ಕನ್ನಡ ಸುದ್ದಿ  /  ಕರ್ನಾಟಕ  /  ಪ್ರೌಢಶಾಲೆಗಳಲ್ಲಿ 2,500 ಶಿಕ್ಷಕರ ನೇಮಕ, ಹತ್ತು ವರ್ಷಗಳ ಬಳಿಕ ಪ್ರೌಢಶಾಲೆಗಳಲ್ಲಿ ದೈಹಿಕ, ಸಹ-ಶಿಕ್ಷಕರ ನೇಮಕಕ್ಕೆ ಮುಂದಾದ ಸರಕಾರ

ಪ್ರೌಢಶಾಲೆಗಳಲ್ಲಿ 2,500 ಶಿಕ್ಷಕರ ನೇಮಕ, ಹತ್ತು ವರ್ಷಗಳ ಬಳಿಕ ಪ್ರೌಢಶಾಲೆಗಳಲ್ಲಿ ದೈಹಿಕ, ಸಹ-ಶಿಕ್ಷಕರ ನೇಮಕಕ್ಕೆ ಮುಂದಾದ ಸರಕಾರ

ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಕೆಲವೊಂದು ಹುದ್ದೆಗಳ ನೇಮಕವಾಗದೆ ಸುಮಾರು ಹತ್ತು ವರ್ಷಗಳಾಗುತ್ತ ಬಂದಿದೆ. ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಸಹ-ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳಲು ಬಯಸುವ ಆಕಾಂಕ್ಷಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವರಾದ ಬಿ.ಸಿ. ನಾಗೇಶ್‌ ಸಿಹಿ ಸುದ್ದಿ ನೀಡಿದ್ದಾರೆ.

ಹತ್ತು ವರ್ಷಗಳ ಬಳಿಕ ಪ್ರೌಢಶಾಲೆಗಳಲ್ಲಿ ದೈಹಿಕ, ಸಹ-ಶಿಕ್ಷಕರ ನೇಮಕಕ್ಕೆ ಮುಂದಾದ ಸರಕಾರ
ಹತ್ತು ವರ್ಷಗಳ ಬಳಿಕ ಪ್ರೌಢಶಾಲೆಗಳಲ್ಲಿ ದೈಹಿಕ, ಸಹ-ಶಿಕ್ಷಕರ ನೇಮಕಕ್ಕೆ ಮುಂದಾದ ಸರಕಾರ

* ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿಶೇಷ ವರದಿ

ಬೆಂಗಳೂರು: ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಕೆಲವೊಂದು ಹುದ್ದೆಗಳ ನೇಮಕವಾಗದೆ ಸುಮಾರು ಹತ್ತು ವರ್ಷಗಳಾಗುತ್ತ ಬಂದಿದೆ. ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಸಹ-ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳಲು ಬಯಸುವ ಆಕಾಂಕ್ಷಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವರಾದ ಬಿ.ಸಿ. ನಾಗೇಶ್‌ ಸಿಹಿ ಸುದ್ದಿ ನೀಡಿದ್ದಾರೆ.

" ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಹ ಶಿಕ್ಷಕರು - 2,200 ಹುದ್ದೆಗಳು. ದೈಹಿಕ ಶಿಕ್ಷಣ ಶಿಕ್ಷಕರು - 200 ಹುದ್ದೆಗಳು. ವಿಶೇಷ ಶಿಕ್ಷಕರು - 100 ಹುದ್ದೆಗಳುʼʼ ಎಂದು ಬಿ.ಸಿ. ನಾಗೇಶ್‌ ಟ್ವಿಟ್‌ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಹುದ್ದೆಗಳಿಗೆ ದಸರಾ ವೇಳೆಗೆ ಅಥವಾ ಇನ್ನು ಕೆಲವೇ ದಿನಗಳಲ್ಲಿ ಸರಕಾರದಿಂದ ನೇಮಕ ಅಧಿಸೂಚನೆ ಹೊರಡುವ ನಿರೀಕ್ಷೆಯಿದೆ.

ಹತ್ತು ವರ್ಷಗಳ ಬಳಿಕ ನೇಮಕ

ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು, ಸಹ ಶಿಕ್ಷಕರ ನೇಮಕವಾಗದೆ ಸರಿಸುಮಾರು ಹತ್ತು ವರ್ಷಗಳು ಕಳೆದಿವೆ. ರಾಜ್ಯದ ಪ್ರೌಢಶಾಲೆಗಳಿಗೆ ಶಿಕ್ಷಕರ ನೇಮಕವಾಗದೆ ಆರು ವರ್ಷಗಳು ಕಳೆದಿವೆ.

ದೈಹಿಕ ಶಿಕ್ಷಕರು ಇತ್ಯಾದಿ ಹುದ್ದೆಗಳ ನೇಮಕಕ್ಕೆ 2012-13ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಂದರೆ, ಆ ಅವಧಿಯಲ್ಲಿ ಬೆಂಗಳೂರು ವಿಭಾಗದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗಳಿಗೆ, ಮೈಸೂರು ವಿಭಾಗದಲ್ಲಿ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗಳಿಗೆ, ಗುಲ್ಬರ್ಗಾ ವಿಭಾಗದಲ್ಲಿ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗಳಿಗೆ ಮತ್ತು ಬೆಳಗಾಂ ವಿಭಾಗದಲ್ಲಿ ಶಿಕ್ಷಕರು ಗ್ರೇಡ್-2 ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು.

ಇದೀಗ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಅಂದರೆ 2022-23ನೇ ಸಾಲಿಗೆ ಸರಕಾರವು ಈ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಸದ್ಯದಲ್ಲಿಯೇ ಹೊರಡಿಸುವ ಸೂಚನೆ ನೀಡಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ರಾಜ್ಯ ಸರಕಾರದ ಮೂಲಗಳು ಮಾಹಿತಿ ನೀಡಿದ ಪ್ರಕಾರ, "ಈ ಹುದ್ದೆಗಳ ನೇಮಕದ ಕುರಿತು ಸದ್ಯದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ. ಬಹುಶಃ ಈ ದಸರಾ ವೇಳೆಗೆ ಈ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕರು, ಸಹ ಶಿಕ್ಷಕರು, ಕಲಾ ಶಿಕ್ಷಕರು, ಸಂಗೀತ ಶಿಕ್ಷಕರು, ಇತ್ಯಾದಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆʼʼ ಎಂದು ಮೂಲಗಳು ಮಾಹಿತಿ ನೀಡಿವೆ.

ದೈಹಿಕ ಶಿಕ್ಷಕರ ಹುದ್ದೆ ಸೇರಿದಂತೆ ಕೆಲವೊಂದು ಹುದ್ದೆಗಳಿಗೆ ನೇಮಕಗೊಳ್ಳಲು ಬಯಸುವವರಿಗೆ ಇದು ನಿಜಕ್ಕೂ ಸಿಹಿಸುದ್ದಿಯಾಗಿದೆ. ವಿಶೇಷವಾಗಿ ಕಳೆದ ಹತ್ತು ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕರ ನೇಮಕದಲ್ಲಿ ಕಡೆಗಣಿಸಲ್ಪಟ್ಟಂತೆ ಕಂಡುಬಂದ ಈ ಹುದ್ದೆಗಳ ನೇಮಕಕ್ಕೆ ರಾಜ್ಯ ಸರಕಾರ ಮುಂದಾಗಿರುವುದು ಗುಡ್‌ ನ್ಯೂಸ್‌ ಎನ್ನಬಹುದು.

ಸದ್ಯ ದೊರಕಿರುವ ಮಾಹಿತಿ ಪ್ರಕಾರ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈ ನೇಮಕ ನಡೆಯಲಿದೆ. ಈ ಹುದ್ದೆಗಳ ನೇಮಕಕ್ಕೆ ಈಗಾಗಲೇ ರಾಜ್ಯ ಹಣಕಾಸು ಇಲಾಖೆಯಿಂದ ಅನುಮತಿ ದೊರಕಿದೆಯಂತೆ. ಮುಂದಿನ ದಿನಗಳಲ್ಲಿ ಈ ಹುದ್ದೆಗಳ ಅಧಿಸೂಚನೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

<p>ಹತ್ತು ವರ್ಷಗಳ ಹಿಂದಿನ ಅಧಿಸೂಚನೆ, ಬಳಿಕ ಹೊಸ ನೇಮಕಾತಿ ನಡೆಯದಿರುವುದನ್ನು ಗಮನಿಸಿ</p>
ಹತ್ತು ವರ್ಷಗಳ ಹಿಂದಿನ ಅಧಿಸೂಚನೆ, ಬಳಿಕ ಹೊಸ ನೇಮಕಾತಿ ನಡೆಯದಿರುವುದನ್ನು ಗಮನಿಸಿ

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅಧಿಸೂಚನೆ ಹೊರಬಿದ್ದ ಬಳಿಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ದೊರಕಲಿದೆ. ಶಿಕ್ಷಣ ಇಲಾಖೆಯ http://schooleducation.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ಆನ್‌ಲೈನ್‌ ಲಿಂಕ್‌ ದೊರಕಲಿದೆ.

ವಿದ್ಯಾರ್ಹತೆ ಏನಿರಲಿದೆ?

ಹತ್ತು ವರ್ಷಗಳ ಹಿಂದಿನ ಅಧಿಸೂಚನೆಯಲ್ಲಿ ನೀಡಲಾದ ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು ಈಗ ಕೊಂಚ ಬದಲಾಗಿರಬಹುದು. ಆದರೆ, ಆಗಿನ ಅರ್ಹತೆಗಳಿಗೂ ಈಗಿನ ಅರ್ಹತೆಗಳಿಗೂ ಬಹುತೇಕ ಸಾಮ್ಯತೆಯೂ ಇರಬಹುದು. ದೈಹಿಕ ಶಿಕ್ಷಕ ಹುದ್ದೆಗೆ ಬ್ಯಾಚುಲರ್‌ ಪದವಿ, ಬ್ಯಾಚುಲರ್‌ ಆಫ್‌ ಫಿಸಿಕಲ್‌ ಎಜುಕೇಷನ್‌ನಿಂದ ಪದವಿ ಅಥವಾ ಡಿಪ್ಲೊಮಾ ಇನ್‌ ಫಿಸಿಕಲ್‌ ಎಜುಕೇಷನ್‌ ಶಿಕ್ಷಣ ಹೊಂದಿರಬೇಕು ಎಂದು ಹತ್ತು ವರ್ಷದ ಹಿಂದಿನ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಸಮಾನವಾದ ಶಿಕ್ಷಣ ಅರ್ಹತೆಯನ್ನು ಈ ಬಾರಿ ಬಯಸಬಹುದು.

ಆಯ್ಕೆ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ದೊರಕಲಿದೆ.

IPL_Entry_Point