ಕನ್ನಡ ಸುದ್ದಿ  /  ಕರ್ನಾಟಕ  /  Rashtra Tapasvi Shri Guruji: ಸಂಘನಿಕೇತನದಲ್ಲಿ ರಾಷ್ಟ್ರ ತಪಸ್ವಿ ಶ್ರೀಗುರೂಜಿ ಪುಸ್ತಕ ಬಿಡುಗಡೆ; ಚಂದ್ರಶೇಖರ ಭಂಡಾರಿಯವರ ಅನುವಾದ ಕೃತಿ

Rashtra tapasvi shri Guruji: ಸಂಘನಿಕೇತನದಲ್ಲಿ ರಾಷ್ಟ್ರ ತಪಸ್ವಿ ಶ್ರೀಗುರೂಜಿ ಪುಸ್ತಕ ಬಿಡುಗಡೆ; ಚಂದ್ರಶೇಖರ ಭಂಡಾರಿಯವರ ಅನುವಾದ ಕೃತಿ

Rashtra tapasvi shri Guruji: ಮಂಗಳೂರಿನ ಸಂಘನಿಕೇತನದಲ್ಲಿ ಚಂದ್ರಶೇಖರ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿರುವ "ರಾಷ್ಟ್ರ ತಪಸ್ವಿ ಶ್ರೀಗುರೂಜಿ" ಗ್ರಂಥ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಸಿಟಿಝನ್ಸ್ ಕೌನ್ಸಿಲ್,ಮಂಗಳೂರು ಚಾಪ್ಟರ್ ಕಾರ್ಯಕ್ರಮ ಆಯೋಜಿಸಿತ್ತು.

ಮಂಗಳೂರಿನ ಸಂಘನಿಕೇತನದಲ್ಲಿ ಚಂದ್ರಶೇಖರ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿರುವ "ರಾಷ್ಟ್ರ ತಪಸ್ವಿ ಶ್ರೀಗುರೂಜಿ" ಗ್ರಂಥ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಮಂಗಳೂರಿನ ಸಂಘನಿಕೇತನದಲ್ಲಿ ಚಂದ್ರಶೇಖರ ಭಂಡಾರಿಯವರು ಕನ್ನಡಕ್ಕೆ ಅನುವಾದಿಸಿರುವ "ರಾಷ್ಟ್ರ ತಪಸ್ವಿ ಶ್ರೀಗುರೂಜಿ" ಗ್ರಂಥ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಹಿರಿಯ ಚೇತನ ದಿವಂಗತ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿರುವ "ರಾಷ್ಟ್ರ ತಪಸ್ವಿ ಶ್ರೀ ಗುರೂಜಿ" ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಮಣ್ಣಗುಡ್ಡದ ಸಂಘನಿಕೇತನದಲ್ಲಿ ಮಂಗಳವಾರ ನಡೆಯಿತು.

ಮಂಗಳೂರು ಶ್ರೀರಾಮಕೃಷ್ಣಮಠದ ಅಧ್ಯಕ್ಷ ಶ್ರೀಮದ್‌ ಸ್ವಾಮಿ ಜಿತಕಾಮಾನಂದ ಜಿ ಮಹಾರಾಜ್‌ ಪುಸ್ತಕ ಬಿಡುಗಡೆ ಮಾಡಿದರು. ಸಿಟಿಝನ್ಸ್ ಕೌನ್ಸಿಲ್,ಮಂಗಳೂರು ಚಾಪ್ಟರ್ ಕಾರ್ಯಕ್ರಮ ಆಯೋಜಿಸಿತ್ತು.

ರಾಮಕೃಷ್ಣ ಮಠ ಮತ್ತು ಶ್ರಿ ಗುರೂಜಿ ಅವರ ನಡುವೆ ಅವಿನಾವಭಾವ ಸಂಭಂದ ಇತ್ತು. ಇತ್ತೀಚೆಗೆ ಅಸ್ತಂಗತರಾದ ಚಂದ್ರಶೇಖರ ಭಂಡಾರಿಯವರು ಭಾಗ್ಯವಂತ ರಾಷ್ಟ್ರ ತಪಸ್ವಿ ಗುರೂಜಿಯವರ ಜೀವನ ಚರಿತ್ರೆ ಯನ್ನು ಬಹಳ ಸುಂದರವಾಗಿ ಸರಳ ರೂಪದಲ್ಲಿ ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. ಈ ಪುಸ್ತಕವನ್ನು ನೀವು ಓದಿ, ನಿಮ್ಮ ಮಕ್ಕಳಿಗೂ ಓದಲು ಪ್ರೇರೇಪಿಸಿ ಎಂದು ಮಂಗಳೂರು ಶ್ರೀರಾಮಕೃಷ್ಣಮಠದ ಅಧ್ಯಕ್ಷ ಶ್ರೀಮದ್‌ ಸ್ವಾಮಿ ಜಿತಕಾಮಾನಂದ ಜಿ ಮಹಾರಾಜ್‌ ಈ ಸಂದರ್ಭದಲ್ಲಿ ಹೇಳಿದರು.

ನಮ್ಮ ದೇಶ, ಧರ್ಮದ ಮೇಲೆ ಸದಾ ವಿಶ್ವಾಸ ಇರಲಿ. ದೇಶ ಕಟ್ಟುವ ಕೆಲಸದಲ್ಲಿ ಇದು ಸದಾ ಅವಶ್ಯ. ಇದಕ್ಕೆ ಬುನಾದಿ ಅಧ್ಯಾತ್ಮ. ಹೀಗಾಗಿ ಇಂದಿನ ಮಕ್ಕಳಿಗೆ ಅಧ್ಯಾತ್ಮಿಕತೆಯ ಚಿಂತನೆ ನಡೆಸಲು ಅವಕಾಶ ಕಲ್ಪಿಸಿ ಎಂದು ಸ್ವಾಮಿ ಜಿತಕಾಮಾನಂದ ಜಿ ಮಹಾರಾಜ್‌ ಹಿತವಚನ ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ಪುಸ್ತಕ ಪರಿಚಯ ಮಾಡುತ್ತ, ಮೂವರ ತಪಸ್ವಿಗಳ ಪ್ರಯತ್ನದಿಂದ ಈ ಪುಸ್ತಕ ಪ್ರಕಟವಾಗಿದೆ. ಎಲ್ಲವೂ ರಾಷ್ಟ್ರಕ್ಕೆ ನನ್ನದೇನು ಇಲ್ಲ ಅನ್ನುವ ಧೇಯ ವಾಕ್ಯದಂತೆ ನಡೆದು ಕೊಂಡು ಬದುಕಿದವರು ಗುರೂಜಿ. ಹಿಂದಿ ಮೂಲದ ಗ್ರಂಥವನ್ನು ಮೂಲ ಕನ್ನಡದಲ್ಲೇ ಬರೆದ ಕೃತಿ ಅನ್ನಿಸುವಂತೆ ಚಂದ್ರ ಶೇಖರ ಭಂಡಾರಿಯವರು ಅನುವಾದ ಮಾಡಿದ್ದಾರೆ. ಈ ಗ್ರಂಥ ಪ್ರತಿಯೊಬ್ಬರ ಮನೆ ಮನೆಗೂ ತಲುಪಬೇಕು, ಅದಕ್ಕೋಸ್ಕರ ನಾನು ಇದರ ಪ್ರಚಾರಕರಾಗಿ ಇರಲು ನಾನು ಬಯಸಿದ್ದೇನೆ ಎಂದರು.

ಗುರೂಜಿಯವರ ಜೀವನದ ಸಂಕ್ಷಿಪ್ತ ಪರಿಚಯ ಮಾಡಿದ ಸು.ರಾಮಣ್ಣ ಅವರು, ಈ ಗ್ರಂಥದಲ್ಲಿ ಗುರೂಜಿಯವರ ಯಾವುದೇ ಗುಣಗಾನ ಇಲ್ಲ. ಗುರೂಜಿಯವರ ವ್ಯಕ್ತಿತ್ವ ಅನಾವರಣವಾಗಿದೆ. ರಾಷ್ಟ್ರೀಯ ಸಂಘದ ಸ್ವಯಂ ಸೇವಕ ಸಂಘದ ದರ್ಶನ ಆಗಬೇಕು ಅನ್ನುವ ದೃಷ್ಟಿಯಿಂದ ಈ ಗ್ರಂಥ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನಾದವನ ಮನೋಭಾವ ಹೇಗಿರಬೇಕು ಎಂದರೆ, ನನ್ನಿಂದ ಸಂಘದ ಬೆಳವಣಿಗೆ ಆಗಿದೆ, ಸಂಘಕ್ಕೆ ನಾನು ಅನಿವಾರ್ಯ ಅನ್ನೋ ಹುಚ್ಚು ನಂಬಿಕೆ ಬರಬಾರದು. ನಾನೂ ನೆಟ್ಟಗೆ ಇರಬೇಕಾದರೆ, ಸಂಘ ನನಗೆ ಅನಿವಾರ್ಯ ಅನ್ನುವ ಭಾವನೆ ಬರಬೇಕು ಎಂದು ಸು.ರಾಮಣ್ಣ ಸ್ವಯಂಸೇವಕರ ನಿಷ್ಠೆಯನ್ನು ಸ್ಮರಿಸಿಕೊಂಡರು.

ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಚೇರ್‌ಮನ್‌ ಪ್ರೊ.ಸೋಮಣ್ಣ ಹೊಂಗಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಇದು ಆತ್ಮ ಕಥೆಯಲ್ಲ, ಜೀವನ ಚರಿತ್ರೆಯನ್ನೂ ಮೀರಿದ ಗ್ರಂಥ ಎಂದು ಉಲ್ಲೇಖಸಿದರು.

ಡಾ|ವಾಮನ ಶೆಣೈ, ಪ್ರೊ. ಧನೇಶ್ ಕುಮಾರ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗಮನಿಸಬಹುದಾದ ಸುದ್ದಿಗಳು

Satish Jarkiholi faces flak: ಪ್ರತಿಭಟನಾ ನಿರತ ಮರಾಠರ ಬಳಿ ತೆರಳಿದ ಸತೀಶ್‌ ಜಾರಕಿಹೊಳಿ; ಭಾಷಣಕ್ಕೆ ತೀವ್ರ ಅಡ್ಡಿ, ಪೊಲೀಸ್‌ ರಕ್ಷಣೆ

Satish Jarkiholi faces flak: ಲಕ್ಷ್ಮಿ ಹೆಬ್ಬಾಳ್ಕರ್‌ ಭಾಷಣಕ್ಕೆ ಯಾವುದೇ ಅಡ್ಡಿ ಮಾಡದ ಮರಾಠರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಲು ಮುಂದಾದ ಕೂಡಲೇ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿ ಉಂಟುಮಾಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point