Mysuru Dasara2023: ದೀಪಧಾರಣಿಯಂತೆ ಜಗಮಗಿಸುತ್ತಿರುವ ಮೈಸೂರು: ಕುಟುಂಬದೊಂದಿಗೆ ಸಂಜೆ ಒಂದು ಸುತ್ತು ಹಾಕಿ
- ಮೈಸೂರು ದಸರಾ( Mysuru dasara) ಎಂದರೆ ಜಂಬೂಸವಾರಿ, ಮೈಸೂರು ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಜತೆ ಜತೆಯಲ್ಲಿ ದಸರಾ ದೀಪಾಲಂಕಾರ( Lightings). ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ( Chescom) ಬಗೆಬಗೆ ದೀಪಾಲಂಕಾರವನ್ನು ಹತ್ತಾರು ರಸ್ತೆ, ವೃತ್ತಗಳಲ್ಲಿ ಮಾಡುತ್ತದೆ. ಸಂಜೆ ನಂತರ ಮೈಸೂರು ರೌಂಡ್ಸ್ ನಿಜಕ್ಕೂ ಆಹ್ಲಾದಕರ.. ಒಂದು ಸುತ್ತಿಗೆ ಸಿದ್ದರಾಗಿ...

(1 / 9)
ಮೈಸೂರು ಎಂಬ ದೀಪದ ನಗರಿ ದಸರೆಗೆ ಅಣಿಯಾಗಿರುವುದು ಹೀಗೆ. ಮೈಸೂರಿನ ಅರಮನೆ ಚಾಮರಾಜ ವೃತ್ತದ ಹಿನ್ನೆಲೆಯಲ್ಲಿ ಬೆಳಕಿನೊಂದಿಗೆ ಕಂಗೊಳಿಸುತ್ತಿರುವ ಪರಿ ದೀಪದ ವಿಭಿನ್ನ ಲೋಕವನ್ನೇ ಹುಟ್ಟು ಹಾಕಿದೆ
(2 / 9)
ಮೈಸೂರು ದಸರಾದಲ್ಲಿ ಕಾಣುವುದು ಹೀಗೆ. ಪ್ರಮುಖ ವೃತ್ತ, ರಸ್ತೆಗಳಿಗೆ ದೀಪಾಲಂಕಾರ ಮಾಡಿದಾಗ ಕಂಡು ಬಂದ ಅದ್ಭುತ ಚಿತ್ರಣ
(3 / 9)
ಮೈಸೂರು ದಸರಾ ವೇಳೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ ರೂಪಿಸಿರುವ ದೀಪಾಲಂಕಾರದ ಹಸಿರು ಚಪ್ಪರವಿದು. ಇಲ್ಲಿಂದಲೇ ದೀಪಾಲಂಕಾರದ ಯಾನ ಶುರುವಾಗೋದು.
(4 / 9)
ಮೈಸೂರು ದಸರಾದ ಆಕರ್ಷಣೆಯಾದ ಜಂಬೂ ಸವಾರಿ ಪಡೆ. ಬೆಳಕಿನ ಚಪ್ಪರದ ಕೆಳಗೆ ನಿತ್ಯದ ತಾಲೀಮೀಗೆ ಹೊರಟಾಗ ಕಂಡ ವಿಶೇಷ ಕ್ಷಣ.
(5 / 9)
ಮೈಸೂರಿನ ವೃತ್ತವೊಂದರಲ್ಲಿ ರಾಜವಂಶಸ್ಥ,ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಭಾರತದ ಭವ್ಯ ನೋಟದ ಬೆಳಕಿನ ಸಂಯೋಜನೆ
(7 / 9)
ಮೈಸೂರು ದಸರಾಕ್ಕೆ ಬಂದ ದಾರ್ಶನಿಕರು. ಈ ಬಾರಿಯೂ ವಿಭಿನ್ನ ಬೆಳಕಿನ ಲೋಕದಲ್ಲಿ ಚಾಮುಂಡಿಬೆಟ್ಟದ ಸುಸ್ವಾಗತ ಹಿನ್ನೆಲೆಯಲ್ಲಿ ಬುದ್ದ, ಗಾಂಧಿ, ಅಂಬೇಡ್ಕರ್, ದಸರಾ ಜಂಬೂಸವಾರಿ ಹಾಗೂ ಮೈಸೂರು ರಾಜವಂಶಸ್ಥರು.
(8 / 9)
ಮೈಸೂರು ದಸರಾದ ಬೆಳಿಕಿನ ಹಬ್ಬದಲ್ಲಿ ವೃತ್ತಗಳಿಗೆ ವಿಭಿನ್ನ ಬಣ್ಣದ ಅಲಂಕಾರ. ಯೋಗ ನಗರಿ ಎಂಬ ಬಿರುದಾಂಕಿತ ಮೈಸೂರಿನ ಯೋಗಪಟುಗಳೂ ಬೆಳಕಿನ ಸಂಯೋಜನೆಯಲ್ಲಿ.
ಇತರ ಗ್ಯಾಲರಿಗಳು