಾಟಕದ ಜನತೆ ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕು ತೋರಿದ್ದಾರೆ. ಕೇವಲ ಕರ್ನಾಟಕಕ್ಕೆ ಅಲ್ಲ, ದೇಶಕ್ಕೆ ಕೂಡ. ಕನ್ನಡಿಗರಿಗೆ ಸಿಕ್ಕ ಜಯ. ಪ್ರತಿಯೊಬ್ಬ ಕನ್ನಡಿಗನ ಜಯ, ಮತದಾರನ ಗೆಲುವು, ಕರ್ನಾಟಕದ ಸ್ವಾಭಿಮಾನಕ್ಕೆ ಸಿಕ್ಕ ವಿಜಯ, ಬ್ರ್ಯಾಂಡ್‌ ಕರ್ನಾಟಕಕ್ಕೆ ಸಿಕ್ಕ ಗೆಲುವು. ಇದು ಕಾಂಗ್ರೆಸ್‌ ಕಾರ್ಯಕರ್ತರ ಪ್ರಯತ್ನಕ್ಕೆ ಸಿಕ್ಕ ಫಲ' ಎಂದು ಅವರು ವಿವರಿಸಿದರು. 

Sat, 13 May 202302:06 PM IST

ಅಣ್ಣ ಸಿಎಂ ಆದ್ರೆ ಖುಷಿ; ಡಿಕೆ ಸುರೇಶ್​ 

ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಡಿ.ಕೆ.ಶಿವಕುಮಾರ್ ಅವರ ಸಹೋದರನಾಗಿ ಹೇಳುವುದಾದರೆ ಡಿಕೆಶಿ ಮುಖ್ಯಮಂತ್ರಿಯಾದರೆ ನಾನೇ ಹೆಚ್ಚು ಸಂತೋಷಪಡುತ್ತೇನೆ ಎಂದು ಕಾಂಗ್ರೆಸ್​ ಸಂಸದ ಡಿಕೆ ಸುರೇಶ್​ ಹೇಳಿದ್ದಾರೆ. 

Sat, 13 May 202302:06 PM IST

ಪ್ರೀತಿಯ ರಾಜಕಾರಣ ಒಪ್ಪಿದ ಕರ್ನಾಟಕದ ಜನತೆಗೆ ಅಭಿನಂದನೆ: ಫಾರೂಕ್ ಅಬ್ದುಲ್ಲಾ

ದ್ವೇಷದ ರಾಜಕಾರಣವನ್ನು ತಿರಸ್ಕರಿಸಿ ಪ್ರೀತಿಯ ರಾಜಕಾರಣವನ್ನು ಒಪ್ಪಿಕೊಂಡಿರುವ ಕರ್ನಾಟಕದ ಜನತೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಜಮ್ಮು-ಕಾಶ್ಮೀರದ ನ್ಯಾಷನಲ್​ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

Sat, 13 May 202302:06 PM IST

Karnataka Next CM: ಡಿಕೆಶಿ, ಸಿದ್ದರಾಮಯ್ಯ ಸುದ್ದಿಗೋಷ್ಠಿಗೆ ಕ್ಷಣಗಣನೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷದ ಮುಖ್ಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಮುಂದಿನ ಸರ್ಕಾರ ರಚನೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗಳಿಗೆ ಈ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗಲಿದೆ ಎಂಬ ನಿರೀಕ್ಷೆಯಿದೆ.

Sat, 13 May 202302:06 PM IST

10,715 ಮತಗಳ ಅಂತರದಲ್ಲಿ ನಿಖಿಲ್​ಗೆ ಸೋಲು 

ರಾಮನಗರದಲ್ಲಿ ಕಾಂಗ್ರೆಸ್‌ನ ಎಚ್‌ಎ ಇಕ್ಬಾಲ್ ಹುಸೇನ್ ಅವರು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರನ್ನು 10,715 ಮತಗಳಿಂದ ಸೋಲಿಸಿದ್ದಾರೆ.

Sat, 13 May 202302:06 PM IST

ಬಿಜೆಪಿಯ ಈ ಸೋಲಿನ ಪರಾಮರ್ಶೆ ಮಾಡುತ್ತೇವೆ:  ಪ್ರಲ್ಹಾದ್ ಜೋಶಿ

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ರಾಜ್ಯದ ಜನ ಕೊಟ್ಟ ತೀರ್ಪನ್ನ ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ತನ್ನ ಭರವಸೆಗಳನ್ನ ಈಡೇರಿಸುತ್ತದೆ ಎಂದು ಭಾವಿಸುತ್ತೇನೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. ಬಿಜೆಪಿಯ ಈ ಸೋಲಿನ ಪರಾಮರ್ಶೆ ಮಾಡುತ್ತೇವೆ. ಎಲ್ಲಿ ನಮ್ಮ ತಂತ್ರಗಾರಿಕೆ ತಪ್ಪಿಗೆ ಎನ್ನುವುದನ್ನ ಗಂಭೀರವಾಗಿ ಅವಲೋಕನ ಮಾಡುತ್ತೇವೆ ಎಂದು ಹೇಳಿದ್ದಾರೆ. 

Sat, 13 May 202302:06 PM IST

ಡಬಲ್‌ ಎಂಜಿನ್‌ ಅಲ್ಲ, ಟ್ರಬಲ್‌ ಎಂಜಿನ್‌: ತೃಣಮೂಲ ಕಾಂಗ್ರೆಸ್

ಕರ್ನಾಟಕದಲ್ಲಿ ಬಿಜೆಪಿ ಸೋಲನ್ನು ಬಿಜೆಪಿಯೇತರ ಪಕ್ಷಗಳು ದೇಶಾದ್ಯಂತ ಸಂಭ್ರಮಿಸುತ್ತಿವೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಕುರಿತು ಇದೀಗ ಪಶ್ಚಿಮ ಬಂಗಾಳದ ಆಡಳಿತ ಪಕ್ಷವು ಪ್ರತಿಕ್ರಿಯೆ ನೀಡಿದೆ. ದಕ್ಷಿಣ ಭಾರತದ ಜನರು ಟ್ರಬಲ್‌ ಎಂಜಿನ್‌ ಸರಕಾರವನ್ನು ತಿರಸ್ಕರಿಸಿದ್ದಾರೆ. ಅದು ಡಬಲ್‌ ಎಂಜಿನ್‌ ಅಲ್ಲ, ಟ್ರಬಲ್‌ ಎಂಜಿನ್‌ ಎಂದು ಹೇಳಿದೆ.

Sat, 13 May 202302:06 PM IST

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು; ಇಲ್ಲಿದೆ ಈವರೆಗಿನ ಸಮಗ್ರ ಮಾಹಿತಿ

Sat, 13 May 202302:06 PM IST

ಕರ್ನಾಟಕ ಫಲಿತಾಂಶ ಭರವಸೆಯ ಕಿರಣ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ

ಶ್ರೀನಗರ: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು "ಭರವಸೆಯ ಕಿರಣ" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬಣ್ಣಿಸಿದ್ದಾರೆ. ದೇಶದಲ್ಲಿರುವ ಇತರೆ ರಾಜ್ಯಗಳು ಕೂಡ ಕೋಮು ರಾಜಕೀಯ ತಿರಸ್ಕರಿಸಿ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ಹೇಳಿದ್ದಾರೆ. "ಬಿಜೆಪಿಯವರು ತಮ್ಮ ಅಭ್ಯಾಸ ಬಲದಂತೆ ಕೋಮುವಾದದ ಮೂಲಕ ಮತ ಪಡೆಯಲು ಯತ್ನಿಸಿದರು. ಚುನಾವಣಾ ಪ್ರಚಾರಕ್ಕೆ ಭಜರಂಗ ಬಲಿ, ಧರ್ಮ ಮತ್ತು ಹಿಂದೂ-ಮುಸ್ಲಿಮರನ್ನು ಕರೆತಂದರು. ಜನರು ಬಿಜೆಪಿಯನ್ನು ಬದಿಗಿಟ್ಟು ಕಾಂಗ್ರೆಸ್‌ ಪಕ್ಷವನ್ನು ಆಯ್ಕೆ ಮಾಡಿದರು" ಎಂದು ಅವರು ಹೇಳಿದ್ದಾರೆ.

Sat, 13 May 202301:17 PM IST

 ಸೌಖ್ಯವೇ, ಸಂತೋಷವೇ? - ಬಿಎಲ್​ ಸಂತೋಷ್​ಗೆ ಕಾಂಗ್ರೆಸ್​ ಟಾಂಗ್​ 

31 ಸಾವಿರ ಬೂತ್​ಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದ ಬಿ ಎಲ್​ ಸಂತೋಷ್​ಗೆ ಕಾಂಗ್ರೆಸ್​ ಟಾಂಗ್​ ನೀಡಿದೆ. “ಸಂತೋಷ್​ ಅವರೇ, ಸೌಖ್ಯವೇ, ಸಂತೋಷವೇ?! ಅಂದಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ?” ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದ್ದಾರೆ. 

Sat, 13 May 202301:13 PM IST

ಖರ್ಗೆಗೆ ಸನ್ಮಾನ 

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಹಿನ್ನೆಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು  ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸನ್ಮಾನಿಸಿದರು. 

Sat, 13 May 202301:13 PM IST

ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಧ್ವಜವನ್ನು ಹಿಡಿದು ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದ್ದಾರೆ ಎಂದು ವರದಿಗಳು ಹೇಳಿವೆ. ಬಳಿಕ ಕೇಸರಿ ಧ್ವಜದ ಪಕ್ಕ ಇಸ್ಲಾಂ ಧ್ವಜವನ್ನು ಅಳವಡಿಸಿದ್ದು, ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಭಟ್ಕಳದಲ್ಲಿ ಕಾಂಗ್ರೆಸ್‌ನ ಮಂಕಾಳು ವೈದ್ಯ ಗೆಲುವು ಪಡೆದಿದ್ದಾರೆ. ಬಿಜೆಪಿಯ ಸುನಿಲ್‌ ನಾಯ್ಕ್‌ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಗೆಲುವು ಪಡೆದ ಸಂಭ್ರಮಾಚರಣೆಯನ್ನು ಪಟ್ಟಣದಲ್ಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಟ್ಕಳದ ಸಂಶುದ್ದೀನ್ ಸರ್ಕಲ್‌ನಲ್ಲಿ ಯುವಕರು ಕೇಸರಿ ಧ್ವಜದ ಪಕ್ಕ ಇಸ್ಲಾಂ ಧ್ವಜ ಪ್ರದರ್ಶನ ಮಾಡಿದ್ದಾರೆ.

Sat, 13 May 202301:13 PM IST

ಕಾಂಗ್ರೆಸ್ ಟಿಕೆಟ್ ಪಡೆದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು

1.ಗುಲ್ಬರ್ಗ ಉತ್ತರ: ಕನೀಜ್ ಫಾತಿಮಾ – ಗೆಲುವು

2.ಬೀದರ್‌: ರಹೀಮ್ ಖಾನ್ – ಗೆಲುವು

3. ಶಿವಾಜಿನಗರ: ರಿಜ್ವಾನ್ ಅರ್ಷದ್ – ಗೆಲುವು

4. ಶಾಂತಿನಗರ: ಎನ್‌.ಎ. ಹ್ಯಾರಿಸ್‌ – ಗೆಲುವು

5. ಚಾಮರಾಜಪೇಟೆ: ಜಮೀರ್‌ ಅಹಮದ್ ಖಾನ್‌ – ಗೆಲುವು

6. ರಾಮನಗರ: ಇಕ್ಬಾಲ್ ಹುಸೇನ್‌ ಎಚ್‌.ಎ. – ಗೆಲುವು

7. ಮಂಗಳೂರು: ಯು.ಟಿ. ಖಾದರ್‌ – ಗೆಲುವು

8. ನರಸಿಂಹರಾಜ: ತನ್ವೀರ್ ಸೇಠ್‌ – ಗೆಲುವು

9. ಬೆಳಗಾವಿ ಉತ್ತರ: ಆಸಿಫ್ ಸೇಟ್ – ಗೆಲುವು

10. ಶಿಗ್ಗಾಂವಿ: ಯಾಸೀರ್ ಅಹ್ಮದ್ ​ಖಾನ್​ ಪಠಾಣ್ – ಸೋಲು

11. ಮಂಗಳೂರು ನಗರ ಉತ್ತರ: ಇನಾಯತ್ ಅಲಿ – ಸೋಲು

12. ಬಿಜಾಪುರ ನಗರ: ಅಬ್ದುಲ್ ಹಮೀದ್ ಮುಶ್ರೀಫ್ – ಸೋಲು

13. ರಾಯಚೂರು ನಗರ; ಮೊಹಮ್ಮದ್ ಶಾಲಂ – ಸೋಲು

14. ಗಂಗಾವತಿ: ಇಕ್ಬಾಲ್ ಅನ್ಸಾರಿ – ಸೋಲು

15. ತುಮಕೂರು ನಗರ: ಇಕ್ಬಾಲ್ ಅಹಮದ್ – ಸೋಲು

Sat, 13 May 202301:13 PM IST

ಜೆಡಿಎಸ್ ಟಿಕೆಟ್ ಪಡೆದ ಮುಸ್ಲಿಂ ಅಭ್ಯರ್ಥಿಗಳ ಪಟ್ಟಿ ; ಎಲ್ಲರೂ ಸೋಲು ಕಂಡಿದ್ದಾರೆ

ಖಾನಾಪುರ: ನಾಸೀರ್ ಬಾಪುಲಸಾಬ್ ಭಗವಾನ್

ಜಮಖಂಡಿ: ಯಾಕೂಬ್‌ ಬಾಬಾಲಾಲ್‌ ಕಪಡೇವಾಲ್

ಬೀಳಗಿ: ರುಕ್ಮುದ್ದೀನ್‌ ಸೌದಗರ್

ಬಿಜಾಪುರ ನಗರ: ಬಂದೇ ನವಾಜ್‌ ಮಾಬರಿ

ಗುಲ್ಬರ್ಗ ಉತ್ತರ: ನಾಸಿರ್ ಹುಸೇನ್ ಉಸ್ತಾದ್

ಬಸವಕಲ್ಯಾಣ; ಎಸ್ ವೈ ಖಾದ್ರಿ

ಹುಮ್ನಾಬಾದ್: ಸಿಎಂ ಫಯಾಜ್

ಭಾಲ್ಕಿ: ರೌಫ್ ಪಟೇಲ್

ರೋಣ: ಮುಗದಮ್‌ ಸಾಬ್‌ ಮುದೋಳ

ಕುಂದಗೋಳ: ಹಜರತ್‌ ಅಲಿ ಅಲ್ಲಾಸಾಬ್

ಹರಪನಹಳ್ಳಿ : ಎನ್ ಎಂ ನೂರ್ ಅಹಮದ್

ದಾವಣಗೆರೆ ದಕ್ಷಿಣ: ಅಮಾನುಲ್ಲಾ ಖಾನ್

ಸಾಗರ: ಜಾಕೀರ್‌

ಬೈಂದೂರು : ಮನ್ಸೂರ್ ಇಬ್ರಾಹಿಂ

ಕಾಪು: ಸಬೀನಾ ಸಮದ್

ಹೆಬ್ಬಾಳ: ಮೊಹಿದ್ ಅಲ್ತಾಫ್

ಸರ್ವಜ್ಞನಗರ: ಮೊಹಮ್ಮದ್ ಮುಷ್ತಾಕ್

ಚಿಕ್ಕಪೇಟೆ: ಇಮ್ರಾನ್‌ಪಾಷ

ಬೆಳ್ತಂಗಡಿ: ಅಶ್ರಫ್ ಅಲಿ ಕುಂಞ

ಮಂಗಳೂರು ಉತ್ತರ: ಮೊಯಿದ್ದೀನ್ ಬಾವಾ

ವಿರಾಜಪೇಟೆ: ಮನ್ಸೂರ್‌ ಆಲಿ

ನರಸಿಂಹರಾಜ: ಅಬ್ದುಲ್‌ ಖಾದರ್ ಶಾಹಿದ್

Sat, 13 May 202312:58 PM IST

ಕರ್ನಾಟಕ ಫಲಿತಾಂಶ ಲೋಕಸಭೆ ಚುನಾವಣೆಯ ಮುನ್ಸೂಚನೆ: ಶರದ್‌ ಪವರ್‌

ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ನಂತರದ ಸನ್ನಿವೇಶದ ಮುನ್ಸೂಚನೆಯಾಗಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. 

ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿ, ಜಾರ್ಖಂಡ್, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದೆ ಎನ್ನುವುದು ನನ್ನ ಅನಿಸಿಕೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ಎನ್‌ಸಿಪಿಯು ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಅದು ಕೇವಲ ಪ್ರಯತ್ನವಾಗಿದೆ ಎಂದುಅವರು ಹೇಳಿದ್ದಾರೆ. ಮೋದಿ ಘೋಷಣೆಯನ್ನು ಜನರು ತಿರಸ್ಕರಿಸಿದ್ದಾರೆ. ಒಬ್ಬ ವ್ಯಕ್ತಿ ಎಲ್ಲಾ ದಾರವನ್ನು ಹಿಡಿಯುವಂತಹ ವ್ಯವಸ್ಥೆಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Sat, 13 May 202312:58 PM IST

ಶಿಗ್ಗಾವಿಯಲ್ಲಿ ಗೆದ್ದ ಬೊಮ್ಮಾಯಿ, ಬಿಜೆಪಿ ಕಾರ್ಯಕರ್ತರಿಂದ ಮೆರವಣಿಗೆ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಶಿಗ್ಗಾವಿ, ಸವಣೂರಿನಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ನಡೆಸಿದರು.

ಶಿಗ್ಗಾವಿಯಲ್ಲಿ ಗೆದ್ದ ಬೊಮ್ಮಾಯಿ, ಬಿಜೆಪಿ ಕಾರ್ಯಕರ್ತರಿಂದ ಮೆರವಣಿಗೆ
ಶಿಗ್ಗಾವಿಯಲ್ಲಿ ಗೆದ್ದ ಬೊಮ್ಮಾಯಿ, ಬಿಜೆಪಿ ಕಾರ್ಯಕರ್ತರಿಂದ ಮೆರವಣಿಗೆ

Sat, 13 May 202312:37 PM IST

ಗಾಂಧೀಜಿಯಂತೆ ಸೌಮ್ಯವಾಗಿ ಪ್ರಬಲ ಶಕ್ತಿಯನ್ನು ಅಲ್ಲಾಡಿಸಿದಿರಿ, ರಾಹುಲ್‌ ಗಾಂಧಿಗೆ ಅಭಿನಂದಿಸಿದ ನಟ ಕಮಲ್‌ ಹಾಸನ್‌

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ಗೆಲುವಿಗೆ ಕಮಲ್‌ ಹಾಸನ್‌ ಅಭಿನಂದಿಸಿದ್ದಾರೆ. "ರಾಹುಲ್‌ ಗಾಂಧಿ ಜೀ, ಈ ಮಹತ್ವಪೂರ್ಣ ಗೆಲುವಿಗೆ ಅಭಿನಂದನೆಗಳು. ಗಾಂಧೀಜಿಯಂತೆ ನೀವು ಜನರ ಹೃದಯದಲ್ಲಿ ಹೆಜ್ಜೆ ಇಟ್ಟಿರಿ. ಅವರ ರೀತಿಯಲ್ಲಿ ಸೌಮ್ಯವಾಗಿ ಎಂತಹ ಶಕ್ತಿಗಳನ್ನೂ ಅಲುಗಾಡಿಸಬಹುದು ಎಂದು ತೋರಿಸಿದಿರಿ. ಜಗತ್ತನ್ನು ಪ್ರೀತಿ ಮತ್ತು ವಿನಯದಿಂದ ಗೆಲ್ಲಬಹುದು ಎಂದು ತೋರಿಸಿದ್ದೀರಿ. ನಿಮ್ಮ ವಿಶ್ವಾಸಾರ್ಹ ನಡೆ, ಧೈರ್ಯ ಜನರಿಗೆ ತಂಗಾಳಿಯಂತೆ ಭಾಸವಾಗಿದೆ. ವಿಭಜನೆ ಬಯಸದ ನೀವು ಕರ್ನಾಟಕದ ಜನರ ಮೇಲೆ ನಂಬಿಕೆ ಇಟ್ಟಿದ್ದೀರಿ. ಅದಕ್ಕೆ ಅವರು ಒಗ್ಗಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಗೆಲುವಿಗೆ ಮಾತ್ರವಲ್ಲದೆ ಗೆದ್ದ ವಿಧಾನಕ್ಕೂ ಅಭಿನಂದನೆಗಳು" ಎಂದು ಕಮಲ್‌ ಹಾಸನ್‌ ಟ್ವೀಟ್‌ ಮಾಡಿದ್ದಾರೆ.

Sat, 13 May 202312:35 PM IST

ಹೀಗಂದ್ರು ಮೋದಿ

Sat, 13 May 202312:30 PM IST

ಸಚಿವ ಸುಧಾಕರ್​ಗೆ ಸೋಲು 

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಕ್ಷದ ಪ್ರದೀಪ್ ಈಶ್ವರ್ ಅವರು ರಾಜ್ಯ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು 10,642 ಮತಗಳ ಅಂತರದಿಂದ ಸೋಲಿಸಿದ್ದಾರೆ.

Sat, 13 May 202312:23 PM IST

ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ; ಯಾರಿಗೆ ಎಷ್ಟು ಸೀಟು?

Sat, 13 May 202312:21 PM IST

ಕರ್ನಾಟಕ ಚುನಾವಣಾ ಫಲಿತಾಂಶದಲ್ಲಿ ಪ್ರಧಾನಿ ಮೋದಿ, ಶಾಗೆ ನೈತಿಕ ಸೋಲು: ಅಸ್ಸಾಂ ರಾಷ್ಟ್ರೀಯ ಪರಿಷತ್

ಗುವಾಹಟಿ: ಕರ್ನಾಟಕದಲ್ಲಿ ಬಿಜೆಪಿಯ ಸೋಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೈತಿಕ ಸೋಲು ಎಂದು ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಹೇಳಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಗೆಲುವು ಪಡೆದ ಕಾಂಗ್ರೆಸ್‌ ಪಕ್ಷವನ್ನು ಎಜೆಪಿ ಅಧ್ಯಕ್ಷ ಲುರಿಂಜ್ಯೋತಿ ಗೊಗೊಯ್ ಅಭಿನಂದಿಸಿದ್ದಾರೆ. ದಕ್ಷಿಣ ಭಾರತದ ಜನರು ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ ಪ್ರಧಾನಿ ಮತ್ತು ಗೃಹಸಚಿವರು ತಮ್ಮ ಮುಂದಾಳತ್ವದಲ್ಲಿ ಪ್ರಚಾರ ನಡೆಸಿದ್ದರು. ಹೀಗಾಗಿ, ಇದು ಅವರಿಬ್ಬರ ನೈತಿಕ ಸೋಲು ಎಂದು ಗೊಗೊಯ್‌ ಅಭಿಪ್ರಾಯಪಟ್ಟರು.

Sat, 13 May 202312:19 PM IST

Karnataka Result Live: ಕರ್ನಾಟಕದಲ್ಲಿ ಆಪ್ ಗೆಲ್ಲುವ ಕಾಲ ಬರುತ್ತೆ; ಫಲಿತಾಂಶಕ್ಕೆ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆದ ಕಾಂಗ್ರೆಸ್‌ ಪಕ್ಷವನ್ನು ಆಮ್‌ ಆದ್ಮಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಆರವಿಂದ ಕೇಜ್ರಿವಾಲ್‌ ಅವರು ಅಭಿನಂದಿಸಿದ್ದಾರೆ. ಬಿಜೆಪಿಯ ತಂತ್ರಗಳು ಇನ್ಮುಂದೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಈಗಲೇ ಅರಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಆಮ್‌ ಆದ್ಮಿ ಪಕ್ಷದ ಕಳಪೆ ಪ್ರದರ್ಶನವನ್ನು ಅವರು ಒಪ್ಪಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ಆಪ್‌ ಗೆಲ್ಲುವ ಸಮಯ ಬರುತ್ತದೆ ಎಂದು ಹೇಳಿದ್ದಾರೆ. ಆಮ್‌ ಆದ್ಮಿ ಕರ್ನಾಟಕದಲ್ಲಿ ಕೇವಲ ಶೇಕಡ 0.58 ಮತಗಳನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಪಂಜಾಬ್‌ನ ಜಲಂಧರ್ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಸುಶೀಲ್ ರಿಂಕು ಅವರ ವಿಜಯವನ್ನು ಕೇಜ್ರಿವಾಲ್ ಶ್ಲಾಘಿಸಿದ್ದಾರೆ. ಇದು "ಐತಿಹಾಸಿಕ ಮತ್ತು ಅಭೂತಪೂರ್ವ" ಗೆಲುವು ಎಂದು ಅವರು ಬಣ್ಣಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿಯು 209 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 2018 ರಲ್ಲಿ ಮೊದಲ ಬಾರಿಗೆ ಪಕ್ಷವು 28 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಗ ಎಲ್ಲಾ ಸ್ಥಾನಗಳನ್ನು ಕಳೆದುಕೊಂಡಿತ್ತು.

Sat, 13 May 202312:10 PM IST

Karnataka Results Live: ಬೆಂಗಳೂರಿನಲ್ಲಿದ್ದರೆ ಕ್ವೀನ್ಸ್‌ ರೋಡ್ ಕಡೆಗೆ ಹೋಗಬೇಡಿ

ಬೆಂಗಳೂರು ವಿಧಾನಸೌಧ ಬಳಿ ಇರುವ ಕ್ವೀನ್ಸ್‌ ರಸ್ತೆಯಲ್ಲಿ ಜನಸಂದಣಿ ನೆರೆದಿದೆ. ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದು, ಸಿದ್ದರಾಮಯ್ಯ ಸ್ವಾಗತಕ್ಕೆ ಅಭಿಮಾನಿಗಳು ನೆರೆದಿದ್ದಾರೆ. ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಹುಮತ ಪಡೆದಿರುವ ಕಾಂಗ್ರೆಸ್‌ನ ಮುಂದಿನ ನಡೆಯ ಬಗ್ಗೆ ಈ ಸುದ್ದಿಗೋಷ್ಠಿ ಕುತೂಹಲ ಹುಟ್ಟುಹಾಕಿದೆ. ಕ್ವೀನ್ಸ್‌ ರಸ್ತೆಯ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.

Sat, 13 May 202312:10 PM IST

ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದ ಬೊಮ್ಮಾಯಿ: ಸಿದ್ದರಾಮಯ್ಯ

ನ ಖಾವೂಂಗಾ ನ ಖಾನೇ ದೂಂಗ ಎಂಬುದು ಪ್ರಚಾರಕ್ಕೆ, ಸಾರ್ವಜನಿಕರ ಕನ್ಸಮ್ಶನ್‌ಗೆ ಮಾಡಿದಂತಹ ಭರವಸೆಯೇ ಹೊರತು, ವಸ್ತುಸ್ಥಿತಿಯ ಆಧಾರದ ಮೇಲೆ ಮಾಡಿರುವಂಥದ್ದಲ್ಲ. ಅಥವಾ ಅದರ ಮೇಲೆ ಅವರಿಗೆ ಅಂತಹ ಬದ್ಧತೆ ಇರಲಿಲ್ಲ.

ರುಪ್ಸಾ ಅನ್ನುವಂತಹ ಒಂದು ಸಂಸ್ಥೆ. ಅನುದಾನ ಪಡೆಯದೇ ಇರುವಂತಹ ಶಿಕ್ಷಣ ಸಂಸ್ಥೆಗಳ ಒಂದು ಸಂಘಟನೆ ಅದು. ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಅಂತ. ನಾನು ಯಾಕೆ ಇದನ್ನು ಹೇಳಿದೆ ಅಂದರೆ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಎಂದು ಹೇಳುತ್ತ ಬಂದಿದ್ದರು. ಈ ಪತ್ರಗಳು ದಾಖಲಾತಿ ಅಲ್ವ-  ಸಿದ್ದರಾಮಯ್ಯ ಮಾತು..

Sat, 13 May 202312:11 PM IST

ಬಿಜೆಪಿ ವಿರುದ್ಧ ಜನ ಬೇಜಾರಾಗಿದ್ದು ಯಾಕೆ ಎಂದರೆ...

ಬಿಜೆಪಿಯವರ ಭ್ರಷ್ಟಾಚಾರ, ಕರ್ನಾಟಕದ ಇತಿಹಾಸದಲ್ಲೇ ಮೊದಲನೇ ಬಾರಿಗೆ ಸ್ಟೇಟ್‌ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕೆಂಪಣ್ಣ, ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಸರ್ಕಾರ ಅಂತ ಹೇಳಿದ್ದರು. ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಪರ್ಸೆಂಟ್‌ ಕಮಿಷನ್‌ ಕೊಡಬೇಕು ಎಂಬುದನ್ನು ಅವರ ಗಮನಕ್ಕೆ ತಂದಿದ್ದರು. ಅದು ಬರೆದ್ದದ್ದು ಸುಮಾರು ಒಂದೂವರೆ ವರ್ಷದ ಹಿಂದೆ.

ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ನ ಖಾವೂಂಗಾ ನ ಖಾನೇ ದೂಂಗ ಎಂದು ಹೇಳುತ್ತಿದ್ದಾರೆ. ಆದರೆ, ಸ್ಟೇಟ್‌ ಕಾಂಟ್ರಾಕ್ಟರ್ಸ್‌ ಅಸೋಸಿಯೇಶನ್‌ ಅಧಿಕೃತವಾಗಿ ಪತ್ರ ಬರೆದಿದ್ದರು ಕೂಡಾ, ಇಲ್ಲಿವರೆಗೆ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಏನೂ ಕ್ರಮ ತಗೊಂಡಿಲ್ಲ. -  ಸಿದ್ದರಾಮಯ್ಯ  ಹೇಳಿಕೆ

Sat, 13 May 202312:06 PM IST

ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ : ಪಿಎಂ ಮೋದಿ

ಕರ್ನಾಟಕ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಬಿಜೆಪಿ ಕಾರ್ಯಕರ್ತರ ಶ್ರಮವನ್ನು ನಾನು ಪ್ರಶಂಸಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪಿನಿಂದ ಕರ್ನಾಟಕಕ್ಕೆ ಸೇವೆ ಸಲ್ಲಿಸುತ್ತೇವೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.

Sat, 13 May 202312:06 PM IST

ಕಾಂಗ್ರೆಸ್​ಗೆ ಶುಭಕೋರಿದ ಪ್ರಧಾನಿ ಮೋದಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಅವರಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ. 

Sat, 13 May 202312:06 PM IST

Priyanka Gandhi: ಭ್ರಷ್ಟ ಸರ್ಕಾರವನ್ನು ಜನ ತೊಲಗಿಸಿದ್ದಾರೆ; ಪ್ರಿಯಾಂಕಾ ಗಾಂಧಿ

ನಿರುದ್ಯೋಗ, ಭ್ರಷ್ಟಾಚಾರವನ್ನು ಜನರು ವಿರೋಧಿಸಿದ್ದಾರೆ. ಕರ್ನಾಟಕದ ಜನರು ಮಹತ್ವದ ತೀರ್ಪು ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರವನ್ನು ಹೊರದಬ್ಬಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸಿದೆವು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ನಮಗೆ ಹೆಚ್ಚು ಲಾಭವಾಯಿತು. ಕಾಂಗ್ರೆಸ್ ಗೆಲುವಿಗೆ ಇದು ಪೂರಕವಾಯಿತು. ನಾವು ಜನರಿಗೆ ಕೊಟ್ಟಿರುವ ಎಲ್ಲ ಗ್ಯಾರೆಂಟಿಗಳನ್ನೂ ಈಡೇರಿಸುತ್ತೇವೆ. ಇದು ನನ್ನ ಭರವಸೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Sat, 13 May 202312:06 PM IST

ಕಾಂಗ್ರೆಸ್ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ

ಕಾಂಗ್ರೆಸ್ ಪಕ್ಷವು ನಿಚ್ಚಳ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಹೇಗಿರಲಿದೆ ಎಂಬ ಚರ್ಚೆಯೂ ಗರಿಗೆದರಿದೆ. ಮುಖ್ಯಮಂತ್ರಿ ಹುದ್ದೆಯು ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಆಗಬಹುದು. ಒಬ್ಬರು ಮುಖ್ಯಮಂತ್ರಿಯಾದರೆ ಮತ್ತೊಬ್ಬರು ಗೃಹ ಅಥವಾ ಹಣಕಾಸು ಇಲಾಖೆಯಂಥ ಮಹತ್ವದ ಖಾತೆಯ ಹೊಣೆ ಹೊರಬಹುದು. ಉಳಿದಂತೆ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಪುಟ್ಟರಂಗಶೆಟ್ಟಿ, ಎಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ಜಮೀರ್ ಅಹ್ಮದ್, ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ್, ರಾಮಲಿಂಗಾ ರೆಡ್ಡಿ ಪ್ರಮುಖ ಖಾತೆಗಳ ಹೊಣೆ ಹೊರಬಹುದು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ಮೂಲಗಳು ಹೇಳಿವೆ.

Sat, 13 May 202312:11 PM IST

ಆಪರೇಷನ್‌ ಕಮಲದ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದ್ದೇ ಬಿಜೆಪಿ ಎಂದ ಸಿದ್ದರಾಮಯ್ಯ

ರಾಜ್ಯದಲ್ಲಿ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಜನಾದೇಶವಾಯಿತು. ಆಗ ಪಕ್ಷೇತರರನ್ನು ಸೇರಿಸಿ ಬಿಜೆಪಿ ಸರ್ಕಾರ ರಚನೆ ಮಾಡಿತು. ಆ ಸರ್ಕಾರ ಏನಾಯಿತು ಎಂಬುದು ನಿಮಗೆ ಗೊತ್ತೇ ಇದೆ. ಕೆಲವು ಪಕ್ಷೇತರರು ಸರ್ಕಾರದ ವಿರುದ್ಧ ತಿರುಗಿಬಿದ್ದರು. ಯಡಿಯುರಪ್ಪ, ಡಿವಿಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಮೂರು ಜನ ಮುಖ್ಯಮಂತ್ರಿ ಆದರು. ಇದು ಸರಿಯಾದ ಸರ್ಕಾರವಾಗಿರಲಿಲ್ಲ.

ಮುಂದೆ 2018ರಲ್ಲಿ ಜನಾದೇಶ ಮತ್ತೆ ಅತಂತ್ರವಾಗಿತ್ತು. 2019ರಲ್ಲಿ ಆಪರೇಶನ್‌ ಕಮಲ ಆಯಿತು. ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಅದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಬಿಜೆಪಿಯವರು ಸರಿಯಾದ ರೀತಿಯಲ್ಲಿ ಜನಾದೇಶ ಪಡೆದು ಸರಕಾರ ಮಾಡಿಯೇ ಇಲ್ಲ. ಆಪರೇಷನ್‌ ಕಮಲ ಎಂಬ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದ್ದೇ ಬಿಜೆಪಿ ಎಂದು  ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

Sat, 13 May 202311:46 AM IST

ಲಕ್ಷ್ಮಣ್ ಸವದಿ ಗೆಲುವು

ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಲಕ್ಷ್ಮಣ್ ಸವದಿ ಅವರು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ  ವಿರುದ್ಧ ಗೆಲುವು ಸಾಧಿಸಿದ್ದಾರೆ.

Sat, 13 May 202311:46 AM IST

ಫಲಿತಾಂಶ ಸ್ವೀಕರಿಸಿದ್ದೇವೆ, ಇವಿಎಂ ಬಗ್ಗೆ ಈಗ ಅವರ ಅಭಿಪ್ರಾಯವೇನು?: ರಾಜೀವ್‌ ಚಂದ್ರಶೇಖರ್‌ ಪ್ರಶ್ನೆ

"ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸುತ್ತೇವೆ. ರಚನಾತ್ಮಕ ವಿರೋಧ ಪಕ್ಷವಾಗಿ ಕರ್ನಾಟಕದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಇದೇ ಸಮಯದಲ್ಲಿ ಪ್ರಜಾಪ್ರಭುತ್ವ ಮತ್ತು ಇವಿಎಂಗಳ ಬಗ್ಗೆ ಅವರ ಅಭಿಪ್ರಾಯ ಏನೆಂದು ಜನರು ಪ್ರಶ್ನಿಸಬೇಕಿದೆ" ಎಂದು ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

Sat, 13 May 202311:30 AM IST

ಎರಡೂ ಕ್ಷೇತ್ರದಲ್ಲಿ ಸೋಮಣ್ಣ ಸೋಲು

 ಹಾಲಿ ಸಚಿವ ವಿ.ಸೋಮಣ್ಣ ಅವರು ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಸೋಲನ್ನನುಭವಿಸಿದ್ದಾರೆ.  ಫಲಿತಾಂಶ ಹೊರಬಂದ ಬಳಿಕ ಬೇಸರದಲ್ಲಿ ಮಹಾರಾಣಿ ಕಾಲೇಜನಿಂದ ಹೊರನಡೆದಿದ್ದಾರೆ. 

Sat, 13 May 202311:46 AM IST

ಇಲ್ಲಿಯವರೆಗೆ 103 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯಭೇರಿ 

ಈವರೆಗೆ ಕಾಂಗ್ರೆಸ್ 103 ಸ್ಥಾನಗಳನ್ನು ಗೆದ್ದಿದ್ದು, 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 50 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 14ರಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್ ಇದುವರೆಗೆ ಒಟ್ಟು ಮತಗಳಲ್ಲಿ ಶೇ. 43.11 ರಷ್ಟನ್ನು ಗಳಿಸಿದೆ. 

Sat, 13 May 202311:46 AM IST

 ಅಶ್ವತ್ಥನಾರಾಯಣ್ ಪ್ರತಿಕ್ರಿಯೆ

 ಕರ್ನಾಟಕದಲ್ಲಿ ನಮಗೆ ಹಿನ್ನಡೆಯಾಗಿದೆ, ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ, ನಾವು ಹೆಚ್ಚು ಶಕ್ತಿಯುತವಾಗಿ ಕೆಲಸ ಮಾಡುತ್ತೇವೆ ಮತ್ತು ಜನರ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ. 2024 ರ ಲೋಕಸಭಾ ಚುನಾವಣೆಯಲ್ಲಿ, ನಮ್ಮ ಎಲ್ಲಾ ಅಭ್ಯರ್ಥಿಗಳು ಎಲ್ಲಾ 28 ಸ್ಥಾನಗಳಿಂದ ಗೆಲ್ಲಬೇಕೆಂದು ನಾವು ಬಯಸುತ್ತೇವೆ ಎಂದು ಮಲ್ಲೇಶ್ವರಂ ಬಿಜೆಪಿಯ ವಿಜೇತ ಅಭ್ಯರ್ಥಿ ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ. 

Sat, 13 May 202311:46 AM IST

ಗೆಲುವಿನ ನಗೆ ಬೀರಿದವರು.. 

Sat, 13 May 202311:46 AM IST

ಮತದಾರರಿಗೆ ಸಾಷ್ಟಾಂಗ ನಮಸ್ಕಾರ -ಡಿಕೆಶಿ 

ರಾಮನಗರ ಜಿಲ್ಲೆಯ ಎಲ್ಲಾ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ನನ್ನ ಮೇಲೆ, ನಮ್ಮ ಅಭ್ಯರ್ಥಿ ಹಾಗೂ ಮುಖಂಡರ ಮೇಲೆ ನಂಬಿಕೆ ಇಟ್ಟು ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ನನಗೆ 1,22,392 ಮತಗಳ ಅಂತರದಲ್ಲಿ, ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು 10,715 ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಬಾಲಕೃಷ್ಣ ಅವರನ್ನು 12,648 ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ಕೇವಲ ನಮ್ಮ ಮೂವರ ವಿಜಯವಲ್ಲ. ರಾಮನಗರ ಜಿಲ್ಲೆ, ಕಾರ್ಯಕರ್ತರ ಗೆಲುವು. ಅಧಿಕಾರಿ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ರಾಮನಗರದಲ್ಲಿ ಡಿಕೆಶಿ ಪ್ರತಿಕ್ರಿಯೆ ನೀಡಿದರು. 

Sat, 13 May 202311:46 AM IST

ಸಿದ್ದರಾಮಯ್ಯ ಭರವಸೆ

Sat, 13 May 202311:46 AM IST

ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ

ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ - ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

Sat, 13 May 202311:46 AM IST

ರಾಜಾಜಿನಗರದಲ್ಲಿ ಬಿಜೆಪಿಗೆ ಗೆಲುವು

ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ 8050 ರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

Sat, 13 May 202311:46 AM IST

ಧಾರವಾಡ ಗ್ರಾಮೀಣದಲ್ಲಿ ಕಾಂಗ್ರೆಸ್​ನ ವಿನಯ್ ಗೆಲುವು

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ 18,144 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

Sat, 13 May 202311:46 AM IST

ಆರಗ ಜ್ಞಾನೇಂದ್ರ ಗೆಲುವು

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ನ ಕಿಮ್ಮನೆ ರತ್ಮಾಕರ್ ವಿರುದ್ಧ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದಾರೆ. 

Sat, 13 May 202311:46 AM IST

ಈ ಚುನಾವಣೆಯಲ್ಲಿ ಬಡವರು ಗೆದ್ದಿದ್ದಾರೆ -ಕೆಸಿ ವೇಣುಗೋಪಾಲ್

ಬಿಜೆಪಿ ಮಾಡುವ ವಿಭಜಕ ರಾಜಕಾರಣ ಪ್ರತಿ ಬಾರಿಯೂ ಯಶಸ್ವಿಯಾಗುವುದಿಲ್ಲ. ಇದು ಸ್ಪಷ್ಟ ಸಂದೇಶವಾಗಿದೆ. ನಾವು ಕರ್ನಾಟಕದ ಬಡವರ ಪರ ನಿಂತಿದ್ದೇವೆ. ಅವರು ಶ್ರೀಮಂತರ ಪರವಾಗಿ ನಿಂತಿದ್ದರು. ಅಂತಿಮವಾಗಿ ಈ ಚುನಾವಣೆಯಲ್ಲಿ ಬಡವರು ಗೆದ್ದಿದ್ದಾರೆ. ಇದು ಈ ಚುನಾವಣೆಯ ಸ್ಪಷ್ಟ ನಿರೂಪಣೆ. 2024ರ ಚುನಾವಣೆಯ ಮೈಲಿಗಲ್ಲುಗಳಲ್ಲಿ ಇದೂ ಒಂದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. 

Sat, 13 May 202311:46 AM IST

ಬಿಜೆಪಿ ಸೋಲಲು ಕಾರಣಗಳು ಇಲ್ಲಿದೆ.. 

Sat, 13 May 202311:46 AM IST

ಖರ್ಗೆ-ಸುರ್ಜೇವಾಲಾ ಸಂಭ್ರಮ 

ಬೆಂಗಳೂರಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಿಹಿ ಸವಿದು ಸಂಭ್ರಮಿಸಿದರು.

Sat, 13 May 202311:46 AM IST

ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ರಾಷ್ಟ್ರ ನಾಯಕರ ಪ್ರತಿಕ್ರಿಯೆ

Sat, 13 May 202310:32 AM IST

ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿಗಳ ಬಗ್ಗೆ ತೀರ್ಮಾನ : ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬಂದಿದ್ದು ಕೊಟ್ಟ ಮಾತಿನಂತೆ ಜನತೆ ಮುಂದೆ ಹೇಳಿದ್ದ ಗ್ಯಾರಂಟಿಗಳನ್ನ ಈಡೇರಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.. ಕಾಂಗ್ರೆಸ್ ಅಧಿಕಾರಕ್ಕೆ ಸ್ವೀಕಾರ ಮಾಡಿದ ತಕ್ಷಣ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲೇ ಭರವಸೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೊಸ ಸರ್ಕಾರದ ರಚನೆ, ರೂಪುರೇಷೆಗಳ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡಲಿದ್ದು ಲೋಕಸಭಾ ಚುನಾವಣೆಗೆ ಇದು ಮೆಟ್ಟಿಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Sat, 13 May 202310:32 AM IST

ಸಿಎಂ ಬೊಮ್ಮಾಯಿ ಇಂದು ಸಂಜೆಯೇ ರಾಜೀನಾಮೆ ನೀಡುವ ಸಾಧ್ಯತೆ

ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಗುವುದು ಬಹುತೇಕ ಖಚಿತವಾಗಿದ್ದು,  ಇಂದು ಸಂಜೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಬಸರಾಜ ಬೊಮ್ಮಾಯಿ ರಾಜೀನಾಮೆ ನೀಡುವ ಸಾಧ್ಯತೆಯಿದೆ. 

Sat, 13 May 202310:32 AM IST

ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಗದಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿ: ಹೆಚ್.ಕೆ.ಪಾಟೀಲ : 89,958

ಬಿಜೆಪಿ‌ ಅಭ್ಯರ್ಥಿ ಅನಿಲ‌ ಮೆಣಸಿನಕಾಯಿ : 74,828

15,130 ಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ ಗೆಲುವು

2018ರ ವಿಜೇತರು: ಎಚ್‌.ಕೆ.ಪಾಟೀಲ (ಕಾಂಗ್ರೆಸ್‌).

**

ನರಗುಂದ ವಿಧಾನ ಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ 72,835

ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ : 71,044

1791 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಗೆಲುವು

2018ರ ವಿಜೇತರು: ಸಿ.ಸಿ.ಪಾಟೀಲ (ಬಿಜೆಪಿ).

**

ರೋಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ 94,865

ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ: 70,175

24,690 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಗೆಲುವು

2018ರ ವಿಜೇತರು: ಕಳಕಪ್ಪ ಜಿ.ಬಂಡಿ (ಬಿಜೆಪಿ).

***

ಶಿರಹಟ್ಟಿ ವಿಧಾನಸಭಾ ಕ್ಷೇತ್ರ

ಬಿಜೆಪಿ‌ ಅಭ್ಯರ್ಥಿ ಚಂದ್ರು ಲಮಾಣಿ: 73,600.

ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ‌ ದೊಡ್ಡಮನಿ: 45,637

ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ: 34,550

27,963 ಮತಗಳ ಅಂತರದಲ್ಲಿ ಚಂದ್ರು ಲಮಾಣಿ ಬಿಜೆಪಿ ಅಭ್ಯರ್ಥಿ ಗೆಲುವು.

2018ರ ವಿಜೇತರು: ರಾಮಣ್ಣ ಲಮಾಣಿ (ಬಿಜೆಪಿ).

Sat, 13 May 202310:32 AM IST

ಬಜರಂಗ ಬಲಿ ಯಾವಾಗಲೂ ಸತ್ಯ, ಪ್ರೀತಿ ಮತ್ತು ಸಹೋದರತ್ವವನ್ನು ಬೆಂಬಲಿಸುತ್ತದೆ - ಛತ್ತೀಸ್‌ಗಢ ಸಿಎಂ

ಬಿಜೆಪಿ ಬಜರಂಗದಳವನ್ನು ಬಜರಂಗ ಬಲಿ ಮಾಡಿದೆ. ಆದರೆ ಬಜರಂಗ ಬಲಿ ಎಂದಿಗೂ ಬಜರಂಗ ಬಲಿಯೇ. ಬಜರಂಗ ಬಲಿ ಯಾವಾಗಲೂ ಸತ್ಯ, ಪ್ರೀತಿ ಮತ್ತು ಸಹೋದರತ್ವವನ್ನು ಬೆಂಬಲಿಸುತ್ತದೆ. ಈ ಸೋಲು ಪ್ರಧಾನಿ ಮೋದಿಯವರ ಸೋಲು ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

Sat, 13 May 202310:32 AM IST

ಗೆಲುವಿನ ಪ್ರಮಾಣಪತ್ರ ಸಂಗ್ರಹಿಸಿದ ಡಿಕೆಶಿ 

ಕನಕಪುರದಿಂದ ಗೆದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮಾಣಪತ್ರ ಸಂಗ್ರಹಿಸಿದರು. 

Sat, 13 May 202310:32 AM IST

50,000 ಮತಗಳ ಅಂತರದಲ್ಲಿ ಗೆದ್ದವರು

ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ 99,399 ಮತ ಪಡೆದರೆ ಜೆಡಿಎಸ್ ನಾಗರಾಜು 15,691 ಮತ ಮಾತ್ರ ಪಡೆದಿದ್ದಾರೆ

ಚಿತ್ರದುರ್ಗದಲ್ಲಿ ವೀರೇಂದ್ರ ಪಪ್ಪಿ 1,13,535 ಮತ ಗಳಿಸಿದ್ದು, ಬಿಜೆಪಿಯ ತಿಪ್ಪಾರೆಡ್ಡಿ 62945 ಮತ ಪಡೆದಿದ್ದಾರೆ

ಚಾಮರಾಜ ಪೇಟೆಯಲ್ಲಿ ಜಮೀರ್ ಅಹಮ್ಮದ್ ಖಾನ್ (ಕಾಂಗ್ರೇಸ್)77,532 ಮತ ಪಡೆದು ಸಮೀಪದ ಅಭ್ಯರ್ಥಿ ಜೆಡಿಎಸ್ ನ ಗೋವಿಂದರಾಜ ವಿರುದ್ದ 55,000 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಸರ್ವಜ್ಞ ನಗರ ಕ್ಷೇತ್ರದಲ್ಲಿ ಕೆ.ಜೆ. ಜಾರ್ಜ್ 1,15,620 ಮತ ಗಳಿಸಿದ್ದು, ಬಿಜೆಪಿಯ ಪದ್ಮನಾಭ ರೆಡ್ಡಿ 60,943 ಮತ ಮಾತ್ರ ಪಡೆದಿದ್ದಾರೆ.

ಯಮಕನಮರಡಿ ಯಲ್ಲಿ ಸತೀಶ್ ಜಾರಕಿಹೊಳಿ (ಕಾಂಗ್ರೆಸ್ ) 97,863 ಮತ ಪಡೆದು 41810 ಪಡೆದ ಬಿಜೆಪಿಯ ಬಸವರಾಜ್ ಹುಂಡ್ರಿ ವಿರುದ್ದ 55,000 ಮತಗಳ ಅಂತರದಲ್ಲಿ ಗೆದ್ದು ಬಂದಿದ್ದಾರೆ.

ಬಳ್ಳಾರಿ ಯಲ್ಲಿ ಕಾಂಗ್ರೆಸ್ ನ ನಾಗೇಂದ್ರ 1,01,718 ಮತ ಗಳಿಸಿದ್ದು, ಬಿಜೆಪಿಯ ಶ್ರೀರಾಮುಲು (72,866)ಮತ ಗಳಿಸಿದ್ದಾರೆ.

ಅಥಣಿಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ 94,505 ಮತ ಪಡೆದಿದ್ದು ಬಿಜೆಪಿಯ ಮಹೇಶ್ ಕುಮತಳ್ಳಿ 38,654 ಮತ ಪಡೆದಿದ್ದಾರೆ.

Sat, 13 May 202310:32 AM IST

ಜಗದೀಶ್ ಶೆಟ್ಟರ್ ತೆರೆದ ಹೊಸ ಅಂಗಡಿಗೆ ಸಿಗಲಿಲ್ಲ ಜನಸ್ಪಂದನೆ, ಬಿಜೆಪಿಯ ಮಹೇಶ ಟೆಂಗಿನಕಾಯಿ ಎದುರು ಸೋಲು

Sat, 13 May 202310:32 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ..

Sat, 13 May 202310:32 AM IST

ಬಿಜೆಪಿ ಸೋಲಿನಿಂದ ಧೃತಿ ಗೆಡುವುದಿಲ್ಲ : ಬಿ ವೈ ವಿಜಯೇಂದ್ರ

ರಾಜ್ಯದ ಜನರು ಕೊಟ್ಟಿರುವ ತೀರ್ಪನ್ನ ನಾವು ಒಪ್ಪಿಕೊಂಡು ಮುಂಬರುವ ದಿನಗಳಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿಭಾಯಿಸುತ್ತೇವೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.. ಜನರು ಕೊಟ್ಟ ತೀರ್ಪನ್ನ ಗೌರವಯುತವಾಗಿ ಸ್ವೀಕರಿಸುವ ಜೊತೆಗೆ ಈ ಸೋಲಿನ ಪರಾಮರ್ಶೆ ಮಾಡಿ ಬಿಜೆಪಿ ಮತ್ತೆ ಮೈಕೊಡವಿ ಏಳಲಿದೆ.. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ಮೂಲಕ ಬಂದ್ರಿದ್ರೂ ಅದು ಜನರಿಗೆ ಎಷ್ಟರ ಮಟ್ಟಿಗೆ ತಲುಪಲಿದೆ ಎನ್ನುವ ಸತ್ಯ ಬಯಲಾಗಲಿದೆ ಎಂದು ವಿಜಯೇಂದ್ರ ಹೇಳಿದರು. ಬಿ ಎಸ್ ಯಡಿಯೂರಪ್ಪ ಬದಲು ಈ ಬಾರಿ ಶಿಕಾರಿಪುರದಿಂದ ಅಖಾಡಕ್ಕಿಳಿದಿದ್ದ ವಿಜಯೇಂದ್ರ ಗೆಲವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

Sat, 13 May 202310:32 AM IST

ನನಗೆ, ನನ್ನ ಕುಟುಂಬಕ್ಕೆ ಸೋಲು-ಗೆಲುವು ಹೊಸತಲ್ಲ: ಹೆಚ್​ಡಿಕೆ

Sat, 13 May 202310:32 AM IST

ಜಾರ್ಖಂಡ್​​ನಲ್ಲಿ ಸಂಭ್ರಮಾಚರಣೆ 

ಕರ್ನಾಟಕದಲ್ಲಿ ಕಾಂಗ್ರೆಸ್​ ಗೆದ್ದಿದ್ದಕ್ಕೆ ಜಾರ್ಖಂಡ್​ನ ರಾಂಚಿಯಲ್ಲಿ ಕೈ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 

Sat, 13 May 202310:32 AM IST

ಚನ್ನಪಟ್ಟಣದಲ್ಲಿ ಹೆಚ್​ ಡಿ ಕುಮಾರಸ್ವಾಮಿಗೆ ಜಯ 

ಚನ್ನಪಟ್ಟಣದಲ್ಲಿ ಜೆಡಿಎಸ್​​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಬಿಜೆಪಿಯ ಸಿ.ಪಿ.ಯೋಗೇಶ್ವರ್​ ವಿರುದ್ಧ 15,915 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

Sat, 13 May 202310:32 AM IST

ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಸೋಲು, ಕಾಂಗ್ರೆಸ್‌ನ ತಮ್ಮಯ್ಯ ಗೆಲುವು

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಇಲ್ಲಿ ಒಂದು ಕಾಲದ ಸಿ.ಟಿ.ರವಿ ಒಡನಾಡಿ ಹಾಗೂ ಲಿಂಗಾಯತ ಸಮುದಾಯದ ನಾಯಕ ಎಚ್‌.ಡಿ.ತಮ್ಮಯ್ಯ ಗೆಲುವು ಸಾಧಿಸಿದ್ದಾರೆ. ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಸಹ ಒಂದಾಗಿತ್ತು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದೇ ಸಿ.ಟಿ.ರವಿ ಅವರನ್ನು ರಾಜಕೀಯ ವಲಯ ಪರಿಗಣಿಸಿತ್ತು. ಇದೀಗ ರವಿ ಅವರನ್ನು ಸೋಲಿಸುವ ಮೂಲಕ ತಮ್ಮಯ್ಯ ಜೈಂಟ್ ಕಿಲ್ಲರ್ ಎನಿಸಿಕೊಂಡಿದ್ದಾರೆ.

Sat, 13 May 202310:32 AM IST

ಬಿಜೆಪಿ ಸೋಲಿಗೆ ನಾಯಕರ ದುರಂಹಕಾರವೇ ಕಾರಣ : ಜನಾರ್ದನ ರೆಡ್ಡಿ 

ಬಿಜೆಪಿಯ ಸೋಲಿಗೆ ನಾಯಕರ ದುರಂಹಕಾರದ ನಡೆ ಮತ್ತು ಕೆಟ್ಟ ನಿರ್ಧಾರ ಕಾರಣ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ತಮ್ಮ ಪಕ್ಷ ಖಾತೆ ತೆರೆದಿರುವುದಕ್ಕೆ ಸಂತೋಷವನ್ನ ತಮ್ಮ ಮಡದಿಯ ಸೋಲಿನಿಂದಾಗಿ ಸಂಭ್ರಮಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ರಾಜ್ಯಕ್ಕೆ ಅತಂತ್ರ ಸ್ಥಿತಿ ಬೇಡ ಎಂದು ಜನರು ಈ ತೀರ್ಪು ನೀಡಿದ್ದು, ಬಿಜೆಪಿ ತನ್ನ ತಪ್ಪುಗಳನ್ನ ತಿದ್ದಿಕೊಳ್ಳದೇ ಇದ್ದರೆ ಉಳಿಗಾಲವಿಲ್ಲ ಎಂದು ಹೇಳಿದರು

Sat, 13 May 202310:32 AM IST

ಈವರೆಗೆ 36 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಈವರೆಗೆ ಕಾಂಗ್ರೆಸ್​ 36 ಕ್ಷೇತ್ರಗಳಲ್ಲಿ ಗೆದ್ದಿದ್ದು, 101 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

Sat, 13 May 202310:32 AM IST

ಕಲಬುರಗಿಯ 7 ಕ್ಷೇತ್ರಗಲ್ಲಿ ಕಾಂಗ್ರೆಸ್​ಗೆ ಗೆಲುವು

ಕಲಬುರಗಿ: ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಎರಡು ಕ್ಷೇತ್ರಗಳು ಬಿಜೆಪಿ ಪಾಲಾಗಿದೆ.

ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಪ್ರಿಯಾಂಕ್ ಖರ್ಗೆ ಭರ್ಜರಿ ಗೆಲುವು ಸಾಧಿಸುತ್ತಾರೆ. ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರ ಸಹೋದರ ನಿತಿನ್ ಗುತ್ತೇದಾರ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಅಭ್ಯರ್ಥಿ ಎಂ. ವೈ. ಪಾಟೀಲ್ ವಿಜಯ ಸಾಧಿಸಿದ್ದಾರೆ.

Sat, 13 May 202310:32 AM IST

ಗೆದ್ದಾಗಿದೆ, ಈಗ ಕೆಲಸ ಮಾಡಬೇಕಿದೆ: ಮಲ್ಲಿಕಾರ್ಜುನ ಖರ್ಗೆ

ನಾವು ಈ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಗೆದ್ದು, ಫಲಿತಾಂಶವನ್ನು ಪಡೆದುಕೊಂಡಿದ್ದೇವೆ, ಗೆದ್ದಾಗಿದೆ, ಈಗ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

Sat, 13 May 202310:32 AM IST

ಕೊನೆಗೂ ನಿಜವಾಯ್ತು ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ; ಸುಳ್ಳಾಯ್ತು ಚುನಾವಣಾ ಸಮೀಕ್ಷೆಗಳು

Sat, 13 May 202310:32 AM IST

ಜನರ ತೀರ್ಪು ಸ್ವೀಕರಿಸಿದ ಬಿಎಸ್ ಯಡಿಯೂರಪ್ಪ

Sat, 13 May 202310:32 AM IST

ಮುಂದಿನ ಸಿಎಂ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

Sat, 13 May 202310:32 AM IST

ಗೆಲುವಿನ ನಗೆ ಬೀರಿದವರು

Sat, 13 May 202310:32 AM IST

ಡಿಕೆಶಿ ಸಂಭ್ರಮದ ವಿಡಿಯೋ ನೋಡಿ

Sat, 13 May 202310:32 AM IST

ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್​ನ ಪ್ರಕಾಶ್ ​ಕೆ ಕೋಳಿವಾಡ​ಗೆ ಗೆಲುವು

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನ ಪ್ರಕಾಶ್ ​ಕೆ ಕೋಳಿವಾಡ ಅವರು ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್ ವಿರುದ್ಧ ಗೆದ್ದುಬೀಗಿದ್ದಾರೆ.

Sat, 13 May 202310:32 AM IST

ಕಾಂಗ್ರೆಸ್ ಕರ್ನಾಟಕದಲ್ಲಿ ಬಡವರ ಪರವಾಗಿ ನಿಲ್ಲುತ್ತದೆ - ರಾಹುಲ್​ ಗಾಂಧಿ 

ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸಿಕ್ಕ ಅಭೂತ ಪೂರ್ವ ಗೆಲುವಿಗೆ ರಾಹುಲ್ ಗಾಂಧಿ ಹರ್ಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜನರಿಗೆ, ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ನಾನು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಕರ್ನಾಟಕದಲ್ಲಿ ಬಡವರ ಪರವಾಗಿ ನಿಲ್ಲುತ್ತದೆ.ನಾವು ಈ ಹೋರಾಟವನ್ನ ಪ್ರೀತಿಯಿಂದ ಗೆದ್ದಿದ್ದೇವೆ. ಕರ್ನಾಟಕದಲ್ಲಿ ನಾವು ದ್ವೇಷವನ್ನ ಹರಡದೆ ಪ್ರೀತಿಯನ್ನ ಹರಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ

Sat, 13 May 202309:24 AM IST

ಪ್ರೀತಿಯಿಂದ ಗೆದ್ದಿದ್ದೇವೆ: ರಾಹುಲ್​ ಗಾಂಧಿ ಪ್ರತಿಕ್ರಿಯೆ 

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಹಿನ್ನೆಲೆ ದೆಹಲಿಯಲ್ಲಿ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಜನತೆಗೆ, ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಧನ್ಯವಾದ ಅರ್ಪಿಸಿದ ಅವರು ನಾವು ದ್ವೇಷವನ್ನು ಹರಡಲು ಬಂದಿರಲಿಲ್ಲ, ಪ್ರೀತಿಯಿಂದ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.

Sat, 13 May 202310:32 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ..

Sat, 13 May 202310:32 AM IST

ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ: ಸಿದ್ದರಾಮಯ್ಯ 

ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರನ್ನೂ ಅಭಿನಂದಿಸುತ್ತೇನೆ.

ಯಾವುದೇ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲದ ಅಭಿಮಾನಿಗಳು ರಾತ್ರಿ ಹಗಲು ಶ್ರಮಪಟ್ಟಿರುತ್ತಾರೆ. ಅವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು.

ಈ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಡೆಸಿರುವ ಪ್ರಯತ್ನವನ್ನು ಮರೆಯಲಾಗದು. ಬಹಳ ಮುಖ್ಯವಾಗಿ ಕರ್ನಾಟಕದ ಚುನಾವಣಾ ಪ್ರಚಾರ ಪ್ರಾರಂಭವಾಗಿದ್ದೇ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ. ಈ ಯಾತ್ರೆ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಈ ಫಲಿತಾಂಶದ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ. -ಸಿದ್ದರಾಮಯ್ಯ ಹೇಳಿಕೆ.

Sat, 13 May 202310:32 AM IST

ಗೆಲುವಿನ ನಗೆಬೀರಿದ ಕಾಂಗ್ರೆಸ್​​ನ 92 ರ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಕಾಂಗ್ರೆಸ್ ನ ಭದ್ರಕೋಟೆ ಆಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಶಾಮನೂರು ಶಿವಶಂಕರಪ್ಪಗೆ ಗೆಲುವು ಕಠಿಣವಿದೆ ಎಂದೇ ಅಂದಾಜಿಸಲಾಗಿತ್ತಾದರೂ 27,888 ಮತಗಳ ಅಂತರದಲ್ಲಿ ಮತ್ತೊಮ್ಮೆ 92 ವರ್ಷದ ಶಾಮನೂರು ಗೆಲುವಿನ ನಗೆ ಬೀರಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಒಟ್ಟು 84,258 ಮತಗಳನ್ನು ಪಡೆದಿದ್ದು ಎದುರಾಳಿ ಬಿಜೆಪಿ ಪಕ್ಷದ ಬಿ.ಜಿ. ಅಜಯಕುಮಾರ್ 56,410 ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಮಾನುಲ್ಲಾ ಖಾನ್ 1,296 ಮತಗಳನ್ನು ಗಳಿಸಿ ಧೂಳಿಪಟವಾಗಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 2,10,668 ಮತದಾರರಲ್ಲಿ 1,45,534 ಮತದಾನವಾಗಿತ್ತು.

Sat, 13 May 202310:32 AM IST

ಮೌನದ ಮರೆಗೆ ಬಿಜೆಪಿ ನಾಯಕರು

ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸದ್ದು ಮಾಡುತ್ತಿದ್ದ ಬಿಜೆಪಿ ನಾಯಕರು ಕರ್ನಾಟಕ ಫಲಿತಾಂಶದ ನಂತರ ಮೌನದ ಮರೆಗೆ ಸರಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರತುಪಡಿಸಿದರೆ ಉಳಿದ ಯಾವುದೇ ಪ್ರಮುಖ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿಲ್ಲ. ಬಿಜೆಪಿಯ ರಾಜ್ಯ ಘಟಕವು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಟ್ ಅವರ ಹೇಳಿಕೆಯ ವಿಡಿಯೊ ತುಣುಕನ್ನು ಟ್ವೀಟ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕಳೆದ 17 ಗಂಟೆಗಳಿಂದ ಏನೊಂದೂ ಟ್ವೀಟ್ ಮಾಡಿಲ್ಲ.

Sat, 13 May 202310:32 AM IST

ಅಶೋಕ ಮನಗೂಳಿ ಗೆಲುವು

ವಿಜಯಪುರ: ತೀವ್ರ ‌ಕೂತುಹಲ ಕೆರಳಿಸಿದ್ದ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಶೋಕ ಮನಗೂಳಿ ಗೆಲುವಿನ ನಗೆ ಬೀರಿದ್ದಾರೆ. 8080 ಮತಗಳ‌ ಅಂತರದಿಂದ ಮನಗೂಳಿ ಗೆಲುವು ದಾಖಲಿಸಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಮೇಶ ಭೂಸನೂರ 78691 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಸೋಮಜಾಳ ಮೂರನೇ ಸ್ಥಾನದಲ್ಲಿದ್ದಾರೆ.

Sat, 13 May 202310:32 AM IST

ಯಾದಗಿರಿ ಜಿಲ್ಲೆಯಲ್ಲಿ ಕಮಲ ಪಡೆಗೆ ಶಾಕ್

ಯಾದಗಿರಿ ಜಿಲ್ಲೆಯಲ್ಲಿ ಮೂರು ಕ್ಷೇತ್ರ ಕಾಂಗ್ರೆಸ್ ಬಂಪರ್ ಗೆಲುವು,

ಸುರಪುರ : ರಾಜಾವೆಂಕಟಪ್ಪ ನಾಯಕ

ಶಹಾಪುರ: ಶರಣಬಸ್ಸಪ್ಪಗೌಡ ದರ್ಶನಾಪುರ

ಯಾದಗಿರಿ: ಚನ್ನಾರೆಡ್ಡಿ ಪಾಟೀಲ ತುನ್ನೂರು

ಅಧಿಕೃತ ಘೋಷಣೆ ಮಾತ್ರ ಬಾಕಿ.

Sat, 13 May 202310:32 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ.

Sat, 13 May 202310:32 AM IST

ಕೋಲಾರ 6 ವಿಧಾನ ಸಭಾ ಕ್ಷೇತ್ರದ ಫಲಿತಾಂಶ: ಗೆದ್ದವರು ಇವರೇ

ಕೋಲಾರ : ಕೊತ್ತೂರು ಮಂಜುನಾಥ್ ( ಕಾಂಗ್ರೆಸ್)

ಬಂಗಾರಪೇಟೆ : ಎಸ್.ಎನ್.ನಾರಾಯಣಸ್ವಾಮಿ, (ಕಾಂಗ್ರೆಸ್)

ಕೆಜಿಎಫ್: ರೂಪಕಲಾ (ಕಾಂಗ್ರೆಸ್)

ಮುಳಬಾಗಿಲು: ಸಮೃದ್ದಿ ಮಂಜುನಾಥ್ (ಜೆಡಿಎಸ್)

ಶ್ರೀನಿವಾಸಪುರ: ವೆಂಕಟಶಿವರೆಡ್ಡಿ (ಜೆಡಿಎಸ್)

ಮಾಲೂರು: ನಂಜೇಗೌಡ (ಕಾಂಗ್ರೆಸ್)

Sat, 13 May 202310:32 AM IST

ಕೋಲಾರದಲ್ಲಿ ಮಾಲೂರು ಅಭ್ಯರ್ಥಿಗಳ ಮಾತಿನ ಚಕಮಕಿ

ಕೋಲಾರ: ಮಾಲೂರು ಕ್ಷೇತ್ರದಲ್ಲಿ ಸೋಲನುಭವಿಸಿರುವ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ಮರು ಮತ ಎಣಿಕೆಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮತ‌ ಏಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆಯಿತು.

Sat, 13 May 202308:39 AM IST

ನಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: ಯಡಿಯೂರಪ್ಪ

ಕಾಂಗ್ರೆಸ್‌ನವರು ಮನೆಮನೆಗೆ ಹೋಗಿ ಗ್ಯಾರೆಂಟಿ ಕಾರ್ಡ್‌ ಕೊಟ್ಟಿದ್ದೀರಿ. ನೀವು ಕೊಟ್ಟಿರುವ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸುತ್ತೇನೆ. ಲೋಕಸಭಾ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಹಿಂದೆ ಗೆದ್ದಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಈ ಸಲ ಗೆಲ್ಲುತ್ತೇವೆ. ನಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಮಾತು ಮುಗಿಸಿದರು.

Sat, 13 May 202308:39 AM IST

ನಮಗೆ ಸೋಲು ಹೊಸದಲ್ಲ: ಯಡಿಯೂರಪ್ಪ

ನಮಗೆ ಸೋಲು ಹೊಸದಲ್ಲ. ರಾಜ್ಯದ ಜನರು ಕೊಟ್ಟಿರುವ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮಗೆ ಸೋಲು-ಗೆಲುವು ಹೊಸದಲ್ಲ. ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಅಗುತ್ತಿಲ್ಲ. ಪಕ್ಷದ ಕಾರ್ಯಕರ್ತರು ಹೆದರಬೇಕಿಲ್ಲ. ಮೋದಿ ಅವರು ಜನಪ್ರಿಯ ಆಡಳಿತ ಕೊಟ್ಟಿದ್ದರೂ ನಮಗೆ ಗೆಲುವು ಸಾಧಿಸಲು ಆಗಿಲ್ಲ. ನಾವು ಫಲಿತಾಂಶ ಒಪ್ಪಿಕೊಳ್ಳುತ್ತೇವೆ ಎಂದು ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Sat, 13 May 202310:32 AM IST

ಮಾಲೂರು ಕಾಂಗ್ರೆಸ್ ಅಭ್ಯರ್ಥಿ 211 ಮತಗಳ ಅಂತರದಿಂದ ಗೆಲುವು ಘೋಷಣೆ

ಕೋಲಾರ: ಮಾಲೂರು ಕ್ಷೇತ್ರದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ವಿರುದ್ಧ 211 ಮತಗಳ ಅಂತರದಿಂದ ನಂಜೇಗೌಡ ಗೆಲುವು ದಾಖಲಿಸಿದ್ದಾರೆ. ಆದರೆ ಈ ಫಲಿತಾಂಶದ ಬಗ್ಗೆ ಅಸಮಧಾನ ಹೊರಹಾಕಿರುವ ಬಿಜೆಪಿ ಅಭ್ಯರ್ಥಿ ನಂಜೇಗೌಡ, ಮರು ಮತ ಎಣಿಕೆಗೆ ಆಗ್ರಹಿಸಿದ್ದು ಈ ಸಂದರ್ಭದಲ್ಲಿ ಮತ‌ ಏಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿದೆ.

Sat, 13 May 202308:27 AM IST

Video: ಫಲಿತಾಂಶದ ನಂತರ ಮನದುಂಬಿ ದೇವರಿಗೆ ನಮಿಸಿದ ಡಿಕೆ ಶಿವಕುಮಾರ್

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದ ದೇವರಮನೆಯಲ್ಲಿ ಮನಃಪೂರ್ವಕವಾಗಿ ದೇವರಿಗೆ ಕೈಜೋಡಿಸಿ ನಮಿಸಿದ್ದಾರೆ. ಈ ಸಂಬಂಧ ಅವರು ಮಾಡಿರುವ ವಿಡಿಯೊ ಟ್ವೀಟ್ ವೈರಲ್ ಆಗಿದೆ.

Sat, 13 May 202308:26 AM IST

Karnataka Election Results Live :  ಕೋಲಾರದಲ್ಲಿ ಕಾಂಗ್ರೆಸ್‌ಗೆ ಗೆಲುವು, ನಂಜೇಗೌಡರಿಗೆ 352 ಅಂತರದಲ್ಲಿ ಗೆಲುವು

ಕೋಲಾರ : ಮಾಲೂರು ಕ್ಷೇತ್ರದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ವಿರುದ್ಧ 352 ಮತಗಳ ಅಂತರದಿಂದ ನಂಜೇಗೌಡ ಗೆಲುವು ದಾಖಲಿಸಿದ್ದಾರೆ. ಆದರೆ ಈ ಫಲಿತಾಂಶದ ಬಗ್ಗೆ ಅಸಮಧಾನ ಹೊರಹಾಕಿರುವ ಬಿಜೆಪಿ ಅಭ್ಯರ್ಥಿ ನಂಜೇಗೌಡ, ಮರು ಮತ ಎಣಿಕೆಗೆ ಆಗ್ರಹಿಸಿದ್ದು ಈ ಸಂದರ್ಭದಲ್ಲಿ ಮತ‌ ಏಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿದೆ.

Sat, 13 May 202308:26 AM IST

Vijayapura Election Result: ವಿಜಯಪುರದಲ್ಲಿ ಎಂಬಿ ಪಾಟೀಲ ಗೆಲುವು

ಅಭಿವೃದ್ಧಿ ಹಾಗೂ ಅನುಕಂಪ‌ ಮಧ್ಯೆ ನಡೆದ ಹೋರಾಟದಲ್ಲಿ ಜಲಕ್ರಾಂತಿ, ಅಭಿವೃದ್ಧಿಗೆ ಗೆಲುವಾಗಿದ್ದು ಎಂಬಿ ಪಾಟೀಲ ಗೆಲುವು ಸಾಧಿಸಿದ್ದಾರೆ. ಸತತ ಐದು ಬಾರಿ ಗೆಲುವು ದಾಖಲಿಸಿರುವ ಎಂ.ಬಿ.ಪಾಟೀಲರು ಈ ಬಾರಿ 14,943 ಮತಗಳ ಅಂತರದಿಂದ ಜಯಬೇರಿಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ 78065 ಮತ ಪಡೆದರೆ ಎಂ ಬಿ ಪಾಟೀಲ 93,008 ಮತಗಳನ್ನು ಪಡೆದುಕೊಂಡಿದ್ದಾರೆ.

Sat, 13 May 202308:26 AM IST

Karnataka Election Results Live : ಲೋಕಸಭಾ ಚುನಾವಣೆಗೆ ಮತ್ತೆ ಪುಟಿದೇಳುತ್ತೇವೆ : ನಳೀನ್ ಕುಮಾರ್ ಕಟೀಲ್

ವಿಧಾನಸಭಾ ಚುನಾವಣಾ ಸೋಲಿನ ಹೊಣೆ ಹೊರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಕಂಡಿರುವ ಸೋಲು ಅಚ್ಚರಿ ತಂದಿದ್ದು ಫಲಿತಾಂಶವನ್ನ ಪರಾಮರ್ಶಿಸುತ್ತೇವೆ. ರಾಜ್ಯದ ಜನ ಕೊಟ್ಟಿರುವ ಈ ತೀರ್ಪನ್ನ ಗೌರವಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವುದಾಗಿ ನಳೀನ್ ಕುಮಾರ್ ಕಟೀನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

Sat, 13 May 202308:26 AM IST

ಲೋಕಸಭೆಯ ಹೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಇನ್ನಷ್ಟು ಪ್ರಬಲ: ಸಿದ್ದರಾಮಯ್ಯ

ಲೋಕಸಭೆಯ ಹೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇನ್ನಷ್ಟು ಪ್ರಬಲವಾಗಲಿದೆ. ಇನ್ನೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ನಮ್ಮ ಬಳಿ ಸಂಪನ್ಮೂಲ ಕಡಿಮೆಯಿತ್ತು. ಅವರು ಪ್ರತಿ ಅಭ್ಯರ್ಥಿಗೆ 10 ಕೋಟಿಯವರೆಗೂ ಖರ್ಚು ಕೊಟ್ಟಿದ್ದಾರೆ. ನಾವು ಬಿ ಫಾರಂ ಕೊಟ್ಟು ಸಣ್ಣಪುಟ್ಟ ಸಹಾಯ ಮಾಡಿದೆವು ಅಷ್ಟೇ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ಬಿಜೆಪಿ ಹೇಳ್ತಿತ್ತು. ಆದರೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಇಲ್ಲ. ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಒಡಿಶಾದಲ್ಲಿ ಬಿಜೆಪಿ ಇಲ್ಲ. ಹಿಮಾಚಲ ಪ್ರದೇಶ, ದೆಹಲಿಯಲ್ಲಿ ಬಿಜೆಪಿ ಇಲ್ಲ. ಕಾಂಗ್ರೆಸ್‌ ಪಕ್ಷದ ಗೆಲ್ಲುವ ಭರವಸೆ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 

Sat, 13 May 202307:57 AM IST

Karnataka Next CM: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯ ಉತ್ತರ

ಇಂದು ಶಾಸಕಾಂಗ ಪಕ್ಷದ ಸಭೆ ನಡೆಯುವುದು ಅನುಮಾನ. ನಾಳೆ ನಡೆಯಬಹುದು. ಎಲ್ಲ ವಿಜೇತರಿಗೂ ಬರಲು ಹೇಳಿದ್ದೇವೆ. ಅಲ್ಲಿ ಮುಂದಿನ ತೀರ್ಮಾನ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಆಯ್ಕೆಯ ಪ್ರಶ್ನೆಗೆ ಸಿದ್ದರಾಮಯ್ಯನವರು ಈ ರೀತಿ ಉತ್ತರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿಯನ್ನು ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದ ಆಧಾರದ ಮೇಲೆ ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ-ಮೋದಿಗೆ ಕರ್ನಾಟಕದ ಸೋಲು ಮೊದಲೇ ಗೊತ್ತಿತ್ತು. ಕರ್ನಾಟಕದಲ್ಲಿ ಮೋದಿ ಅವರ ಪ್ರಭಾವ ಏನೂ ನಡೆಯಲಿಲ್ಲ. ಮೋದಿ, ಅಮಿತ್ ಶಾ ನೂರು ಸಲ ಬಂದರೂ ಕರ್ನಾಟಕದ ಮತದಾರರ ಮೇಲೆ ಏನೂ ಪರಿಣಾಮ ಬೀರಲ್ಲ ಅಂತ ಹೇಳಿದ್ದೆ ಎಂದು ಅವರು ಹೇಳಿದ್ದಾರೆ.

Sat, 13 May 202307:54 AM IST

Siddaramaiah: ಅವರ ಬಳಿ ಹಣ ಬಲ ಇರಬಹುದು, ನಮ್ಮಲ್ಲಿ ಜನಬಲ ಇದೆ, ಅಪರೇಷನ್‌ ಕಮಲದ ಭಯವಿಲ್ಲವೆಂದ ಸಿದ್ದರಾಮಯ್ಯ

ಭಾರತದಲ್ಲಿರುವ ಏಕೈಕ ಜಾತ್ಯತೀತ ಪಕ್ಷ ಕಾಂಗ್ರೆಸ್. ನಾವು ಎಲ್ಲ ಜಾತಿ, ಧರ್ಮದವರಿಗೆ ಟಿಕೆಟ್ ಕೊಟ್ಟಿದ್ದೀವಿ. ಮತ ಪಡೆದುಕೊಳ್ಳುತ್ತಿದ್ದೇವೆ. ಸಬ್‌ ಕಾ ಸಾಥ್, ಸಬ್‌ ಕ ವಿಕಾಸ್ ಎಂದು ಮೋದಿ ಹೇಳುತ್ತಾರೆ. ಆದರೆ ಅದನ್ನು ಅವರು ಈಡೇರಿಸಿದ್ದಾರೆಯೇ? ಒಬ್ಬರೇ ಒಬ್ಬ ಮುಸ್ಲಿಮರಿಗೂ ಅವರು ಟಿಕೆಟ್ ಕೊಡಲಿಲ್ಲ. ನನಗೆ ಆಪರೇಷನ್ ಕಮಲದ ಭೀತಿ ಇಲ್ಲ. ಅವರ ಬಳಿ ಹಣ ಬಲ ಇರಬಹುದು. ಆದರೆ ನಮ್ಮ ಬಳಿ ಜನ ಬಲ ಇದೆ. ಜೆಡಿಎಸ್‌ 25ಕ್ಕೂ ಕಡಿಮೆ ಸ್ಥಾನ ಪಡೆದಿದೆ. ಅದನ್ನೇ ನಾನೂ ಹೇಳಿದ್ದೆ. ಬಿಜೆಪಿ 60ರಿಂದ 65 ತೆಗೆದುಕೊಳ್ಳಬಹುದು ಎಂದಿದ್ದೆ. ನನ್ನ ಅಂದಾಜು ನಿಜವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202307:54 AM IST

Election Result Live: ರಾಹುಲ್‌ ಗಾಂಧಿ ಭಾರತದ ಪ್ರಧಾನಿಯಾಗುವ ಸಾಧ್ಯತೆ: ಸಿದ್ದರಾಮಯ್ಯ

ರಾಹುಲ್ ಗಾಂಧಿ ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿ ಆಗಬಹುದು ಎಂದು ನನಗೆ ಅನ್ನಿಸುತ್ತಿದೆ. ಇದು ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರ ವಿರುದ್ಧದದ ತೀರ್ಪು. ನರೇಂದ್ರ ಮೋದಿ ಕರ್ನಾಟಕದಲ್ಲಿ 20 ಜಾಥಾಗಳಲ್ಲಿ ಮಾತನಾಡಿದರು. ಬೇರೆ ಯಾವುದೇ ಪ್ರಧಾನಿ ಹೀಗೆ ಬಂದಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Sat, 13 May 202307:54 AM IST

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪ್ರಚಾರ ಗೆಲುವಿಗೆ ಕಾರಣ: ಸಿದ್ದರಾಮಯ್ಯ

ಕರ್ನಾಟಕದ ಜನರು ಪ್ರಬುದ್ಧರು. ಅವರಿಗೆ ಯಾವ ಪಕ್ಷವು ರಾಜ್ಯ, ರಾಷ್ಟ್ರವನ್ನು ಉಳಿಸಬಲ್ಲದು ಎನ್ನುವುದು ಗೊತ್ತು. ರಾಜ್ಯದ ಜಾತ್ಯತೀತ ಮನೋಭಾವಕ್ಕೆ ಆತಂಕ ಇತ್ತು. ಇಲ್ಲಿ ದ್ವೇಷದ ರಾಜಕಾರಣ ಆರಂಭವಾಗಿತ್ತು. ಕರ್ನಾಟಕದ ಜನರು ದ್ವೇಷದ, ಕೋಮುವಾದಿ ರಾಜಕಾರಣವನ್ನು ಒಪ್ಪುವುದಿಲ್ಲ. ಹಣ ಬಲದಿಂದ ಚುನಾವಣೆ ಗೆಲ್ಲಲು ಅವರು ಹೊರಟರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಲ್ಲಿ ಪ್ರಬಲ ಪ್ರಚಾರ ನಡೆಸಿದರು. ರಾಹುಲ್ ಗಾಂಧಿ ಪಾದಯಾತ್ರೆಯು ಸಂಘಟನೆಗೆ ನೆರವಾಯಿತು. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತು. ಇದು ಅತ್ಯಂತ ಮುಖ್ಯ ಚುನಾವಣೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ಅಡಿಗಲ್ಲು. ಎಲ್ಲ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸಲು ಮುಂದಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202307:54 AM IST

ಈ ಹಿಂದೆಯೂ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

"2008 ಅಥವಾ 2018ರ ಇರಬಹುದು ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿರಲಿಲ್ಲ. ಎರಡೂ ಸಂದರ್ಭದಲ್ಲಿ ಅವರಿಗೆ ಸ್ಪಷ್ಟ ಬಹುಮತ ಇರಲಿಲ್ಲ. ಎರಡೂ ಬಾರಿ ಅವರು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಅದಕ್ಕಾಗಿ ವಿಪರೀತ ಹಣ ಖರ್ಚು ಮಾಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲ ಶಾಸಕರಿಗೆ ಹಣ ಕೊಟ್ಟು ಬಿಜೆಪಿ ತನ್ನತ್ತ ಸೆಳೆದಿತ್ತು. ಅವರೆಲ್ಲರೂ ತಮ್ಮನ್ನು ತಾವೇ ಮಾರಿಕೊಂಡವರು. ಅವರಲ್ಲಿ ಹಲವರು ಈ ಬಾರಿ ಸೋತಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202307:54 AM IST

Election Result Live: ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಪ್ರಬಲ ಅಲೆಯಿತ್ತು, ಇದೇ ಅವರ ಸೋಲಿಗೆ ಕಾರಣ: ಸಿದ್ದರಾಮಯ್ಯ

ಮತಎಣಿಕೆ ಇನ್ನೂ ಪೂರ್ಣವಾಗಿಲ್ಲ. ಈಗಿನ ಟ್ರೆಂಡ್ ಕಾಂಗ್ರೆಸ್ ಪರವಾಗಿದೆ. ಕಾಂಗ್ರೆಸ್‌ ಪಕ್ಷವು ಸ್ಪಷ್ಟ ಬಹುಮತ ಪಡೆಯಬಹುದು ಎಂದು ಟ್ರೆಂಡ್ ತೋರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. " ನಾನು ಹಿಂದಿನಿಂದಲೂ ನನ್ನ ಪ್ರಚಾರದಲ್ಲಿ ಹೇಳುತ್ತಲೇ ಇದ್ದೆ. ಕಾಂಗ್ರೆಸ್ ಪಕ್ಷವು ಸುಮಾರು 130 ಸ್ಥಾನ ಪಡೆಯಬಹುದು ಎಂಬ ವಿಶ್ವಾಸ ನನಗಿತ್ತು. ಅದು ರಾಜ್ಯದ ವಾತಾವರಣ ನೋಡಿದಾಗ ನನಗೆ ಅನ್ನಿಸಿದ್ದು. ಬಹುತೇಕ ಇದು ನಿಜವಾಗಿದೆ" ಎಂದು ಅವರು ಹೇಳಿದ್ದಾರೆ.

"ನಾವು 130 ಸ್ಥಾನಗಳನ್ನೂ ದಾಟಿ ಮುನ್ನಡೆಯಬಹುದು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಗೆಲುವು. ಕರ್ನಾಟಕದ ಜನರಿಗೆ ಬದಲಾವಣೆ ಬೇಕಿತ್ತು. ಏಕೆಂದರೆ ಅವರು ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದರು. ಕರ್ನಾಟಕದಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು" ಎಂದು ಅವರು ಹೇಳಿದ್ದಾರೆ.

Sat, 13 May 202307:37 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ.. ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

Sat, 13 May 202307:37 AM IST

Karnataka Results Live: ತಿಹಾರ್ ಜೈಲ್ ನೆನೆದ ಡಿಕೆ ಶಿವಕುಮಾರ್

ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕ ಗಾಂಧಿ ಅವರಿಗೆ ಈ ಗೆಲವು ಸಮರ್ಪಣೆ ಮಾಡುತ್ತಿದ್ದೇನೆ. ಸೋನಿಯಾಗಾಂಧಿ ಅವರು ನಾನು ತಿಹಾರ್‌ ಜೈಲಿನಿಲ್ಲಿ ಇದ್ದಾಗ ಅಲ್ಲಿಗೆ ಬಂದು ಸಮಾಧಾನಪಡಿಸಿದ್ದರು. ಆಗಲೇ ಅವರಿಗೆ ನನ್ನ ನಿರ್ಧಾರ ತಿಳಿಸಿದ್ದೆ ಎಂದು ಎಂದು ಭಾವಾವೇಶದಿಂದ ಕಣ್ಣೀರು ಹಾಕುತ್ತಾ ಡಿ.ಕೆ. ಶಿವಕುಮಾರ್ ಮಾತನಾಡಿದರು.

Sat, 13 May 202307:34 AM IST

ಸ್ಪೀಕರ್ ಕಾಗೇರಿಗೆ ಸೋಲುಣಿಸಿದ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್

ಕಾರವಾರ: ಅಚ್ಚರಿಯ ಫಲಿತಾಂಶವೊಂದರಲ್ಲಿ ವಿಧಾನಸಭಾಧ್ಯಕ್ಷ ಹಾಗೂ ಆರು ಬಾರಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಿನ್ನಡೆ ಕಂಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ), 61743, ಭೀಮಣ್ಣ ನಾಯ್ಕ (ಕಾಂಗ್ರೆಸ್), 65,002, ಉಪೇಂದ್ರ ಪೈ (ಜೆಡಿಎಸ್) 8362 ಮತಗಳನ್ನು ಗಳಿಸಿದ್ದು, ಭೀಮಣ್ಣ ಟಿ.ನಾಯ್ಕ್ ಗೆಲುವು ಅಧಿಕೃತವಾಗಿ ಘೋಷಣೆಯಾಗುವುದು ಬಾಕಿ ಇದೆ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು 1957 ರಿಂದ 1967 ರ ವರೆಗೆ ಪ್ರತಿನಿಧಿಸಿದ ಕ್ಷೇತ್ರ ಶಿರಸಿ. ಬಿಜೆಪಿಯ ಅಭ್ಯರ್ಥಿ ಕಾಗೇರಿಯವರು ಶಿರಸಿ ವಿಧಾನಸಭಾ ಕ್ಷೇತ್ರದಿಂದ 3 ಬಾರಿ, ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ಸೇರಿ ಒಟ್ಟು 5 ಚುನಾವಣೆಯಲ್ಲಿ ಸೋತಿದ್ದರು. ಆದರೆ ಈಗ ಗೆಲುವಿನ ನಗೆ ಬೀರಿದ್ದಾರೆ.

Sat, 13 May 202307:34 AM IST

DK Shivakumar: ಗೆಲುವಿನ ಖುಷಿಯಲ್ಲಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್‌

ನನ್ನ ಕಾರ್ಯಕರ್ತರು ಮತ್ತು ನಾಯಕರಿಗೆ ನನ್ನ ಈ ಜಯವನ್ನು ಅರ್ಪಿಸುತ್ತೇನೆ. ಇದು ಸಾಮೂಹಿಕ ನಾಯಕತ್ವ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಪ್ರಗತಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರಿಗೆ ವಂದನೆಗಳು. ನಾನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತು ಕೊಟ್ಟಿದ್ದೆ. ಕರ್ನಾಟಕವನ್ನು ಅವರಿಗೆ ಗೆದ್ದುಕೊಟ್ಟಿದ್ದೇವೆ. ಗಾಂಧಿ ಕುಟುಂಬ, ದೇಶ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡಿದ್ದೇವೆ. ಗೆಲುವಿಗೆ ಎಲ್ಲರೂ ಕಾರಣ. ನಾನು ಎಲ್ಲರಿಗೂ ವಂದನೆ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು.

Sat, 13 May 202307:34 AM IST

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ ಎಂದ ಹೆಚ್‌ಡಿ ಕುಮಾರಸ್ವಾಮಿ

ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದು ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Sat, 13 May 202307:20 AM IST

ಕರ್ನಾಟಕ ಕಾಂಗ್ರೆಸ್‌ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅಭಿನಂದನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.  ಸ್ಟಾಲಿನ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದರು.

Sat, 13 May 202307:19 AM IST

ಕರ್ನಾಟಕ ವಿಧಾನಸಭಾ ಚುನಾವಣೆ 2023: ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

Sat, 13 May 202307:18 AM IST

Melukote Election Result: ಮೇಲುಕೋಟೆಯಲ್ಲಿ ರೈತಸಂಘದ ದರ್ಶನ್‌ಗೆ ಭಾರೀ ಜಯ

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ವೋದಯ ಪಕ್ಷದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಜಾ.ದಳದ ಸಿ.ಎಸ್.ಪುಟ್ಟರಾಜು ಅವರನ್ನು 9101 ಮತಗಳ ಅಂತರದಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಹಿಂದೆ 1994 ಹಾಗೂ 2013ರಲ್ಲಿ ಎರಡು ಬಾರಿ ಅವರ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಸಾಫ್ಟ್ವೇರ್ ಕಂಪೆನಿ ಮಾಲೀಕರಾಗಿರುವ ದರ್ಶನ್ ಕಳೆದ ಬಾರಿ ಸೋತಿದ್ದರು. ಉದ್ಯಮ, ರಾಜಕೀಯ ಹಾಗೂ ರೈತಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದು ಈ ಬಾರಿ ಹಿರಿಯ ನಾಯಕ ಪುಟ್ಟರಾಜು ಅವರನ್ನು ಮಣಿಸಿದ್ದಾರೆ.

Sat, 13 May 202307:16 AM IST

Karnataka Election Results Live: ಸಿಎಂ ಸ್ಥಾನದ ಬಗ್ಗೆ ಈಗಲೇ ಹೇಳುವುದಿಲ್ಲ; ಖರ್ಗೆ

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಈಗ ಏನೂ ಮಾತಾಡಲ್ಲ. ವೈಯಕ್ತಿಕವಾಗಿ ಏನೂ ಹೇಳಲು ಆಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ತೀವಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದರು.

Sat, 13 May 202307:15 AM IST

Gangavati Result: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಗೆಲುವು

ಬಿಜೆಪಿಗೆ ಸೆಡ್ಡು ಹೊಡೆದು ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದ ಜನಾರ್ದನ ರೆಡ್ಡಿ ಅವರು ಗೆಲುವು ಪಡೆದಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Elections)ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಇವರು ಬಿಜೆಪಿಯ ಪರಣ್ಣ ಮುನವಳ್ಳಿ ಮತ್ತು ಕಾಂಗ್ರೆಸ್‌ನ ಇಕ್ವಾಲ್ ಅನ್ಸಾರಿ ಅವರನ್ನು ಸೋಲಿಸಿ ಗೆಲುವು ಪಡೆದಿದ್ದಾರೆ. 42547 ಮತಗಳನ್ನು ಜನಾರ್ದನ ರೆಡ್ಡಿ ಪಡೆದಿದ್ದಾರೆ. ಕಾಂಗ್ರೆಸ್‌ನ ಇಕ್ವಾಲ್ ಅನ್ಸಾರಿ 40106 ಮತಗಳಿಂದ ತೀವ್ರ ಪೈಪೋಟಿ ನೀಡಿದರೂ ಕೊನೆಗೆ ಗೆಲುವು ರೆಡ್ಡಿ ಪಾಲಾಗಿದೆ.

Sat, 13 May 202307:12 AM IST

Karnataka Assembly Results Analysis: ಸೋಲಿನತ್ತ ಬಿಜೆಪಿ ಸರ್ಕಾರದ ಸಚಿವರು

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹಲವು ಪ್ರಭಾವಿ ಸಚಿವರು ಸೋಲಿನತ್ತ ಮುಖ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆಯೇ ಇದಕ್ಕೆ ಕಾರಣ ಎಂದು ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ.

Sat, 13 May 202307:05 AM IST

Karnataka Election Results Live: ಹಾವೇರಿಯಲ್ಲಿ ಬೊಮ್ಮಾಯಿಗೆ ತಡೆಯೊಡ್ಡಿದ ಕಾಂಗ್ರೆಸ್ ಕಾರ್ಯಕರ್ತರು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆರಂಭಿಕ ಮುನ್ನಡೆ ಮತ್ತು ಕೆಲ ಕ್ಷೇತ್ರಗಳ ಜಯ ಘೋಷಣೆಯ ನಂತರ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಲ್ಲಿ ಬೀಗುತ್ತಿದ್ದಾರೆ. ಹಲವೆಡೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗಿದೆ. ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿದ್ದ ಕಾರನ್ನು ಕಾಂಗ್ರೆಸ್ ಕಾರ್ಯಕರ್ತರು ತಡೆದ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಜಯ್ ಅರೋರ, ನಮ್ಮ ಕಾರ್ಯಕರ್ತರು ಸಂಯಮ ಕಳೆದುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.

Sat, 13 May 202307:04 AM IST

ಜನರು ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ:  ಗವಿಯಪ್ಪ

ವಿಜಯನಗರ - ಬದಲಾವಣೆ ಬಯಸಿ ಜನರು ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್‌ಆರ್ ಗವಿಯಪ್ಪ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಬಗ್ಗೆ ಕೂಡ ಮಾತನಾಡಿದ್ದು, ಅವರಿನ್ನೂ ನನ್ನ ಮಗನ ವಯಸ್ಸಿನವರು.. ಆತನಿಗಿನ್ನೂ ಚಿಕ್ಕ ವಯಸ್ಸು ಮುಂದೆ ಆತನಿಗೂ ಉತ್ತಮ ಭವಿಷ್ಯವಿದೆ ಎಂದರು.. ಆದರೆ ಕಳೆದ ನಾಲ್ಕು ಬಾರಿ ಸತತವಾಗಿ ಗೆದ್ದಿದ್ದ ಆನಂದ್ ಸಿಂಗ್ ಅವರ ಮಗನ ವಿರುದ್ಧವೇ ಗೆಲುವು ಸಾಧಿಸಿರುವುದು ಹೆಮ್ಮೆ ತಂದಿದೆ ಎಂದು ಗವಿಯಪ್ಪ ಹೇಳಿದ್ದಾರೆ..

Sat, 13 May 202306:57 AM IST

Kodagu Election Result: ಕೊಡಗಲ್ಲಿ ಕೈ ಬಲ

ಸತತ ನಾಲ್ಕು ಚುನಾವಣೆಗಳಿಂದ ಬಿಜೆಪಿಯೇ ಗೆಲ್ಲುತ್ತಿದ್ದ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ವಿರಾಜಪೇಟೆಯಲ್ಲಿ ಹಿರಿಯ ನ್ಯಾಯವಾದಿ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಅವರ ಪುತ್ರ ಎ.ಎಸ್.ಪೊನ್ನಣ್ಣ ಗೆಲುವು ಕಂಡಿದ್ದಾರೆ. ಮಾಜಿ ಸ್ಪೀಕರ್ ಬೋಪಯ್ಯ ಅವರನ್ನು ೪೦೦೦ ಮತಗಳ ಅಂತರದಿAದ ಮಣಿಸಿದ್ದಾರೆ.

ಮಡಿಕೇರಿಯಲ್ಲೂ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರAಜನ್ ವಿರುದ್ದ ಕಾಂಗ್ರೆಸ್ ಮಂಥರ್‌ಗೌಡ ಮುನ್ನಡೆ ಸಾಧಿಸಿದ್ದಾರೆ. ಮಂಥರ್‌ಗೌಡಗೆ ೫ ಸಾವಿರ ಮತಗಳ ಮುನ್ನಡೆ ದೊರೆತಿದ್ದು. ಜಯದ ನಿರೀಕ್ಷೆಯಲ್ಲಿದ್ದಾರೆ

Sat, 13 May 202306:57 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ.. ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

Sat, 13 May 202306:57 AM IST

ಸಚಿವ ವಿ ಸೋಮಣ್ಣಗೆ ಎರಡೂ ಕಡೆ ಸೋಲು

ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ತಲಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರಿಗೆ ಎರಡೂ ಕಡೆ ಸೋಲಾಗುವುದು ನಿಚ್ಚಳವಾಗಿದೆ.

ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗಶೆಟ್ಟಿ ವಿರುದ್ದ ೧೮ ಸಾವಿರ ಮತಗಳ ಹಿನ್ನಡೆ ಅನುಭವಿಸಿದ್ದು, ವರುಣಾ ಕ್ಷೇತ್ರದಲ್ಲೂ ೨೦ ಸಾವಿರಕ್ಕೂ ಅಧಿಕ ಮತಗಳ ಹಿನ್ನಡೆಯಾಗಿದೆ. ಎರಡೂ ಕ್ಷೇತ್ರದಲ್ಲಿ ಅಂತಿಮ ಫಲಿತಾಂಶ ಬಾಕಿಯಿದೆ.

Sat, 13 May 202306:50 AM IST

Karnataka Election Results: ಫಲಿತಾಂಶ ಒಪ್ಪಿ, ಪರಾಮರ್ಶನೆ ನಡೆಸುತ್ತೇವೆ; ಸಿಎಂ ಬಸವರಾಜ ಬೊಮ್ಮಾಯಿ

ಫಲಿತಾಂಶ ಒಪ್ಪಿಕೊಳ್ಳುತ್ತೇವೆ. ಏನಾಯಿತು ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ. ವಿವಿಧ ಹಂತಗಳಲ್ಲಿ ಆಗಿರುವ ವೈಫಲ್ಯಗಳ ಬಗ್ಗೆ ಪರಾಮರ್ಶನೆ ನಡೆಸುತ್ತೇವೆ. ಲೋಕಸಭೆ ಚುನಾವಣೆ ಹೊತ್ತಿಗೆ ಸಂಘಟನೆ ಮತ್ತೆ ಬಲಪಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು

Sat, 13 May 202306:50 AM IST

Hassan Result: ಹಾಸನದಲ್ಲಿ‌ ಸ್ವರೂಪ್‌ ಪ್ರಕಾಶ್ ಜಯಭೇರಿ, 8 ಸಾವಿರ ಮತಗಳ ಅಂತರದಲ್ಲಿ ಎಚ್ಎಸ್‌  ಪ್ರಕಾಶ ಅವರ ಪುತ್ರ ಗೆಲುವು

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್ ಗೆಲುವು‌ ಸಾಧಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆ ನಿಜವಾಗಿದೆ. ಮೂರು ಬಾರಿ ಶಾಸಕರಾಗಿದ್ದ ದಿವಂಗತ‌ ಎಚ್.ಎಸ್‌. ಪ್ರಕಾಶ ಅವರ ಪುತ್ರ ಸ್ವರೂಪ್ ಸುಮಾರು 8 ಸಾವಿರ ಮತಗಳಿಂದ ಗೆಲುವು‌ ಸಾಧಿಸಿದ್ದಾರೆ.

ಅನುಕಂಪ, ಆಡಳಿತ‌ ವಿರೋಧಿ ಅಲೆ ಕ್ಷೇತ್ರದಲ್ಲಿ‌ ಕೆಲಸ ಮಾಡಿದೆ. ರೇವಣ್ಣ ಕುಟುಂಬದ‌ ಯಾರೇ ಸ್ಪರ್ಧಿಸಿದರೂ, 50‌ ಸಾವಿರ‌ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ‌ ಸವಾಲು ಹಾಕಿದ್ದ ಪ್ರೀತಂ ಗೌಡ ಸೋಲು ಅನುಭವಿಸಬೇಕಾಗಿದೆ. ಅತಿಯಾದ ಆತ್ಮವಿಶ್ವಾಸ, ಅನಗತ್ಯ ಹೇಳಿಕೆಗಳಿಂದ ಗೊಂದಲ ಸೃಷ್ಟಿಸಿಕೊಂಡ ಪ್ರೀತಂ ಗೌಡ ಅವರನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ದಾಸ ಒಕ್ಕಲಿಗ ಸಮುದಾಯದ ಮತಗಳು ಬಿಜೆಪಿ, ಜೆಡಿಎಸ್‌ಗೆ ಹಂಚಿಕೆಯಾಗಿದ್ದು, ಅಲ್ಪಸಂಖ್ಯಾತರ ಮತಗಳು ಸಂಪೂರ್ಣವಾಗಿ ಜೆಡಿಎಸ್ ಪರ ಬಂದಿದ್ದರಿಂದ ಸ್ವರೂಪ್ ಗೆಲುವು ಸುಲಭವಾಯಿತು. ಸ್ವರೂಪ್ ಗೆ ಟಿಕೆಟ್ ಕೊಡಲು ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಚ್.ಡಿ.ರೇವಣ್ಣ ಕುಟುಂಬ ಸ್ವರೂಪ ಪರ ನಿಂತಿದ್ದು ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಭಾವನಾತ್ಮಕ ಪ್ರಚಾರಗಳು ಸ್ವರೂಪ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

Sat, 13 May 202306:50 AM IST

12 ಗಂಟೆಯವರೆಗಿನ ಮತ ಎಣಿಕೆ ವಿವರ

Sat, 13 May 202306:50 AM IST

ಸಿದ್ದರಾಮಯ್ಯ ಬಾವ ನಿಧನ,  ಕಳೆಗುಂದಿದ ಸಂಭ್ರಮ

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ವಂತ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ (69) ಶನಿವಾರ‌ ನಿಧನ‌ ಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಿಗ್ಗೆ ನಗರದ ಜೆಎಸ್ ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದರು.

ಮೃತರು ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿ‌ ನಡೆಸುತ್ತಿದ್ದರು.

ಮೃತರಿಗೆ ಪತ್ನಿ, ಮೂವರು ಹೆಣ್ಣು, ಒಂದು ಗಂಡು‌ಮಗ ಇದ್ದಾರೆ. ಮಧ್ಯಾಹ್ನದ ನಂತರ, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ‌ ನೆರವೇರಲಿದೆ. 

ಕಳೆಗುಂದಿದ‌ ಸಂಭ್ರಮ:‌ ಸಿದ್ದರಾಮಯ್ಯ ಅವರ ಸ್ವಂತ ಬಾವನೇ ಮೃತಪಟ್ಟಿದ್ದರಿಂದ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಕಳೆಗುಂದಿತ್ತು. ಊರಿನಲ್ಲಿ ಸಂಭ್ರಮಾಚರಣೆ ಮಾಡದೇ, ಕುಟುಂಬದ ದುಃಖ ದಲ್ಲಿ ಭಾಗಿಯಾದರು

Sat, 13 May 202306:50 AM IST

ಗೆಲುವಿನ ನಗೆಬೀರಿದವರು ಇವರೇ ನೋಡಿ.. ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

Sat, 13 May 202306:50 AM IST

Election Result: ಗೆಲುವಿನತ್ತ ಲಕ್ಷ್ಮಣ್‌ ಸವದಿ, ಜಗದೀಶ್‌ ಶೆಟ್ಟರ್‌ಗೆ ಹಿನ್ನೆಡೆ

ಹೈವೋಲ್ಟೇಜ್ ಕ್ಷೇತ್ರ ಅಥಣಿಯಲ್ಲಿ 9ನೇ ಸುತ್ತಿನ ಮತ‌ಎಣಿಕೆಯಲ್ಲೂ ಲಕ್ಷ್ಮಣ್ ಸವದಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ - 19766 ಮತಗಳನ್ನು ಪಡೆದರೆ,

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ - 50275 ಮತಗಳ ಭಾರೀ ಮುನ್ನಡೆ ಸಾಧಿಸಿದ್ದಾರೆ.

ಧಾರವಾಡ ಹು-ಧಾ ಸೆಂಟ್ರಲ್ 9ನೆಯ ಸುತ್ತು ಅಂತ್ಯವಾಗಿದೆ. ಇಲ್ಲಿ ಕಾಂಗ್ರೆಸ್‌ನ ಜಗದೀಶ ಶೆಟ್ಟರ್‌ಗೆ ಹಿನ್ನೆಡೆಯಾಗಿದೆ. ಈ ಕ್ಷೇತ್ರದಲ್ಲಿ ಮಹೇಶ್‌ ಟೆಂಗಿನಕಾಯಿಗೆ 26902 ಮತಗಳ ಮುನ್ನಡೆಯಾಗಿದೆ. ಶೆಟ್ಟರ್ ಗೆ 25298 ಮತ ಪಡೆದಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರ 6ನೇ ಸುತ್ತಿನಲ್ಲಿ ಕಾಂಗ್ರೆಸ್‌ನ-ಎಚ್.ಡಿ.ತಮ್ಮಯ್ಯ: 27479 ಮತ ಪಡೆದು ಮುನ್ನಡೆ ಸಾಧಿಸಿದ್ದಾರೆ.

ಓದಿ: ಲಕ್ಷ್ಮಣ ಸವದಿಯಿಂದಾಗಿ ಮಗ್ಗಲು ಬದಲಿಸಿದ ಬೆಳಗಾವಿ ರಾಜಕಾರಣ: ಕಾಂಗ್ರೆಸ್‌ ಬಲ ವೃದ್ಧಿಸಲು ಸಿದ್ಧವಾಗುತ್ತಿದೆ ಹೂರಣ

Sat, 13 May 202306:57 AM IST

Bengaluru Election Results: ಬೆಂಗಳೂರಿನಲ್ಲಿ ಕುಸಿದ ಬಿಜೆಪಿ, ಮೋಡಿ ಮಾಡಲಿಲ್ಲ ನರೇಂದ್ರ ಮೋದಿ ಸಂಚಾರ, ಸಿಗಲಿಲ್ಲ ಮತದಾರರ ಒಲವು

Sat, 13 May 202306:26 AM IST

ಪುತ್ತೂರಲ್ಲಿ ಪುತ್ತಿಲ ಮ್ಯಾಜಿಕ್: ಮುನ್ನಡೆ ಗಳಿಸಿದ ಪಕ್ಷೇತರ

ಮಂಗಳೂರು: ಪುತ್ತೂರು ಕ್ಷೇತ್ರದಲ್ಲಿ ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಮೊದಲ ಆರು ಸುತ್ತಿನಲ್ಲಿ ಹಿನ್ನಡೆಯಲ್ಲಿದ್ದ ಪಕ್ಷೇತರ ಅಭ್ಯರ್ಥಿ ಹಿಂದು ಸಂಘಟನೆ ಮುಖಂಡ ಅರುಣ ಕುಮಾರ್ ಪುತ್ತಿಲ ಏಳು, ಎಂಟನೇ ಸುತ್ತಿನಲ್ಲಿ ಮುನ್ನಡೆ ಪಡೆದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅರುಣ ಕುಮಾರ್ 32226 ಮತ ಗಳಿಸಿದರೆ ಕಾಂಗ್ರೆಸ್ ಪಕ್ಷದ ಅಶೋಕ್ ಕುಮಾರ್ ರೈ 31670 ಮತ, ಬಿಜೆಪಿಯ ಆಶಾ ತಿಮ್ಮಪ್ಪ 20126 ಮತ ಗಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ನೇರ ಬಂಡಾಯವೆದ್ದ ಕಾರ್ಯಕರ್ತರ ದೊಡ್ಡ ಗುಂಪು ಅರುಣ್ ಕುಮಾರ್ ಪುತ್ತಿಲ ಅವರನ್ನು ಕಣಕ್ಕಿಳಿಸಿತ್ತು. ನಾಮಪತ್ರ ಸಲ್ಲಿಕೆ ಹಾಗೂ ಚುನಾವಣೆ ಪ್ರಚಾರದ ಕೊನೆಯ ದಿನ ನಡೆಸಿದ ರೋಡ್ ಶೋಗಳಲ್ಲಿ ಪುತ್ತಿಲ ಪರ ಅಪಾರ ಸಂಖ್ಯೆಯ ಕಾರ್ಯಕರ್ತರು ಆಗಮಿಸಿ ಶಕ್ತಿಪ್ರದರ್ಶನ ಮಾಡಿದ್ದರು. ಇಡೀ ಸಂಘ ಪರಿವಾರ ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದಲ್ಲಿ ಬಿಜೆಪಿ ಪರ ಪ್ರಚಾರದೊಟ್ಟಿಗೆ ಅರುಣ್ ವಿರುದ್ಧ ಪ್ರಚಾರ ನಡೆಸಿದ್ದರು. ಆದರೆ ಈ ನೆಗೆಟಿವ್ ಪ್ರಚಾರ ಪುತ್ತಿಲರಿಗೆ ಪ್ಲಸ್ ಆಗಿದ್ದು, ಸದ್ಯ ಕತ್ತುಕತ್ತಿನ ಹೋರಾಟ ನೀಡಲು ಶಕ್ತರಾಗಿದ್ದಾರೆ.

Sat, 13 May 202306:19 AM IST

ಮತಎಣಿಕೆ ಆರಂಭಕ್ಕೂ ಮೊದಲು ಹನುಮಂತನ ಗುಡಿಯಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

ಶಿಮ್ಲಾ: ಕರ್ನಾಟಕ ವಿಧಾನಸಭಾ ಚುನಾವಣೆ ಮತಎಣಿಕೆ ಆರಂಭವಾಗುವ ಮೊದಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ಥಳೀಯ ಹಿರಿಯರ ಆಶೀರ್ವಾದ ಪಡೆದಿರುವ ವಿಡಿಯೊ ವೈರಲ್ ಆಗಿದೆ. 'ಕರ್ನಾಟಕ ಮತ್ತು ಇಡೀ ದೇಶದಲ್ಲಿ ಶಾಂತಿ ನೆಲಸಬೇಕು' ಎಂದು ಹನುಮಂತನನ್ನು ಪ್ರಾರ್ಥಿಸಿದೆ ಎಂದು ಪ್ರಿಯಾಂಕಾ ಗಾಂಧಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಹನುಮಂತನ ಗುಡಿಯಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ಹನುಮಂತನ ಗುಡಿಯಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

Sat, 13 May 202306:19 AM IST

Election Result: ಫಲಿತಾಂಶ ನೋಡುತ್ತ ಸಂಭ್ರಮಿಸಿದ ಡಿಕೆ ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಶನಿವಾರ ಚುನಾವಣೆ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಾ ಕಾಂಗ್ರೆಸ್ ಮುನ್ನಡೆಯನ್ನು ಸಂಭ್ರಮಿಸಿದ ಕ್ಷಣ. ಎಂಎಲ್ಸಿ ಎಸ್ ರವಿ, ಕೆಪಿಸಿಸಿಐಟಿ ಸೆಲ್ ಅಧ್ಯಕ್ಷ ರಘುನಂದನ್ ರಾಮಣ್ಣ, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್ ಮತ್ತಿತರರು ಈ ಕ್ಷಣಕ್ಕೆ ಸಾಕ್ಷಿಯಾದರು.

Sat, 13 May 202306:12 AM IST

Election result: ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕ ವಿ ಸೋಮಣ್ಣಗೆ ಹಿನ್ನೆಡೆ

ಬಿಜೆಪಿ ನಾಯಕ ವಿ. ಸೋಮಣ್ಣ ಅವರು ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಇವರು ಸ್ಪರ್ಧಿಸಿದ್ದರು. ಚಾಮರಾಜನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ವಿರುದ್ಧ ಭಾರೀ ಅಂತರದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಚಾಮರಾಜನಗರದಲ್ಲಿಯೂ ಹಿನ್ನಡೆ ಅನುಭವಿಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಮುನ್ನಡೆಯಲ್ಲಿದ್ದಾರೆ.

ಪ್ರೊಫೈಲ್‌ ಓದಿ: ವರುಣಾದಲ್ಲಿ ಮಾಜಿ CM ಸಿದ್ದರಾಮಯ್ಯಗೆ ಪ್ರಬಲ ಎದುರಾಳಿ ಬಿಜೆಪಿಯ ವಿ.ಸೋಮಣ್ಣ; ಪ್ರಭಾವಿ ಲಿಂಗಾಯತ ನಾಯಕನ ಪರಿಚಯ

Sat, 13 May 202306:00 AM IST

Karnataka Results Live: ಲೋಕಸಭೆ ಚುನಾವಣೆಗೆ ಕರ್ನಾಟಕವೇ ಸ್ಫೂರ್ತಿ; ಎಂಬಿ ಪಾಟೀಲ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಿದ್ದಾರೆ. ಇದು 2024ರ ಲೋಕಸಭಾ ಚುನಾವಣೆಗೆ ಕರ್ನಾಟಕದ ಜನರು ನೀಡಿರುವ ಸಂದೇಶ. ದೇಶದ ಇತರ ರಾಜ್ಯಗಳಲ್ಲೂ ಇದರ ಪರಿಣಾಮ ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಚುನಾವಣೆ ಎದುರಿಸುವ ಕಾಂಗ್ರೆಸ್‌ನ ಪ್ರಯತ್ನಕ್ಕೆ ಕರ್ನಾಟಕದ ಫಲಿತಾಂಶ ಬಲ ತುಂಬಿದೆ ಎಂದು ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Sat, 13 May 202306:00 AM IST

Tumkur Election Result: ತುಮಕೂರು ಕ್ಷೇತ್ರದಲ್ಲಿ ಗೆಲುವಿನತ್ತ ಕಾಂಗ್ರೆಸ್‌ ಅಭ್ಯರ್ಥಿಗಳು

ತುಮಕೂರು ನಗರ ಕ್ಷೇತ್ರ, ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ, ತಿಪಟೂರು ಕ್ಷೇತ್ರದಲ್ಲಿ ಈವರೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿದ್ದು ಗೆಲುವಿನ ಮುನ್ಸೂಚನೆ ನೀಡಿದ್ದಾರೆ. 

Sat, 13 May 202306:19 AM IST

Hassan Result:  ಹಾಸನದಲ್ಲಿ ಜೆಡಿಎಸ್ ಗೆಲುವು

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಸ್ವರೂಪ್‌ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಸೋತಿದ್ದಾರೆ. ಭವಾನಿ ರೇವಣ್ಣ ಸ್ಪರ್ಧೆಯ ವಿಚಾರವಾಗಿ ಉದ್ಭವಿಸಿದ್ದ ಗೊಂದಲದ ಕಾಋಣ ಈ ಕ್ಷೇತ್ರ ಎಲ್ಲರ ಗಮನ ಸೆಳೆದಿತ್ತು. ಬಿಜೆಪಿಯ ಪ್ರೀತಂ ಗೌಡ ಅವರು ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದು ಹಾಗೂ ದೇವೇಗೌಡರ ಕುಟುಂಬ ಒಗ್ಗೂಡಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಬೆನ್ನಿಗೆ ನಿಂತಿದ್ದು ಈ ಗೆಲುವಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Sat, 13 May 202305:55 AM IST

Karnataka election results: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಗೆಲುವಿನತ್ತ ಮಹೇಶ್‌ ಟೆಂಗಿನಕಾಯಿ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ್‌ ಟೆಂಗಿನಕಾಯಿಯವರು ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಅವರನ್ನು ಹದಿನೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಟೆಂಗಿನಕಾಯಿ ಹಿಂದಿಕ್ಕಿದ್ದಾರೆ.

Sat, 13 May 202305:55 AM IST

Karnataka Results Live: ಬಹುಮತದತ್ತ ಕಾಂಗ್ರೆಸ್ ದಾಪುಗಾಲು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಬೆಳಿಗ್ಗೆ 11:15ಕ್ಕೆ ಇದ್ದ ಮುನ್ನಡೆಯ ಚಿತ್ರಣ ಇದು.

 

Sat, 13 May 202305:55 AM IST

Karnataka Results Live: ಹಾಸನ: ಜೆಡಿಎಸ್ ನ ಸ್ವರೂಪ್ ಪ್ರಕಾಶ್ 10 ಸಾವಿರ ಮತಗಳಿಂದ ಮುನ್ನಡೆ

ಹಾಸನ ಕ್ಷೇತ್ರದಲ್ಲಿ‌ ಜೆಡಿಎಸ್ ನ ಸ್ವರೂಪ್ ಪ್ರಕಾಶ್ 10 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.  ಮತ ಎಣಿಕೆ ಕೇಂದ್ರದಿಂದ  ಬಿಜೆಪಿಯ ಪ್ರೀತಮ್ ಗೌಡ ಹೊರನಡೆದಿದ್ದಾರೆ. 

Sat, 13 May 202305:47 AM IST

Karnataka Results Live: ಪುತ್ತೂರಿನಲ್ಲಿ ಪುತ್ತಿಲ ಮುನ್ನಡೆ, 3ನೇ ಸ್ಥಾನಕ್ಕೆ ಬಿಜೆಪಿ

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ದಾಖಲಿಸಿದ್ದಾರೆ. ಬಿಜೆಪಿಯ ಆಶಾ ತಿಪ್ಪಗೌಡ 3ನೇ ಸ್ಥಾನಕ್ಕೆ ಬಂದಿದ್ದಾರೆ. ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Arun Kumar Puthila Profile: ಪುತ್ತೂರಿಗೆ ಪುತ್ತಿಲ ಟ್ರೆಂಡ್‌ನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲರ ಪರಿಚಯ ಇಲ್ಲಿದೆ

Sat, 13 May 202305:47 AM IST

Congress Wins: ಚಳ್ಳಕೆರೆ, ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಗೆಲುವು

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್‌.ಟಿ.ಶ್ರೀನಿವಾಸ ಗೆಲುವು ಸಾಧಿಸಿದ್ದಾರೆ. ಚಳ್ಳಕೆರೆಯಲ್ಲಿ ಕಾಂಗ್ರೆಸ್‌ನ ಟಿ.ರಘುಮೂರ್ತಿ ಗೆಲುವು ಸಾಧಿಸಿದ್ದಾರೆ.

Sat, 13 May 202305:41 AM IST

Karnataka Results Live: ಬಿಜೆಪಿ ಘಟಾನುಘಟಿ ನಾಯಕರ ಹಿನ್ನಡೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಲವು ಸುತ್ತುಗಳ ಮತಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಪ್ರಮುಖ ನಾಯಕರು ಹಿನ್ನಡೆ ಕಂಡಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾಧುಸ್ವಾಮಿ ಹಿನ್ನಡೆ ಕಂಡಿದ್ದಾರೆ. ಶಿರಸಿ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಕೇವಲ 23 ಮತಗಳ ಅಂತರದಲ್ಲಿ ಮುನ್ನಡೆ ಕಂಡಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಸುರೇಶ್‌ಕುಮಾರ್ 510 ಮತಗಳ ಹಿನ್ನಡೆ ಕಂಡಿದ್ದಾರೆ.

Sat, 13 May 202305:37 AM IST

Karnataka Results Live: ಜನರಿಗೆ ಬಿಜೆಪಿ ಅಂದ್ರೆ ಬೇಸರ; ಸಿದ್ದರಾಮಯ್ಯ

ಕರ್ನಾಟಕದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಓಡಾಟ ಯಾವುದೇ ವ್ಯತ್ಯಾಸ ಮಾಡಿಲ್ಲ. ಜನರಿಗೆ ಬಿಜೆಪಿ ಎಂದರೆ ಬೇಸರ ಬಂದಿದೆ. ನಾನು ಮೊದಲಿನಿಂದಲೂ ಹೇಳುತ್ತಿದ್ದ ಮಾತುಗಳು ನಿಜ ಆಗಿದೆ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

Sat, 13 May 202305:31 AM IST

Congress Celebration: ಕರ್ನಾಟಕದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಕಾಂಗ್ರೆಸ್, ದೆಹಲಿಯಲ್ಲಿ ವಿಜಯೋತ್ಸವ

Sat, 13 May 202305:24 AM IST

Magic Number: ಕಾಂಗ್ರೆಸ್‌ಗೆ ತನ್ನದೇ ಶಾಸಕರ ಮೇಲೆ ವಿಶ್ವಾಸವಿಲ್ಲ ಬಿಜೆಪಿ ನಾಯಕರ ಲೇವಡಿ

ಮುನ್ನಡೆ ಸಾಧಿಸಿರುವ ಶಾಸಕರನ್ನು ಕಾಂಗ್ರೆಸ್ ಪಕ್ಷವು ತರಾತುರಿಯಲ್ಲಿ ಸಂಪರ್ಕಿಸಲು ಯತ್ನಿಸುತ್ತಿರುವುದು ಹಾಗೂ ಬೆಂಗಳೂರಿಗೆ ಕರೆಸಲು ಹಾತೊರೆಯುತ್ತಿರುವುದನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಖಾಸಗಿಯಾಗಿ ಪ್ರತಿಕ್ರಿಯಿಸುತ್ತಿರುವ ಬಿಜೆಪಿ ನಾಯಕರು 'ಕಾಂಗ್ರೆಸ್‌ಗೆ ತನ್ನದೇ ಪಕ್ಷದ ಶಾಸಕರ ಮೇಲೆ ನಂಬಿಕೆಯಿಲ್ಲ. ಅದಕ್ಕೇ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದಾರೆ. ಬಹುಮತದ ವಿಶ್ವಾಸವಿಲ್ಲ. ಹೀಗಾಗಿ ಮೈತ್ರಿಯ ಬಗ್ಗೆ ಮಾತನಾಡುತ್ತಿದೆ. ಪಕ್ಷೇತರರನ್ನು ಸಂಪರ್ಕಿಸುತ್ತಿದೆ' ಎಂದು ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

Sat, 13 May 202305:24 AM IST

ಯಾವುದೇ ಪಕ್ಷಗಳು ನಮ್ಮನ್ನು ಸಂಪರ್ಕಿಸಿಲ್ಲ: ಹೆಚ್‌ಡಿ ಕುಮಾರಸ್ವಾಮಿ

ನನ್ನನ್ನು ಯಾವುದೇ ಪಕ್ಷದವರು ಸಂಪರ್ಕ ಮಾಡಿಲ್ಲ. ಅಂತಿಮ ಫಲಿತಾಂಶ ಏನಾಗುತ್ತದೆ ನೋಡೋಣ ಎಂದು ಜೆಡಿಎಸ್‌ ಮುಖಂಡ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಕೆಲವು ಗಂಟೆ ಕಾಯೋಣ, ಎಲ್ಲವೂ ತಿಳಿಯುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಸೂಚನೆಯನ್ನು ಸಮೀಕ್ಷೆಗಳು ನೀಡಿವೆ. ನಮ್ಮದು ಸಣ್ಣ ಪಕ್ಷ, 30-32 ಸೀಟುಗಳನ್ನು ಗೆಲ್ಲಬಹುದು ಎಂದು ಅವರು ಹೇಳಿದ್ದಾರೆ.

Sat, 13 May 202305:18 AM IST

Magic Number: ಎಕ್ಸಿಟ್ ಪೋಲ್ ಲೆಕ್ಕಾಚಾರ ದಾಟಿ ಮುನ್ನಡೆದ ಕಾಂಗ್ರೆಸ್

ಆರಂಭಿಕ ಸುತ್ತುಗಳ ಮತಎಣಿಕೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ದಾಖಲಿಸಿದ್ದು ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಬಹುತೇಕ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಹೇಳಿದ್ದವರಾದರೂ ಮ್ಯಾಜಿಕ್ ನಂಬರ್ ದಾಟಬಹುದು ಎಂದು ಊಹಿಸಿದ್ದ ಪೋಲ್‌ಗಳು ಕಡಿಮೆಯೇ. ಮತದಾನೋತ್ತರ ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರದಂತೆ ಕಾಂಗ್ರೆಸ್ 106, ಬಿಜೆಪಿ 92, ಜೆಡಿಎಸ್ 23 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗಿತ್ತು. ಮತಎಣಿಕೆಯ ದಿನವಾದ ಮೇ 1ರಂದು ಬೆಳಿಗ್ಗೆ 10:45ರ ಅವಧಿಯಲ್ಲಿ ಕಾಂಗ್ರೆಸ್ 116, ಬಿಜೆಪಿ 72, ಜೆಡಿಎಸ್ 29 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಬಿಜೆಪಿಯು ಎಕ್ಸಿಟ್ ಪೋಲ್ ಲೆಕ್ಕಾಚಾರಗಳಿಗಿಂತಲೂ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿರುವುದು ಆ ಪಕ್ಷದ ನಾಯಕರನ್ನು ಚಿಂತೆಗೆ ದೂಡಿದೆ.

Sat, 13 May 202305:18 AM IST

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಚ್‌.ಸಿ. ಬಾಲಕೃಷ್ಣ 3285 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಾಲಕೃಷ್ಣ 13,109 ಮತ ಪಡೆದರೆ, ಜೆಡಿಎಸ್‌ ಅಭ್ಯರ್ಥಿ ಎ. ಮಂಜುನಾಥ್‌ 9824 ಮತ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ 4671 ಮತ ಪಡೆದಿದ್ದಾರೆ.

Sat, 13 May 202305:13 AM IST

Magic Number: ಕಾಡುತ್ತಿದೆ ಒಗ್ಗಟ್ಟಿನ ಚಿಂತೆ, ಇಂದೇ ಶಾಸಕಾಂಗ ಸಭೆ ಸಾಧ್ಯತೆ

ಮುನ್ನಡೆ ಸಾಧಿಸುವ ಕ್ಷೇತ್ರದಲ್ಲಿ ಗೆಲುವು ದೃಢಪಟ್ಟರೆ ಕಾಂಗ್ರೆಸ್ ಪಕ್ಷವು ಇಂದು ರಾತ್ರಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಗೆಲುವು ಸಾಧಿಸಿದ ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆತರಲು ವಿಶ್ವಾಸಾರ್ಹ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿಗೆ ಬರುವ ಶಾಸಕರ ಸಮಕ್ಷಮ ಶಾಸಕಾಂಗ ಪಕ್ಷದ ಸಭೆ ನಡೆಸಿ, ನಂತರ ಕಾಂಗ್ರೆಸ್‌ಗೆ ಸುರಕ್ಷಿತ ವಾತಾವರಣ ಇರುವ ರಾಜಾಸ್ತಾನ ಅಥವಾ ಇತರ ರಾಜ್ಯಕ್ಕೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Sat, 13 May 202305:10 AM IST

Magic Number: ಮ್ಯಾಜಿಕ್ ನಂಬರ್ ದಾಟಿದ ಕಾಂಗ್ರೆಸ್ ಮುನ್ನಡೆ; ಕಾಂಗ್ರೆಸ್ 115, ಬಿಜೆಪಿ 72 ಕ್ಷೇತ್ರಗಳಲ್ಲಿ ಮುನ್ನಡೆ

ಕರ್ನಾಟಕ ವಿಧಾನಸಭಾ ಚುನಾವಣೆ ಮತಎಣಿಕೆ ಪ್ರಕ್ರಿಯೆ ಚುರುಕಾಗಿ ಸಾಗಿದ್ದು ಬೆಳಿಗ್ಗೆ 10:40ರ ಹೊತ್ತಿಗೆ ಕಾಂಗ್ರೆಸ್ ಬಹುಮತದ ಸ್ಪಷ್ಟ ನಿರೀಕ್ಷೆ ಕೊಟ್ಟಿದೆ. 224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 113 ಮ್ಯಾಜಿಕ್ ನಂಬರ್. ಕಾಂಗ್ರೆಸ್ ಇದೀಗ 115 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ ಸಭೆ ನಡೆಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದು, ಮತಎಣಿಕೆಯ ನಂತರ ಶಾಸಕರಲ್ಲಿ ಒಗ್ಗಟ್ಟು ಕಾಪಾಡಲು ತಂತ್ರ ರೂಪಿಸಿದ್ದಾರೆ.

Sat, 13 May 202305:08 AM IST

ಮತ ಎಣಿಕೆ ಮುಗಿದ ಬಳಿಕ ವಿದ್ಯುತ್‌ ಬೆಲೆ ಏರಿಕೆ

Sat, 13 May 202305:08 AM IST

ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳ ಈಗಿನ ಟ್ರೆಂಡ್‌

ಮಂಗಳೂರು ಕ್ಷೇತ್ರ ದ ಎರಡನೇ ಸುತ್ತಿನ ಮತ ಎಣಿಕೆ: ಕಾಂಗ್ರೆಸ್ ನ ಯುಟಿ ಖಾದರ್ ಗೆ 13024 ಮತಗಳು, ಬಿಜೆಪಿ ಯ ಸತೀಶ್ ಕುಂಪಲ ಗೆ 5795 ಮತಗಳನ್ನು ಪಡೆದಿದ್ದಾರೆ. ಯುಟಿ ಖಾದರ್ ಗೆ 7279 ಮತಗಳ ಮುನ್ನಡೆ ಪಡೆದಿದ್ದಾರೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಐದನೇ ಸುತ್ತಿನ ಮತ ಎಣಿಕೆ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆ 30183 ಮತಗಳು ದೊರಕಿವೆ. ಕಾಂಗ್ರೆಸ್ ನ ರಕ್ಷಿತ್ ಶಿವರಾಂ ಗೆ 25212 ಮತಗಳನ್ನು ಪಡೆದಿದ್ದಾರೆ. ಹರೀಶ್ ಪೂಂಜಾ 4971 ಮತಗಳ ಮುನ್ನಡೆ ಪಡೆದಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ನಾಲ್ಕನೇ ಸುತ್ತು ಮತ ಎಣಿಕೆ: ಬಿಜೆಪಿ ಭಾಗೀರಥಿ ಮುರುಳ್ಯ 20563 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪಗೆ 17618 ಮತಗಳು ದೊರಕಿವೆ. ಭಾಗೀರಥಿ ಮುರುಳ್ಯ-ಲೀಡ್ 2945 ಮತಗಳ ಲೀಡ್‌ನಿಂದ ಮುನ್ನಡೆ ಪಡೆದಿದ್ದಾರೆ.

Sat, 13 May 202305:08 AM IST

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಮುನ್ನಡೆ

  • ಮೂರನೆ ಸುತ್ತಿನ ಮತಣಿಕೆ ಮುಕ್ತಾಯ
  • ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಮತಗಳ ಮುನ್ನೆಡೆ 3302
  • ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ 4041
  • ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ 739 ಮುನ್ನೆಡೆ
  • ಬಿಜೆಪಿ 739 ಮತಗಳ ಅಂತರ ಮುನ್ನೆಡೆ ..
  • ಮೂರನೆ ಸುತ್ತಿನ ಮುಕ್ತಾಯ 1849 ಮತಳ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್

Sat, 13 May 202304:58 AM IST

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ

452 ಮತಗಳ ಮುನ್ನಡೆ

ಒಟ್ಟು 25022

ಕಾಂಗ್ರೆಸ್ - 7818

ಬಿಜೆಪಿ - 8060

ಜೆಡಿಎಸ್ - 8512

Sat, 13 May 202304:58 AM IST

ಮುದ್ದೇಬಿಹಾಳ ಆರನೇ ಸುತ್ತಿನ ಫಲಿತಾಂಶ

 

ಕಾಂಗ್ರೆಸ್- 27549

ಬಿಜೆಪಿ- 26573

ಮುನ್ನಡೆ ಕಾಂಗ್ರೆಸ್ 97

Sat, 13 May 202304:58 AM IST

ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ

5577 ಮತಗಳ ಮುನ್ನಡೆ

ಒಟ್ಟು 26158

ಕಾಂಗ್ರೆಸ್ - 9595

ಬಿಜೆಪಿ - 397

ಜೆಡಿಎಸ್ -15172

Sat, 13 May 202304:58 AM IST

ಏಳು ಸಾವಿರ ಮತಗಳಿಂದ ಜಗದೀಶ ಶೆಟ್ಟರ್‌ ಹಿನ್ನಡೆ

ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಏಳು ಸಾವಿರ ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. 

Sat, 13 May 202304:53 AM IST

ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಪಕ್ಷಾಂತರ ಭೀತಿ

Sat, 13 May 202304:51 AM IST

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಮುನ್ನಡೆ

  • ಬಿಜೆಪಿ ಅಭ್ಯರ್ಥಿ ಎಂ ಕೃಷ್ಣಪ್ಪ 23 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. 
  • ಆರನೇ ಸುತ್ತು ಮುಕ್ತಾಯದ ವೇಳೆಗೆ 23 ಸಾವಿರ ಮತಗಳ ಮುನ್ನಡೆ
  • ಕೆ ಆರ್ ಪುರಂ ಒಟ್ಟಾರೆ ಮುನ್ನಡೆ
  • ಬಿಜೆಪಿ- 24,097
  • ಕಾಂಗ್ರೆಸ್- 15300
  • ಬಿಜೆಪಿ ಬಸವರಾಜ್ ಲೀಡ್- 8787
  • ದೇವನಹಳ್ಳಿ 6 ನೇ ಸುತ್ತು ಮುಕ್ತಾಯ
  • ಜೆಡಿಎಸ್ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಮುನ್ನಢೆ
  • 1615 ಮತಗಳ‌ಮುನ್ನಡೆ
  • ಹೊಸಕೋಟೆ 5 ನೇ ಸುತ್ತು ಮುಕ್ತಾಯ
  • ಕಾಂಗ್ರೆಸ್ ಶರತ್ ಬಚ್ಚೇಗೌಡ 4828 ಮತಗಳ ಮುನ್ನಡೆ

Sat, 13 May 202304:51 AM IST

ಇಂಡಿ ಆರನೇ ಸುತ್ತಿನ ಫಲಿತಾಂಶ

ಕಾಂಗ್ರೆಸ್- 23464

ಜೆಡಿಎಸ್-18035

ಮುನ್ನಡೆ- ಕಾಂಗ್ರೆಸ್ 5429

Sat, 13 May 202304:51 AM IST

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ.

ನಾಲ್ಕನೇ ಸುತ್ತು ಮುಕ್ತಾಯ.

2109 ಮತಗಳ ಮುನ್ನಡೆ

ಒಟ್ಟು 31512

ಕಾಂಗ್ರೆಸ್ - 13477

ಬಿಜೆಪಿ - 1631

ಜೆಡಿಎಸ್ - 15586

Sat, 13 May 202304:51 AM IST

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದಾರೆ. 

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ.

548 ಮತಗಳ ಮುನ್ನಡೆ

ಒಟ್ಟು 25308

ಕಾಂಗ್ರೆಸ್ - 12648

ಬಿಜೆಪಿ - 222

ಜೆಡಿಎಸ್ -12100

Sat, 13 May 202304:51 AM IST

ಉಡುಪಿ: ಬಿಜೆಪಿ 4, ಕಾಂಗ್ರೆಸ್ 1, ಸದ್ದು ಮಾಡದ ಮುತಾಲಿಕ್

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಗೋಪಾಲ ಪೂಜಾರಿ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹೊಸಮುಖ ಗುರುರಾಜ್ ಅವರಿಗಿಂತ ಮುನ್ನಡೆಯಲ್ಲಿದ್ದಾರೆ. ಇಲ್ಲಿ ಬಿಜೆಪಿ ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿ, ಹೊಸ ಪ್ರಯೋಗ ಮಾಡಿತ್ತು. ಉಳಿದಂತೆ ಉಡುಪಿಯಲ್ಲಿ ಬಿಜೆಪಿಯ ಯಶಪಾಲ ಸುವರ್ಣ, ಕಾರ್ಕಳದಲ್ಲಿ ಸುನಿಲ್ ಕುಮಾರ್, ಕಾಪುವಿನಲ್ಲಿ ಸುರೇಶ್ ಶೆಟ್ಟಿ ಮತ್ತು ಕುಂದಾಪುರದಲ್ಲಿ ಕಿರಣ್ ಕೊಡ್ಗಿ ಮುನ್ನಡೆ ಮುಂದುವರಿಸಿದ್ದಾರೆ. ವಿಶೇಷವೆಂದರೆ, ಕಾರ್ಕಳದಲ್ಲಿ ಸುನಿಲ್ ಕುಮಾರ್ ವಿರುದ್ಧ ದೊಡ್ಡ ಸದ್ದು ಮಾಡಿ ಕಣಕ್ಕಿಳಿದ ಪ್ರಮೋದ್ ಮುತಾಲಿಕ್ ನಿರೀಕ್ಷಿತ ಮತ ಗಳಿಸಿಲ್ಲ.

Sat, 13 May 202304:51 AM IST

ಕೋಲಾರದಲ್ಲಿ ಯಾವ ಅಭ್ಯರ್ಥಿ ಮುನ್ನಡೆ

ಕೋಲಾರ: ಬಿಜೆಪಿ ಅಭ್ಯರ್ಥಿ ಮುನ್ನಡೆ

ಮಾಲೂರು: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಬಂಗಾರಪೇಟೆ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಕೆಜಿಎಫ್: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಶ್ರೀನಿವಾಸಪುರ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಮುಳಬಾಗಿಲು: ಜೆಡಿಎಸ್ ಅಭ್ಯರ್ಥಿ ಮುನ್ನಡೆ
(ಬೆಳಗ್ಗೆ 10 ಗಂಟೆಯ ಅಪ್‌ಡೇಟ್‌)

Sat, 13 May 202304:51 AM IST

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ

ಐದನೇ ಸುತ್ತು ಮುಕ್ತಾಯ.

444 ಮತಗಳ ಮುನ್ನಡೆ

ಒಟ್ಟು 41136

ಕಾಂಗ್ರೆಸ್ - 12678

ಬಿಜೆಪಿ - 12234

ಜೆಡಿಎಸ್ - 4165

ಪಕ್ಷೇತರ - 11075

Sat, 13 May 202304:51 AM IST

ಜೆಡಿಎಸ್ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ 710 ಮತಗಳಿಂದ ಮುನ್ನಡೆ

ಚನ್ನಪಟ್ಟಣದಲ್ಲಿ ಎರಡನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ 710 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕುಮಾರಸ್ವಾಮಿ 9522 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ 8812 ಮತಗಳನ್ನು ಪಡೆದು ಅಲ್ಪ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಸ್. ಗಂಗಾಧರ್ 1305 ಮತ ಪಡೆದಿದ್ದಾರೆ.

Sat, 13 May 202304:47 AM IST

ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ

ನಾಲ್ಕು ಸುತ್ತಿನ ಮತಎಣಿಕೆ ಮುಕ್ತಾಯ

6257 ಮತಗಳ ಮುನ್ನಡೆ

ಒಟ್ಟು 31970

ಕಾಂಗ್ರೆಸ್ - 17741

ಬಿಜೆಪಿ - 11484

ಜೆಡಿಎಸ್ - 490.

RPI - 1012

Sat, 13 May 202304:47 AM IST

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಗೆ 16,738 ಮತಗಳ ಮುನ್ನಡೆ

ಸಚಿವರಾದ ಎಂ ಟಿ ಬಿ ನಾಗರಾಜ್, ಬಿಸಿ ಪಾಟೀಲ್, ರಮೇಶ್ ಜಾರಕಿಹೊಳಿ, ಡಾ.ಕೆ.ಸುಧಾಕರ್, ವಿ.ಸೋಮಣ್ಣ, ಬಿ. ಶ್ರೀರಾಮುಲು ಹಿನ್ನೆಡೆ. ಯಮಕನಮರಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಗೆ 16,738 ಮತಗಳ ಮುನ್ನಡೆ

Sat, 13 May 202304:47 AM IST

ಉತ್ತರ ಕನ್ನಡ: ಬಿಜೆಪಿ -3, ಕಾಂಗ್ರೆಸ್ 2, ಜೆಡಿಎಸ್ 1 ಮುನ್ನಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಳೆದ ಬಾರಿ 5 ಬಿಜೆಪಿ 1 ಕಾಂಗ್ರೆಸ್ (ಆರ್.ವಿ.ದೇಶಪಾಂಡೆ) ಜಯಗಳಿಸಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನವೃದ್ಧಿ ಮಾಡಿಕೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಸದ್ಯದ ಟ್ರೆಂಡ್ ಹೀಗಿದೆ.

ಕಾಂಗ್ರೆಸ್ –2 ಬಿಜೆಪಿ –3 ಜೆಡಿಎಸ್-1

 

ಕ್ಷೇತ್ರ: ಕುಮಟಾ

ದಿನಕರ ಶೆಟ್ಟಿ (ಬಿಜೆಪಿ), 3231

ನಿವೇದಿತ್ ಆಳ್ವ (ಕಾಂಗ್ರೆಸ್),

ಸೂರಜ್ ನಾಯ್ಕ್ (ಜೆಡಿಎಸ್) 3659

ಮುನ್ನಡೆ: ಸೂರಜ್ ನಾಯ್ಕ್ (ಜೆಡಿಎಸ್)

 

ಕ್ಷೇತ್ರ : ಭಟ್ಕಳ

ಸುನೀಲ್ ನಾಯ್ಕ್ (ಬಿಜೆಪಿ), 13515

ಮಂಕಾಳು ವೈದ್ಯ (ಕಾಂಗ್ರೆಸ್),14769

ನಾಗೇಂದ್ರ ನಾಯ್ಕ (ಜೆಡಿಎಸ್)

ಮುನ್ನಡೆ: ಮಂಕಾಳು ವೈದ್ಯ(ಕಾಂಗ್ರೆಸ್)

 

ಕ್ಷೇತ್ರ: ಶಿರಸಿ

ವಿಶ್ವೇರ ಹೆಗಡೆ ಕಾಗೇರಿ (ಬಿಜೆಪಿ),10,893

ಭೀಮಣ್ಣ ನಾಯ್ಕ (ಕಾಂಗ್ರೆಸ್), 7008

ಉಪೇಂದ್ರ ಪೈ (ಜೆಡಿಎಸ್)

ಮುನ್ನಡೆ: ಬಿಜೆಪಿಯ ಕಾಗೇರಿ

 

ಕ್ಷೇತ್ರ : ಯಲ್ಲಾಪುರ 

ಶಿವರಾಮ್ ಹೆಬ್ಬಾರ (ಬಿಜೆಪಿ), 10,863

ವಿ.ಎಸ್. ಪಾಟೀಲ (ಕಾಂಗ್ರೆಸ್), 9947

ಮುನ್ನಡೆ: ಶಿವರಾಮ ಹೆಬ್ಬಾರ (ಬಿಜೆಪಿ)

 

ಕ್ಷೇತ್ರ : ಹಳಿಯಾಳ

ಆರ್.ವಿ.ದೇಶಪಾಂಡೆ (ಕಾಂಗ್ರೆಸ್), 3032

ಸುನಿಲ್ ಹೆಗಡೆ (ಬಿಜೆಪಿ), 3031

ಎಸ್.ಎಲ್.ಘೋಟ್ನೇಕರ (ಜೆಡಿಎಸ್)

ಮುನ್ನಡೆ: ಆರ್.ವಿ.ದೇಶಪಾಂಡೆ (ಕಾಂಗ್ರೆಸ್)

 

ಕ್ಷೇತ್ರ : ಕಾರವಾರ

ರೂಪಾಲಿ ನಾಯ್ಕ್ (ಬಿಜೆಪಿ),15277

ಸತೀಶ್ ಸೈಲ್ (ಕಾಂಗ್ರೆಸ್), 15604

ಚೈತ್ರಾ ಕೊಠಾರ್ ಕರ್ (ಜೆಡಿಎಸ್)

ಮುನ್ನಡೆ: ಸತೀಶ್ ಸೈಲ್ (ಕಾಂಗ್ರೆಸ್)

Sat, 13 May 202304:45 AM IST

ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮುನ್ನಡೆ

ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮುನ್ನಡೆ ಸಾಧಿಸಿದ್ದಾರೆ. 

ಕಾಂಗ್ರೆಸ್ - 2976

ಬಿಜೆಪಿ - 3790

ಜೆಡಿಎಸ್ - 3831

ಒಟ್ಟು: 10879

Sat, 13 May 202304:45 AM IST

ಇಂಡಿಯಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಕಾಂಗ್ರೆಸ್‌

ಇಂಡಿ ನಾಲ್ಕನೇ ಸುತ್ತಿನ ಈಗಿನ ಫಲಿತಾಂಶ

  • ಕಾಂಗ್ರೆಸ್-16976
  • ಜೆಡಿಎಸ್-11208
  • ಕಾಂಗ್ರೆಸ್ ಮುನ್ನಡೆ-5768

Sat, 13 May 202304:43 AM IST

ಬಬಲೇಶ್ವರದಲ್ಲಿ ಕಾಂಗ್ರೆಸ್‌ ಮುನ್ನಡೆ

ಬಬಲೇಶ್ವರ ನಾಲ್ಕನೇ ಸುತ್ತಿನ ಮತ ಎಣಿಕೆಯ ಫಲಿತಾಂಶ

ಕಾಂಗ್ರೆಸ್-20746

ಬಿಜೆಪಿ -16873

ಕಾಂಗ್ರೆಸ್ ಮುನ್ನಡೆ-3873

Sat, 13 May 202304:43 AM IST

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ  ಮುನ್ನಡೆ ಸಾಧಿಸಿದ ಜೆಡಿಎಸ್

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಅಲ್ಲಿ ಜೆಡಿಎಸ್‌ ಸದ್ಯ 97 ಮತಗಳ ಅಂತರದಿಂದ ಮುನ್ನಡೆಯಲ್ಲಿದೆ. 

  • ಒಟ್ಟು 18635
  • ಕಾಂಗ್ರೆಸ್ - 8949
  • ಬಿಜೆಪಿ - 274
  • ಜೆಡಿಎಸ್ - 9046

Sat, 13 May 202304:42 AM IST

ಕಲಬುರಗಿ ವಿಧಾನಸಭಾ ಕ್ಷೇತ್ರ: ಪ್ರಿಯಾಂಕ್ ಖರ್ಗೆ ಮುನ್ನಡೆ

ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಮಣಿಕಂಠ ರಾಥೋಡ ಅವರಿಗಿಂತ 2493 ಮತಗಳ ಅಂತರದಿಂದ ‌ಮುನ್ನಡೆ ಸಾಧಿಸಿದ್ದಾರೆ. ಎರಡು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದೆ.

Sat, 13 May 202304:42 AM IST

ನಾಲ್ಕನೇ ಸುತ್ತಿನಲ್ಲಿ ದಿನೇಶ್‌ ಗುಂಡೂರಾವ್‌ ಗೆ ಮುನ್ನಡೆ

ನಾಲ್ಕನೇ ಸುತ್ತಿನಲ್ಲಿ ದಿನೇಶ್‌ ಗುಂಡೂರಾವ್‌ ಗೆ ಮುನ್ನಡೆ. ಮೂರನೇ ಸುತ್ತಿನಲ್ಲಿ ಇವರು ಹಿನ್ನಡೆ ಅನುಭವಿಸಿದ್ದರು.

Sat, 13 May 202304:42 AM IST

ದೇವರಹಿಪ್ಪರಗಿ: ಜೆಡಿಎಸ್ ಮುನ್ನಡೆ

ದೇವರಹಿಪ್ಪರಗಿ 4 ನೇ ಸುತ್ತಿನ ಫಲಿತಾಂಶ

ಜೆಡಿಎಸ್-13138

ಕಾಂಗ್ರೆಸ್- 9969

ಮುನ್ನಡೆ- ಜೆಡಿಎಸ್-3169

Sat, 13 May 202304:42 AM IST

ಬಂಗಾರಪೇಟೆಯಲ್ಲಿ ಜೆಡಿಎಸ್‌ ಮುನ್ನಡೆ

ಮೂರನೇ ಸುತ್ತಿನ ಮತ ಎಣಿಕೆ.  ಬಂಗಾರಪೇಟೆಯಲ್ಲಿ ಜೆಡಿಎಸ್ ಮುನ್ನಡೆ ಪಡೆದಿದೆ.  ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮುನ್ನಡೆ ಪಡೆದಿದ್ದಾರೆ.

ಜೆಡಿಎಸ್ 10723

ಕಾಂಗ್ರೇಸ್ 8675

ಬಿಜೆಪಿ 1173

2048 ಮತಗಳ ಮುನ್ನಡೆ ಸಾಧಿಸಿ ಜೆಡಿಎಸ್

Sat, 13 May 202304:39 AM IST

ಮುದ್ದೇಬಿಹಾಳ: ನಾಲ್ಕನೇ ಸುತ್ತಿನ ಫಲಿತಾಂಶ

ಕಾಂಗ್ರೆಸ್ 18323

ಬಿಜೆಪಿ 16927

ಕಾಂಗ್ರೆಸ್ ಮುನ್ನಡೆ 1396

Sat, 13 May 202304:38 AM IST

ಬೆಳಿಗ್ಗೆ 10 ಗಂಟೆಯ ಫಲಿತಾಂಶ ಚಿತ್ರಣ ಹೀಗಿದೆ

Sat, 13 May 202304:35 AM IST

ರಾಮನಗರ: ನಿಖಿಲ್ ಕುಮಾರಸ್ವಾಮಿಗೆ ಮುನ್ನಡೆ

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 16,721 ಮತಗಳನ್ನು ಪಡೆದು 3011 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ 13,710 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೌತಮ್‌ ಗೌಡ ಕೇವಲ 2133 ಮತಗಳನ್ನು ಪಡೆದಿದ್ದಾರೆ.

Sat, 13 May 202304:35 AM IST

ಬಂಟ್ವಾಳ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ರಾಜೇಶ್ ನಾಯಕ್‌ಗೆ ಭಾರೀ ಮುನ್ನಡೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಎರಡನೇ ಸುತ್ತಿನ ಮತ ಎಣಿಕೆಯ ಫಲಿತಾಂಶ

  • ಬಿಜೆಪಿ ರಾಜೇಶ್ ನಾಯಕ್ ಗೆ 11250 ಮತಗಳು
  • ಕಾಂಗ್ರೆಸ್ ನ ರಮಾನಾಥ್ ರೈ ಗೆ 8815 ಮತಗಳು
  • ಬಂಟ್ವಾಳ ಬಿಜೆಪಿ ರಾಜೇಶ್ ನಾಯಕ್ ಗೆ 2435 ಮತಗಳ ಮುನ್ನಡೆ

Sat, 13 May 202304:35 AM IST

ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ

ಲಕ್ಷ್ಮಣ ಸವದಿ(ಕಾಂಗ್ರೆಸ್)-11,137

ಮಹೇಶ ಕುಮಠಳ್ಳಿ(ಬಿಜೆಪಿ)-5,763

Sat, 13 May 202304:35 AM IST

ನನ್ನನ್ನು ತಡೆಯೋರು ಯಾರೂ ಇಲ್ಲ: ರಾಹುಲ್ ಗಾಂಧಿ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆ ದಾಖಲಿಸುತ್ತಿರುವಂತೆ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯ ಟ್ವಿಟರ್ ಅಕೌಂಟ್‌ನಲ್ಲಿ ಮಾಡಿರುವ ಟ್ವೀಟ್ ಗಮನ ಸೆಳೆದಿದೆ. ರಾಹುಲ್ ಗಾಂಧಿ ಅವರ ವಿಡಿಯೊ ತುಣುಕನ್ನು ಟ್ವೀಟ್ ಮಾಡಲಾಗಿದ್ದು, 'ನಾನು ಸೋಲೊಪ್ಪದ ಆತ್ಮವಿಶ್ವಾಸಿ, ಇಂದು ನನ್ನನ್ನು ತಡೆಯೋರು ಯಾರೂ ಇಲ್ಲ' ಎನ್ನುವ ಅರ್ಥ ಬರುವಂತೆ ಇಂಗ್ಲಿಷ್‌ನಲ್ಲಿ ಒಕ್ಕಣೆ ಬರೆಯಲಾಗಿದೆ.

 

Sat, 13 May 202304:35 AM IST

ವಿಜಯಪುರದಲ್ಲಿ ಯಾರು ಮುನ್ನಡೆ?

ಮುದ್ದೇಬಿಹಾಳ: ಕಾಂಗ್ರೆಸ್ 2477

ದೇವರಹಿಪ್ಪರಗಿ ಜೆಡಿಎಸ್ 1287

ಬಸವನಬಾಗೇಬಾಡಿ ಜೆಡಿಎಸ್ 1136

ಬಬಲೇಶ್ವರ ಕಾಂಗ್ರೆಸ್ 2210

ವಿಜಯಪುರ ನಗರದ ಬಿಜೆಪಿ 9134

‌ನಾಗಠಾಣ ಕಾಂಗ್ರೆಸ್ 3855

ಇಂಡಿ ಕಾಂಗ್ರೆಸ್ 4800

ಸಿಂದಗಿ ಕಾಂಗ್ರೆಸ್ 362

Sat, 13 May 202304:35 AM IST

ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮುನ್ನಡೆ

ಎರಡನೇ ಸುತ್ತು ಮತ ಎಣಿಕೆ ಮುಕ್ತಾಯ.

3243 ಮತಗಳ ಮುನ್ನಡೆ ಸಾಧಿಸಿದ ಜೆಡಿಎಸ್‌

ಒಟ್ಟು 14136

ಕಾಂಗ್ರೆಸ್ - 5110

ಬಿಜೆಪಿ - 350

ಜೆಡಿಎಸ್ - 8353

Sat, 13 May 202304:35 AM IST

ಬೊಮ್ಮಾಯಿ ತವರು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.

5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಒಂದರಲ್ಲಿ ಬಿಜೆಪಿ ಮುನ್ನೆದೆ. ಕಳೆದ ಬಾರಿ ಕಾಂಗ್ರೆಸ್ ಒಂದು ಕಡೆ ಮಾತ್ರ ಗೆದ್ದಿತ್ತು.

Sat, 13 May 202304:35 AM IST

ಸುಳ್ಯದಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ 9997 ಮತಗಳ ಮುನ್ನಡೆ

ಸುಳ್ಯ ವಿಧಾನಸಭಾ ಕ್ಷೇತ್ರದ ಎರಡನೇ ಸುತ್ತಿನ ಮತ ಎಣಿಕೆಯ ಫಲಿತಾಂಶ

ಬಿಜೆಪಿ ಭಾಗೀರಥಿ ಮುರುಳ್ಯ 9997 ಮತಗಳು

ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆ 8966 ಮತಗಳು

ಭಾಗೀರಥಿ ಮುರುಳ್ಯ-ಲೀಡ್ 1031 ಮತಗಳ ಲೀಡ್

Sat, 13 May 202304:30 AM IST

ಗಾಂಧಿನಗರ ದಿನೇಶ್‌ ಗುಂಡೂರಾವ್‌ ಹಿನ್ನಡೆ

ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ದಿನೇಶ್‌ ಗುಂಡೂರಾವ್‌ ಹಿನ್ನಡೆ ಅನುಭವಿಸಿದ್ದಾರೆ. 

Sat, 13 May 202304:30 AM IST

ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್ ಮುನ್ನಡೆ

ಕೋಲಾರದ ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಶಶಿಧರ್ ಮುನ್ನಡೆ ಸಾಧಿಸಿದ್ದಾರೆ. 

ಕಾಂಗ್ರೆಸ್ - 11594

ಬಿಜೆಪಿ -7450

ಜೆಡಿಎಸ್ - 390

ಒಟ್ಟು:  20547

Sat, 13 May 202304:30 AM IST

ಬಳ್ಳಾರಿ ನಗರದ ಈಗಿನ ಟ್ರೆಂಡ್‌

1757 ಮತಗಳಿಂದ ಮುನ್ನಡೆ ಪಡೆದ ಕಾಂಗ್ರೆಸ್‌

ಕಾಂಗ್ರೆಸ್ - ನಾರಾ ಭರತರೆಡ್ಡಿ - 5149

KRPP ಅಭ್ಯರ್ಥಿ ಲಕ್ಷ್ಮೀ ಅರುಣ - 3392

ಬಿಜೆಪಿ ಅಭ್ಯರ್ಥಿ - ಸೋಮಶೇಖರರೆಡ್ಡಿ -1678

Sat, 13 May 202304:30 AM IST

ಇಂಡಿ: ಕಾಂಗ್ರೆಸ್‌ಗೆ 4802 ಮತಗಳ ಅಂತರದಲ್ಲಿ ಮುನ್ನಡೆ

ಇಂಡಿ ಮೂರನೇ ಸುತ್ತಿನ ಫಲಿತಾಂಶ

ಕಾಂಗ್ರೆಸ್- 13546

ಜೆಡಿಎಸ್-8746

4802 ಕಾಂಗ್ರೆಸ್ ಲೀಡ್

Sat, 13 May 202304:30 AM IST

ಬಳ್ಳಾರಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ  ಕಾಂಗ್ರೆಸ್‌ ಮುನ್ನಡೆ

ಬಳ್ಳಾರಿಯ ಐದು ವಿಧಾನಸಭಾ ಕ್ಷೆತ್ರದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಸಿರುಗುಪ್ಪ, ಕಂಪ್ಲಿ, ಸಂಡೂರಿನಲ್ಲಿ ಕಾಂಗ್ರೆಸ್‌ ಅಮೋಘ ಮುನ್ನಡೆ ಸಾಧಿಸಿದೆ. 

Sat, 13 May 202304:30 AM IST

ಚಿಕ್ಕಮಗಳೂರು: 360 ಮತಗಳಿಂದ ಮುನ್ನಡೆ ಸಾಧಿಸಿದ ಕಾಂಗ್ರೆಸ್‌ನ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು ಹೆಚ್.ಡಿ.ತಮ್ಮಯ್ಯ ಕಾಂಗ್ರೆಸ್ 360 ಮತಗಳಿಂದ ಮುನ್ನಡೆ

ಮೂಡಿಗೆರೆ ನಯನ ಮೋಟಮ್ಮ ಕಾಂಗ್ರೆಸ್ 97 ಮತಗಳಿಂದ ಮುನ್ನಡೆ

ಶೃಂಗೇರಿ ಟಿ.ಡಿ.ರಾಜೇಗೌಡ ಕಾಂಗ್ರೆಸ್ 4000 ಮುನ್ನಡೆ

ತರೀಕೆರೆ ಜಿ.ಹೆಚ್.ಶ್ರೀನಿವಾಸ್ 1255 ಮತಗಳಿಂದ ಮುನ್ನಡೆ

ಕಡೂರು ಬೆಳ್ಳಿ ಪ್ರಕಾಶ್ 937 ಬಿಜೆಪಿ ಮತಗಳಿಂದ ಮುನ್ನಡೆ

Sat, 13 May 202304:46 AM IST

ವಿಜಯಪುರ ನಗರ ಎರಡನೇ ಸುತ್ತಿನ ಮತ ಎಣಿಕೆ, ಬಿಜೆಪಿಗೆೆ ಮುನ್ನಡೆ

ಬಿಜೆಪಿ- 14870

ಕಾಂಗ್ರೆಸ್- 5738

ಬಿಜೆಪಿಗೆ 9132 ಮತಗಳ ಅಂತರದಲ್ಲಿ ಮುನ್ನಡೆ 

Sat, 13 May 202304:30 AM IST

ಬೆಂಗಳೂರು: ಆರ್‌ ಅಶೋಕ್‌ಗೆ ಮುನ್ನಡೆ, ಸೌಮ್ಯರೆಡ್ಡಿಗೆ ಹಿನ್ನೆಡೆ

ಜಯನಗರ ಸೌಮ್ಯರೆಡ್ಡಿ ಹಿನ್ನೆಡೆ, ಚಿಕ್ಕಪೇಟೆ ಉದಯಗರುಡಚಾರ್‌ ಮುನ್ನಡೆ, ಪದ್ಮನಾಭನಗರ ಅಶೋಕ್‌ ಮುನ್ನಡೆ, ಬಿಟಿಎಂ ರಾಮಲಿಂಗಾರೆಡ್ಡಿ ಮುನ್ನಡೆ

Sat, 13 May 202304:30 AM IST

ದೇವರಹಿಪ್ಪರಗಿ: ಮೂರನೇ ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ

ಜೆಡಿಎಸ್-9665

ಕಾಂಗ್ರೆಸ್- 8378

 128 ಮತಗಳ ಅಂತರದಲ್ಲಿ ಜೆಡಿಎಸ್‌ ಮುನ್ನಡೆ

Sat, 13 May 202304:24 AM IST

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್‌ 346 ಮತಗಳಿಂದ ಮುನ್ನಡೆ ಸಾಧಿಸಿದೆ. 

ಒಟ್ಟು 27921

ಜೆಡಿಎಸ್ - 2907

ಬಿಜೆಪಿ - 8345

ಕಾಂಗ್ರೆಸ್ - 8691

ಪಕ್ಷೇತರ - 7096

Sat, 13 May 202304:24 AM IST

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಮುನ್ನಡೆ

ಜೆಡಿಎಸ್ ನಿಖಿಲ್ ಕುಮಾರಸ್ವಾಮಿ-5978(ಮುನ್ನಡೆ)

ಕಾಂಗ್ರೆಸ್ ಇಕ್ಬಾಲ್ ಹುಸೇನ್-3484

ಬಿಜೆಪಿ ಗೌತಮ್ ಗೌಡ-571

ನಿಖಿಲ್ ಕುಮಾರಸ್ವಾಮಿ ಗೆ 2494 ಮತಗಳ ಅಂತರದಲ್ಲಿ ಮುನ್ನಡೆ

 

Sat, 13 May 202304:24 AM IST

ಶೃಂಗೇರಿ ಕ್ಷೇತ್ರದಲ್ಲಿ ಟಿಡಿ ರಾಜೇಗೌಡ ಮುನ್ನಡೆ 

ಶೃಂಗೇರಿ ಕ್ಷೇತ್ರ ದಲ್ಲಿ ಕಾಂಗ್ರೆಸ್ ನ ಟಿಡಿ ರಾಜೇಗೌಡ ಅವರು 3664 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಡಿ.ಎನ್.ಜೀವರಾಜ್ ಅವರು 3111 ಹಾಗೂ ಜೆಡಿಎಸ್ ನ ಸುಧಾಕರ ಎಸ್ ಶೆಟ್ಟಿ ಅವರು 1463 ಮತ ಪಡೆದಿದ್ದಾರೆ.

Sat, 13 May 202304:21 AM IST

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್‌ಗೆ ಭಾರೀ ಮುನ್ನಡೆ

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸುತ್ತುಗಳ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ 9730 ಮತಗಳ ಭಾರಿ ಮುನ್ನಡೆ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ. ನಾಗರಾಜು 2812 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್‌. ಅಶೋಕ್‌ 1316 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

Sat, 13 May 202304:21 AM IST

ದೇವರಹಿಪ್ಪರಗಿಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್-6002

ಜೆಡಿಎಸ್-5748

Sat, 13 May 202304:21 AM IST

ಬಬಲೇಶ್ವರ ಮತ್ತು ಕೋಲಾರದ ಈಗಿನ ಟ್ರೆಂಡ್‌

ಬಬಲೇಶ್ವರ ಮೂರನೇ ಸುತ್ತು

ಕಾಂಗ್ರೆಸ್- 15402

ಬಿಜೆಪಿ- 13192

ಮುನ್ನಡೆ 2210 ಕಾಂಗ್ರೆಸ್

 

ಕೋಲಾರ ಜೆಡಿಎಸ್ ಮುನ್ನಡೆ

ಕಾಂಗ್ರೆಸ್‌- 2432

ಜೆಡಿಎಸ್‌-3036

ಬಿಜೆಪಿ-2958

Sat, 13 May 202304:19 AM IST

ಜಗದೀಶ್ ಶೆಟ್ಟರ್ ಹಿನ್ನೆಡೆ

ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಹುಬ್ಬಳ್ಳಿಯಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು 1900 ಮತಗಳಿಂದ ಸದ್ಯಕ್ಕೆ ಹಿನ್ನಡೆಯಲ್ಲಿದ್ದಾರೆ. 

Sat, 13 May 202304:19 AM IST

ಬಬಲೇಶ್ವರದಲ್ಲಿ 3ನೇ ರೌಂಡ್ ಮುಕ್ತಾಯ

2210 ಮತಗಳ ಅಂತರದಲ್ಲಿ  ಕಾಂಗ್ರೆಸ್ ಪಕ್ಷದ ಎಂ ಬಿ ಪಾಟೀಲ್ ಮುನ್ನಡೆ ಪಡೆದಿದ್ದಾರೆ. 

Sat, 13 May 202304:18 AM IST

ಮದ್ದೂರು ಕ್ಷೇತ್ರದಲ್ಲಿ ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

 

ಕಾಂಗ್ರೆಸ್ (ಉದಯ್) - 7214

ಜೆಡಿಎಸ್ (ತಮ್ಮಣ್ಣ) - 7052

ಬಿಜೆಪಿ (ಸ್ವಾಮಿ) - 1995

ಕಾಂಗ್ರೆಸ್ 162 ಮತಗಳ ಮುನ್ನಡೆ ಪಡೆದಿದೆ. 

Sat, 13 May 202304:17 AM IST

ಇಂಡಿ ಎರಡನೇ ಸುತ್ತು- ಕರ್ನಾಟಕ ಚುನಾವಣಾ ಫಲಿತಾಂಶ

ಕಾಂಗ್ರೆಸ್-9687

ಜೆಡಿಎಸ್- 4762

ಕಾಂಗ್ರೆಸ್ ಮುನ್ನಡೆಯಲ್ಲಿದೆ. 

Sat, 13 May 202304:17 AM IST

ದಕ್ಷಿಣ ಕನ್ನಡದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳು

  • ಸುಳ್ಯ ಬಿಜೆಪಿ ಭಾಗೀರಥಿ ಮುರುಳ್ಯ 5501 ಮತಗಳು
  • ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಗೆ 3961 ಮತಗಳು
  • ಭಾಗೀರಥಿ ಮುರುಳ್ಯ-1532 ಮತಗಳು (ಮುನ್ನಡೆ)

 

  • ಮೂಡಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ 5595 ಮತಗಳು
  • ಕಾಂಗ್ರೆಸ್ ನ ಮಿಥುನ್ ರೈ 3204 ಮತಗಳು
  • ಉಮಾನಾಥ್ ಕೋಟ್ಯಾನ್ 2391 ಮತಗಳ ಮುನ್ನಡೆ ಪಡೆದಿದ್ದಾರೆ.

 

  • ಮಂಗಳೂರು ಉತ್ತರದ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ‌ 5222 ಮತಗಳು (ಮುನ್ನಡೆ)
  • ಕಾಂಗ್ರೆಸ್ ನ ಇನಾಯತ್ ಆಲಿ 3966 ಮತಗಳು

Sat, 13 May 202304:15 AM IST

ಕರ್ನಾಟಕ ಚುನಾವಣೆ: ಮತ ಎಣಿಕೆಯಲ್ಲಿ ಕೋಲಾರದ ಈಗಿನ ಚಿತ್ರಣ

ಕೋಲಾರ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಮಾಲೂರು: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಬಂಗಾರಪೇಟೆ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಕೆಜಿಎಫ್: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಶ್ರೀನಿವಾಸಪುರ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಮುಳಬಾಗಿಲು: ಜೆಡಿಎಸ್ ಅಭ್ಯರ್ಥಿ ಮುನ್ನಡೆ

Sat, 13 May 202304:15 AM IST

ಸಿಂದಗಿಯಲ್ಲಿ ಕಾಂಗ್ರೆಸ್‌ ಮುನ್ನಡೆ

ಕಾಂಗ್ರೆಸ್: 16899

ಬಿಜೆಪಿ: 16537

ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 

Sat, 13 May 202304:15 AM IST

ಮುಳಬಾಗಿಲಿನಲ್ಲಿ‌ ಜೆಡಿಎಸ್ ಮುನ್ನಡೆ

ಜೆಡಿಎಸ್ ಅಭ್ಯರ್ಥಿ ಸಂವೃದ್ಧಿ ಮಂಜುನಾಥ್ ಸಾಧಿಸಿದ್ದಾರೆ. 

ಜೆಡಿಎಸ್ : 1527

ಕಾಂಗ್ರೆಸ್‌: 1233

ಬಿಜೆಪಿ: 58

294 ಮತಗಳ ಮುನ್ನಡೆ ಸಾಧಿಸಿರುವ ಜೆಡಿಎಸ್,

Sat, 13 May 202304:15 AM IST

ಶಿಕಾರಿಪುರದಲ್ಲಿ ಬಿವೈ ವಿಜಯೇಂದ್ರ ಗೆ ಆರಂಭಿಕ ಹಿನ್ನಡೆ

ಶಿಕಾರಿಪುರದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಆರಂಭಿಕ ಹಂತದಲ್ಲಿ ಹಿನ್ನೆಡೆಯಾಗಿದೆ.

Sat, 13 May 202304:15 AM IST

ಬಳ್ಳಾರಿಯ ಈಗಿನ ಚಿತ್ರಣ

 

ಸಿರಗುಪ್ಪ

ಕಾಂಗ್ರೆಸ್- B.M. ನಾಗರಾಜ್- 4455

ಬಿಜೆಪಿ-ಸೋಮಲಿಂಗಪ್ಪ- 3370

KRPP- ದರಪ್ಪ ನಾಯಕ್- 863

ಕಾಂಗ್ರೆಸ್--1085 ಮುನ್ನಡೆ

 

ಸಂಡೂರು

ಕಾಂಗ್ರೆಸ್- ಇ.ತುಕಾರಾಂ- 5964

ಬಿಜೆಪಿ-ಶಿಲ್ಪ ರಾಘವೇಂದ್ರ-2038

KRPP- ,kS ದಿವಾಕರ್- 2765

ಕಾಂಗ್ರೆಸ್--3199 ಮುನ್ನಡೆ

 

ಬಳ್ಳಾರಿ ಗ್ರಾಮೀಣ

ಕಾಂಗ್ರೆಸ್ ನಾಗೇಂದ್ರ - 10009

ಬಿಜೆಪಿ-ಶ್ರೀರಾಮುಲು-8661

ಕಾಂಗ್ರೆಸ್- 1348 ಮುನ್ನಡೆ

Sat, 13 May 202304:15 AM IST

ಬೆಂಗಳೂರು ಗ್ರಾಮಾಂತರ ಮತ ಎಣಿಕೆ ಫಲಿತಾಂಶ

ದೊಡ್ಡಬಳ್ಳಾಪುರ- ಬಿಜೆಪಿ ಮುನ್ನಡೆ - ಧೀರಜ್ ಮುನಿರಾಜು

ದೇವನಹಳ್ಳಿ- ಕಾಂಗ್ರೆಸ್ ಮುನ್ನಡೆ- ಕೆ.ಹೆಚ್.ಮುನಿಯಪ್ಪ

ನೆಲಮಂಗಲ- ಕಾಂಗ್ರೆಸ್ ಮುನ್ನಡೆ - ಎನ್. ಶ್ರೀನಿವಾಸ್

ಹೊಸಕೋಟೆ- ಕಾಂಗ್ರೆಸ್ ಮುನ್ನಡೆ - ಶರತ್ ಬಚ್ಚೇಗೌಡ

Sat, 13 May 202304:15 AM IST

ಹುಬ್ಬಳ್ಳಿ ಧಾರವಾಡ ಪೂರ್ವ (ಮೀಸಲು ಕ್ಷೇತ್ರ ); ಕಾಂಗ್ರೆಸ್‌ ಮುನ್ನಡೆ

ಹುಬ್ಬಳ್ಳಿ ಧಾರವಾಡ ಪೂರ್ವ (ಮೀಸಲು ಕ್ಷೇತ್ರ ); ಕಾಂಗ್ರೆಸ್‌ ಮುನ್ನಡೆ.

ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ 4 ಸಾವಿರ ಮತಗಳ ಮುನ್ನಡೆ ಪಡೆದಿದ್ದಾರೆ. 

Sat, 13 May 202304:15 AM IST

ರಾಯಚೂರು ಜಿಲ್ಲೆಯ ಫಲಿತಾಂಶ

ರಾಯಚೂರು- ಬಿಜೆಪಿ ಮುನ್ನಡೆ ರಾಯಚೂರು ಗ್ರಾಮೀಣ- ಕಾಂಗ್ರೆಸ್ ಮುನ್ನಡೆ ಮಾನ್ವಿ- ಬಿಜೆಪಿ ಮುನ್ನಡೆ ಸಿಂಧನೂರು- ಕಾಂಗ್ರೆಸ್ ಮುನ್ನಡೆ ದೇವದುರ್ಗ- ಜೆಡಿಎಸ್ ಮುನ್ನಡೆ ಲಿಂಗಸುಗೂರು- ಕಾಂಗ್ರೆಸ್ ಮುನ್ನಡೆ ಮಸ್ಕಿ- ಬಿಜೆಪಿ ಮುನ್ನಡೆ ಹಿರೇಕೆರೂರು ಕ್ಷೇತ್ರ: ಯು.ಬಿ.ಬಣಕಾರಗೆ ಮುನ್ನಡೆ

Sat, 13 May 202304:15 AM IST

ಯಾದಗಿರಿ ಮತ ಎಣಿಕೆಯ ಈಗಿನ ಫಲಿತಾಂಶ

  • ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
  • ಶಹಪುರ- ಬಿಜೆಪಿ ಅಭ್ಯರ್ಥಿ ಮುನ್ನಡೆ
  • ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ 1413 ಮತಗಳ ಮುನ್ನಡೆ
  • ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮುನ್ನಡೆ
  • 747 ಮತಗಳ ಮುನ್ನಡೆ
  • ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
  • ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ 572 ಮತಗಳ ಮುನ್ನಡೆ
  • ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
  • ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ 300 ಮತಗಳಿಂದ ಮುನ್ನಡೆ

Sat, 13 May 202304:09 AM IST

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಈಗಿನ ಫಲಿತಾಂಶ

ಹೊಳಲ್ಕೆರೆ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಆಂಜನೇಯ 434 ಮತಗಳ ಮುನ್ನಡೆ.

ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪಗೆ ಹಿನ್ನೆಡೆ.

Sat, 13 May 202304:09 AM IST

ದಕ್ಷಿಣ ಕನ್ನಡ : ಮೂಡಬಿದ್ರೆ ಮೊದಲ ಸುತ್ತು ಮುಕ್ತಾಯ, ಉಮಾನಾಥ್ ಕೋಟ್ಯಾನ್‌ಗೆ ಮುನ್ನಡೆ

 

ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್-5,595

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೂ-3204

ಉಮಾನಾಥ್ ಕೋಟ್ಯಾನ್ 2,391 ಮತಗಳ ಮುನ್ನಡೆ

Sat, 13 May 202304:09 AM IST

ಮುಧೋಳ ಎರಡನೇ ಸುತ್ತಿನ ಫಲಿತಾಂಶ

 

ಆರ್.ಬಿ.ತಿಮ್ಮಾಪುರ ಕಾಂಗ್ರೆಸ್ -10807

ಗೋವಿಂದ ಕಾರಜೋಳ ಬಿಜೆಪಿ:8934

ಕಾಂಗ್ರೆಸ್:1873 ಮುನ್ನಡೆ

Sat, 13 May 202304:09 AM IST

ದಕ್ಷಿಣ ಕನ್ನಡದಲ್ಲಿ ಅಶೋಕ್ ಕುಮಾರ್ ರೈ ಮುನ್ನಡೆ

 

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-8666

ಅರುಣ್ ಪುತ್ತಿಲ-ಪಕ್ಷೇತರ-6495

ಆಶಾ ತಿಮ್ಮಪ್ಪ ಗೌಡ-ಬಿಜೆಪಿ-4513

ಅಶೋಕ್ ಕುಮಾರ್ ರೈ ಲೀಡ್- 2171

Sat, 13 May 202304:09 AM IST

ಬಸವನಬಾಗೇವಾಡಿಯಿಂದ ಸಿಂದಗಿ ತನಕ ಯಾರು ಮುನ್ನಡೆ?

ಬಸವನಬಾಗೇವಾಡಿ -ಜೆಡಿಎಸ್

ಮುದ್ದೇಬಿಹಾಳ- ಕಾಂಗ್ರೆಸ್

ಇಂಡಿ- ಕಾಂಗ್ರೆಸ್

ದೇವರಹಿಪ್ಪರಗಿ- ಕಾಂಗ್ರೆಸ್

ಬಬಲೇಶ್ವರ- ಕಾಂಗ್ರೆಸ್

ವಿಜಯಪುರ ನಗರ- ಬಿಜೆಪಿ

ನಾಗಠಾಣ- ಕಾಂಗ್ರೆಸ್

ಸಿಂದಗಿ- ಕಾಂಗ್ರೆಸ್ ಮುನ್ನಡೆ

Sat, 13 May 202304:09 AM IST

ವಿಜಯನಗರದ ಮತ ಎಣಿಕೆ ಚಿತ್ರಣ

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಜೆಡಿಎಸ್ ಅಭ್ಯರ್ಥಿ ನೇಮಿರಾಜನಾಯಕ್ ಮುನ್ನಡೆ ಸಾಧಿಸಿದ್ದಾರೆ. 1810 ಮತಗಳ ಅಂತರ ಮುನ್ನಡೆ ಸಾಧಿಸಿದ ನೇಮಿರಾಜನಾಯಕ್. 

ನೇಮಿರಾಜನಾಯಕ್ 9514 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಭೀಮಾನಾಯಕ್ ಗೆ 7704 ಮತಗಳನ್ನು ಪಡೆದಿದ್ದಾರೆ. 

Sat, 13 May 202304:03 AM IST

ಬೆಳಿಗ್ಗೆ 9:30ರ ಫಲಿತಾಂಶ ಚಿತ್ರಣ

Sat, 13 May 202304:03 AM IST

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ?

ಮದ್ದೂರಿನಲ್ಲಿ ಜೆಡಿಎಸ್‌ ಮುನ್ನಡೆ

ಕಾಂಗ್ರೆಸ್ (ಉದಯ್) - 3,431

ಜೆಡಿಎಸ್ (ಡಿ.ಸಿ.ತಮ್ಮಣ್ಣ) - 3,602

ಬಿಜೆಪಿ (ಎಸ್.ಪಿ.ಸ್ವಾಮಿ) - 884

ಮುನ್ನಡೆ ಜೆಡಿಎಸ್‌- 171 ಮತಗಳ ಅಂತರ

 

ಕೆ.ಆರ್.ಪೇಟೆ ಕ್ಷೇತ್ರ

ಕಾಂಗ್ರೆಸ್ (ದೇವರಾಜು) - 3168

ಜೆಡಿಎಸ್ (ಹೆಚ್.ಟಿ.ಮಂಜು) - 4955

ಬಿಜೆಪಿ (ನಾರಾಯಣಗೌಡ) - 1633

ಮುನ್ನಡೆ ಜೆಡಿಎಸ್‌ 1787

 

ನಾಗಮಂಗಲ ಕ್ಷೇತ್ರ ಮೊದಲ ಸುತ್ತು

ಕಾಂಗ್ರೆಸ್ (ಎನ್.ಚಲುವರಾಯಸ್ವಾಮಿ) - 4,186

ಜೆಡಿಎಸ್‌ (ಸುರೇಶ್‌ಗೌಡ) - 4,460

ಬಿಜೆಪಿ (ಸುಧಾ ಶಿವರಾಮೇಗೌಡ) - 550

ಪಕ್ಷೇತರ (ಫೈಟರ್ ರವಿ) - 164

ಮುನ್ನಡೆ ಜೆಡಿಎಸ್‌-274

Sat, 13 May 202304:03 AM IST

ದಕ್ಷಿಣ ಕನ್ನಡ ಜಿಲ್ಲೆ: ಬಿಜೆಪಿ 5, ಕಾಂಗ್ರೆಸ್ 3 ಮುನ್ನಡೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 5, ಕಾಂಗ್ರೆಸ್ 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಒಟ್ಟು 8 ಸ್ಥಾನಗಳು ಇಲ್ಲಿವೆ. ಕಳೆದ ಬಾರಿ ಬಿಜೆಪಿ 7 ಕಾಂಗ್ರೆಸ್ 1 ಸ್ಥಾನ ಗಳಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಸುಳ್ಯ, ಮಂಗಳೂರು (ಉಳ್ಳಾಲ) ಮತ್ತು ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.

Sat, 13 May 202304:03 AM IST

ನಾಗಠಾಣದಲ್ಲಿ ಕಾಂಗ್ರೆಸ್‌ ಮುನ್ನಡೆ

ನಾಗಠಾಣ

ಜೆಡಿಎಸ್ 2190

ಕಾಂಗ್ರೆಸ್-4164

ಬಿಜೆಪಿ-1767

ಕಾಂಗ್ರೆಸ್ ಮುನ್ನಡೆ

Sat, 13 May 202303:55 AM IST

ವಿಜಯಪುರ ಟ್ರೆಂಡ್‌ ಹೀಗಿದೆ

ವಿಜಯಪುರ ನಗರ

ಯತ್ನಾಳ್- 8367

ಮುಶ್ರೀಫ್ -1231

ಬಬಲೇಶ್ವರ

ಕಾಂಗ್ರೆಸ್-10443

ಬಿಜೆಪಿ-9207

ಬಾಗೇವಾಡಿ

ಕಾಂಗ್ರೆಸ್- 4623

ಜೆಡಿಎಸ್‌-4052

ಬೆಳ್ಳುಬ್ಬಿ ಮೂರನೇ ಸ್ಥಾನ

ದೇವರಹಿಪ್ಪರಗಿ

ಕಾಂಗ್ರೆಸ್ -3306

ಜೆಡಿಎಸ್ -2101

ಬಿಜೆಪಿ- ತೃತೀಯ

ಮುದ್ದೇಬಿಹಾಳ

ಬಿಜೆಪಿ-7020

ಕಾಂಗ್ರೆಸ್-3607

ಸಿಂದಗಿ

ಕಾಂಗ್ರೆಸ್-12654

ಬಿಜೆಪಿ-12188

Sat, 13 May 202303:52 AM IST

ಮತಎಣಿಕೆ ಕೇಂದ್ರದಲ್ಲಿ ಎಡವಟ್ಟು: ಕೀ ಕಾಣೆ, ಬೀಗ ಒಡೆದು ಸ್ಟ್ರಾಂಗ್ ರೂಮ್ ಪ್ರವೇಶಿಸಿದ ಅಧಿಕಾರಿಗಳು

ಮಂಗಳೂರು ಉತ್ತರದ ಕ್ಷೇತ್ರದ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಂ ಕೀ ಕಾಣೆಯಾಗಿದ್ದು, ಸಾಕಷ್ಟು ಆತಂಕಕ್ಕೂ ಕಾರಣವಾಗಿತ್ತು. ಮಂಗಳೂರು ಉತ್ತರದ ಕ್ಶೇತ್ರದ ಮತಯಂತ್ರಗಳಿದ್ದ ಸ್ಟ್ರಾಂಗ್ ರೂಮ್ ಕೀ ಕಾಣಿಸದಾದಾಗ ಬಳಿಕ ಕಾರ್ಪೆಂಟರ್ ಅನ್ನು ತುರ್ತಾಗಿ ಸ್ಥಳಕ್ಕೆ ಕರೆಸಿಕೊಂಡು ಸ್ಟ್ರಾಂಗ್ ರೂಮ್ ಬಾಗಿಲನ್ನು ಒಡೆದು ತೆಗೆಯಲಾಗಿದೆ. ಬಳಿಕ ಸ್ಟ್ರಾಂಗ್ ರೂಮ್‌ಗೆ ಮತ ಎಣಿಕೆ ಸಿಬ್ಬಂದಿ ಪ್ರವೇಶಿಸಿದ್ದಾರೆ.

Sat, 13 May 202303:51 AM IST

ಪುತ್ತೂರಿನಲ್ಲಿ ಮೂರನೇ ಸ್ಥಾನದಲ್ಲಿ ಬಿಜೆಪಿ

ಮೊದಲ ಸುತ್ತಿನಲ್ಲಿ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ 1200 ಮತಗಳ ಮುನ್ನಡೆ

ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ

ಮೂರನೇ ಸ್ಥಾನಕ್ಕೆ ಕುಸಿದ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ

Sat, 13 May 202303:51 AM IST

ದಕ್ಷಿಣ ಕನ್ನಡ ಟ್ರೆಂಡ್‌ ಹೀಗಿದೆ

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ 3261 ಮತಗಳ ಮುನ್ನಡೆ

ಮಂಗಳೂರು ಉತ್ತರ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿಗೆ 1256 ಮತಗಳ ಮುನ್ನಡೆ

ಎರಡನೇ ಸುತ್ತಿನಲ್ಲಿ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ 501 ಮತಗಳ ಮುನ್ನಡೆ

Sat, 13 May 202303:50 AM IST

ಚಾಮರಾಜನಗರ, ರಾಮನಗರ ಟ್ರೆಂಟ್‌ ಹೀಗಿದೆ

ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣಗೆ 4000 ಮತಗಳ ಅಂತರದಲ್ಲಿ ಹಿನ್ನಡೆ. 

ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ 802 ಮತಗಳ ಅಂತರದಲ್ಲಿ ಮುನ್ನಡೆ

Sat, 13 May 202303:49 AM IST

ಮಾಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಮುನ್ನಡೆ

ಮಾಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂಜೇಗೌಡ ಮುನ್ನಡೆ

ಬಿಜೆಪಿ - 2969

ಜೆಡಿಎಸ್ - 1011

ಕಾಂಗ್ರೆಸ್ - 3665

ಹೂಡಿ ವಿಜಯ್ ಕುಮಾರ್ - 3323 (ಪಕ್ಷೇತರ)

Sat, 13 May 202303:48 AM IST

ನಿಖಿಲ್ ಕುಮಾರಸ್ವಾಮಿ ಮುನ್ನಡೆ

ರಾಮನಗರ ದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ

Sat, 13 May 202303:48 AM IST

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಭಾರಿ ಮುನ್ನಡೆ

ಕಾಂಗ್ರೆಸ್‌ 105 ಕ್ಷೇತ್ರ, ಬಿಜೆಪಿ 67 ಕ್ಷೇತ್ರ ಹಾಗೂ ಜೆಡಿಎಸ್‌ 19 ಕ್ಷೇತ್ರಗಳಲ್ಲಿ ಮುನ್ನಡೆ

ಎರಡನೇ ಸುತ್ತಿನಲ್ಲೂ ಬಿಜೆಪಿಯ ಶ್ರೀರಾಮುಲುಗೆ ಹಿನ್ನಡೆ.

ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆಗೆ ಹಿನ್ನಡೆ.

Sat, 13 May 202303:47 AM IST

ಆರಗ ಜ್ಞಾನೇಂದ್ರ ಮುನ್ನಡೆ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಮುನ್ನಡೆ

184 ಮತಗಳ ಮುನ್ನಡೆ

ಬಿಜೆಪಿ ಆರಗ ಜ್ಞಾನೇಂದ್ರಗೆ 4387

ಕಾಂಗ್ರೆಸ್ ಕಿಮ್ಮನೆ ರತ್ನಾಕರ್ 4203

Sat, 13 May 202303:46 AM IST

ಬಬಲೇಶ್ವರದಲ್ಲಿ ಕಾಂಗ್ರೆಸ್‌ ಮುನ್ನಡೆ

ಬಬಲೇಶ್ವರ ಎರಡನೇ ಸುತ್ತು ಮುಕ್ತಾಯ

ಕಾಂಗ್ರೆಸ್-10443

ಬಿಜೆಪಿ-9207

ಮುನ್ನಡೆ - ಕಾಂಗ್ರೆಸ್-1236

Sat, 13 May 202303:46 AM IST

ಬಂಗಾರಪೇಟೆ: ಜೆಡಿಎಸ್ ಅಭ್ಯರ್ಥಿ ಮುನ್ನಡೆ

ಬಂಗಾರಪೇಟೆಯಲ್ಲಿ ಅಂಚೆ ಮತ ಎಣಿಕೆ ಮುಕ್ತಾಯ

ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಜೆಡಿಎಸ್

ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ 874 ಮತಗಳು

ಕಾಂಗ್ರೆಸ್ ಅಭ್ಯರ್ಥಿ ಎಸ್ಎನ್ ನಾರಾಯಣಸ್ವಾಮಿಗೆ 841 ಮತಗಳು

33 ಮತಗಳ ಅಂತರದಿಂದ ಮುನ್ನಡೆ ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ

Sat, 13 May 202303:45 AM IST

ಕೆಜಿಎಫ್ ಕ್ಷೇತ್ರ

ಒಟ್ಟು 8280 ಮತಗಳ ಎಣಿಕೆ

ಬಿಜೆಪಿ - 3257

ಕಾಂಗ್ರೆಸ್‌ಗೆ - 4362 ಮತ

ಜೆಡಿಎಸ್ - 248 ಮತ

ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಶಶಿಧರ್

Sat, 13 May 202303:43 AM IST

ವಿನಯ ಕುಲಕರ್ಣಿಗೆ ಮುನ್ನಡೆ

ಧಾರವಾಡ ಗ್ರಾಮೀಣ ಎರಡನೇ ಸುತ್ತು ಮುಕ್ತಾಯ

ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮುನ್ನಡೆ

ಎರಡನೇ ಸುತ್ತಿನ ಕೊನೆಗೆ 10,977 ಮತ ವಿನಯ ಕುಲಕರ್ಣಿಗೆ

ಬಿಜೆಪಿಯ ಅಮೃತ ದೇಸಾಯಿಗೆ 8242 ಮತ

2735 ಮತಗಳ ಅಂತರದಲ್ಲಿ ವಿನಯ ಕುಲಕರ್ಣಿಗೆ ಮುನ್ನಡೆ

Sat, 13 May 202303:42 AM IST

ಪುತ್ತೂರು ಮತ್ತು ಮಂಗಳೂರಿಲ್ಲಿ ಕಾಂಗ್ರೆಸ್ ಮುನ್ನಡೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಮಂಗಳೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. 

ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್ ಪೂಂಜ ಮತ್ತು ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಮುನ್ನಡೆಯಲ್ಲಿದ್ದಾರೆ.

Sat, 13 May 202303:41 AM IST

ಕಾಂಗ್ರೆಸ್‌ಗೆ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ

ಕಾಂಗ್ರೆಸ್‌ ರಾಜ್ಯದ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿಗೆ ಸುಮಾರು 60 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

Sat, 13 May 202303:40 AM IST

ಜಗದೀಶ್‌ ಶೆಟ್ಟರ್‌ಗೆ ಹಿನ್ನೆಡೆ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ಗೆ ಹಿನ್ನಡೆ

Sat, 13 May 202303:39 AM IST

ಹರೀಶ್‌ ಪೂಂಜಾ ಮುನ್ನಡೆ

ಬೆಳ್ತಂಗಡಿಯಲ್ಲಿ ಹರೀಶ್‌ ಪೂಂಜಾ ಮುನ್ನಡೆ

ಕಾಂಗ್ರೆಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಂಗೆ ಹಿನ್ನಡೆ

Sat, 13 May 202303:38 AM IST

ಲಕ್ಷಣ ಸವದಿಗೆ ಮುನ್ನಡೆ

ಅಥಣಿಯಲ್ಲಿ ಕಾಂಗ್ರೆಸ್‌ನ ಲಕ್ಷಣ ಸವದಿಗೆ ಮುನ್ನಡೆ 

2942 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿರುವ ಸವದಿ

Sat, 13 May 202303:36 AM IST

ಕುಮಾರಸ್ವಾಮಿಗೆ ಹಿನ್ನಡೆ

ಚನ್ನಪಟ್ಟಣದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಅಂತ್ಯ.

ಬಿಜೆಪಿಯ ಸಿಪಿ ಯೋಗೇಶ್ವರ್‌ ಮುನ್ನಡೆ

ಜೆಡಿಎಸ್‌ ಮುಖಂಡ ಕುಮಾರಸ್ವಾಮಿಗೆ ಹಿನ್ನಡೆ. 

ಮುಧೋಳದಲ್ಲಿ ಬಿಜೆಪಿ ಗೋವಿಂದ ಕಾರಜೋಳ ಮುನ್ನಡೆ.

Sat, 13 May 202303:35 AM IST

ದೇವರಹಿಪ್ಪರಗಿಯಲ್ಲಿ ಕಾಂಗ್ರೆಸ್‌ಗೆ ಆರಂಭಿಕ ಮುನ್ನಡೆ

ಬಿಜೆಪಿ-2038 ಮತ

ಜೆಡಿಎಸ್-2101

ಕಾಂಗ್ರೆಸ್- 3306

ಕಾಂಗ್ರೆಸ್‌ಗೆ ಮುನ್ನಡೆ

Sat, 13 May 202303:34 AM IST

ಬಬಲೇಶ್ವರ ಕ್ಷೇತ್ರದಲ್ಲಿ ಹೀಗಿ ಟ್ರೆಂಡ್

ಕಾಂಗ್ರೆಸ್-5234 ಮತ

ಬಿಜೆಪಿ-4670

ಜೆಡಿಎಸ್- 53

ಕಾಂಗ್ರೆಸ್ ಮುನ್ನಡೆ

Sat, 13 May 202303:34 AM IST

ದಕ್ಷಿಣ ಕನ್ನಡದಲ್ಲಿ ಆರಂಭಿಕ ಟ್ರೆಂಡ್

ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯಗೆ 400 ಮತಗಳ ಮುನ್ನಡೆ

ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾಗೆ 1300 ಮತಗಳ ಮುನ್ನಡೆ

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಗೆ 1500 ಮತಗಳ ಮುನ್ನಡೆ

Sat, 13 May 202303:33 AM IST

ಬಸನಗೌಡ ಪಾಟೀಲ ಯತ್ನಾಳ ಮುನ್ನಡೆ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಸನಗೌಡ ಪಾಟೀಲ ಯತ್ನಾಳ 2019 ಮತಗಳು 

ಕಾಂಗ್ರೆಸ್‌ನ ಅಬ್ದುಲ್ ಹಮೀದ್ ‌ಮುಶ್ರೀಫ್‌ಗೆ 276 ಮತ‌ ಪಡೆದಿದ್ದಾರೆ

Sat, 13 May 202303:32 AM IST

ಉಡುಪಿಯಲ್ಲಿ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಬಂದ ಏಜಂಟ್

ಉಡುಪಿಯ ಸಂತ ಸಿಸಿಲಿಯಾ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕಾ ಕೇಂದ್ರಕ್ಕೆ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಏಜೆಂಟ್ ವಿಚಿತ್ರವಾಗಿ ನಡೆಯುತ್ತಿದ್ದರು. ಪರಿಶೀಲಿಸಿದಾಗ, ಕಾಲಿಗೆ ಮೊಬೈಲ್ ಕಟ್ಟಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.

ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧ. ಹೀಗಾಗಿ ಏಜಂಟ್‌ನನ್ನು ದ್ವಾರದಲ್ಲೇ ತಡೆದು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ.

ಬಲಗಾಲಿನಲ್ಲಿ ಮೊಬೈಲ್ ಕಟ್ಟಿಕೊಂಡು ಕೇಸರಿ ಶಾಲನ್ನು ಧರಿಸಿಕೊಂಡು ಪೊಲೀಸರ ಕಣ್ಣು ತಪ್ಪಿಸಲು ಯತ್ನಿಸಿದ್ದ ಬೈಂದೂರು ಬಿಜೆಪಿ ಅಭ್ಯರ್ಥಿಯ ಏಜೆಂಟ್ ಸದಾಶಿವ ಕಂಚಿಗೋಡು ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ದ್ವಾರದಲ್ಲೇ ತಡೆಹಿಡಿದು ವಾಪಾಸು ಕಳುಹಿಸಿದರು.

Sat, 13 May 202303:32 AM IST

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಮುನ್ನಡೆ

3670 ಮತಗಳಿಂದ ಮುನ್ನಡೆ

Sat, 13 May 202303:32 AM IST

ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ

ಎರಡನೇ ಸುತ್ತಿನಲ್ಲೂ ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ

Sat, 13 May 202303:32 AM IST

ವಿರಾಜಪೇಟೆ ಆರಂಭಿಕ ಟ್ರೆಂಡ್

ಮೊದಲ ಸುತ್ತಿನ ಮತೆಣಿಕೆ ಬಳಿಕ ಬಿಜೆಪಿ ಮುನ್ನಡೆ

ಬಿಜೆಪಿಯ ಕೆ ಜಿ ಬೋಪಯ್ಯಗೆ 4473 ಮತ

ಕಾಂಗ್ರೆಸ್‌ನ  ಎ ಎಸ್ ಪೊನ್ನಣ್ಣಗೆ 3415

1058 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ

Sat, 13 May 202303:32 AM IST

ಮುದ್ದೇಬಿಹಾಳ ಆರಂಭಿಕ ಟ್ರೆಂಡ್

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರ‌

ಆರಂಭದಲ್ಲಿ ಕಾಂಗ್ರೆಸ್‌ ಮುನ್ನಡೆ

ಬಿಜೆಪಿಗೆ 3510 ಮತಗಳು

ಕಾಂಗ್ರೆಸ್‌ಗೆ 3507

Sat, 13 May 202303:32 AM IST

ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್‌ ಮುನ್ನಡೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಕೈಗೆ ಮುನ್ನಡೆ

ಬಿಜೆಪಿ-1337

ಕಾಂಗ್ರೆಸ್-2436

ಜೆಡಿಎಸ್-2197

ಕಾಂಗ್ರೆಸ್‌ಗೆ 239 ಮತಗಳ ಮುನ್ನಡೆ

Sat, 13 May 202303:32 AM IST

ಜಗದೀಶ್ ಶೆಟ್ಟರ್ ಹಿನ್ನಡೆ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್ ಹಿನ್ನಡೆ ಅನುಭವಿಸಿದ್ದಾರೆ. 

ಹಳಿಯಾಳದಲ್ಲಿ ಆರ್‌.ವಿ. ದೆಶಪಾಂಡೆ ಹಿನ್ನಡ.

ಯಶವಂತಪುರದಲ್ಲಿ ಎಸ್‌.ಟಿ ಸೋಮಶೇಖರ್ ಹಿನ್ನಡೆ.

Sat, 13 May 202303:23 AM IST

ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ

ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ಮತಕ್ಷೇತ್ರ

ಬಿಜೆಪಿ-758

ಕಾಂಗ್ರೆಸ್-1114

ಜೆಡಿಎಸ್-1033

ಮುನ್ನಡೆ-ಕಾಂಗ್ರೆಸ್

Sat, 13 May 202303:22 AM IST

ದೆಹಲಿಯಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ

ಕರ್ನಾಟಕದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನವದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.

Sat, 13 May 202303:21 AM IST

ಕಲಬುರಗಿ:  ತೆರೆದ ಅಫಜಲಪೂರ ಕ್ಷೇತ್ರದ ಸ್ಟ್ರಾಂಗ್ ರೂಂ, ಭರದಿಂದ ಸಾಗುತ್ತಿದೆ ಮತ ಎಣಿಕೆ

ಕಲಬುರಗಿ: ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್, ಚುನಾವಣಾಧಿಕಾರಿ ಮಹೆಮೂದ ಹಾಗೂ ವೀಕ್ಷಕರ ಮತ್ತು ಪಕ್ಷದ ಚುನಾವಣಾ ಏಜೆಂಟ್ ಸಮ್ಮುಖದಲ್ಲಿ ಅಫಜಲಪೂರ ಕ್ಷೇತ್ರದ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಈಗಾಗಲೇ ಇಲ್ಲಿ ಮತ ಎಣಿಕೆ ನಡೆಯುತ್ತಿದೆ. 

Sat, 13 May 202303:21 AM IST

ಹೊಳೆನರಸೀಪುರ: ಜೆಡಿಎಸ್ ನ ಹೆಚ್ ಡಿ ರೇವಣ್ಣ 1507 ಮತಗಳ ಮುನ್ನಡೆ

ಹೊಳೆನರಸೀಪುರದಲ್ಲಿ ಹೆಚ್ ಡಿ ರೇವಣ್ಣ 1507 ಮತಗಳ ಮುನ್ನಡೆ ಪಡೆದಿದ್ದಾರೆ.

ಜೆಡಿಎಸ್- 3991

ಕಾಂಗ್ರೆಸ್ 2484

Sat, 13 May 202303:21 AM IST

ನನ್ನ ತಂದೆ ಸಿಎಂ ಆಗಬೇಕು :ಯತೀಂದ್ರ ಸಿದ್ದರಾಮಯ್ಯ

ಬಿಜೆಪಿಯನ್ನು ಆಡಳಿತದಿಂದ ಹೊರಗಿಡಲು ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಕರ್ನಾಟಕದ ಹಿತದೃಷ್ಟಿಯಿಂದ ನನ್ನ ತಂದೆ ಸಿಎಂ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Sat, 13 May 202303:21 AM IST

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ

ಬಿಜೆಪಿ: 4575

ಕಾಂಗ್ರೆಸ್‌: 2833

ಜೆಡಿಎಸ್‌: 38

ಬಿಜೆಪಿಗೆ 1742 ಮತಗಳ ಮುನ್ನಡೆ

Sat, 13 May 202303:19 AM IST

ಇವಿಎಂ ಮತ ಎಣಿಕೆ ನಡೆಯುವ ಬಗೆ ಹೇಗೆ? ಮತ ಎಣಿಕೆ ಕೇಂದ್ರ ಹೇಗಿರುತ್ತದೆ?

Sat, 13 May 202303:15 AM IST

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಮುನ್ನಡೆ

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಮುನ್ನಡೆ ಪಡೆದಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಜಡಿಎಸ್‌ನ ಎಚ್.ಡಿ. ರೇವಣ್ಣಗೆ 50 ಮತಗಳ ಹಿನ್ನಡೆ ಪಡೆದಿದ್ದಾರೆ.

Sat, 13 May 202303:15 AM IST

ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿಗೆ ಮುನ್ನಡೆ

ಕಲಘಟಗಿ ಕ್ಷೇತ್ರ: ಅಂಚೆ ಮತದಾನದಲ್ಲಿ ಮಾಜಿ ಸಚಿವ ಸಂತೋಷ್‌ ಲಾಡ್‌ಗೆ ಹಿನ್ನಡೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿಗೆ ಮುನ್ನಡೆ.

Sat, 13 May 202303:15 AM IST

ಗೋಕಾಕ್‌ನಲ್ಲಿ ರಮೇಶ್‌ ಜಾರಕಿಹೊಳಿಗೆ ಮುನ್ನಡೆ

ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ, ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ, ಹೊಳೆನರಸೀಪುರದಲ್ಲಿ ರೇವಣ್ಣ ಹಿನ್ನಡೆ ಪಡೆದಿದ್ದಾರೆ. 

Sat, 13 May 202303:05 AM IST

ಸದ್ಯಕ್ಕೆ ಯಾರು ಮುನ್ನಡೆ, ಯಾರಿಗೆ ಹಿನ್ನಡೆ?

  • ದಕ್ಷಿಣ ಕನ್ನಡ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
  • ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಮುನ್ನಡೆ
  • ವರುಣಾದಲ್ಲಿ ಸಿದ್ಧರಾಮಯ್ಯ ಮುನ್ನೆಡೆ
  • ಬಾಗಲಕೋಟ ಜಿಲ್ಲೆಯಲ್ಲಿ ಬಿಜೆಪಿ ಮೂರು, ಒಂದು ಕಾಂಗ್ರೆಸ್ ಮುನ್ನಡೆ
  • ತನ್ನ ಮತವನ್ನೇ ಹಾಕದ ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಮುನ್ನಡೆ.

Sat, 13 May 202303:04 AM IST

ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಮುನ್ನಡೆ

ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಮುನ್ನಡೆ ಪಡೆದಿದ್ದಾರೆ. ಆರಂಭಿಕ ಹಂತದಲ್ಲಿ ಇವರು ಮುನ್ನಡೆ ಪಡೆದಿದ್ದಾರೆ. 

Sat, 13 May 202303:04 AM IST

ಹಾಸನ: ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣ

ಜಿದ್ದಾಜಿದ್ದಿನ ಹಾಸನ ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಮೊದಲ ಸುತ್ತಿನಲ್ಲಿ ಬಿಜೆಪಿ 3505. ಜೆಡಿಎಸ್ 3429 ಮತ ಪಡೆದಿವೆ. ಬಿಜೆಪಿಗೆ 76 ಮತಗಳ ಮುನ್ನಡೆ ದೊರಕಿದೆ. ಮೊದಲ‌ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಮುನ್ನಡೆ ಪಡೆದಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

Sat, 13 May 202303:04 AM IST

ಗಾಯತ್ರಿ ದೇಗುಲಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ HSR ಬಡಾವಣೆಯ ಶ್ರೀ ಬಸವೇಶ್ವರ ಗಾಯತ್ರಿ ದೇಗುಲಕ್ಕೆ ಭೇಟಿ ಪೂಜೆ ಸಲ್ಲಿಸಿದರು.

Sat, 13 May 202303:04 AM IST

ಮಂಗಳೂರು ಎನ್.ಐ.ಟಿ.ಕೆ.ಯಲ್ಲಿ ಅಂಚೆ ಮತ ಎಣಿಕೆ

ಮಂಗಳೂರು ಎನ್.ಐ.ಟಿ.ಕೆ.ಯಲ್ಲಿ ಅಂಚೆ ಮತ ಎಣಿಕೆ ನಡೆಯುತ್ತಿದೆ. 

ಮಂಗಳೂರು ಎನ್.ಐ.ಟಿ.ಕೆ.ಯಲ್ಲಿ ಅಂಚೆ ಮತ ಎಣಿಕೆ
ಮಂಗಳೂರು ಎನ್.ಐ.ಟಿ.ಕೆ.ಯಲ್ಲಿ ಅಂಚೆ ಮತ ಎಣಿಕೆ

Sat, 13 May 202302:48 AM IST

ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಯಲ್ಲಿ ಅವರ ಪುತ್ರ ಭರತ ಬೊಮ್ಮಾಯಿ ಹಾಜರಿದ್ದರು.

Sat, 13 May 202302:49 AM IST

ಅಂಚೆ ಮತಎಣಿಕೆಯಲ್ಲಿ ಆರಂಭಿಕ ಮುನ್ನಡೆ

ಅಂಚೆ ಮತ ಎಣಿಕೆ ಆರಂಭ ತಿಪಟೂರಿನಲ್ಲಿ ಬಿ,ಸಿ. ನಾಗೇಶ್‌ ಮುನ್ನಡೆ, ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಂತನ ಗೌಡ ಮುನ್ನಡೆ, ತೇರದಾಳದಲ್ಲಿ ಬಿಜೆಪಿಯ ಸಿದ್ದು ಸವದಿ ಮುನ್ನೆಡೆ ಪಡೆದಿದ್ದಾರೆ. 
ಅಂಚೆ ಮತ ಎಣಿಕೆ ಮಧುಗಿರಿಯಲ್ಲಿ ಕಾಂಗ್ರೆಸ್‌ ರಾಜಣ್ಣ ಮುನ್ನೆಡೆ, ಗುಬ್ಬಿಯಲ್ಲಿ ಬಿಜೆಪಿ ಅಭ್ಯರ್ಥಿ ದಿಲೀಪ್‌ ಮುನ್ನೆಡೆ, ಶಿರಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಮುನ್ನೆಡೆ, ತಮಕೂರು ನಗರದಲ್ಲಿ ಕಮಲ ಅಭ್ಯರ್ಥಿ ಜ್ಯೋತಿ ಗಣೇಶ್‌ ಮುನ್ನೆಡೆ, ಬೈಂದೂರು ಕೈ ಅಭ್ಯರ್ಥಿ ಗೋಪಾಲ ಪೂಜಾರಿ ಮುನ್ನೆಡೆ ಪಡೆದಿದ್ದಾರೆ.

ಚಾಮರಾಜನಗರದಲ್ಲಿ ಜಮೀರ್‌ ಅಹಮದ್‌ ಮುನ್ನೆಡೆ, ಉಡುಪಿಯಲ್ಲಿ ಕಾಂಗ್ರೆಸ್‌ನ ಪ್ರಸಾದ್‌ ರಾಜ್‌ ಮುನ್ನೆಡೆ, ಬಂಟ್ವಾಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಮಾನಾಥ ರೈ ಮುನ್ನೆಡೆ, ಸುಳ್ಯ, ಮೂಡಬಿದಿರೆಯಲ್ಲಿ ಕಮಲ ಅಭ್ಯರ್ಥಿಗಳಿಗೆ ಮುನ್ನೆಡೆ, ಮಾಲೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್‌ ಮುನ್ನೆಡೆ ಪಡೆದಿದ್ದಾರೆ.

Sat, 13 May 202302:48 AM IST

ಕರ್ನಾಟಕ ಚುನಾವಣಾ ಫಲಿತಾಂಶ: ಮಡಿಕೇರಿಯಲ್ಲಿ ನಿಷೇಧಾಜ್ಞೆ ಜಾರಿ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತ ಎಣಿಕೆ ನಡೆಯುವ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಸೆಕ್ಷನ್ 35, ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) 2005 ರ ಸೆಕ್ಷನ್ 144(ಎ)ರಡಿ ದತ್ತವಾದ ಅಧಿಕಾರದಂತೆ ಮೇ, 12 ರ ಮಧ್ಯರಾತ್ರಿ 12 ಗಂಟೆಯಿಂದ ಮೇ, 13 ರ ಮಧ್ಯರಾತ್ರಿ 12 ಗಂಟೆ ವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ-ಸಮಾರಂಭ, ವಾಹನ ಜಾಥ, ರ್ಯಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೋಟಕ, ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಮತ ಎಣಿಕಾ ಕೇಂದ್ರವಾದ ಮಡಿಕೇರಿಯ ಸೆಂಟ್ ಜೋಸೆಫ್ ಕಾನ್ವೆಂಟ್‍ನ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವು ಸಂಪೂರ್ಣ ನಿರ್ಬಂಧಿತ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ತಂಗುವಿಕೆ ಮತ್ತು ಧ್ವನಿವರ್ಧಕ ಬಳಕೆಯನ್ನು ಸಹ ನಿಷೇಧಿಸಿದೆ.

ಈ ಆದೇಶವು ಸರ್ಕಾರಿ ಕರ್ತವ್ಯದ ನಿಮಿತ್ತ, ಬ್ಯಾಂಕ್. ಎಟಿಎಂ ಭದ್ರತಾ ಸಿಬ್ಬಂದಿಗಳು ಹಾಗೂ ಮತ ಎಣಿಕಾ ಕೇಂದ್ರದ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯುಧ, ಬಂದೂಕುಗಳನ್ನು ಹೊಂದಿರುವುದಕ್ಕೆ ಅಥವಾ ಬಳಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

Sat, 13 May 202302:28 AM IST

ತೆರೆದ ಸ್ಟ್ರಾಂಗ್‌ ರೂಂ ಬಾಗಿಲು, ರಾಜ್ಯದ 36 ಕೇಂದ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭ

ರಾಜ್ಯಾದ್ಯಂತ 36 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸರಿಯಾಗಿ ಎಂಟು ಗಂಟೆಗಳಲ್ಲಿ ಆರಂಭವಾಗಿದೆ. ಮೊದಲು ಅಂಚೆ ಮತ ಎಣಿಕೆ ನಡೆಸಲಾಗುತ್ತದೆ. ಬಳಿಕ ಇವಿಎಂ ಮತ ಎಣಿಕೆ ಮಾಡಲಾಗುತ್ತದೆ. ಎಲ್ಲಾ ಸ್ಟ್ರಾಂಗ್‌ ರೂಂಗಳನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಅಧಿಕಾರಿಗಳ ನೇತೃತ್ವದಲ್ಲಿ ತೆರೆಯಲಾಗಿದೆ. ಸರಿಯಾಗಿ ಎಂಟು ಗಂಟೆಗೆ ಮತ ಎಣಿಕೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Sat, 13 May 202302:28 AM IST

ವಿಜಯಪುರ: ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಜನರಲ್ ಆಬ್ಸರ್ವರ್, ಜಿಲ್ಲಾಧಿಕಾರಿ

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಜನರಲ್ ಆಬ್ಸರ್ವರ್ ಚಂದ್ರಶೇಖರ್ ಸಕ್ಮೋರೆ, ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ್. ಜಿಲ್ಲಾ ಪಂಚಾಯತಿ ಸಿಇಓ ರಾಹುಲ್ ಶಿಂದೆ, ಎಸ್ಪಿ ಹೆಚ್ ಡಿ ಆನಂದ್ ಕುಮಾರ್ ಜತೆಗಿದ್ದರು. ಸೀಲ್ ಹಾಕಲಾಗಿರುವ ಸ್ಟ್ರಾಂಗ್ ರೂಮನ್ನು ಓಪನ್ ಮಾಡುವ ಮೂಲಕ ಮತ ಎಣಿಕೆಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

Sat, 13 May 202302:22 AM IST

ತಮ್ಮ ಷರತ್ತು ಪೂರೈಸುವ ಪಕ್ಷದ ಜತೆಗೆ ಮೈತ್ರಿಗೆ ಸಿದ್ಧ: ಹೆಚ್‌ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಹಂಗ್‌ ಅಥವಾ ಅತಂತ್ರ ಅಸೆಂಬ್ಲಿಯಾಗುವ ನಿರೀಕ್ಷೆಯಲ್ಲಿರುವ ಜೆಡಿಎಸ್‌ ಪಕ್ಷವು ತೆರೆಮರೆಯ ಕಸರತ್ತುಗಳನ್ನು ನಡೆಸುತ್ತಿದೆ. "ತಮ್ಮ ಷರತ್ತುಗಳನ್ನು ಪೂರೈಸುವ ಪಕ್ಷದೊಂದಿಗೆ ಪಾಲುದಾರರಾಗಲು ಸಿದ್ಧ ಎಂಬ ಸಂದೇಶವನ್ನು ಸಂಬಂಧಪಟ್ಟವರಿಗೆ ಜೆಡಿಎಸ್‌ ನಾಯಕ ಹೆಚ್‌ಡಿ ಕುಮಾರಸ್ವಾಮಿ ರವಾನಿಸಿದ್ದಾರೆ" ಎಂದು ವರದಿಗಳು ತಿಳಿಸಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷವನ್ನು ಹೆಸರಿಸದೆ, ತಾವು ಯಾವು ಪಕ್ಷವನ್ನು ಬೆಂಬಲಿಸಲಿದ್ದೇವೆ ಎನ್ನುವುದನ್ನು ಈಗಾಗಲೇ ನಿರ್ಧರಿಸಲಾಗಿದೆ ಎಂದು ಜೆಡಿಎಸ್‌ ಪ್ರತಿಪಾದಿಸಿದೆ.

ಕುಮಾರಸ್ವಾಮಿ ಕಿಂಗ್‌ ಆಗ್ತಾರಾ ಅಥವಾ ಕಿಂಗ್‌ ಮೇಕರ್‌ ಆಗ್ತಾರಾ? ಕುಮಾರಸ್ವಾಮಿ ಪ್ರೊಫೈಲ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ.

Sat, 13 May 202302:17 AM IST

ಮತ ಎಣಿಕೆ ಕೇಂದ್ರದ ಹೊರಗೆ ಕೂಲ್ ಕೂಲ್

ಮಂಗಳೂರು ನಗರದಲ್ಲಿ ಚುನಾವಣಾ ಫಲಿತಾಂಶವನ್ನು ಕಾತುರದಿಂದ ಎದುರು ನೋಡಲಾಗುತ್ತಿದೆ. ಈ ನಡುವೆ ಮತ ಎಣಿಕೆಯ ತಯಾರಿಯೂ ಜೋರಾಗಿದೆ. ನಗರದ ಹೊರವಲಯದ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಮತ ಎಣಿಕೆ ನಡೆಯಲಿದ್ದು ಸಿದ್ಧತೆ ಪೂರ್ಣಗೊಂಡಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಈ ಕುರಿತ ವರದಿ ಓದಿ.

Sat, 13 May 202302:14 AM IST

ವಿಜಯಪುರ: ವಿಜಯಪುರ ಜಿಲ್ಲೆಯ‌ 8 ಕ್ಷೇತ್ರಗಳ ಮತ ಎಣಿಕೆ ಎಂಟು ಗಂಟೆಗೆ ಆರಂಭ

ವಿಧಾನಸಭಾ ಚುನಾವಣೆ ಕದನ‌ ಕುತೂಹಲ. ವಿಜಯಪುರ ಜಿಲ್ಲೆಯ‌ 8 ಕ್ಷೇತ್ರಗಳ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ. ವಿಜಯಪುರ ನಗರ ಸೈನಿಕ ಶಾಲೆಯಲ್ಲಿ ಮತ ಎಣಿಕೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿರೋ ಮತ ಎಣಿಕೆ. ಸೈನಿಕ ಶಾಲಾ ಆವರಣದಲ್ಲಿ ಒಟ್ಟು ನಾಲ್ಕು ಕಟ್ಟಡಗಳ ಎಂಟು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ

ಬಬಲೇಶ್ವರ, ವಿಜಯಪುರ ನಗರ, ನಾಗಠಾಣ ಎಸ್ಸಿ ಮೀಸಲು, ಮುದ್ದೇಬಿಹಾಳ, ಇಂಡಿ, ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರಗಳು, ಒಡೆಯರ ಸದನದಲ್ಲಿ ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ, ಆದಿಲ್‍ಶಾಹಿ ಸದನದಲ್ಲಿ ಬಬಲೇಶ್ವರ ಹಾಗೂ ಬಸವನಬಾಗೇವಾಡಿ , ಹೊಯ್ಸಳ ಸದನದಲ್ಲಿ ವಿಜಯಪುರ ನಗರ ಹಾಗೂ ನಾಗಠಾಣ ಎಸ್ಸಿ ಮೀಸಲು ಕ್ಷೇತ್ರ ವಿಜಯನಗರ ಸದನದಲ್ಲಿ ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳ ಮತ ಎಣಿಕಾ ಕಾರ್ಯ ನಡೆಯಲಿದೆ

ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಇವಿಎಂ ಮತ ಎಣಿಕೆಗೆ ನಿಗದಿಪಡಿಸಲಾಗಿದೆ. 4 ಟೇಬಲ್‍ಗಳನ್ನು ಅಂಚೆ ಮತಪತ್ರಗಳ ಎಣಿಕೆ ಮತ್ತು ಸೇವಾ ಮತದಾರರ ಅಂಚೆ ಮತಪತ್ರಗಳ ಎಣಿಕೆಗೆ ಹಾಕಲಾಗಿದೆ. ಬಬಲೇಶ್ವರ ಮುದ್ದೇಬಿಹಾಳ, ದೇವರಹಿಪ್ಪರಗಿ ಹಾಗೂ ಮತಕ್ಷೇತ್ರಗಳ 18 ಸುತ್ತುಗಳ ಮತ ಎಣಿಕೆ ನಡೆಯಲಿದೆ. ವಿಜಯಪುರ ನಗರ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳು 20 ಸುತ್ತುಗಳಲ್ಲಿ ಮತ ಎಣಿಕೆ ಮಾಡಲಿದ್ದಾರೆ. ನಾಗಠಾಣ ಮತಕ್ಷೇತ್ರ 22 ಸುತ್ತುಗಳಲ್ಲಿ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ 17 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಪ್ರತಿ ವಿಧಾನಸಭೆಗೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು 17 ಮೈಕ್ರೋ ಆಬ್ಸರವರ್ ಒಳಗೊಂಡಂತೆ ಒಟ್ಟು 51 ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 136 ಎಣಿಕೆ ಮೇಲ್ವಿಚಾರಕರರು ಇದ್ದಾರೆ. 136 ಎಣಿಕೆ ಸಹಾಯಕರು, 136 ಮೈಕ್ರೋ ಆಬ್ಸರವರ್ ಸೇರಿದಂತೆ ಒಟ್ಟು 408 ಅಧಿಕಾರಿ-ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

ಬಾರೀ ಭದ್ರತೆ: ಎಸ್ಪಿ ಹೆಚ್ ಡಿ ಆದನಂಕುಮಾರ ನೇತೃತ್ವದಲ್ಲಿ ಭದ್ರತೆ ಓರ್ವ ಎಎಸ್ಪಿ, 5 ಡಿವೈಎಸ್ಪಿ , 8 ಇನ್ಸಪೆಕ್ಟರ್ಸ್ 22 ಪಿಎಸೈ, 34 ಜನ ಎಎಸ್ಐ, 282 ಹೆಡ್ ಕಾನ್ಸಸ್ಟೇಬಲ್ಸ್ ಹಾಗೂ ಕಾನ್ಸಸ್ಟೇಬಲ್ಸ್ , 60 ಜನ ಮಹಿಳಾ ಸಿಬ್ಬಂದಿ. 200 ಜನ ಹೋಂಗಾರ್ಡ್ , 8 ಕೆಎಸ್ಆರ್ಪಿ ತುಕಡಿ, 4 ಡಿಎಆರ್ ತುಕಡಿ, 60 ಜನ ಕೇಂದ್ರ ಶಸಸ್ತ್ರ ಮೀಸಲು ಪಡೆ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

Sat, 13 May 202302:04 AM IST

ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ

ರಾಜ್ಯದ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಇನ್ನು ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಎಲ್ಲಾ ಎಣಿಕೆ ಕೇಂದ್ರಗಳಲ್ಲಿಯೂ ವ್ಯವಸ್ಥಿತವಾಗಿ ಮತ ಎಣಿಕೆ ನಡೆಸಲು ಸಿಬ್ಬಂದಿಗಳು ಕೊನೆಯ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 

ಇಂದು 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 2430 ಪುರುಷ ಅಭ್ಯರ್ಥಿಗಳು, 184 ಮಹಿಳೆಯರು, ಇತರೆ ಇಬ್ಬರು ಅಭ್ಯರ್ಥಿಗಳಿದ್ದಾರೆ. ಬಿಜೆಪಿಯ 224, ಕಾಂಗ್ರೆಸ್​​ನ 223, ಜೆಡಿಎಸ್​​ನ 207, ಎಎಪಿಯ 209, ಬಿಎಸ್‌ಪಿಯ 133, ಸಿಪಿಐ(ಎಂ)ನ 4, ಜೆಡಿಯು ಪಕ್ಷದ 8, ಎನ್‌ಪಿಪಿ 2, ಪಕ್ಷೇತರ 918, ನೋಂದಾಯಿತ, ಮಾನ್ಯತೆ ರಹಿತ 685 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

Sat, 13 May 202302:02 AM IST

ರಾಜಕಾರಣಿಗಳ ಬದುಕು ಹೇಗಿರುತ್ತದೆ? ಚುನಾವಣಾ ಫಲಿತಾಂಶದ ದಿನ ಓದಲೇಬೇಕಾದ ಲಹರಿ

ರಾಜಕೀಯ ಒಂದು ವೃತ್ತಿಯೇ? ಅಥವಾ ಪ್ಯಾಷನ್‌ನಿಂದ ಮಾಡುವ ಕೆಲಸವೇ? ಎರಡೂ ಅಲ್ಲದೆ ಬಿಟ್ಟೇನೆಂದರೂ ಬಿಡದು ಎಂಬಂತೆ ಕಾಡುವ ಮಾಯೆಯೇ? ಏನೇ ಇರಬಹುದು. ಆದರೆ ರಾಜಕೀಯವನ್ನು ಒಂದು ವೃತ್ತಿಯ ಚೌಕಟ್ಟಿನಲ್ಲಿ ನೋಡುವುದು ಸವಾಲಿನ ಕೆಲಸವೇ ಸರಿ. ಪೂರ್ತಿ ಲಹರಿ ಓದಲು ಇಲ್ಲಿ ಕ್ಲಿಕ್‌ ಮಾಡಿರಿ

Sat, 13 May 202302:02 AM IST

14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು

ಈ ಬಾರಿ ಚುನಾವಣೆಯ ಮತ್ತೊಂದು ವಿಶೇಷವೇನೆಂದರೆ 14 ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳು ಕಣದಲ್ಲಿದ್ದಾರೆ.

 

Sat, 13 May 202302:02 AM IST

ಕರ್ನಾಟಕ ವಿಧಾನಸಭೆ ಚುನಾವಣೆ: ಈ ಬಾರಿ 511 ಕೋಟಿ ರೂ. ಚುನಾವಣಾ ವೆಚ್ಚ

ಪ್ರತಿ ರಾಜ್ಯದ ಚುನಾವಣೆ ನಡೆಸುವುದು ಭಾರತೀಯ ಚುನಾವಣಾ ಆಯೋಗಕ್ಕೆ ದುಬಾರಿ ವೆಚ್ಚದ ಬಾಬತ್ತು. 2013ರಿಂದ 2023ರ ಅವಧಿಯಲ್ಲಿ ವಿಧಾನಸಭೆ ಚುನಾವಣೆ ವೆಚ್ಚ ಶೇ.219ರಷ್ಟು ಹೆಚ್ಚಾಗಿದೆ. ಈ ಬಾರಿ ಅಂದಾಜು 511 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಚುನಾವಣೆ ನಡೆದಿದೆ. ಲಾಜಿಸ್ಟಿಕ್ಸ್‌, ಭದ್ರತೆ, ಪ್ರಚಾರ ಇತ್ಯಾದಿಗಳು ದುಬಾರಿಯಾಗುತ್ತಿರುವುದು ಈ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.

Sat, 13 May 202301:28 AM IST

2018ರ ಫಲಿತಾಂಶ ಏನಾಗಿತ್ತು?

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷವು 104 ಸೀಟುಗಳ ನೆರವಿನಿಂದ ಗೆದ್ದಿತ್ತು. ಕಾಂಗ್ರೆಸ್‌ 78 ಮತ್ತು ಜೆಡಿಎಸ್‌ 37 ಸೀಟುಗಳನ್ನು ಗೆದಿತ್ತು. ಈ ಬಾರಿ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Sat, 13 May 202301:23 AM IST

ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ, 8.30ರಿಂದ ಇವಿಎಂ ಮತ ಎಣಿಕೆ

ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತ ಎಣಿಕೆ ಆರಂಭವಾಗಲಿದೆ. ಎಂಟು ಗಂಟೆಯಿಂದ ಸುಮಾರು 8.30 ಗಂಟೆಯವರೆಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ.

Sat, 13 May 202301:01 AM IST

ಬಸವನಗುಡಿ ಬಿಎಂಎಸ್‌ ಕಾಲೇಜಿನಲ್ಲಿ ಮತ ಎಣಿಕೆ

ಬೆಂಗಳೂರಿನ ಕೇಂದ್ರ ವ್ಯಾಪ್ತಿಯ ಕ್ಷೇತ್ರಗಳ ಮತ ಎಣಿಕೆ ಬಸವನಗುಡಿಯಲ್ಲಿರುವ ಬಿಎಂಎಸ್‌ ಕಾಲೇಜಿನಲ್ಲಿ ನಡೆಯಲಿದ್ದು, ಇಲ್ಲಿ ಶಿವಾಜಿನಗರ, ಶಾಂತಿನಗರ ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

Sat, 13 May 202312:59 AM IST

ಜಯನಗರ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಮತ ಎಣಿಕೆ

ಬೆಂಗಳೂರಿನ ವಿವಿಧೆಡೆ ಇಂದು ಮತ ಎಣಿಕೆ ನಡೆಯಲಿದೆ. ಬೆಂಗಳೂರು ದಕ್ಷಿಣ ವಿಭಾಗದ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಜಯನಗರದಲ್ಲಿರುವ ಎಸ್​ಎಸ್ಎಂಆರ್​​ವಿ ಕಾಲೇಜಿನಲ್ಲಿ ನಡೆಯಲಿದ್ದು, ಸುತ್ತಮುತ್ತ ಬಿಗಿಬಂದೋಬಸ್ತ್‌ ಮಾಡಲಾಗಿದೆ. ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇಲ್ಲಿ ನಡೆಯಲಿದೆ.

Sat, 13 May 202312:57 AM IST

ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ನಮ್ಮನ್ನು ಸಂಪರ್ಕಿಸಿವೆ: ಜೆಡಿಎಸ್‌

ಇಂದು ಪ್ರಕಟವಾಗುವ ಫಲಿತಾಂಶದ ಮೇಲೆ ಜೆಡಿಎಸ್‌ ಸಾಕಷ್ಟು ನಿರೀಕ್ಷೆಯಿಟ್ಟಿದೆ. "ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ತಮ್ಮ ಸ್ನೇಹಿತರೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಎರಡೂ ಪಕ್ಷಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ, ”ಎಂದು ಜೆಡಿಎಸ್ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅವರು ತಮ್ಮ ಹೆಸರನ್ನು ಬಹಿರಂಗಪಡಿಸಲು ಬಯಸಿಲ್ಲ.

ಇದೇ ಸಮಯದಲ್ಲಿ ಜೆಡಿಎಸ್ ವಕ್ತಾರ ತನ್ವೀರ್ ಅಹ್ಮದ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಎರಡೂ ರಾಷ್ಟ್ರೀಯ ಪಕ್ಷಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ ಮತ್ತು ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಬುಧವಾರ ರಾತ್ರಿ ಸಿಂಗಾಪುರಕ್ಕೆ ತೆರಳಿದ್ದು, ಇಂದು ವಾಪಸ್‌ ಬರುವ ನಿರೀಕ್ಷೆಯಿದೆ.

Sat, 13 May 202312:57 AM IST

ಬಜರಂಗ್‌ ಬಲಿಯು ಬಿಜೆಪಿ ಮೇಲೆ ಕೋಪಗೊಂಡಿದ್ದಾನೆ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬ ಪ್ರಶ್ನೆಗೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಬಜರಂಗ ಬಲಿ ರೂಪಕವನ್ನು ಬಳಸಿದ್ದಾರೆ.

ಪಾಟ್ನಾ, ಮೇ 12 (ಪಿಟಿಐ) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಅನುಕೂಲಕರ ಫಲಿತಾಂಶವನ್ನು ಊಹಿಸಲು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಶುಕ್ರವಾರ "ಬಜರಂಗ ಬಲಿ" ರೂಪಕವನ್ನು ಕರೆದಿದ್ದಾರೆ. ಭಗವಾನ್ ಬಜರಂಗ ಬಲಿ ಬಹುತ್ ನರಾಝ್ ಹೈ ಬಿಜೆಪಿ ಸೆ ಎಂದು ಅವರು ಹೇಳಿದ್ದಾರೆ. ಭಗವಂತ ಬಜರಂಗ ಬಲಿಯು ಬಿಜೆಪಿ ಮೇಲೆ ತುಂಬಾ ಕೋಪಗೊಂಡಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಸಭೆಗಳಲ್ಲಿ, ಭಜರಂಗದಳ ವಿರುದ್ಧದ ಯಾವುದೇ ಕ್ರಮವು ಭಗವಾನ್ ಹನುಮಂತನ ಮತ್ತೊಂದು ಜನಪ್ರಿಯ ಹೆಸರಾದ "ಬಜರಂಗ ಬಲಿ"ಗೆ ಅವಮಾನ ಮಾಡಿದಂತೆ ಎಂದು ಆರೋಪಿಸಿದರು ತಮ್ಮ ಸಮಾವೇಶಗಳಲ್ಲಿ ಮೋದಿಯು "ಬಜರಂಗ ಬಲಿ ಕೀ ಜೈ" ಎಂದು ಘೋಷಣೆಗಳನ್ನು ಕೂಗಿದ್ದರು.

Sat, 13 May 202312:48 AM IST

2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ, 36 ಕೇಂದ್ರಗಳಲ್ಲಿ ಮತ ಎಣಿಕೆ

ರಾಜ್ಯ ವಿಧಾನಸಭೆಯ 224 ಸದಸ್ಯರನ್ನು ಆಯ್ಕೆ ಮಾಡಲು ನೆರವಾಗುವ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಬಾರಿ ದಾಖಲೆಯ ಮತದಾನವಾಗಿದೆ. ಕರ್ನಾಟಕದಲ್ಲಿ ಶೇ.73.19ರಷ್ಟು ಮತದಾನವಾಗಿದ್ದು, 2018ರಲ್ಲಿ ದಾಖಲಾದ ಶೇ.72.36 ಮತದಾನಕ್ಕೆ ಹೋಲಿಸಿದರೆ ಈ ಬಾರಿ ಮತದಾನ ಹೆಚ್ಚಳವಾಗಿದೆ. ಈ ಬಾರಿ ಶಾಂತಿಯುತವಾಗಿ ಮತದಾನ ನಡೆದಿದೆ.

ಒಟ್ಟು 737 ಥೀಮ್ ಆಧಾರಿತ ಮತ್ತು ಜನಾಂಗೀಯ ಮಾದರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ 11.71 ಲಕ್ಷ ಮತದಾರರು ನೋಂದಣಿಯಾಗಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಗೆ ಸುಮಾರು ಒಂದು ವರ್ಷ ಮೊದಲು ನಡೆದ ಈ ವಿಧಾನಸಭಾ ಚುನಾವಣೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ರಾಜ್ಯಾದ್ಯಂತ 36 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.

Sat, 13 May 202312:37 AM IST

ಬಿಜೆಪಿಗೆ ಗೆಲ್ಲುವ ಭರವಸೆ, ಫಲಿತಾಂಶ ಬಂದ ಬಳಿಕ ನೋಡೋಣ ಎಂದ ಕಾಂಗ್ರೆಸ್‌

ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣೋತ್ತರ ಸಮೀಕ್ಷೆಯ ತೀರ್ಮಾನ ಮರೆತು ಇಂದು ಸಂಜೆಯ ನಿಖರ ಫಲಿತಾಂಶದ ಮೇಲೆ ಕಣ್ಣಿಟ್ಟಿವೆ. ಇವೆರಡೂ ಪಕ್ಷಗಳ ಪ್ರಮುಖರು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮೆಜಾರಿಟಿ ಮತಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಾ ಖರ್ಗೆಗೂ ಗೆಲ್ಲುವ ಭರವಸೆ ಇದ್ದು, ಫಲಿತಾಂಶ ಪ್ರಕಟವಾಗಲಿ ಆಮೇಲೆ ನೋಡೋಣ ಎಂದಿದ್ದಾರೆ.

Sat, 13 May 202312:37 AM IST

ದೇವರ ಮೊರೆ ಹೋದ ಮುಖಂಡರು

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜತೆ ತಮಿಳುನಾಡಿನ ತಿರುವಣಮಲೈನ ಶ್ರೀ ಅರುಣಾಚಲೇಶ್ವರ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಸವರಾಜ ಬೊಮ್ಮಾಯಿ ಸವದತ್ತಿ ಯಲ್ಲಮ್ಮನ ಆಶೀರ್ವಾದ ಪಡೆದಿದ್ದಾರೆ. "ಪ್ರತಿಸಲದಂತೆ ಸವದತ್ತಿಗೆ ಬಂದಿದ್ದು, ಮನೆ ದೇವರಾದ ಯಲ್ಲಮ್ಮನ ದರ್ಶನ ಮಾಡಿ , ದೇವಿ ಆಶೀರ್ವಾದವನ್ನು ಪಡೆಯಲು ಆಗಮಿಸಿದ್ದೇನೆ. ಪ್ರತಿಸಲವೂ ಈ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದು, ಯಲ್ಲಮ್ಮನ ಆಶೀರ್ವಾದ ಪಡೆದಿದ್ದೇನೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Sat, 13 May 202312:26 AM IST

14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು

ಜೆಡಿಎಸ್​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ​ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಹಾಗೂ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿದ್ದಾರೆ. ಇದೇ ರೀತಿ ಹಲವು ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳು ಅಥವಾ ಸಹೋದರರು, ಕುಟುಂಬದ ಸದಸ್ಯರು ಕಣದಲ್ಲಿದ್ದಾರೆ. ಈ ಕುರಿತು ಇಂಟ್ರೆಸ್ಟಿಂಗ್‌ ವರದಿ ಇಲ್ಲಿದೆ. ಓದಲು ಇಲ್ಲಿ ಕ್ಲಿಕ್‌ ಮಾಡಿ.

Sat, 13 May 202312:24 AM IST

ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆ- ಇಂದು ಬೆಳಗ್ಗೆ ಆರು ಗಂಟೆಯಿಂದ ಸೆಕ್ಷನ್ 144 ನಿಷೇಧಾಜ್ಞೆ

ಇಂದು (ಮೇ 13) ಮತ ಎಣಿಕೆ ನಡೆಯಲಿದ್ದು. ಬೆಳಗ್ಗೆ 6 ಗಂಟೆಯಿಂದಲೇ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಾಳೆ ಬೆಳಗ್ಗೆ ಆರು ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತ ಎಣಿಕೆ ಕಾರ್ಯವು ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆ ಶುರುವಾಗಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶದ ಬಹುತೇಕ ಚಿತ್ರಣ ಸಿಗಲಿದ್ದು, ಸಂಜೆ ವೇಳೆಗೆ ಸ್ಪಷ್ಟ ಫಲಿತಾಂಶ ಪ್ರಕಟವಾಗಲಿದೆ.

Sat, 13 May 202312:18 AM IST

ಮತ ಎಣಿಕೆಗೆ ಕೌಂಟ್‌ಡೌನ್‌ ಆರಂಭ

ರಾಜ್ಯದ ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಇಂದು ಬೆಳಗ್ಗೆ ಎಂಟು ಗಂಟೆಗಳಲ್ಲಿ ಮತಎಣಿಕೆ ಆರಂಭವಾಗಲಿದ್ದು, ಬಿಗಿ ಪೊಲೀಸ್‌ ಭದ್ರತೆ ಎಲ್ಲೆಡೆಯೂ ಕಂಡುಬರುತ್ತಿದೆ. ಬಿಜೆಪಿಯ 224, ಕಾಂಗ್ರೆಸ್​​ನ 223, ಜೆಡಿಎಸ್​​ನ 207 ಅಭ್ಯರ್ಥಿಗಳು ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಮ್ಯಾಜಿಕ್‌ ನಂಬರ್‌ ಪಡೆಯುವ ಕನಸಿನಲ್ಲಿ ಪ್ರಮುಖ ಪಕ್ಷಗಳಿವೆ. ಆಮ್‌ ಆದ್ಮಿಯ 209, ಬಿಎಸ್‌ಪಿಯ 133, ಸಿಪಿಐ(ಎಂ)ನ 4, ಜೆಡಿಯು ಪಕ್ಷದ 8, ಎನ್‌ಪಿಪಿ 2, ಪಕ್ಷೇತರ 918 ಸ್ಪರ್ಧಿಗಳ ರಾಜಕೀಯ ಭವಿಷ್ಯವೂ ಇಂದು ನಿರ್ಧಾರವಾಗಲಿದೆ. ನೋಂದಾಯಿತ, ಮಾನ್ಯತೆ ರಹಿತ 685 ಅಭ್ಯರ್ಥಿಗಳ ಸೋಲು ಗೆಲುವು ಕೂಡ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Sat, 13 May 202312:07 AM IST

ಒಂದು ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಸಮಾನ ಮತಗಳನ್ನು ಪಡೆದರೆ ಏನಾಗುತ್ತದೆ?

Sat, 13 May 202312:06 AM IST

ಇಂದು ವಿಧಾನಸಭೆ ಚುನಾವಣೆ ಫಲಿತಾಂಶ, ಯಾವ ರಾಶಿಯವರಿಗೆ ಗೆಲುವು ಯಾರಿಗೆ ಸೋಲು

Sat, 13 May 202312:04 AM IST

224 ಕ್ಷೇತ್ರಗಳ ಫಲಿತಾಂಶ ಇಂದು

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಹೊರಬೀಳಲಿದೆ. 430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು, ಓರ್ವ ಇತರೆ ಅಭ್ಯರ್ಥಿ ಸ್ಪರ್ಧಿಸಿರುವ ಈ ಚುನಾವಣೆಯ ಕುರಿತು ರಾಜ್ಯ, ಹೊರರಾಜ್ಯ ಮಾತ್ರವಲ್ಲದೆ ವಿದೇಶದಲ್ಲಿರುವ ಭಾರತೀಯರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಮತ್ತು ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವ ಈ ಚುನಾವಣೆ ಕುರಿತು ಎಲ್ಲರಿಗೂ ಕುತೂಹಲವಿದೆ.

Sat, 13 May 202312:24 AM IST

ಫಲಿತಾಂಶದ ಸಂದರ್ಭದಲ್ಲಿ ಬೆಟ್ಟಿಂಗ್‌ ಮೇಲೆ ಕಣ್ಣು

ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಬೆಟ್ಟಿಂಗ್‌ ನಿರತರನ್ನು ಪೊಲೀಸರು ಅಲ್ಲಲ್ಲಿ ಬಂಧಿಸಿದ್ದಾರೆ. ನಿನ್ನೆ ಏಳು ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ಬೆಟ್ಟಿಂಗ್‌ ಪ್ರಿಯರು ಇಂದು ಹೆಚ್ಚು ಸಕ್ರಿಯರಾಗಿರುವ ಸಾಧ್ಯತೆ ಇರುವುದರಿಂದ ಪೊಲೀಸರು ನಿಗಾ ಇಟ್ಟಿದ್ದಾರೆ.

Fri, 12 May 202304:12 PM IST

ಇಂದು 8 ಗಂಟೆಗೆ ಮತಎಣಿಕೆ ಆರಂಭ, 34 ಕೇಂದ್ರಗಳಲ್ಲಿ ಏಕಕಾಲಕ್ಕೆ ಎಣಿಕೆ

ಕಳೆದ ಹಲವು ದಿನಗಳಿಂದ ದೇಶದ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election result) ಇಂದು ದೊರಕಲಿದೆ. ಇಂದು ಬೆಳಗ್ಗೆ ಎಂಟು ಗಂಟೆಯಿಂದ ಆರಂಭವಾಗಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ ಆರಂಭವಾಗಲಿದೆ. ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕುವ ನಿರೀಕ್ಷೆಯಿದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ದೊರಕಲಿದೆ.

Sat, 13 May 202312:24 AM IST

ರಾಜ್ಯದಲ್ಲಿರುವ ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ

ಇಂದು ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಮತಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಮತ ಎಣಿಕೆ ಕೇಂದ್ರಗಳಿರುವ ಕಡೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಈ ಕೇಂದ್ರಗಳಲ್ಲಿ ಮತಯಂತ್ರಗಳನ್ನು ಇಡಲಾಗಿದೆ. ಈ ಕೊಠಡಿಗಳಿಗೆ ಮೂರು ಹಂತದ ಬಿಗಿ ಬಂದೋಬಸ್ತ್‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತಎಣಿಕೆ ಕೇಂದ್ರಗಳ ಸುತ್ತ ಅರೆಸೇನಾ ಪಡೆಗಳ ಜೊತೆಗೆ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳ ನಂತರ ಇಬ್ಬರು ಡಿಸಿಪಿಗಳು ಭದ್ರತೆ ನೋಡಿಕೊಳ್ಳುತ್ತಾರೆ. ಪ್ರತಿ ಮತ ಎಣಿಕೆ ಕೇಂದ್ರಕ್ಕೆ ಮೂವರು ಎಸಿಪಿಗಳು, ಆರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 50 ಸಬ್ ಇನ್‌ಸ್ಪೆಕ್ಟರ್‌ಗಳ ಜೊತೆಗೆ 300 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ನಡೆಯುವ ಸಮಯದಲ್ಲಿ ಮತ್ತು ಫಲಿತಾಂಶ ಬಂದ ನಂತರ ಮೂರೂ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರ ಮಧ್ಯೆ ಘರ್ಷಣೆ, ಗಲಾಟೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

Sat, 13 May 202312:24 AM IST

ಮತ ಎಣಿಕೆ ಕೇಂದ್ರಗಳ ಸುತ್ತಲಿನ ರಸ್ತೆಗಳಲ್ಲಿ ಓಡಾಟ ನಿಷೇಧ

ಕರ್ನಾಟಕ ವಿವಿಧ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಇಂದು ಜನರ ಓಡಾಟ ನಿಷೇಧಿಸಲಾಗಿದೆ. ಉದಾಹರಣೆಗೆ ಬೆಂಗಳೂರಿನ ಬಸವನಗುಡಿ ಬಿಎಂಎಸ್ ಕಾಲೇಜು, ಜಯನಗರದ ಎಸ್‌ಎಸ್‌ಆರ್ ವಿ ಕಾಲೇಜು, ವಿಠಲ್ ಮಲ್ಯ ರಸ್ತೆ ಬಳಿ ಇರುವ ಸೇಂಟ್ ಜೋಸೆಫ್ ಕಾಲೇಜು, ದೇವನಹಳ್ಳಿಯ ಆಕಾಶ್ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿ, ವಸಂತನಗರದ ಮೌಂಟ್ ಕಾರ್ಮಲ್ ಕಾಲೇಜು ಮುಂತಾದ ಕಡೆಗಳಲ್ಲಿ ಜನರ ಓಡಾಟ, ಸಾರ್ವಜನಿಕ ವಾಹನ ಸಂಚಾರ ನಿಷೇಧಿಸಲಾಗಿದೆ.