ಕನ್ನಡ ಸುದ್ದಿ  /  Karnataka  /  Special Train To Sabarimala: Vijayapura Hubballi Gets Direct Train To Kottyam Sabarimala

Special train to sabarimala: ವಿಜಯಪುರ-ಶಬರಿಮಲೆ ವಿಶೇಷ ಸಾಪ್ತಾಹಿಕ ರೈಲು; ಯಾವ ದಿನ ಎಷ್ಟು ಗಂಟೆಗೆ? ಎಲ್ಲಿ ನಿಲ್ಲುತ್ತೆ? ವಿವರ ಇಲ್ಲಿದೆ

special train to sabarimala from vijayapura: ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಲಿಸಲು ಹೊಸ ರೈಲು ಸೇವೆ ಸೋಮವಾರದಿಂದ ಅಂದರೆ ಇಂದಿನಿಂದ ಆರಂಭವಾಗಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ವಿಷಯ ತಿಳಿಸಿದ್ದಾರೆ.

Special train to sabarimala: ವಿಜಯಪುರದಿಂದ ಶಬರಿಮಲೆಗೆ ಹೋಗುವವರಿಗೆ ಅನುಕೂಲ; ಕೊಟ್ಟಾಯಂಗೆ ಇಂದಿನಿಂದ ವಿಶೇಷ ಸಾಪ್ತಾಹಿಕ ರೈಲು
Special train to sabarimala: ವಿಜಯಪುರದಿಂದ ಶಬರಿಮಲೆಗೆ ಹೋಗುವವರಿಗೆ ಅನುಕೂಲ; ಕೊಟ್ಟಾಯಂಗೆ ಇಂದಿನಿಂದ ವಿಶೇಷ ಸಾಪ್ತಾಹಿಕ ರೈಲು

ಹುಬ್ಬಳ್ಳಿ: ಶಬರಿಮಲೆ ಸೀಸನ್‌ ಶುರುವಾಗಿದೆ. ರಾಜ್ಯದಿಂದ ಕೇರಳದ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೋಗುವ ಭಕ್ತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಾತ್ರಿಕರು ಬಯಸಿದ ಸಂಚಾರದ ಅನುಕೂಲವನ್ನು ಒದಗಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.

ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಲಿಸಲು ಹೊಸ ರೈಲು ಸೇವೆ ಸೋಮವಾರದಿಂದ ಅಂದರೆ ಇಂದಿನಿಂದ ಆರಂಭವಾಗಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ಶಬರಿ ಮಲೈಗೆ ಪ್ರಯಾಣಿಸಲು ಟ್ರೇನ್ ವ್ಯವಸ್ಥೆ ಕಲ್ಪಿಸುವಂತೆ ಅಯ್ಯಪ್ಪ ಸ್ವಾಮಿ ಭಕ್ತರು, ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.‌ ಅಯ್ಯಪ್ಪ ಸ್ವಾಮಿ ಭಕ್ತರ ಕೋರಿಕೆಗೆ ಸ್ಪಂದಿಸಿದ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ಈ ವಿಷಯ ತಂದು, ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು.

ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದ ಭಾಗದಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಾರೆ, ಕೇವಲ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ಎಲ್ಲ ಭಕ್ತರಿಗೂ ರೈಲಿನ ಅನುಕೂಲ ದೊರೆಯಲಿ ಎಂದು ಯೋಚಿಸಿ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಶಬರಿಮಲೆಗೆ ಹೊಸ ರೈಲು ಕಲ್ಪಿಸುವಂತೆ ಪ್ರಲ್ಹಾದ್ ಜೋಶಿ ಕೇಂದ್ರ ರೈಲು ಸಚಿವರನ್ನು ಕೋರಿದ್ದರು.

ಅದರಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಕೊಟ್ಟಾಯಂ ವರೆಗೆ ರೈಲನ್ನು ಆರಂಭಿಸುವಂತೆ ನಿರ್ದೇಶನ ನೀಡಿದ್ದರು. ಕೋರಿಕೆಗೆ ಸ್ಪಂದಿಸಿ, ರೈಲು ಆರಂಭಿಸಲು ಆದೇಶಿಸಿರುವ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಭಕ್ತಾದಿಗಳು ಈ ವರ್ಷದ ಮಾಲಧಾರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹೊಸ ರೈಲು ಅವರಿಗೆ ಅನುಕೂಲವಾಗಲಿದೆ.

ಶಬರಿಮಲೆಗೆ ಸಾಪ್ತಾಹಿಕ ರೈಲು ಸಂಚಾರ

ರೈಲು ಸಂಖ್ಯೆ - 07385

ರೈಲು ಯಾವುದು- ವಿಜಯಪುರ - ಕೊಟ್ಟಾಯಂ (ಸಾಪ್ತಾಹಿಕ ಸಂಚಾರ)

ಹೊರಡುವುದು ಯಾವಾಗ- ಪ್ರತಿ ಸೋಮವಾರ ರಾತ್ರಿ 11 ಗಂಟೆಗೆ

ಎಲ್ಲಿಂದ - ವಿಜಯಪುರ

ಮಾರ್ಗ ಮತ್ತು ನಿಲುಗಡೆಗಳು - ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಆಲಮಟ್ಟಿ, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸಿಕೇರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್, ತಿರುಪ್ಪೂರು, ಕೊಯಂಬತ್ತೂರು, ಪಾಲಕ್ಕಾಡ್, ತ್ರಿಶ್ಶೂರು ಹಾಗೂ ಎರ್ನಾಕುಲಂ ಮಾರ್ಗವಾಗಿ ಕೊಟ್ಟಾಯಂ

ಯಾವಾಗ ತಲುಪುತ್ತೆ - ಬುಧವಾರ ನಸುಕಿನ 2 ಗಂಟೆಗೆ ಕೊಟ್ಟಾಯಂ

ಶಬರಿಮಲೆಗೆ ಸಾಪ್ತಾಹಿಕ ರೈಲು ಟಿಕೆಟ್‌ ದರ ಎಷ್ಟು?

ಇರೈಲ್‌ ತಾಣದ ಮಾಹಿತಿ ಪ್ರಕಾರ, ವಿಜಯಪುರದಿಂದ ಕೊಟ್ಟಾಯಂಗೆ ಸಂಚರಿಸುವ ಈ ವಿಶೇಷ ರೈಲಿನಲ್ಲಿ 2A, 3A, SL, GN ಬೋಗಿಗಳಷ್ಟೆ ಇರುತ್ತವೆ. ಪ್ಯಾಂಟ್ರಿ ಸೌಲಭ್ಯವಿಲ್ಲ. ಟಿಕೆಟ್‌ ದರದಲ್ಲಿ ಆಹಾರದ ವೆಚ್ಚ ಸೇರಿಲ್ಲ.. ರೈಲಿನ ಒಟ್ಟು ಪ್ರಯಾಣದ ಸಮಯ 27 ಗಂಟೆ, 20 ನಿಮಿಷಗಳು. ಸರಾಸರಿ ವೇಗ ಗಂಟೆಗೆ 52 ಕಿಮೀ. ಮುಂಗಡ ಕಾಯ್ದಿರಿಸುವಿಕೆಯ ಅವಧಿ 120 ದಿನಗಳು.

ಜನರಲ್‌ ಟಿಕೆಟ್‌ ದರ (GN)- 320 ರೂಪಾಯಿ

ಸ್ಲೀಪರ್‌ ಟಿಕೆಟ್‌ ದರ (SL/GN) - 570 ರೂಪಾಯಿ (ತತ್ಕಾಲ್‌ 775 ರೂ.)

3ಎ ಟಿಕೆಟ್‌ ದರ (3A/GN) -1540 ರೂಪಾಯಿ (ತತ್ಕಾಲ್‌ 1970 ರೂ.)

2ಎ ಟಿಕೆಟ್‌ ದರ (2A/GN) - 2255 ರೂಪಾಯಿ (ತತ್ಕಾಲ್‌ 2735 ರೂ.)

(ಇಲ್ಲಿರುವುದು ಪ್ರಾಥಮಿಕ ಮಾಹಿತಿಯಷ್ಟೆ. ಖಚಿತಮಾಹಿತಿಗೆ ಮತ್ತು ಸಂದೇಹ ನಿವಾರಣೆಗೆ ಸಮೀಪದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವುದು ಉತ್ತಮ)

IPL_Entry_Point