ಕನ್ನಡ ಸುದ್ದಿ  /  ಕರ್ನಾಟಕ  /  Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಹಗರಣ ತನಿಖೆ ಹೊಣೆ ಸಿಬಿಐಗೆ; ಜುಲೈ ಅಂತ್ಯದೊಳಗೆ ತೀರ್ಮಾನ ಎಂದ ಸಹಕಾರ ಸಚಿವ ರಾಜಣ್ಣ

Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಹಗರಣ ತನಿಖೆ ಹೊಣೆ ಸಿಬಿಐಗೆ; ಜುಲೈ ಅಂತ್ಯದೊಳಗೆ ತೀರ್ಮಾನ ಎಂದ ಸಹಕಾರ ಸಚಿವ ರಾಜಣ್ಣ

Guru Raghavendra Bank scam: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣದ ತನಿಖೆಯನ್ನು ಈ ತಿಂಗಳ ಒಳಗೆ ಸಿಬಿಐಗೆ ಒಪ್ಪಿಸುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ರಾಜ್ಯದಲ್ಲಿ ರಾಜಕೀಯವಾಗಿ ಸಂಚಲನ ಮೂಡಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣದ ತನಿಖೆಯನ್ನು ಈ ತಿಂಗಳ ಒಳಗೆ ಸಿಬಿಐಗೆ ಒಪ್ಪಿಸುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ರಾಜ್ಯದಲ್ಲಿ ರಾಜಕೀಯವಾಗಿ ಸಂಚಲನ ಮೂಡಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣದ ತನಿಖೆಯನ್ನು ಈ ತಿಂಗಳ ಒಳಗೆ ಸಿಬಿಐಗೆ ಒಪ್ಪಿಸುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು. (HTK)

ಬೆಂಗಳೂರು: ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣ (Guru Raghavendra bank scam) ಪ್ರಕರಣವನ್ನು ಈ ತಿಂಗಳ ಅಂತ್ಯದೊಳಗೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ಕರ್ನಾಟಕ ಸರ್ಕಾರ ಪ್ರಕ್ರಿಯೆ ನಡೆಸುತ್ತಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ (Minister K N Rajanna) ಸೋಮವಾರ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿರುವುದರಿಂದ ಈ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿದೆ ಎಂದು ಸಚಿವರು ವಿಧಾನ ಪರಿಷತ್ತಿಗೆ ತಿಳಿಸಿದರು.

ಪರಿಷತ್‌ ಸದಸ್ಯ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜಣ್ಣ ಅವರು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು. ತಿಂಗಳಾಂತ್ಯದ ವೇಳೆಗೆ ಭಾಷಾಂತರ ಪ್ರಕ್ರಿಯೆ ಮುಗಿದ ಬಳಿಕ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲಿದೆ ಎಂದು ತಿಳಿಸಿದರು.

ಪ್ರಕರಣದ ಜಟಿಲತೆಯಿಂದಾಗಿ ಬಹುಮುಖಿ ತನಿಖೆಯ ಅಗತ್ಯವನ್ನು ಜ.17ರಂದು ನಡೆದ ಸಭೆಯಲ್ಲಿ ಮನಗಂಡ ಬಳಿಕ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಒಪ್ಪಿಗೆ ನೀಡಲಾಗಿತ್ತು ಎಂದು ಸಚಿವ ರಾಜಣ್ಣ ಒಪ್ಪಿಕೊಂಡರು. ತರುವಾಯ, ಫೆಬ್ರವರಿ 4 ರಂದು, ಸಹಕಾರ ಇಲಾಖೆಯ ರಿಜಿಸ್ಟ್ರಾರ್ ಅವರು ಗೃಹ ಇಲಾಖೆಗೆ ಪತ್ರ ಬರೆದ ವೇಳೆ, ಇಂಗ್ಲಿಷ್‌ ಭಾಷೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಿದರು.

ಆದಾಗ್ಯೂ, ಮಾನವ ಸಂಪನ್ಮೂಲದ ಕೊರತೆಯಿಂದಾಗಿ, ಕನ್ನಡದಿಂದ ಇಂಗ್ಲಿಷ್‌ಗೆ ದಾಖಲೆಗಳನ್ನು ಭಾಷಾಂತರಿಸಲು ಸರ್ಕಾರದಿಂದ ಪ್ರಮಾಣೀಕರಿಸಿದ ಅನುವಾದಕರನ್ನು ತೊಡಗಿಸಿಕೊಳ್ಳಬಹುದು ಎಂದು ಅನುವಾದ ವಿಭಾಗವು ಸಹಕಾರ ಇಲಾಖೆಗೆ ತಿಳಿಸಿತು, ಅವರ ಸಂಭಾವನೆಯನ್ನು ಸಹಕಾರ ಇಲಾಖೆಯಿಂದ ಭರಿಸಲಾಗುವುದು ಎಂದು ಸಚಿವರು ಹೇಳಿದರು.

ಜೂನ್ 19 ರಂದು ದಾಖಲೆಗಳನ್ನು ಅನುವಾದಕರಿಗೆ ಹಸ್ತಾಂತರಿಸಲಾಗಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇಂಗ್ಲಿಷ್ ಆವೃತ್ತಿಯನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಅನುವಾದಿತ ದಾಖಲೆಗಳು ಲಭ್ಯವಾದ ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜಣ್ಣ ತಿಳಿಸಿದರು.

ಕಾಂಗ್ರೆಸ್‌ ವರ್ಸಸ್‌ ಬಿಜೆಪಿ; ಸದಸ್ಯರ ವಾಗ್ವಾದ

ಹಿಂದಿನ ಬಿಜೆಪಿ ಸರ್ಕಾರ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಆರೋಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ವಾದ ನಡೆಯಿತು.

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿದರವನ್ನು ಹೂಡಿಕೆದಾರರಿಗೆ ಬ್ಯಾಂಕ್ ಭರವಸೆ ನೀಡಿತ್ತು. ಅದೇ ಸಮಯದಲ್ಲಿ, ಬ್ಯಾಂಕ್ ಆಡಳಿತವು ಕಾಲ್ಪನಿಕ ಸಾಲದ ಖಾತೆಗಳನ್ನು ಸೃಷ್ಟಿಸಿದೆ ಮತ್ತು ಹಣವನ್ನು ಲಾಂಡರಿಂಗ್ ಮಾಡಿದೆ, ಆ ಮೂಲಕ ಹೂಡಿಕೆದಾರರಿಗೆ ಮೋಸ ಮಾಡಿದೆ.

ಫೆಬ್ರವರಿ 2022 ರಲ್ಲಿ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು.

(Bengaluru News Karnataka govt to hand over Guru Raghavendra cooperative bank scam case to CBI crime news in Kannada)

ಟಿ20 ವರ್ಲ್ಡ್‌ಕಪ್ 2024