ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಮಂಗಳೂರಿನಲ್ಲಿ ತಂಪೆರೆದ ಮಳೆ; ಫಲಿತಾಂಶದ ಕಾವಿನ ನಡುವೆಯೂ ಮತ ಎಣಿಕೆ ಕೇಂದ್ರದ ಹೊರಗೆ ಕೂಲ್ ಕೂಲ್

Mangaluru News: ಮಂಗಳೂರಿನಲ್ಲಿ ತಂಪೆರೆದ ಮಳೆ; ಫಲಿತಾಂಶದ ಕಾವಿನ ನಡುವೆಯೂ ಮತ ಎಣಿಕೆ ಕೇಂದ್ರದ ಹೊರಗೆ ಕೂಲ್ ಕೂಲ್

Rain In Mangalore: ಮಂಗಳೂರಿನಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾವು ಏರಿರುವ ಈ ಹೊತ್ತಿನಲ್ಲಿ ವರುಣ ತಂಪೆರೆದಿದ್ದಾನೆ. ಬೆಳಗ್ಗಿನಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಮತ ಎಣಿಕೆ ಕೇಂದ್ರದ ಹೊರಗೆ ಕೂಲ್‌ ಕೂಲ್‌ ಎನ್ನಿಸುವ ವಾತಾವರಣವಿದೆ. ಈ ನಡುವೆ ಮತ ಎಣಿಕೆಯ ಸಿದ್ಧತೆಯೂ ಜೋರಾಗಿಯೇ ನಡೆದಿದೆ.

ಮಂಗಳೂರಿನಲ್ಲಿ ಮಳೆ (ಸಾಂಧರ್ಭಿಕ ಚಿತ್ರ) (Twitter)
ಮಂಗಳೂರಿನಲ್ಲಿ ಮಳೆ (ಸಾಂಧರ್ಭಿಕ ಚಿತ್ರ) (Twitter)

ಮಂಗಳೂರು: ನಗರದಲ್ಲಿ ಚುನಾವಣಾ ಫಲಿತಾಂಶವನ್ನು ಕಾತುರದಿಂದ ಎದುರು ನೋಡಲಾಗುತ್ತಿದೆ. ಈ ನಡುವೆ ಮತ ಎಣಿಕೆಯ ತಯಾರಿಯೂ ಜೋರಾಗಿದೆ. ನಗರದ ಹೊರವಲಯದ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಮತ ಎಣಿಕೆ ನಡೆಯಲಿದ್ದು ಸಿದ್ಧತೆ ಪೂರ್ಣಗೊಂಡಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಇನ್ನು, ಮಂಗಳೂರಿನ ಹಲವೆಡೆ ಬೆಳಿಗ್ಗಿನಿಂದಲೇ ಮಳೆಯಾಗುತ್ತಿದ್ದು. ಗುಡುಗಿನ ಸದ್ದೂ ಜೋರಾಗಿದೆ. ನಗರದ ಹಲವೆಡೆ ವಿದ್ಯುತ್‌ ಕೈಕೊಟ್ಟಿದೆ.

2 ಗಂಟೆಗೆ ಫಲಿತಾಂಶ ಪ್ರಕಟ ಸಾಧ್ಯತೆ

ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ, 18 ಟೇಬಲ್‌ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 5 ಟೇಬಲ್‌ಗಳಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ. ಹೀಗೆ 8 ಕ್ಷೇತ್ರಗಳಿಗೆ ಒಟ್ಟು 112 ಇವಿಎಂ ಟೇಬಲ್‌ ಮತ್ತು 40 ಅಂಚೆ ಮತ ಟೇಬಲ್‌ ವ್ಯವಸ್ಥೆ ಮಾಡಲಾಗಿದೆ.

ʼಬೆಳಗ್ಗೆ 8 ಕ್ಕೆ ಸ್ಟ್ರಾಂಗ್‌ ರೂಂಗಳನ್ನು ತೆರೆದು ಆರಂಭದಲ್ಲಿ ಅಂಚೆ ಮತ ಎಣಿಕೆ ಪ್ರಾರಂಭಿಸಲಾಗುವುದು, 30 ನಿಮಿಷಗಳ ಬಳಿಕ ಮತ ಯಂತ್ರಗಳ ಎಣಿಕೆ ಶುರು ಮಾಡಲಾಗುವುದುʼ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಗರಿಷ್ಠ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ, ಅಂತಿಮವಾಗಿ ಸುಮಾರು 2 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.

ಮತ ಎಣಿಕೆ ಕೇಂದ್ರದ ಆವರಣದ 100 ಮೀಟರ್‌ ವ್ಯಾಪ್ತಿಯೊಳಗೆ ಅನಧಿಕೃತ ವ್ಯಕ್ತಿಗಳು, ವಾಹನಗಳ ಪ್ರವೇಶ ನಿಷೇಧಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮೂರು ಹಂತಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. 1000ಕ್ಕೂ ಅಧಿಕ ಪೊಲೀಸ್‌, ಅರೆಸೇನಾಪಡೆ, ಗೃಹರಕ್ಷಕರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಸೆಕ್ಷನ್‌ 144 ರನ್ವಯ ಮೇ.13 ರ ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 ರವರೆಗೆ ಜಿಲ್ಲಾದ್ಯಂತ ಸೆಕ್ಷನ್‌ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ

Karnataka Rain: ಚುನಾವಣಾ ಫಲಿತಾಂಶದ ಸಂಭ್ರಮದ ಜೊತೆಗೆ ವರುಣನ ಅಬ್ಬರವೂ ಜೋರು; ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Weather Update: ಇಂದು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ. ಚುನಾವಣಾ ಫಲಿತಾಂಶದ ಆತಂಕ, ಸಂಭ್ರಮದೊಂದಿಗೆ ವರುಣನೂ ಜೊತೆಯಾಗುವ ಸಾಧ್ಯತೆ ಹೆಚ್ಚಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನೂ ಕೆಲವೆಡೆ ಒಣಹವೆ ಮುಂದುವರಿಯಲಿದೆ.

ಬೆಂಗಳೂರು: ಬಂಗಾಳಕೊಲ್ಲಿ ಎದ್ದಿದ್ದ ಮೋಚಾ ಚಂಡಮಾರುತದ ಅಲೆಯು ಒಡಿಶಾ ಕರಾವಳಿ ತೀರವನ್ನು ಪ್ರವೇಶಿಸಿದ್ದು, ಇದರಿಂದ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇದರೊಂದಿಗೆ ಗಾಳಿ ವೇಗವೂ ಹೆಚ್ಚಿದೆ. ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಬಿರುಗಾಳಿ ಪ್ರಭಾವ ಜೋರಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗಿದೆ. ಇಂದು ಕೂಡ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕ ಹವಾಮಾನ ಇಲಾಖೆ (Met Centre Bengaluru - IMD) ಮುಂದಿನ 48 ಗಂಟೆಗಳ ಹವಾಮಾನ ಮುನ್ಸೂಚನೆ (Karnataka Weather Forecast) ಪ್ರಕಟಿಸಿದ್ದು, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಇದೇ ರೀತಿ ಕೆಲವೆಡೆ ಒಣಹವೆ ಮುಂದುವರೆಯಲಿದೆ.

IPL_Entry_Point