ಕನ್ನಡ ಸುದ್ದಿ  /  ಕರ್ನಾಟಕ  /  M.ed. Admission: ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

M.Ed. Admission: ಎಂ.ಎಡ್ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

M.Ed. Admission: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.Ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರು ವಿವಿ
ಬೆಂಗಳೂರು ವಿವಿ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಎಂ.ಎಡ್ (M.ed) ಕೋರ್ಸಿನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯೂನಿವರ್ಸಿಟಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಪ್ರವೇಶಾತಿ ಅರ್ಜಿಗಳನ್ನು ಯುಯುಸಿಎಂಎಸ್‌ ಪೋರ್ಟಲ್‌ “https://uucms.karnataka.gov.in/Login/Index” ದಲ್ಲಿ ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ.

ಪ್ರತಿ ಅರ್ಜಿಗೆ ಪ್ರವೇಶಾತಿ ಶುಲ್ಕ 500 ರೂಪಾಯಿ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ವರ್ಗ-1 ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು ಪ್ರವೇಶಾತಿ ಅರ್ಜಿಗೆ 250 ರೂಪಾಯಿ ಪಾವತಿಸೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಆನ್‌ಲೈನ್‌ ಮೂಲಕ ದಂಡ ಶುಲ್ಕವಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 27. ಅದೇ ರೀತಿ ದಂಡ ಶುಲ್ಕ 100 ರೂಪಾಯಿ ಸಹಿತವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 30. ಜೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ ಏಪ್ರಿಲ್ 03. ಸಮಾಲೋಚನಾ ದಿನಾಂಕ ಏಪ್ರಿಲ್ 5.

ಪ್ರವೇಶಾತಿ ಶುಲ್ಕವನ್ನು ಯುಯುಸಿಎಂಎಸ್‌ ಪೋರ್ಟಲ್‌ ನಲ್ಲಿ ಪಾವತಿಸಲು ದಂಡ ಶುಲ್ಕ ರಹಿತ ದಿನಾಂಕ ಏಪ್ರಿಲ್ 11 ಮತ್ತು ದಂಡ ಶುಲ್ಕ 500 ರೂಪಾಯಿ ಸಹಿತವಾಗಿ ಪಾವತಿಸಲು ದಿನಾಂಕ ಏಪ್ರಿಲ್ 13 ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಗಮನಿಸಬಹುದಾದ ಸುದ್ದಿ

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್​ ಬೈ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗೆ ಮತ್ತೊಂದು ಆಘಾತವಾಗಿದೆ. ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮಾತ್ರವಲ್ಲ ಬಿಜೆಪಿಗೂ ಗುಡ್​ ಬೈ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಜೀವನೋದ್ದೇಶ ಏನು?; ಗುರಿ ಮತ್ತು ಗುರುವನ್ನು ಕಂಡುಕೊಳ್ಳಲು ಇಲ್ಲಿದೆ ಪಂಚ ಸೂತ್ರ

Life purpose: ಜೀವನೋದ್ದೇಶವನ್ನು ಗುರುತಿಸುವುದು ಸುಲಭದ ಕೆಲಸವಲ್ಲ. ನಿಮ್ಮ ಜೀವನದ ಗುರಿ ಮತ್ತು ಉದ್ದೇಶದ ಸ್ಪಷ್ಟತೆ ಇಲ್ಲದೇ ಇದ್ದಾಗ, ಮಾರ್ಗದರ್ಶಕರ ನೆರವು ಕೂಡ ಬೇಕಾಗುತ್ತದೆ. ಆದಾಗ್ಯೂ, ಬದುಕಿನ ಹಾದಿಯಲ್ಲಿ ಇದೊಂದು ನಿರ್ಣಾಯಕ ಘಟ್ಟ ಎಂಬುದು ವಾಸ್ತವ. ಜೀವನೋದ್ದೇಶ ತಿಳಿಯಬೇಕಾ? ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಬೆಟ್ಟಿಂಗ್‌ ಶುರು; ಕಡೂರಲ್ಲಿ ಬೆಳ್ಳಿ ಪ್ರಕಾಶ್‌ ಪರ ʻಆಸ್ತಿʼ ಬಾಜಿಗಿಟ್ಟ ತೆಲುಗು ಸಮಾಜದ ಮುಖಂಡ!

ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು ದಿನೇದಿನೆ ಏರುತ್ತಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಕುತೂಹಲಕಾರಿ ವಿಚಾರಗಳು ಗಮನಸೆಳೆಯುತ್ತವೆ. ರಾಜಕೀಯ ರಂಗು ಅನೇಕರ ಬದುಕಿನ ಮೇಲೂ ಪರಿಣಾಮ ಬೀರುವುದು ಸುಳ್ಳಲ್ಲ. ಸೋಮವಾರ ಅಂಥದ್ದೇ ಒಂದು ಪ್ರಸಂಗ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ